ಆಗಸ್ಟ್ 8 ರಂದು ದೆಹಲಿಯಲ್ಲಿ ದೇಶಭಕ್ತರ ಭವ್ಯ ಆಂದೋಲನ !

ಬ್ರಿಟಿಷರು ಹೇರಿದ ಕಾನೂನುಗಳನ್ನು ರದ್ದುಗೊಳಿಸಿ!

ಮತಾಂತರ, ಗೋಹತ್ಯೆ, ನುಸುಳುವಿಕೆ ಇವುಗಳ ವಿರುದ್ಧ ಕಾನೂನುಗಳನ್ನು ಮಾಡಿ !

ವಾಸ್ತವದಲ್ಲಿ ಇಂತಹ ಬೇಡಿಕೆಗಳನ್ನು ದೇಶಭಕ್ತರು ಮಾಡುವಂತಾಗಬಾರದು, ಕೇಂದ್ರ ಸರಕಾರವೇ ಸ್ವತಃ ಈ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿ ಕಾನೂನುಗಳನ್ನು ಮಾಡಬೇಕು ಎಂದು ದೇಶಭಕ್ತರಿಗೆ ಅನಿಸುತ್ತದೆ !

ಆಗಸ್ಟ್ 8 ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಧರ್ಮಪ್ರೇಮಿ ಮತ್ತು ರಾಷ್ಟ್ರಪ್ರೇಮಿಯ ಬೃಹತ್ ಆಂದೋಲನ

ದೆಹಲಿ : ಭಾರತವನ್ನು ಆಳಲು ಮತ್ತು ದೇಶಭಕ್ತರನ್ನು ಹತ್ತಿಕ್ಕಲು, ಬ್ರಿಟಿಷರು 200 ವರ್ಷಗಳ ಹಿಂದೆ ಹೇರಿದ ಕಾನೂನುಗಳನ್ನು ರದ್ದುಗೊಳಿಸಬೇಕು. ಮತ್ತು ದೇಶದಲ್ಲಿ ಸಮಾನ ನಾಗರಿಕ ಕಾನೂನು, ಜನಸಂಖ್ಯೆ ನಿಯಂತ್ರಣ ಕಾನೂನು, ಮತಾಂತರ ವಿರೋಧಿ ಕಾನೂನು, ನುಸುಳುವಿಕೆ ವಿರುದ್ಧ ಕಾನೂನು, ಗೋಹತ್ಯೆ ನಿಷೇಧ ಇಂತಹ ದೇಶದ ಹಿತದ ಕಾನೂನುಗಳನ್ನು ಜಾರಿಗೆ ತರಬೇಕು. ಅದಕ್ಕಾಗಿ ಆಗಸ್ಟ್ 8 ರಂದು ಜಂತರಮಂತರನಲ್ಲಿ ಧರ್ಮಪ್ರೇಮಿ ಮತ್ತು ದೇಶಭಕ್ತರ ಭವ್ಯ ಆಂದೋಲನವನ್ನು ಆಯೋಜಿಸಲಾಗಿದೆ. ‘ಈ ಆಂದೋಲನಕ್ಕೆ ಲಕ್ಷಗಟ್ಟಲೆ ಜನರು ಭಾಗವಹಿಸಬೇಕು’ ಎಂದು ಆಯೋಜಕರು ಮನವಿ ಮಾಡಿದ್ದಾರೆ. ಈ ಆಂದೋಲನವನ್ನು ಯಶಸ್ವಿಗೊಳಿಸಲು, ಸರ್ವೋಚ್ಚ ನ್ಯಾಯಾಲಯದ ದೇಶಭಕ್ತ ಮತ್ತು ಧರ್ಮಾಭಿಮಾನಿ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಮತ್ತು ದೇಶಭಕ್ತ ವಕ್ತಾರರಾದ ಶ್ರೀ. ಪುಷ್ಪೇಂದ್ರ ಕುಲಶ್ರೇಷ್ಠ ನೇತೃತ್ವವನ್ನು ವಹಿಸಿದ್ದಾರೆ.

