ಧರ್ಮಾಂಧ ತಾಂತ್ರಿಕನಿಂದ ಮಹಿಳೆಯ ಲೈಂಗಿಕ ಶೋಷಣೆ ಹಾಗೂ ಮತಾಂತರ

ದೆಹಲಿಯಲ್ಲಿನ ಶಾಹದರ ಪ್ರದೇಶದಲ್ಲಾದ ಘಟನೆ !

ಧರ್ಮಾಂಧನಿಂದ ಪೀಡಿತಳ ಅಪ್ರಾಪ್ತ ಸೋದರ ಸೊಸೆಯ ಮೇಲೆಯೂ ಅನೇಕ ವರ್ಷಗಳಿಂದ ಬಲಾತ್ಕಾರ !

* ಧರ್ಮಾಂಧರಿಂದ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿರುವಾಗ ಜಾತ್ಯತೀತತೆಯ ಡಂಗುರ ಸಾರುವ ಪ್ರಸಾರಮಾಧ್ಯಮಗಳು ಏಕೆ ಸುಮ್ಮನಿವೆ ? ಅವರಿಗೆ ಇದರ ಮೇಲೆಯೂ ಚರ್ಚಾಕೂಟಗಳನ್ನು ಆಯೋಜಿಸಬೇಕು ಎಂದು ಏಕೆ ಅನಿಸುವುದಿಲ್ಲ ?

* ಇಂತಹ ವಾಸನಾಂಧ ಧರ್ಮಾಂಧರಿಗೆ ಷರಿಯತ್ ಕಾನೂನಿನ ಅನುಸಾರ ಶಿಕ್ಷೆಯಾಗಬೇಕು ಎಂದು ಯಾರಾದರೂ ಹೇಳಿದರೆ ಅದರಲ್ಲಿ ಆಶ್ಚರ್ಯವೆನಿಸುವುದೇನಿದೆ !

(ಎಡಭಾಗದಲ್ಲಿ) ಜಾಕಿರ್

ದೆಹಲಿಇಲ್ಲಿನ ಶಾಹದರಾ ಪ್ರದೇಶದಲ್ಲಿ ವಾಸಿಸುವ ಓರ್ವ ಮಹಿಳೆ ಮತ್ತು ಆಕೆಯ ಸೋದರ ಸೊಸೆಯ ಮೇಲೆ ಲೈಂಗಿಕ ಶೋಷಣೆ ಮಾಡಿರುವ ಬಗ್ಗೆ ಓರ್ವ ಧರ್ಮಾಂಧ ತಾಂತ್ರಿಕನ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ 2 ಪ್ರಥಮ ಮಾಹಿತಿ ವರದಿ (ಎಫ್ಐಆರ್) ಯನ್ನು ನೋಂದಾಯಿಸಲಾಗಿದೆ. ಧರ್ಮಾಂಧನು ಮಹಿಳೆಯನ್ನು ಮತಾಂತರಿಸಿದ್ದಾನೆ. ಆದರೆ ಸೋದರ ಸೊಸೆಯು ಮತಾಂತರಕ್ಕೆ ವಿರೋಧಿಸಿದಾಗ ಆಕೆಯನ್ನು ಮತಾಂತರಿಸಲು ಆತನು ವಿಫಲನಾಗಿದ್ದಾನೆ.

. ಪೀಡಿತ ಮಹಿಳೆಯ ಹೇಳಿಕೆಯಂತೆ 2005 ರಲ್ಲಿ ಆಕೆಯು ಹತ್ತು ವರ್ಷದವಳಾಗಿದ್ದಳು. ಆಗ ಅವಳು ತನಗೆ ಆಗಿರುವ ಒಂದು ರೋಗವನ್ನು ಗುಣಪಡಿಸಿಕೊಳ್ಳಲು ಜಾಕಿರ್ ಎಂಬ ತಾಂತ್ರಿಕ ಬಳಿ ಹೋದಳು. ಅಂದಿನಿಂದ ಅವನು ಆಕೆಯ ಮನೆಗೆ ಬಂದು ಹೋಗತೊಡಗಿದನು. ಪೀಡಿತಳ ತಂದೆತಾಯಿ ಶಿಕ್ಷಕರಾಗಿದ್ದರು. ಮುಂದೆ ತಾಯಿಯ ಮೃತ್ಯುವಾಯಿತು.

. ಪೀಡಿತಳು 13 ವರ್ಷದವಳಾಗಿದ್ದಾಗ ಆರೋಪಿಯು ಆಕೆಯ ಮೇಲೆ ಮೊದಲ ಸಲ ಬಲಾತ್ಕಾರ ಮಾಡಿದನು. ಅಂದಿನಿಂದ ಆರೋಪಿಯು ಪೀಡಿತೆಯ ಮೇಲೆ ಲೈಂಗಿಕವಾಗಿ ಶೋಷಿಸುತ್ತಲೇ ಇದ್ದನು. ಈ ಕಾಲಾವಧಿಯಲ್ಲಿ ಆರೋಪಿಯು ಪೀಡಿತೆಗೆ ನಾಲ್ಕು ಬಾರಿ ಗರ್ಭಪಾತ ಮಾಡಿಸಿದನು. ಅವನು ಪೀಡಿತೆಯ ಅಪ್ರಾಪ್ತ ಸೋದರ ಸೊಸೆಯನ್ನೂ ತನ್ನ ವಾಸನಾಂಧತೆಗೆ ಗುರಿಯಾಗಿಸಿದನು.

