ರಾಜಸ್ಥಾನ ಮಹಿಳಾ ಆಯೋಗದ ಖಾಲಿ ಹುದ್ದೆಗಳ ನೇಮಕಾತಿಗೆ ನ್ಯಾಯಾಲಯದಿಂದ ರಾಜ್ಯ ಸರಕಾರಕ್ಕೆ ನೋಟಿಸ್ !

ಲಷ್ಕರ್-ಇ-ಹಿಂದ್ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಈಶ್ವರ ಪ್ರಸಾದ ಖಂಡೇಲವಾಲ ಅವರ ಅರ್ಜಿಯ ಪರಿಣಾಮ !

ಮಹಿಳಾ ಆಯೋಗಕ್ಕೆ ಕಳೆದ ೩ ವರ್ಷಗಳಿಂದ ಅಧ್ಯಕ್ಷರಿಲ್ಲ !

ವರ್ಷಾನುಗಟ್ಟಲೆ ಮಹತ್ವದ ಸರಕಾರಿ ಹುದ್ದೆಗಳು ಖಾಲಿ ಇಡುವುದು, ಇದು ರಾಜಸ್ಥಾನದ ಕಾಂಗ್ರೇಸ್ ಸರಕಾರಕ್ಕೆ ಲಜ್ಜಾಸ್ಪದವಾಗಿದೆ !

ಮುಂಬಯಿ : ರಾಜಸ್ಥಾನ ಮಹಿಳಾ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಮಹಿಳಾ ಮತ್ತು ಬಾಲ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ರಾಜಸ್ಥಾನ ಉಚ್ಚ ನ್ಯಾಯಾಲಯವು ನೋಟಿಸ್ ಕಳುಹಿಸಿದೆ. ‘ಲಷ್ಕರ್-ಇ-ಹಿಂದ್’ ನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಈಶ್ವರ ಪ್ರಸಾದ ಖಂಡೇಲವಾಲ ಇವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಉಚ್ಚ ನ್ಯಾಯಾಲಯವು ಈ ನೋಟಿಸ್ ಕಳುಹಿಸಿದೆ.

ರಾಜಸ್ಥಾನ ಮಹಿಳಾ ಆಯೋಗದ ಮುಂದೆ ಆಲಿಕೆಗಾಗಿ ನೂರಾರು ಪ್ರಕರಣಗಳು ಬಾಕಿ ಇವೆ. ಹೀಗಿರುವಾಗ ಆಯೋಗದ ಅಧ್ಯಕ್ಷ ಸ್ಥಾನ ಖಾಲಿಯಾಗಿರುವುದರಿಂದ ನೂರಾರು ಮಹಿಳೆಯರು ನ್ಯಾಯಕ್ಕಾಗಿ ಕಾಯಬೇಕಾಗಿದೆ. ಇದರ ಗಾಂಭೀರ್ಯವನ್ನು ಗಮನದಲ್ಲಿಟ್ಟುಕೊಂಡು, ಶ್ರೀ. ಖಂಡೇಲವಾಲ ಅವರು ಈ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯಲ್ಲಿ, ಶ್ರೀ. ಖಂಡೇಲವಾಲ ಅವರು, ‘೧೯ ಅಕ್ಟೋಬರ್ ೨೦೧೮ ರಿಂದ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯ ಹುದ್ದೆ ಮತ್ತು ೨೦ ನೇ ಜನವರಿ ೨೦೧೯ ರಿಂದ, ಆಯೋಗದ ೩ ಸದಸ್ಯ ಪದವಿಗಳು ಖಾಲಿ ಇವೆ. ಈ ಹುದ್ದೆಯ ನೇಮಕಾತಿಯ ಬಗ್ಗೆ ರಾಜಸ್ಥಾನ ಸರಕಾರವು ಗಂಭೀರವಾಗಿಲ್ಲ. ಆದ್ದರಿಂದ, ಸರಕಾರವು ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡುವಂತೆ ಸರಕಾರಕ್ಕೆ ಆದೇಶಿಸಬೇಕು’ ಎಂದು ಹೇಳಿದ್ದರು. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಗೀತ ಲೋಢಾ ಮತ್ತು ನ್ಯಾಯಮೂರ್ತಿ ಮನೋಜ ಕುಮಾರ ಗರ್ಗ ಅವರ ಖಂಡಪೀಠದ ಮುಂದೆ ಈ ವಿಚಾರಣೆ ನಡೆಯಿತು. ಮುಂದಿನ ವಿಚಾರಣೆ ಎರಡು ವಾರಗಳ ನಂತರ ನಡೆಯಲಿದೆ. ಲಷ್ಕರ್-ಇ-ಹಿಂದ್, ಸಂಘಟನೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಒಂದು ಸಾಮಾಜಿಕ ಸಂಘಟನೆಯಾಗಿದ್ದು ಅದು ಭಯೋತ್ಪಾದನೆ, ಅಪರಾಧ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತದೆ.