ಪೊಲೀಸರಿಂದ ಪೀಡಿತ ಹುಡುಗಿಯ ಶೋಧ ಕಾರ್ಯದಲ್ಲಿ ವಿಳಂಬಹಿಂದೂ ಜನಜಾಗೃತಿ ಸಮಿತಿಯ ಬೆಂಬತ್ತುವಿಕೆಯ ನಂತರ ಹುಡುಗಿಯನ್ನು ಹುಡುಕಿದ ಪೊಲೀಸರು ! |
* ಹಿಂದೂ ಹುಡುಗಿಯರನ್ನು ಅಪಹರಿಸುವ ಮತಾಂಧರಿಗೆ ಜೀವನಪರ್ಯಂತ ಜೈಲು ಶಿಕ್ಷೆ ನೀಡಿದಾಗಲೇ ಮುಂದೆ ಯಾವುದೇ ಮತಾಂಧರು ಹಿಂದೂ ಹುಡುಗಿಯರನ್ನು ಮುಟ್ಟುವ ಧೈರ್ಯವನ್ನು ತೋರಿಸುವುದಿಲ್ಲ ! -ಸಂಪಾದಕರು * ಹುಡುಗಿಯ ಶೋಧಕಾರ್ಯದಲ್ಲಿ ವಿಳಂಬ ಮಾಡಿದ ಪೊಲೀಸರ ವಿಚಾರಣೆ ಮಾಡಿ ಅವರಿಗೆ ಶಿಕ್ಷೆಯಾಗುವಂತೆ ರಾಜ್ಯದಲ್ಲಿನ ಭಾಜಪ ಸರಕಾರವು ಪ್ರಯತ್ನಿಸಬೇಕು, ಇದರಿಂದ ಹಿಂದೂ ಹುಡುಗಿಯರ ಅಪಹರಣದ ವಿಷಯದಲ್ಲಿ ಪೊಲೀಸರಲ್ಲಿ ಸಂವೇದನಾಶೀಲತೆ ಮತ್ತು ಸತರ್ಕತೆ ನಿರ್ಮಾಣವಾಗುವುದು !-ಸಂಪಾದಕರು |
ಬೆಂಗಳೂರು (ಕರ್ನಾಟಕ) – ನಗರದಲ್ಲಿ ಓರ್ವ ಅಪ್ರಾಪ್ತ ಹಿಂದೂ ಯುವತಿಯನ್ನು ಮತಾಂಧನು ಅಪಹರಿಸಿದ ಘಟನೆ ನಡೆದಿದೆ. ಆರಂಭದಲ್ಲಿ ಹುಡುಗಿಯನ್ನು ಹುಡುಕಲು ಪೊಲೀಸರು ವಿಳಂಬ ಮಾಡಿದರು; ಆದರೆ ಹಿಂದೂ ಜನಜಾಗೃತಿ ಸಮಿತಿಯು ಬೆಂಬತ್ತಿದ ನಂತರ ಪೊಲೀಸರು ತತ್ಪರತೆಯಿಂದ ಹುಡುಗಿಯನ್ನು ಹುಡುಕಿದರು. ಈ ಪ್ರಕರಣದಲ್ಲಿನ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಹುಡುಗಿಯ ಕುಟುಂಬದವರು ಪೊಲೀಸರಲ್ಲಿ ವಿನಂತಿಸಿದ್ದಾರೆ.
1. 10ನೇ ತರಗತಿಯಲ್ಲಿ ಕಲಿಯುವ 15 ವರ್ಷದ ಹುಡುಗಿ ತನ್ನ ತಾಯಿ ಮತ್ತು ಚಿಕ್ಕಮ್ಮನೊಂದಿಗೆ ಬೆಂಗಳೂರು ನಗರದಲ್ಲಿ ವಾಸಿಸುತ್ತಿದ್ದಾಳೆ. ಆಗಸ್ಟ್ 5ರಂದು ಹುಡುಗಿಯು ಅಧ್ಯಯನ ಮಾಡಲಿಲ್ಲ ಎಂದು ತಾಯಿಯು ಆಕೆಯನ್ನು ಬೈದಿದ್ದರಿಂದ ಹುಡುಗಿಯು ಮನೆ ಬಿಟ್ಟು ಹೋದಳು. ಸಾಯಂಕಾಲದವರೆಗೆ ಹುಡುಗಿಯು ಮನೆಗೆ ಬರೆದಿದ್ದನ್ನು ನೋಡಿ ಎಲ್ಲಾ ಕಡೆಯಲ್ಲಿ ಹುಡುಗಿಯನ್ನು ಹುಡುಕಲಾಯಿತು. ಮರುದಿನ ಹುಡುಗಿಯ ಕುಟುಂಬದವರು ಅಲ್ಲಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೋಂದಾಯಿಸಿ ಓರ್ವ ಮತಾಂಧನ ಮೇಲೆ ಸಂಶಯ ವ್ಯಕ್ತಪಡಿಸಿದರು.
2. ಪೊಲೀಸರು ಆ ಮತಾಂಧನ ಮೊಬೈಲ್ ಕ್ರಮಾಂಕವನ್ನು ತೆಗೆದುಕೊಂಡು ಆತನ ಬಗ್ಗೆ ಪರಿಚಿತರಲ್ಲಿ ವಿಚಾರಣೆ ಮಾಡಿದರು. ಅವನು ಮೊದಲು ಬೆಂಗಳೂರಿನಲ್ಲಿ ಒಂದು ಕಡೆ ಕೆಲಸ ಮಾಡುತ್ತಿದ್ದನು. ಅನಂತರ ಅವನು ಬೇರೆ ಊರಿಗೆ ಹೋಗಿ ಅಲ್ಲಿಂದ ಇನ್ನೊಂದು ಊರಿಗೆ ಹೋಗಿರುವ ಬಗ್ಗೆ ಪೊಲೀಸರಿಗೆ ತಿಳಿಯಿತು.
