‘ಸುದರ್ಶನ ನ್ಯೂಸ್’ ವಾರ್ತಾವಾಹಿನಿಯ ಪತ್ರಕರ್ತ ಮನೀಶ ಕುಮಾರ ಸಿಂಹ ಇವರನ್ನು ಕಥಿತ ಭೂಮಿಯ ವಿವಾದದಿಂದಾಗಿ ಕತ್ತು ಸೀಳಿ ಹತ್ಯೆ

ಮಹಮ್ಮದ್ ಆಲಮ ಮತ್ತು ಅವನ ಸಹಚರರ ಬಂಧನ

  • ಬಿಹಾರನಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ
  • ಹಿಂದುತ್ವನಿಷ್ಠ ವಾರ್ತಾವಾಹಿನಿಯ ಪತ್ರಕರ್ತನ ಹತ್ತೆ ಭೂಮಿ ವಾದದಿಂದ ಆಗಿದೆಯೇ ಅಥವಾ ಧರ್ಮದಿಂದಾಗಿದೆಯೇ ? ಎಂಬುವುದನ್ನು ಪೊಲೀಸರು ಪತ್ತೆಹಚ್ಚಬೇಕು !

ಚಂಪಾರಣ (ಬಿಹಾರ್) : ಸ್ಥಳೀಯ ಮಠಲೋಹಿಯಾ ಎಂಬ ಊರಿನಲ್ಲಿ ಸುದರ್ಶನ ನ್ಯೂಸ್ ಹಿಂದಿ ವಾರ್ತಾ ವಾಹಿನಿಯ ಪತ್ರಕರ್ತ ಮನೀಶ್ ಕುಮಾರ್ ಸಿಂಹ ಇವರ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಸಿಸಿಟಿವಿಯ ಆಧಾರದಲ್ಲಿ ಮಹಮ್ಮದ್ ಆಲಮ ಮತ್ತೆ ಅವನ ಸಹಚರನನ್ನು ಬಂಧಿಸಿದ್ದಾರೆ. ಸಿಂಹ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಅವರ ಮೃತದೇಹ ಊರಿನ ಒಂದು ಹಳ್ಳದಲ್ಲಿ ಸಿಕ್ಕಿದೆ. ಭೂಮಿಯ ವಾದದಿಂದ ಈ ಹತ್ಯೆ ಆಗಿದೆ ಎಂದು ಹೇಳಲಾಗುತ್ತಿದೆ.

ಭೂಮಿಯ ವಾದದಿಂದ ಜುಲೈ ೨೫ ರಂದು ಮಹಮ್ಮದ್ ಆಲಮ ಸೇರಿ ೧೩ ಜನರ ವಿರುದ್ಧ ಆರೋಪವನ್ನು ದಾಖಲಿಸಲಾಗಿತ್ತು.