ಪಾಕಿಸ್ತಾನದಲ್ಲಿ ಧರ್ಮನಿಂದನೆ ಪ್ರಕರಣದಲ್ಲಿ ೮ ವರ್ಷದ ಹಿಂದೂ ಹುಡುಗನಿಗೆ ಗಲ್ಲು ಶಿಕ್ಷೆಯಾಗುವ ಸಾಧ್ಯತೆ

ಈ ತಥಾಕಥಿತ ಧರ್ಮನಿಂದನೆಯಿಂದಾಗಿಯೇ ಅಲ್ಲಿಯ ಮತಾಂಧರು ಶ್ರೀ ಗಣಪತಿ ದೇವಸ್ಥಾನದ ಮೇಲೆ ದಾಳಿ ಮಾಡಿದ್ದರು !

  • ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಮತ್ತು ಅದಕ್ಕೂ ಮೀರಿ ಹಿಂದೂಗಳನ್ನು ಹಿಂಸಿಸುವ ಸಲುವಾಗಿ, ಅವರನ್ನು ಉದ್ದೇಶಪೂರ್ವಕವಾಗಿ ಧರ್ಮನಿಂದೆಯ ಅಪರಾಧದಲ್ಲಿ ಸಿಲುಕಿಸಲಾಗುತ್ತದೆ ಮತ್ತು ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಇದನ್ನು ಜಾಗತಿಕ ಸಮುದಾಯ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ವಿರೋಧಿಸಬೇಕು !
  • ಭಾರತ ಸರಕಾರವು ಈ ವಿಷಯದ ಬಗ್ಗೆ ಗಮನಹರಿಸಿ ಈ ಹಿಂದೂ ಹುಡುಗನಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುವುದೇ ?

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಒಂದು ಮದರಸಾದಲ್ಲಿನ ಗ್ರಂಥಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಬಂಧಿತನಾದ ೮ ವರ್ಷದ ಹಿಂದೂ ಹುಡುಗನಿಗೆ ಧರ್ಮನಿಂದನೆಯ ಕಾನೂನಿನಡಿ ಗಲ್ಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಧರ್ಮನಿಂದನೆ ಆರೋಪದ ಮೇಲೆ ಪಾಕಿಸ್ತಾನದ ನ್ಯಾಯಾಲಯದಲ್ಲಿ ವಿವಿಧ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ನಡೆಯುತ್ತಿದ್ದು ಈ ಪ್ರಕರಣದ ಆರೋಪಿಯಾಗಿರುವ ಹಿಂದೂ ಹುಡುಗ ದೇಶದ ಅತ್ಯಂತ ಕಿರಿಯ ಆರೋಪಿಯಾಗಿದ್ದಾನೆ. ಪ್ರಸ್ತುತ ಹುಡುಗ ಮತ್ತು ಆತನ ಕುಟುಂಬದವರನ್ನು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಈ ಹುಡುಗನ ಹೆಸರು ಬಹಿರಂಗಪಡಿಸಿಲ್ಲ. ಈ ಹುಡುಗನಿಗೆ ನ್ಯಾಯಾಲಯವು ಜಾಮೀನು ನೀಡಿದ ನಂತರ, ಮತಾಂಧರ ಸಮೂಹವು ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ಜಿಲ್ಲೆಯ ಭೋಂಗ್ ಪಟ್ಟಣದ ಶ್ರೀ ಗಣಪತಿ ದೇವಸ್ಥಾನದ ಮೇಲೆ ದಾಳಿ ಮಾಡಿದ್ದರು. ಈ ದಾಳಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ದಾಳಿಯ ನಂತರ, ಹಿಂದೂಗಳಲ್ಲಿ ಭಯದ ವಾತಾವರಣವಿದೆ ಮತ್ತು ಅವರು ತಮ್ಮ ಮನೆಗಳನ್ನು ತೊರೆಯುವಂತೆ ಒತ್ತಾಯಿಸಲಾಗುತ್ತಿದೆ.

