ಪಾಕ್‍ಗೆ ದೋಷಪೂರ್ಣ ‘ಜೆಎಫ್- 17’ ಯುದ್ಧ ವಿಮಾನವನ್ನು ಕೊಟ್ಟು ಮೋಸ ಮಾಡಿದ ಚೀನಾ !

ಪಾಕ್‍ಗೆ ಚೀನಾ ಬಿಟ್ಟರೆ ಬೇರೆ ಪರ್ಯಾಯವಿಲ್ಲ; ಹಾಗಾಗಿ ಚೀನಾವು ಅದರ ಪೂರ್ಣ ಲಾಭವನ್ನು ಪಡೆದು ಪಾಕ್‍ಗೆ ಮೋಸ ಮಾಡುತ್ತಿದೆ, ಇದು ಪಾಕ್ ನಾಗರಿಕರ ಗಮನಕ್ಕೆ ಬಂದ ದಿನವೇ ಸುದಿನ !

ಇಸ್ಲಾಮಾಬಾದ್ (ಪಾಕಿಸ್ತಾನ) – ಚೀನಾ ಪಾಕ್‍ಗೆ ನೀಡಿದ ‘ಜೆಎಫ್-17‘ ಈ ಯುದ್ಧ ವಿಮಾನದಲ್ಲಿ ಅನೇಕ ತಾಂತ್ರಿಕ ಅಡಚಣೆಗಳು ಕಂಡುಬಂದಿವೆ. ಚೀನಾದಿಂದ ಸಿಕ್ಕಿರುವ ಈ ವಿಮಾನವು ಪಾಕ್‍ಗಾಗಿ ತಲೆನೋವಾಗಿ ಪರಿಣಮಿಸಿದೆ. ದೋಷಪೂರ್ಣ ಇಂಜಿನ್, ಕಡಿಮೆ ಕ್ಷಮತೆ ಹಾಗೂ ಅದನ್ನು ನೋಡಿಕೊಳ್ಳುವಲ್ಲಿ ಬರುವ ಖರ್ಚು ಇದರಿಂದ ವಾಯು ದಳವು ತೊಂದರೆಗೆ ಈಡಾಗಿದೆ.

ಜೆಎಫ್-17 ವಿಮಾನಗಳ ಖರೀದಿಗಾಗಿ ಪಾಕ್ 1999 ರಲ್ಲಿ ಚೀನಾದ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಈ ವಿಮಾನವನ್ನು ಸುಖೋಯಿ-30, ಎಂ.ಕೆ.ಐ, ಮಿಗ್-29 ಮತ್ತು ಮಿರಾಜ-2000 ಇವುಗಳ ಜೊತೆ ತುಲನೆ ಮಾಡಲಾಗುತ್ತದೆ. ಕರಾರು ಮಾಡುವಾಗ ಚೀನಾವು ಈ ವಿಮಾನದ ಅನೇಕ ಲಾಭಗಳನ್ನು ಹೇಳಿತ್ತು; ಆದರೆ ಈಗ ಪಾಕ್‍ಗೆ ಈ ವಿಮಾನಗಳಲ್ಲಿ ಕೊರತೆಗಳು ಹೆಚ್ಚು ಕಾಣುತ್ತಿವೆ. ಈ ವಿಮಾನದಲ್ಲಿನ ಕೊರತೆಯ ಬಗ್ಗೆ ಪಾಕ್ ಚೀನಾಕ್ಕೆ ದೂರನ್ನು ನೀಡಿದೆ; ಆದರೆ ಚೀನಾವು ಈ ದೂರನ್ನು ದುರ್ಲಕ್ಷ್ಯಿಸಿದೆ.