ಕೊರೊನಾ ರೋಗಿಗಳಿಗೆ ಪ್ರಯೋಜನಕಾರಿಯಾಗಿರುವ ಅಶ್ವಗಂಧಾ ಔಷಧಿಯ ಮೇಲೆ ಬ್ರಿಟನ್‍ನಲ್ಲಿ ಸಂಶೋಧನೆ !

ಎಲ್ಲಿ ಆಧುನಿಕ ವೈದ್ಯಕೀಯ ಶಾಸ್ತ್ರದ ಡಂಗುರ ಬಾರಿಸುತ್ತಾ ಆಯುರ್ವೇದವನ್ನು ಕೀಳಾಗಿ ಕಾಣುವ ಭಾರತೀಯ ತಥಾಕಥಿತ ವಿಜ್ಞಾನಿಗಳು, ಎಲ್ಲಿ ಆಯುರ್ವೇದದ ಬಗ್ಗೆ ಸಂಶೋಧನೆ ಮಾಡಿ ಅದರಿಂದ ತಮ್ಮ ದೇಶಕ್ಕೆ ಲಾಭ ಪಡೆಯಲು ನೋಡುತ್ತಿರುವ ಬ್ರಿಟನ್ !

ನವದೆಹಲಿ – ಭಾರತದಲ್ಲಿ ಅಧ್ಯಯನದ ಕೊನೆಯಲ್ಲಿ `ಕೊರೊನಾ ಪೀಡಿತ ರೋಗಿಗಳಿಗೆ ಅಶ್ವಗಂಧಾದಿಂದ ತಯಾರಿಸಲಾಗಿರುವ ಆಯುರ್ವೇದ ಔಷಧಿಗಳಿಂದ ಉತ್ತಮ ಪ್ರಯೋಜನವಾಗಿದೆ’, ಎಂಬುದು ಸಾಬೀತಾಗಿದೆ. ಭಾರತದಲ್ಲಿನ ಈ ಯಶಸ್ಸಿನ ನಂತರ ಈ ಔಷಧಿಯ ಮೇಲೆ ಇದೇ ಮೊದಲಬಾರಿ ಭಾರತದ ಹೊರಗೆ ಸಂಶೋಧನೆ ನಡೆಯಲಿದೆ. ಅದಕ್ಕಾಗಿ ಭಾರತ ಮತ್ತು ಬ್ರಿಟನ್‍ನ ನಡುವೆ ಒಪ್ಪಂದವಾಗಿದೆ.

16 ತಿಂಗಳು ಮತ್ತು 100 ಕ್ಕೂ ಹೆಚ್ಚು ಸಭೆಯ ನಂತರ ಆಯುಷ ಸಚಿವಾಲಯದ ‘ಅಖಿಲ ಭಾರತೀಯ ಆಯುರ್ವೇದ ಸಂಸ್ಥೆ’ ಹಾಗೂ ಬ್ರಿಟನ್‍ನ ‘ಲಂಡನ್ ಸ್ಕೂಲ್ ಆಫ್ ಹೈಜಿನ ಆಂಡ್ ಟ್ರಾಪಿಕಲ ಮೆಡಿಸಿನ’ ಇವು ಈ ಔಷಧಿಯ ಮೇಲೆ ಬ್ರಿಟನ್‍ನ 3 ಪಟ್ಟಣಗಳಲ್ಲಿನ ಕೊರೊನಾ ರೋಗಿಗಳ ಮೇಲೆ ಪರೀಕ್ಷಣೆ ಮಾಡಿ ಅಧ್ಯಯನ ಮಾಡುವುದೆಂದು ನಿರ್ಧರಿಸಲಾಗಿದೆ. ‘ಅಖಿಲ ಭಾರತೀಯ ಆಯುರ್ವೇದ ಸಂಸ್ಥೆ’ಯ ನಿರ್ದೇಶಕರಾದ ಹಾಗೂ ಈ ಯೋಜನೆಯ ಸಹಸಂಯೋಜಕರಾದ ಡಾ. ತನುಜಾ ಮನೋಜ ನೆಸಾರಿ ಇವರು, “ದಿನ 90 ದಿನಗಳಲ್ಲಿ ಬ್ರಿಟನ್‍ನಲ್ಲಿ ಲಿಸೆಸ್ಟರ, ಬರ್ಮಿಂಗಹ್ಯಾಮ್ ಮತ್ತು ಲಂಡನ್‍ನಲ್ಲಿನ ಕೊರೊನಾದ 2 ಸಾವಿರ ರೋಗಿಗಳ ಮೇಲೆ ಅಧ್ಯಯನ ಮಾಡಲಾಗುವುದು. ನಂತರ 90 ದಿನ ತುಲನಾತ್ಮಕ ಅಧ್ಯಯನ ಮಾಡಲಾಗುವುದು. ಭಾರತದಲ್ಲಿ ಅಶ್ವಗಂಧಾ ಔಷಧಿಯಿಂದ ಒಳ್ಳೆಯ ಪರಿಣಾಮವು ಕಂಡುಬಂದಿದೆ. ಕೊರೊನಾದ ದೀರ್ಘಾವಧಿಯ ಲಕ್ಷಣಗಳನ್ನು ಕಡಿಮೆ ಮಾಡಲು ಈ ಔಷಧಿಯಿಂದ ಉತ್ತಮ ಪರಿಣಾಮ ಆಗುತ್ತಿರುವುದರಿಂದ ಕೊರೊನಾದ ಚಿಕಿತ್ಸೆಯಲ್ಲಿ ಇದೊಂದು ಉತ್ತಮ ಪರ್ಯಾಯವಾಗಬಹುದು.” ಎಂದು ಹೇಳಿದರು.