ಗೋಹತ್ಯೆ ಕಾನೂನನ್ನು ಜಾರಿಗೊಳಿಸಬೇಕು

1. ಬ್ರಿಟಿಷರು ಭಾರತವನ್ನು ಆಳಲು ಅನೇಕ ಕಾನೂನುಗಳನ್ನು ಜಾರಿಗೆ ತಂದರು. ಈ ಕಾನೂನುಗನುಸಾರವೇ, ಸ್ವತಂತ್ರ ಭಾರತದಲ್ಲಿ ಇನ್ನೂ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾನೂನುಗಳ ಮೂಲಕ ಬ್ರಿಟಿಷರು ದೇಶವನ್ನು ಲೂಟಿ ಮಾಡಿದರು, ಈ ದೇಶದ ಸನಾತನ ಸಂಸ್ಕೃತಿ, ಶಿಕ್ಷಣ ವ್ಯವಸ್ಥೆ (ಗುರುಕುಲ ವ್ಯವಸ್ಥೆ) ನಾಶ ಮಾಡಿದರು, ಈ ಕಾನೂನುಗಳ ಆಧಾರದಿಂದ, ಸ್ವತಂತ್ರ ಭಾರತದ ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಪ್ರತ್ಯೇಕತಾವಾದಿ ಸರಕಾರಗಳು ದೇಶವನ್ನು ಲೂಟಿ ಮಾಡಿದವು, ದೇಶದ ಇತಿಹಾಸವನ್ನು ಬದಲಾಯಿಸಿದರು ಮತ್ತು ದೇಶದ ವಿರುದ್ಧ ಸಂಚನ್ನು ರೂಪಿಸಲಾಯಿತು. ಈ ಕಾನೂನುಗಳಿಂದಾಗಿ, ಈ ದೇಶದ ಹಿಂದೂಗಳು ತಮ್ಮದೇ ರಾಜ್ಯಗಳಾದ ಕೇರಳ, ಕಾಶ್ಮೀರ ಮತ್ತು ಬಂಗಾಲದಂತಹ ರಾಜ್ಯಗಳಿಂದ ಪಲಾಯನ ಮಾಡಬೇಕಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಹಿಂದೂಗಳು ಮತಾಂತರಗೊಳ್ಳುತ್ತಿದ್ದಾರೆ. ಇಂತಹ ಕಾನೂನುಗಳನ್ನು ಕಾರ್ಯಾಚರಣೆಯಲ್ಲಿ ಇರಿಸುವುದು ಇದು ರಾಷ್ಟ್ರ ಮತ್ತು ಹಿಂದೂ ಧರ್ಮಕ್ಕೆ ಅಪಾಯಕಾರಿಯಾಗಿದೆ. ಆದ್ದರಿಂದ, ಇಂತಹ ಅಯೋಗ್ಯ ಕಾನೂನುಗಳನ್ನು ರದ್ದುಗೊಳಿಸುವಂತೆ ಈ ಆಂದೋಲನದಲ್ಲಿ ಬೇಡಿಕೆಯನ್ನು ಮಾಡಲಾಗುವುದು.

