ಚೀನಾ ತನ್ನ ಶತ್ರುಗಳನ್ನು ನಾಶಮಾಡಲು ಪರಮಾಣು ಬಾಂಬ್‍ಗಳನ್ನು ನಿರ್ಮಿಸುತ್ತಿದ್ದರೂ, ಅದರಿಂದ ತನ್ನದೇ ದೇಶದ ಲಕ್ಷಾಂತರ ಜನರು ಸಾಯುತ್ತಿದ್ದಾರೆ. ಇದರಿಂದ ಚೀನಾ ಪಾಠ ಕಲಿಯುತ್ತದೆಯೇ ? -ಸಂಪಾದಕರು
ನವದೆಹಲಿ : ಚೀನಾವು 1964 ಮತ್ತು 1996 ರ ನಡುವೆ ಸುಮಾರು 45 ಅಣ್ವಸ್ತ್ರ ಪರೀಕ್ಷಣೆಗಳನ್ನು ಮಾಡಿತ್ತು. ಈ ಅಣ್ವಸ್ತ್ರದ ಪರೀಕ್ಷಣೆಯಿಂದ ಉತ್ಪತ್ತಿಯಾಗುವ ತೀವ್ರ ವಿಕಿರಣದಿಂದಾಗಿ, ಆ ದೇಶದಲ್ಲಿ 1 ಲಕ್ಷ 94 ಸಾವಿರ ಜನರು ಸಾವನ್ನಪ್ಪಿದ್ದರು. ಈ ಮಾಹಿತಿಯನ್ನು ‘ದ ನ್ಯಾಷನಲ್ ಇಂಟರೆಸ್ಟ್’ ಈ ನಿಯತಕಾಲಿಕೆಯಲ್ಲಿ ಪ್ರಕಟವಾದ ಪೀಟರ್ ಸುಸಿಊ ಅವರ ಲೇಖನದಲ್ಲಿ ನೀಡಲಾಗಿದೆ. ಸುಮಾರು 12 ಲಕ್ಷ ಜನರಿಗೆ ಈ ವಿಕೀರಣದಿಂದ ಲ್ಯುಕೇಮಿಯಾ ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳ ಅಪಾಯವಿದೆ ಎಂದು ಅಂದಾಜಿಸಲಾಗಿದೆ.
China’s nuclear tests killed 1.94 lakh people due to acute radiation exposure: Report https://t.co/HMdPWXvEfK
— Republic (@republic) August 22, 2021
1. ಪೀಟರ್ ಸುಸಿಊ ಇವರ ಪ್ರಕಾರ, ಚೀನಾ 1969 ರಲ್ಲಿ ತನ್ನ ಮೊದಲ ಥರ್ಮೋನ್ಯೂಕ್ಲಿಯರ್(ಅಣ್ವಸ್ತ್ರ ಸ್ಪೋಟದಿಂದ ಉತ್ಪತ್ತಿಯಾಗುವ ಪ್ರಚಂಡ ತಾಪಮಾನದ ಆಧಾರದಲ್ಲಿ) ಪರೀಕ್ಷೆಯನ್ನು ನಡೆಸಿತು. ಪರೀಕ್ಷೆಯು 3.3 ಮೆಗಾಟನ್‍ಗಳಷ್ಟು ಶಕ್ತಿಯನ್ನು ಉತ್ಪಾದಿಸಿತು. ಈ ಶಕ್ತಿಯು ಹಿರೋಷಿಮಾ ಮೇಲೆ ಹಾಕಿದ ಪರಮಾಣು ಬಾಂಬ್‍ಗಿಂತ 200 ಪಟ್ಟು ಹೆಚ್ಚು ಇತ್ತು.
2. ವಿಕಿರಣ ಮಟ್ಟವನ್ನು ಅಧ್ಯಯನ ಮಾಡುವ ಜಪಾನಿನ ಸಂಶೋಧಕರ ಪ್ರಕಾರ, 1986 ರಲ್ಲಿ ಚೆರ್ನೋಬಿಲ್ ರಿಯಾಕ್ಟರ್‍ನ ಸ್ಥಾವರದ ಮೇಲೆ ಮಾಡಿದ ಮಾಪನಕ್ಕಿಂತ ಕ್ಸಿನ್‍ಜಿಯಾಂಗ್‍ನ ವಿಕಿರಣ ಮಟ್ಟವು ಅಧಿಕವಾಗಿದೆ. ವಿಕಿರಣದ ಧೂಳು ಎಲ್ಲೆಡೆ ಹರಡಿದೆ. ಆದ್ದರಿಂದ ಸಾವಿರಾರು ಜನರು ಸಾವಿಗೀಡಾಗಬಹುದು. ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯವು 2 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಅಲ್ಲಿನ ಜನರ ಮೇಲೆ ವಿಕಿರಣದಿಂದ ಹೆಚ್ಚು ಪ್ರಭಾವವಾಗಿದೆ.