ಪಾಕಿಸ್ತಾನದ ಪ್ರಧಾನಮಂತ್ರಿಯ ಸರಕಾರಿ ನಿವಾಸಸ್ಥಾನವನ್ನು ಬಾಡಿಗೆಗಾಗಿ ಕೊಡಲಾಗುವುದು.

ದಿವಾಳಿತನದ ಹೊಸ್ತಿಲಲ್ಲಿ ನಿಂತಿರುವ ಭಯೋತ್ಪಾದಕ ಪಾಕಿಸ್ತಾನವನ್ನು ಉಳಿಸಲು ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರ ನಿವಾಸ ಸ್ಥಾನವನ್ನು ತೆರವುಗೊಳಿಸಬೇಕಾದ ಸ್ಥಿತಿ ಬಂದೊದಗಿದೆ

ಇಸ್ಲಾಮಾಬಾದ್ (ಪಾಕಿಸ್ತಾನ) – ದಿವಾಳಿತನದ ಹಾದಿ ಹಿಡಿದಿರುವ ಪಾಕಿಸ್ತಾನದಲ್ಲಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರ ಅಧಿಕೃತ ನಿವಾಸಸ್ಥಾನವನ್ನು ಬಾಡಿಗೆಗೆ ಕೊಡಲಾಗುವುದು. ಈ ಮೊದಲು 2019 ರಲ್ಲಿ ಪ್ರಧಾನಮಂತ್ರಿಯ ಮನೆಯನ್ನು ವಿದ್ಯಾಪೀಠವನ್ನಾಗಿಸುವುದಾಗಿ ಘೋಷಣೆಯನ್ನು ಮಾಡಲಾಗಿತ್ತು. ಈ ಘೋಷಣೆಯ ನಂತರ ಇಮ್ರಾನ್ ಖಾನ್ ಇವರು ಈ ನಿವಾಸಸ್ಥಾನವನ್ನು ಬಿಟ್ಟಿದ್ದರು. ಈಗ ಸರಕಾರವು ತನ್ನ ನಿಲುವನ್ನು ಬದಲಿಸಿದೆ. ಮಂತ್ರಿಮಂಡಲವು ತೆಗೆದುಕೊಂಡ ನಿರ್ಣಯಕ್ಕೆ ಅನುಗುಣವಾಗಿ ಈ ನಿವಾಸಸ್ಥಾನವನ್ನು ಶೈಕ್ಷಣಿಕ ಸಂಸ್ಥೆಗೆ ಕೊಡುವ ಬದಲು ಸಾಂಸ್ಕೃತಿಕ, ‘ಫ್ಯಾಶನ್’ (ಸಮಾಜದಲ್ಲಿ ಪ್ರಚಲಿತ ಇರುವ ಉಡುಪಿನ ವಿಧಗಳು) ಮತ್ತು ಇತರ ಕಾರ್ಯಕ್ರಮಗಳಿಗಾಗಿ ಬಾಡಿಗೆಗಾಗಿ ಕೊಡಲಾಗುವುದು. ಪ್ರಧಾನಮಂತ್ರಿ ನಿವಾಸಸ್ಥಳದಲ್ಲಿ ಸಭಾಗೃಹ, ಅತಿಥಿಗೃಹ ಮತ್ತು ಒಂದು ಉದ್ಯಾನವನ ಬಾಡಿಗೆಗೆ ನೀಡಿ ಆದಾಯವನ್ನು ಪಡೆಯಬಹುದು. ಹಾಗೆ ಉಚ್ಚ ಮಟ್ಟದ ರಾಜಕೀಯ ಕಾರ್ಯಕ್ರಮ ಮತ್ತು ಅಂತರರಾಷ್ಟ್ರೀಯ ಪರಿಸಂವಾದ ಆಯೋಜನೆಯನ್ನು ಮಾಡಬಹುದು.