ಹೆಚ್ಚಿನ ಸಂಖ್ಯೆಯ ಹಿಂದೂಗಳು ಮತಾಂತರಗೊಳ್ಳುತ್ತಿದ್ದಾರೆ

2. ಈ ಆಂದೋಲನವು ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿಯ ಹಿತಕ್ಕಾಗಿ ಇದ್ದು ಈ ಆಂದೋಲನದಲ್ಲಿ ಮಾಜಿ ಸೈನ್ಯಾಧಿಕಾರಿ ಜನರಲ್ ಜಿ.ಡಿ. ಬಕ್ಷೀ, ಮಾಜಿ ರಾ ಅಧಿಕಾರಿ ಆರ್.ಎಸ್.ಎನ್. ಸಿಂಗ್, ಕಾಶ್ಮೀರಿ ಹಿಂದೂ ನಾಯಕ ಸುಶೀಲ ಪಂಡಿತ್, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್, ಬಿಜೆಪಿ ನಾಯಕ ಕಪಿಲ ಮಿಶ್ರಾ, ಬಂಗಾಲದಲ್ಲಿ ಹಿಂದುತ್ವನಿಷ್ಠ ನಾಯಕ ಶ್ರೀ. ದೇವದತ್ತ ಮಾಂಝಿ, ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರಪ್ರೇಮಿ ನಾಯಕ ಶ್ರೀ. ಅಂಕುರ ಶರ್ಮಾ, ಆಧ್ಯಾತ್ಮಿಕ ಗುರು ಪವನ ಸಿನ್ಹಾ, ದೆಹಲಿಯ ಸುಭಾಷ ಚಂದ್ರ ಬೋಸ್ ಸಂಗ್ರಹಾಲಯದ ಸ್ಥಾಪಕರು, ಪ್ರಾ. ಕಪಿಲ ಕುಮಾರ್, ಪೀಡಿತ ಕಾಶ್ಮೀರಿ ಹಿಂದೂ ಶ್ರೀ. ಲಲಿತ ಅಂಬರದಾರ, ಭಾರತೀಯ ಇತಿಹಾಸ ಸಂಶೋಧನೆ ಮತ್ತು ತುಲನಾತ್ಮಕ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ. ನೀರಜ ಅತ್ರಿ, ಉತ್ತರಪ್ರದೇಶದ ಮಾಜಿ ಪೊಲೀಸ್ ಮಹಾನಿರ್ದೇಶಕ ವಿಕ್ರಮ ಸಿಂಗ್, ಕೇಂದ್ರ ಸರಕಾರದ ಮಾಜಿ ಅಧಿಕಾರಿ ಆರ್.ವಿ.ಎಸ್ ಮಣಿ, ಡಾಸನಾ ದೇವಾಲಯದ ಮಹಂತ ಯತಿ ನರಸಿಂಹಾನಂದ ಸರಸ್ವತಿ, ಕಾಲಿಚರಣ ಮಹಾರಾಜ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲಗಿಟ್ ಬಾಲ್ಟಿಸ್ತಾನದ ನಾಯಕ ಕ್ಯಾಪ್ಟನ್ ಸಿಕಂದರ ರಿಜವಿ, ನಟ ಪುನಿತ್ ಇಸ್ಸಾರ್, ಉತ್ತರಪ್ರದೇಶದ ಶಿಯಾ ವಕ್ಫ ಬೋರ್ಡ್‍ನ ಮಾಜಿ ಅಧ್ಯಕ್ಷ ವಾಸಿಮ್ ರಿಝವಿ, ಮಾಜಿ ರಾ ಅಧಿಕಾರಿ ಎನ್.ಕೆ. ಸೂದ್, ನಿವೃತ್ತ ಸೇನಾಧಿಕಾರಿ ಮೇಜರ್ ಗೌರವ ಆರ್ಯ, ಚಲನಚಿತ್ರ ನಿರ್ಮಾಪಕ ವಿವೇಕ ಅಗ್ನಿಹೋತ್ರಿ ಮತ್ತು ಇತರ ರಾಷ್ಟ್ರಪ್ರೇಮಿಗಳ ನೇತೃತ್ವದಲ್ಲಿ ಈ ಆಂದೋಲನವನ್ನು ಆಯೋಜಿಸಲಾಗಿದೆ.