3. ಅನೇಕ ದಿನಗಳಿಂದ ಹುಡುಗಿಯ ಕುಟುಂಬದವರು ಪೊಲೀಸ್ ಠಾಣೆಗೆ ಆಗಾಗ ಹೋಗಿ ಮತಾಂಧನ ಹುಡುಗನ ಮೊಬೈಲ್ ಚಾಲನೆಯಲ್ಲಿದ್ದು ಆತನನ್ನು ಬಂಧಿಸುವ ಬಗ್ಗೆ ಪೊಲೀಸರಿಗೆ ವಿನಂತಿಸಿದರು. ಇದರೊಂದಿಗೆ ಇನ್ನೊಬ್ಬ ಮತಾಂಧನ ಮೇಲೆಯೂ ಸಂಶಯವಿರುವ ಬಗ್ಗೆ ಹೇಳಿದರು. ಆದರೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.
ಹಿಂದೂ ಜನಜಾಗೃತಿ ಸಮಿತಿಯು ಮುಖ್ಯಮಂತ್ರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ವರೆಗೆ ಈ ವಿಷಯವನ್ನು ಒಯ್ದ ನಂತರ ಪೊಲೀಸರು ಹುಡುಗಿಯನ್ನು ಹುಡುಕಿ ಆಕೆಯನ್ನು ಅವಳ ಕುಟುಂಬದವರಿಗೆ ಒಪ್ಪಿಸಿದರು!
ಕೊನೆಯಲ್ಲಿ ಹುಡುಗಿಯ ಕುಟುಂಬದವರು ಹಿಂದೂ ಜನಜಾಗೃತಿ ಸಮಿತಿಯ ಬಳಿ ಸಹಾಯ ಕೇಳಿದರು. ಆಗಸ್ಟ್ 9ರಂದು ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ತಮ್ಮ ಟ್ವಿಟ್ಟರ್ ಖಾತೆಯಿಂದ ಕರ್ನಾಟಕದ ಮುಖ್ಯಮಂತ್ರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಮೆನ್ಶನ್ ಮಾಡುತ್ತಾ (ಉದ್ದೇಶಿಸಿ) ಪೀಡಿತರಿಗೆ ನ್ಯಾಯ ಒದಗಿಸಿ, ಎಂದು ಟ್ವೀಟ್ ಮಾಡಿದ್ದರು. ಅನಂತರ ನಗರದ ಪೊಲೀಸರು ತಕ್ಷಣ ಸಕ್ರಿಯರಾದರು. ಹುಡುಗಿಯ ಕುಟುಂಬದವರು ಪೊಲೀಸರಿಗೆ ಹುಡುಗಿಯು ಇಂತಹ ನಗರದಲ್ಲಿರುವ ಬಗ್ಗೆ ತಿಳಿಸಿದರು.
ಈ ನಗರವು ಆ ಹುಡುಗಿಯ ನಗರದಿಂದ 1000 ಕಿಲೋಮೀಟರ್ ದೂರದಲ್ಲಿದೆ. ವಾಹನದ ಖರ್ಚು ಹುಡುಗಿಯ ಕುಟುಂಬದವರಿಗೆ ವಹಿಸಲಾಗುತ್ತಿರಲಿಲ್ಲ. ಆದುದರಿಂದ ಹಿಂದೂ ಜನಜಾಗೃತಿ ಸಮಿತಿಯು ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ನಿವೇದನೆ ಮಾಡಿತು. ಅನಂತರ ಅಧಿಕಾರಿಗಳು ಸ್ವತಹ ಕಾರ್ಯಾಚರಣೆಯನ್ನು ಆರಂಭಿಸಿದರು. ಹಾಗೆಯೇ ಪೊಲೀಸರ 2 ಗುಂಪುಗಳನ್ನು ರಚಿಸಿ ರಾಜ್ಯದಲ್ಲಿನ ಎರಡು ನಗರಗಳಲ್ಲಿ ಹುಡುಗಿಯನ್ನು ಹುಡುಕಲು ಆರಂಭಿಸಿದರು. ಕೊನೆಯಲ್ಲಿ ಆಗಸ್ಟ್ 11ರ ಮಧ್ಯರಾತ್ರಿ ಹುಡುಗಿಯು ಸಿಕ್ಕಿದಳು ಮತ್ತು ಅವಳನ್ನು ಬೆಂಗಳೂರು ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಕರೆತರಲಾಯಿತು. ಆಕೆಯನ್ನು ಪಾಲಕರಿಗೆ ಒಪ್ಪಿಸಲಾಯಿತು. ಪೊಲೀಸರು ಮುಂದಿನ ವಿಚಾರಣೆಯನ್ನು ನಡೆಸುತ್ತಿದ್ದು ಸಂಬಂಧಿತ ಮತಾಂಧನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಹಿಂದೂ ಜನಜಾಗೃತಿ ಸಮಿತಿಯು ಮುತುವರ್ಜಿ ವಹಿಸಿದ್ದರಿಂದ ಹುಡುಗಿಯನ್ನು ಹುಡುಕಲು ಸಾಧ್ಯವಾಯಿತು ಎಂದು ಕುಟುಂಬದವರು ಸಮಿತಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.