. ಪೀಡಿತ ಮಹಿಳೆಯು ೧೯೯೫ ರಲ್ಲಿ ಜನಿಸಿದ್ದರೂ ಆಗಿರುವಾಗ ಜಾಕಿರನು ೧೯೮೫ ಎಂದು ತೋರಿಸಿ ಸುಳ್ಳು ಪ್ರಮಾಣಪತ್ರವನ್ನು ತಯಾರಿಸಿದನು. ಅನಂತರ ಆಕೆಯೊಂದಿಗೆ ಒತ್ತಾಯಪೂರ್ವಕವಾಗಿ ವಿವಾಹವಾದನು. ಆಕೆಯ ತಂದೆಯ ಮೃತ್ಯುವಾದಾಗ ಹಿಂದೂ ಪದ್ಧತಿಯಂತೆ ಅವರ ಅಂತ್ಯಸಂಸ್ಕಾರ ಮಾಡದಂತೆ ತಡೆದನು ಹಾಗೂ ಅವರನ್ನು ಮುಸಲ್ಮಾನ್ ಪಂಥದಂತೆ ಹೂಳಲಾಯಿತು.

. ಶಾಹಾದರಾ ಪೊಲೀಸ್ ಠಾಣೆಯಲ್ಲಿ ಇಬ್ಬರೂ ಪೀಡಿತರ ದೂರಿನಂತೆ 2 ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲಾಯಿತು. ಪ್ರಕರಣದಲ್ಲಿ ಪೀಡಿತೆ (ಪೀಡಿತ ಮಹಿಳೆಯ ಸೋದರ ಸೊಸೆ)ಯು ಅಪ್ರಾಪ್ತಳಾಗಿರುವುದರಿಂದ ಇಲ್ಲಿಪೋಕ್ಸೋಕಾನೂನು ಜಾರಿಯಾಗಿದೆ. ಹೀಗಿರುವಾಗಲೂ ಆರೋಪಿಗೆ ಜಾಮೀನು ದೊರೆತಿದೆ. ಬಗ್ಗೆ ಆಶ್ಚರ್ಯವೆನಿಸುತ್ತದೆ. ಆರೋಪಿಗೆ ಸಹಾಯ ಮಾಡಲು ಪೊಲೀಸರು ದೂರಿನಲ್ಲಿ ಉದ್ದೇಶಪೂರ್ವಕವಾಗಿ ನಿಷ್ಕಾಳಜಿ ಮಾಡಿದರು ಎಂದು ಪೀಡಿತೆಯು ಆರೋಪಿಸಿದ್ದಾಳೆ. (ಜನತೆಗೆ ಪೊಲೀಸರು ಪೀಡಿತರಿಗೆ ಸಹಾಯ ಮಾಡುವುದನ್ನು ಬಿಟ್ಟು ಆರೋಪಿಗಳಿಗೆ ಸಹಾಯ ಮಾಡುತ್ತಿರುವುದರಿಂದಲೇ ಸಮಾಜದಲ್ಲಿ ಬಲಾತ್ಕಾರದ ಘಟನೆಗಳು ಹೆಚ್ಚಾಗಿವೆ ಎಂದು ಅನಿಸಿದರೆ ಇದರಲ್ಲಿ ಆಶ್ಚರ್ಯವೇನಿಲ್ಲ ! – ಸಂಪಾದಕರು)

. ಪೀಡಿತೆಯ ಸೋದರ ಸೊಸೆಯುನಾನು ನಾಲ್ಕನೇ ತರಗತಿಯಲ್ಲಿರುವಾಗ ಜಾಕಿರನು ನನ್ನ ಮೇಲೆ ಬಲಾತ್ಕಾರ ಮಾಡಿದನು. ಅವನು ನನ್ನ ಮೇಲೆ ಅನಂತರ ಸತತವಾಗಿ ಲೈಂಗಿಕ ಶೋಷಣೆ ಮಾಡಿದನು. 2017 ರಿಂದ ನಾನು ಅವನನ್ನು ವಿರೋಧಿಸತೊಡಗಿದೆ. ಅನಂತರ ಅವನು ನನಗೆ ಶಾರೀರಿಕ ಹಿಂಸೆ ಮಾಡತೊಡಗಿದನು. ಪೊಲೀಸರಲ್ಲಿ ದೂರನ್ನು ನೋಂದಾಯಿಸುವಾಗ ನನಗೆ ೧೬ ವರ್ಷ ಆಗಿದ್ದರೂ ಉದ್ದೇಶಪೂರ್ವಕವಾಗಿ 21 ವರ್ಷ ಎಂದು ನೋಂದಾಯಿಸಲಾಗಿದೆ ಎಂದು ಹೇಳಿದ್ದಾಳೆ. (ಇಂತಹ ಪೊಲೀಸರನ್ನು ತಕ್ಷಣ ಅಮಾನತುಗೊಳಿಸಿ ಅವರ ಮೇಲೆ ಕಠಿಣ ಕಾರ್ಯಾಚರಣೆಯನ್ನು ಮಾಡಬೇಕು ! – ಸಂಪಾದಕರು)