ಕಡಪ(ಆಂಧ್ರಪ್ರದೇಶ)ದಲ್ಲಿ ಹಿಂದುತ್ವನಿಷ್ಠರ ಸಂಘಟಿತ ಪ್ರಯತ್ನದಿಂದ ಕ್ರೂರಿ ಟಿಪ್ಪು ಸುಲ್ತಾನನ ಪ್ರತಿಮೆ ಸ್ಥಾಪಿಸುವ ಷಡ್ಯಂತ್ರ ವಿಫಲ !

ಕ್ರೂರಿ ಟಿಪ್ಪು ಸುಲ್ತಾನನನ್ನು ಉದಾತ್ತೀಕರಣಗೊಳಿಸುವ ಪ್ರಯತ್ನ

ಹಿಂದೂಗಳು ಒಗ್ಗಟ್ಟಾದರೆ ಅವರು ಬಹಳಷ್ಟನ್ನು ಸಾಧಿಸಬಹುದು, ಆದ್ದರಿಂದ ಈಗ ಅವರು ಹಿಂದೂ ರಾಷ್ಟ್ರದ ಸ್ಥಾಪನೆಗೋಸ್ಕರ ಪ್ರಯತ್ನಿಸಬೇಕು !

ಕ್ರೂರಿ ಟಿಪ್ಪು ಸುಲ್ತಾನ

ಕಡಪ (ಆಂಧ್ರಪ್ರದೇಶ) – ಜಿಲ್ಲೆಯಲ್ಲಿನ ಪ್ರೊದ್ಧತುರದಲ್ಲಿನ ಹಿಂದುತ್ವನಿಷ್ಠರು ಒಗ್ಗಟ್ಟಾಗಿ ಪ್ರಯತ್ನಿಸಿದ್ದರಿಂದ ಕ್ರೂರಕರ್ಮಿ ಟಿಪ್ಪು ಸುಲ್ತಾನನ ಪ್ರತಿಮೆ ಸ್ಥಾಪಿಸುವ ಷಡ್ಯಂತ್ರವು ವಿಫಲವಾಯಿತು. ಪ್ರೊದ್ದತುರ್‍ನಲ್ಲಿ ಕ್ರೂರಿ ಟಿಪ್ಪು ಸುಲ್ತಾನನ ಪ್ರತಿಮೆಯನ್ನು ಸ್ಥಾಪಿಸುವ ಪ್ರಸ್ತಾಪವಿತ್ತು. ಅದಕ್ಕೆ ಅಲ್ಲಿನ ಸ್ಥಳೀಯ ಶಾಸಕರ ಬೆಂಬಲ ಕೂಡ ಇತ್ತು. ಈ ವಿಷಯವಾಗಿ ಸ್ಥಳೀಯವರ್ತಮಾನ ಪತ್ರಿಕೆಗಳಲ್ಲಿ ಸುದ್ದಿ ಬಿತ್ತರಗೊಂಡ ತಕ್ಷಣ ಆಂಧ್ರಪ್ರದೇಶ ಹಾಗೂ ತೆಲಂಗಣಾ ರಾಜ್ಯದಲ್ಲಿನ ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳು ಅದಕ್ಕೆ ತೀವ್ರ ವಿರೋಧವನ್ನು ಸೂಚಿಸಿದವು. ಅನಂತರ ಹಿಂದೂ ಧರ್ಮಾಭಿಮಾನಿಗಳು ಜೂನ್ 22 ರಂದು ಜಿಲ್ಲಾಧಿಕಾರಿ ಹಾಗೂ ಮಹಾನಗರಪಾಲಿಕೆಯ ಆಯುಕ್ತರ ಬಳಿ ದೂರನ್ನು ನೋಂದಾಯಿಸಿದರು.

1. 15 ಕ್ಕಿಂತ ಹೆಚ್ಚು ಸಂಘಟನೆಗಳ ಪ್ರಮುಖ ಸಂಘಟನೆಯಾದ ‘ಹಿಂದೂ ಐಕ್ಯ ಸಂಘಾಲ ಪೊರಾಟ ವೈದಿಕಾ’ (ಹಿಂದುತ್ವನಿಷ್ಠ ಸಂಘಟನೆಗಳೆಲ್ಲ ಸಂಘಟಿತವಾಗಿ ಸಂಘರ್ಷ ಮಾಡುವ ವೇದಿಕೆ) ಎಂಬ ಸಂಘಟನೆಯು ಕೂಡ ಟಿಪ್ಪು ಸುಲ್ತಾನನ ಪ್ರತಿಮೆ ಸ್ಥಾಪಿಸಲು ವಿರೋಧಿಸಿತು. ಈ ಸಂದರ್ಭವಾಗಿ ಸಾಮಾಜಿಕ ಮಾಧ್ಯಮ, ಹಾಗೂ ‘ಯು ಟ್ಯೂಬ್’ನ ಮೂಲಕ ಜಾಗೃತಿಗೊಳಿಸಲಾಯಿತು.

2.ಧರ್ಮಾಭಿಮಾನಿ ನ್ಯಾಯವಾದಿಗಳೊಬ್ಬರು ಸ್ವಯಂಸ್ಫೂರ್ತಿಯಿಂದ ಮಾಹಿತಿ ಹಕ್ಕು ಅಧಿಕಾರದ ಅಂತರ್ಗವಾಗಿ ಮಾಹಿತಿ ಪಡೆದುಕೊಂಡರು. ಈ ಮಾಹಿತಿಯ ಆಧಾರದ ಮೇಲೆ ಅವರು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಪತ್ರ ಬರೆದರು.

3. ವಿವಿಧ ಸ್ತರಗಳ ಸಂಘಟಿತ ವಿರೋಧದಿಂದ ಟಿಪ್ಪು ಸುಲ್ತಾನನ ಪ್ರತಿಮೆ ಸ್ಥಾಪಿಸುವ ಷಡ್ಯಂತ್ರವನ್ನು ವಿಫಲಗೊಳಿಸುವಲ್ಲಿ ಹಿಂದುತ್ವನಿಷ್ಠರಿಗೆ ಯಶಸ್ಸು ದೊರೆಯಿತು.