ಗಮನದಲ್ಲಿಟ್ಟುಕೊಳ್ಳಿ ! (ಇದನ್ನು ಕೇವಲ ಜಾಲತಾಣದಲ್ಲಿ ಮುದ್ರಿಸುವುದು)

1. ಭಾರತದ 8 ರಾಜ್ಯಗಳಲ್ಲಿ, ಹಿಂದೂಗಳ ಜನಸಂಖ್ಯೆಯು ಶೇ. 10 ಕ್ಕಿಂತ ಕಡಿಮೆಯಾಗಿದೆ.

2. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಕಾಂಗ್ರೆಸ್ 2006 ರಲ್ಲಿ ಅಲ್ಪಸಂಖ್ಯಾತ ಆಯೋಗವನ್ನು ಸ್ಥಾಪಿಸಿತು. ಇದು ದೇಶದ್ರೋಹಿಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ.

3. ವಕ್ಫ್ ಬೋರ್ಡ್ ಭೂಮಿ ಕಾಯ್ದೆ, ಇದರಿಂದಾಗಿ ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ಮೇಲೆ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ.

4. ಹಿಂದೂಗಳು ನೀಡುತ್ತಿರುವ ತೆರಿಗೆಯ ಹಣದಿಂದ ಮೌಲ್ವಿ (ಇಸ್ಲಾಂನ ಧಾರ್ಮಿಕ ನಾಯಕ), ಮೌಲಾನಾ (ಇಸ್ಲಾಂನ ಅಧಿಕೃತ ಶಿಕ್ಷಣ ಪಡೆಯುವ) ಮುಂತಾದವರಿಗೆ ಸಂಬಳ ನೀಡಲಾಗುತ್ತದೆ.

5. ಹಿಂದೂ ದೇವಾಲಯಗಳ ಅರ್ಪಣೆ ಪೆಟ್ಟಿಗೆಗಳ ಮೇಲೆ ಸರಕಾರದ ಅಧಿಕಾರವಿದೆ. ಈ ಹಣವನ್ನು ಹಿಂದೂಗಳಿಗೆ ಅಲ್ಲ; ಆದರೆ ಮುಸಲ್ಮಾನರಿಗೆ ಮತ್ತು ಅವರ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ.

6. ದೇಶದ 8 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಹಾಗಾದರೆ ಅವರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ಮತ್ತು ಅವರಿಗೆ ಸಿಗಬೇಕಿದ್ದ ಸೌಲಭ್ಯಗಳು ಏಕೆ ಸಿಗುತ್ತಿಲ್ಲ ?

7. ದೇಶದಲ್ಲಿ, ಮುಸಲ್ಮಾನರಿಗೆ ಅವರ ಧರ್ಮಶಿಕ್ಷಣವನ್ನು ಕಲಿಸಲು ಅವಕಾಶವಿದೆ; ಹಾಗಾದರೆ ಹಿಂದೂಗಳಿಗೆ ಏಕೆ ಇಲ್ಲ ?

8. ದೇಶದಲ್ಲಿ ಕಲಬೆರಕೆ ಮಾಡುವವರಿಗೆ 7 ವರ್ಷ, ಅತ್ಯಾಚಾರಿಗಳಿಗೆ 7 ವರ್ಷ, ಮತಾಂತರ ಮಾಡುವವರಿಗೆ 7 ವರ್ಷ, ದೇಶದ್ರೋಹಿಗಳಿಗೆ 7 ವರ್ಷ, ಕೋಟ್ಯಂತರ ರೂಪಾಯಿ ಹಗರಣ ಮಾಡಿದವರಿಗೆ 7 ವರ್ಷ, ದೇಶದ ಮೇಲೆ ದಾಳಿ ಮಾಡಿ ದೇಶದ ವಿರುದ್ಧ ಸಂಚು ರೂಪಿಸಿದವರಿಗೆ 7 ವರ್ಷ ಶಿಕ್ಷೆ ಸಿಗುತ್ತದೆ. ಈ ವಿಭಿನ್ನ ಅಪರಾಧಗಳಿಗೆ ಒಂದೇ ರೀತಿಯ ಶಿಕ್ಷೆ ಏಕೆ ?