ಅತ್ಯಾಚಾರದ ಪ್ರಕರಣದಲ್ಲಿನ ಸಾಕ್ಷಿದಾರನ ಹತ್ಯೆ

ಶಾಮಲಿ (ಉತ್ತರಪ್ರದೇಶ) – ಇಲ್ಲಿಯ ಕೈರಾನಾದಲ್ಲಿಯ ಅತ್ಯಾಚಾರದ ಪ್ರಕರಣದಲ್ಲಿನ ಸಾಕ್ಷಿದಾರನನ್ನು ಆರೋಪಿಯು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. (ಅತ್ಯಾಚಾರದ ಪ್ರಕರಣದಲ್ಲಿ ಕೂಡಲೇ ವಿಚಾರಣೆಯನ್ನು ನಡೆಸಿ ಆರೋಪಿಗೆ ಶಿಕ್ಷೆ ಆಗುತ್ತಿದ್ದರೆ, ಈ ಕಾಲ ಬರುತ್ತಿರಲಿಲ್ಲ ! ವ್ಯವಸ್ಥೆಯಲ್ಲಿನ ಈ ಕುಂದುಕೊರತೆಗಳನ್ನು ಸುಧಾರಿಸಲು ಸರಕಾರಿ ವ್ಯವಸ್ಥೆಯು ಈಗ ಏನು ಮಾಡಲಿದೆ ? ಸಂಪಾದಕರು)
೨ ವರ್ಷದ ಹಿಂದೆ ಓರ್ವ ಯುವತಿಯ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಅವರಿಬ್ಬರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆಗಸ್ಟ್ ೧೬ ರಂದು ಸಂತ್ರಸ್ಥೆಯು ಆಕೆಯ ಸ್ನೇಹಿತೆಯ ಜೊತೆ ದೇವಸ್ಥಾನಕ್ಕೆ ಹೋಗುತ್ತಿರುವಾಗ ಆರೋಪಿಯು ಆ ಯುವತಿಯನ್ನು ಎಳೆದುಕೊಂಡು ಕಾಡಿಗೆ ಕೊಂಡೊಯ್ದರು. ಆಗ ಸ್ನೇಹಿತೆಯು ಮನೆಗೆ ಹೋಗಿ ಈ ವಿಷಯ ತಿಳಿಸಿದನಂತರ. ಸಂತ್ರಸ್ಥೆಯ ತಾಯಿ ಮತ್ತು ಸಾಕ್ಷಿದಾರ ಅಜಯ ಇವರಿಬ್ಬರೂ ಘಟನಾಸ್ಥಳಕ್ಕೆ ತಲುಪಿದಾಗ ಆರೊಪಿಯು ಗುಂಡು ಹಾರಿಸಿ ಅಜಯನ ಹತ್ಯೆ ಮಾಡಿದನು.