ಅಲ್ಪಸಂಖ್ಯಾತರ ಭದ್ರತೆಗಾಗಿ ಏನಾದರೂ ಮಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ ! – ಪೀಡಿತ ಹುಡುಗನ ಕುಟುಂಬದ ಸದಸ್ಯರು

ಹುಡುಗನ ಕುಟುಂಬದ ಸದಸ್ಯರೊಬ್ಬರು ಹೆಸರನ್ನು ಮುದ್ರಿಸದಿರುವ ಶರತ್ತಿನ ಮೇರೆಗೆ ಬ್ರಿಟಿಶ ವಾರ್ತಾ ಪತ್ರಿಕೆ ‘ದ ಗಾರ್ಡಿಯನ್’ನ ಪ್ರತಿನಿಧಿ ಜೊತೆಗೆ ಮಾತನಾಡುತ್ತಾ, ’ಹುಡುಗನಿಗೆ ಧರ್ಮನಿಂದನೆ ಎಂದರೆ ಏನು ಎಂಬುದು ತಿಳಿದಿಲ್ಲ. ಈ ಪ್ರಕರಣದಲ್ಲಿ, ಹುಡುಗನನ್ನು ಸಿಲುಕಿಸಲಾಗಿದೆ. ಆತನಿಗೆ ಇನ್ನೂ ತಿಳಿಯುತ್ತಿಲ್ಲ ಅಪರಾಧವೇನು ಮತ್ತು ಒಂದು ವಾರದಿಂದ ಏಕೆ ಜೈಲಿನಲ್ಲಿ ಇಡಲಾಗಿದೆ ಎಂದು. ನಾವು ಕೂಡ ನಮ್ಮ ಅಂಗಡಿ ಮತ್ತು ಕೆಲಸವನ್ನು ತೊರೆದಿದ್ದೇವೆ. ಇಡೀ ಸಮಾಜವು ಭಯಭೀತವಾಗಿದೆ. ನಾವು ಇನ್ನು ಮುಂದೆ ಈ ಪ್ರದೇಶಕ್ಕೆ ಮರಳಲು ಬಯಸುವುದಿಲ್ಲ. ಅಲ್ಪಸಂಖ್ಯಾತರ ರಕ್ಷಣೆಗೆ ಅಥವಾ ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಹುದು ಎಂದು ನಮಗೆ ಅನಿಸುವುದಿಲ್ಲ’ ಎಂದು ತಮ್ಮ ಅಳುಲು ತೋಡಿಕೊಂಡರು.

ಧರ್ಮನಿಂದೆಯ ಕಾನೂನಿನ ದುರ್ಬಳಕೆ ! – ವಿಶ್ವದಾದ್ಯಂತ ಕಾನೂನಿನ ತಜ್ಞರಿಂದ ಟೀಕೆ

ವಿಶ್ವದಾದ್ಯಂತ ಕಾನೂನಿನ ತಜ್ಞರ ಪ್ರಕಾರ, ಹುಡುಗನ ವಿರುದ್ಧ ಧರ್ಮನಿಂದನೆಯ ಆರೋಪಗಳು ಸುಳ್ಳಾಗಿದೆ; ಏಕೆಂದರೆ ಈ ವಯಸ್ಸಿನ ಯಾರೊಬ್ಬರೂ ಈ ಹಿಂದೆ ಧರ್ಮನಿಂದನೆಯ ಆರೋಪವನ್ನು ಹೊರಿಸಿಲ್ಲ. ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ, ಈ ಕಾನೂನನ್ನು ಅಲ್ಪಸಂಖ್ಯಾತರ ವಿರುದ್ಧ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಆದ್ದರಿಂದ, ಮಾನವ ಹಕ್ಕುಗಳ ಸಂಘಟನೆಗಳು ಪಾಕಿಸ್ತಾನದ ಧರ್ಮನಿಂದನೆಯ ಕಾನೂನುಗಳನ್ನು ದೀರ್ಘಕಾಲದಿಂದ ಟೀಕಿಸುತ್ತಿವೆ. ನ್ಯಾಯಾಲಯವು ಕೆಲವು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದರೂ, ಇಲ್ಲಿಯವರೆಗೆ ಯಾರನ್ನೂ ಗಲ್ಲಿಗೇರಿಸಲಾಗಿಲ್ಲ.