‘ಬಿಬಿಸಿ ಮರಾಠಿ’ಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವ್ಯಂಗ್ಯಚಿತ್ರ ಪ್ರಸಾರ ಮಾಡಿ ಹಿಂದೂಗಳನ್ನು ಧಾರ್ಮಿಕತೆಯ ಹೆಸರಲ್ಲಿ ಹಿಂಸಾಚಾರಿ ಎಂದು ತೋರಿಸಲಾಗಿದೆ !

* ಬಿಬಿಸಿ ಸತತವಾಗಿ ಹಿಂದೂ ದ್ವೇಷದ ಸೇಡು ತೀರಿಸಲು ವಿವಿಧ ಪ್ರಯತ್ನ ಮಾಡುತ್ತಲೇ ಇರುತ್ತದೆ. ಇಂತಹದರಲ್ಲಿ ಇದು ಸಹ ಒಂದು ಹೊಸ ಉದಾಹರಣೆ ! ಹಿಂದೂ ಸಂಘಟನೆಗಳು ಈ ವಿಷಯವಾಗಿ ಕೇಂದ್ರ ಸರಕಾರದ ಕಡೆ ದೂರನ್ನು ದಾಖಲಿಸಿ ಬಿಬಿಸಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಪ್ರಯತ್ನಿಸಬೇಕು ! – ಸಂಪಾದಕರು

* ಬಿಬಿಸಿಯು ಇಂದಿನ ತನಕ ಹಿಂದೂಗಳ ಮೇಲೆ ಆಕ್ರಮಣ ಮಾಡುವ ಮತಾಂಧರ ಬಗ್ಗೆ ವ್ಯಂಗ್ಯಚಿತ್ರ ಏಕೆ ನಿರ್ಮಿಸಲಿಲ್ಲ ? ಕಾಶ್ಮೀರಲ್ಲಿ ಧರ್ಮದ ಹೆಸರಿನಲ್ಲಿ ಮಸೀದಿಯಲ್ಲಿನ ಧ್ವನಿವರ್ಧಕದಲ್ಲಿ ಹಿಂದೂಗಳಿಗೆ ಹೆಂಡತಿಯರನ್ನು ಮತ್ತು ಸಂಪತ್ತನ್ನು ಬಿಟ್ಟುಹೋಗಲು ಹೇಳಿದರು ಮತ್ತು ನಂತರ ಅವರ ಮೇಲೆ ಅತ್ಯಾಚಾರ ಮಾಡಿದ ಬಗ್ಗೆ ಬಿಬಿಸಿ ಏಕೆ ಮಾತನಾಡುತ್ತಿಲ್ಲ ? – ಸಂಪಾದಕರು

* ಕ್ರೈಸ್ತ ಮಿಷನರಿಗಳಿಂದ ಹಿಂದೂಗಳನ್ನು ಮತಾಂತರಿಸುವ ಬಗ್ಗೆ, ಅವರ ಶಾಲೆಗಳಿಂದ ಹಿಂದೂ ವಿದ್ಯಾರ್ಥಿಗಳಲ್ಲಿ ಆಗುವ ವೈಚಾರಿಕ ಕ್ರೈಸ್ತಿ ಕರಣ ಈ ವಿಷಯವಾಗಿ ಬಿಬಿಸಿ ಏಕೆ ಮಾತನಾಡುವುದಿಲ್ಲ ? – ಸಂಪಾದಕರು

ಮುಂಬಯಿ  – ಬಿಬಿಸಿಯ ವಾರ್ತಾ ಸಂಸ್ಥೆಯ ‘ಬಿಬಿಸಿ ಮರಾಠಿ’ ಈ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವ್ಯಂಗ್ಯ ಚಿತ್ರ ಪೋಸ್ಟ್ ಮಾಡಲಾಗಿದೆ. ಆ ಮುಖಾಂತರ ಹಿಂದೂಗಳನ್ನು ಧಾರ್ಮಿಕತೆಯ ಹೆಸರಿನಲ್ಲಿ ಕಟ್ಟರವಾದಿಗಳು ಹಾಗೂ ಹಿಂಸಕರು ಎಂದು ತೋರಿಸಲಾಗಿದೆ. ಮುಸಲ್ಮಾನ್ ವ್ಯಕ್ತಿಯನ್ನು ಹೊಡೆದು ಬಡೆದು ಅವನಿಂದ ‘ಜೈ ಶ್ರೀ ರಾಮ್’ ಹೇಳಿಸಿರುವ ತಥಾಕಥಿತ ವಾರ್ತೆಯ ಸಂದರ್ಭ ನೀಡುತ್ತಾ ‘ಬಿಬಿಸಿ ಮರಾಠಿ’ ಹಿಂದೂಗಳನ್ನು ಆಕ್ರಮಣಕಾರಿ ಎಂದು ತೋರಿಸಿದೆ. ಈ ವ್ಯಂಗ್ಯಚಿತ್ರದಲ್ಲಿ ಒಬ್ಬ ಪೋಷಕ ಇನ್ನೊಬ್ಬ ಪೋಷಕರ ಜೊತೆ ಮಾತನಾಡುತ್ತಿರುವಾಗ, ‘ನಮ್ಮ ಹುಡುಗ ಬಹಳ ಧಾರ್ಮಿಕನಾಗಿದ್ದಾನೆ, ಜನರನ್ನು ಹೊಡೆದು ಬಡೆದು ದೇವರ ಹೆಸರನ್ನು ತೆಗೆದುಕೊಳ್ಳುವಂತೆ ಮಾಡುತ್ತಾನೆ’ ಎಂದು ಹೇಳುವುದನ್ನು ತೋರಿಸಲಾಗಿದೆ.