ನಮ್ಮ ರಕ್ಷಣಾಕಾರ್ಯ ಅಥವಾ ಸೇನೆಯ ಮೇಲೆ ದಾಳಿ ಮಾಡಿದರೆ, ನಾವು ತಕ್ಕ ಉತ್ತರ ನೀಡುವೆವು ! – ಜೋ ಬಾಯಡೆನ್ ಇವರಿಂದ ತಾಲಿಬಾನ್‍ಗೆ ಎಚ್ಚರಿಕೆ

20 ವರ್ಷಗಳ ಹೋರಾಟದ ಹೊರತಾಗಿಯೂ ಅಫ್ಘಾನಿಸ್ತಾನವನ್ನು ತಾಲಿಬಾನ್ ನಿಂದ ಮುಕ್ತಗೊಳಿಸಲು ಸಾಧ್ಯವಾಗದ ಅಮೇರಿಕಾದ ಈ ಎಚ್ಚರಿಕೆ ಹಾಸ್ಯಾಸ್ಪದವಾಗಿದೆ ! – ಸಂಪಾದಕರು 

ವಾಷಿಂಗ್ಟನ್ (ಅಮೇರಿಕಾ) – ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಮ್ಮ ಸೇನೆ ಅಥವಾ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳ ಮೇಲೆ ಯಾವುದೇ ದಾಳಿ ನಡೆದರೂ ಅದಕ್ಕೆ ಅಷ್ಟೇ ತೀವ್ರವಾಗಿ ಮತ್ತು ಖಂಡತುಂಡ ಉತ್ತರ ನೀಡಲಾಗುವುದು, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರು ತಾಲಿಬಾನ್ ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಬಾಯಡೆನ್ ತಮ್ಮ ಮಾತನ್ನು ಮುಂದುವರೆಸುತ್ತಾ, ಅಫ್ಘಾನಿಸ್ತಾನದಿಂದ ಅಮೇರಿಕಾ ಮತ್ತು ನ್ಯಾಟೋ ಪಡೆಗಳು ಹಿಂದೆ ಬಂದಿದ್ದರೂ, ಭಯೋತ್ಪಾದನೆಯ ವಿರುದ್ಧದ ಅಮೇರಿಕಾದ ಹೋರಾಟವು ಮುಂದುವರಿಯಲಿದೆ. ಅದಕ್ಕಾಗಿ ನಮ್ಮ ಸಹಕಾರಿ ಮತ್ತು ಅಫ್ಘಾನಿಸ್ತಾನದಲ್ಲಿ ಶಾಂತಿಗಾಗಿ ಕೆಲಸ ಮಾಡಲು ಸಿದ್ಧವಿರುವ ಎಲ್ಲಾ ದೇಶಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.