ಈದ್ ನಿಂದ ಕೊರೊನಾ ಸೋಂಕು ಹೆಚ್ಚಾಯಿತು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ !
* ‘ಕೊರೊನಾದ ಕಾಲದಲ್ಲಿ ಉತ್ಸವಗಳು ಬೇಡ’, ಎಂದು ಕಿರಿಚಾಡುವವರು ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಡೆಯುತ್ತಿದ್ದ ಹಿಂದೂಗಳ ಉತ್ಸವವಾದ ‘ಕಾವಡ ಯಾತ್ರೆ’ಯನ್ನು ವಿರೋಧಿಸುವ ಹಿಂದೂದ್ವೇಷಿ ಪ್ರಗತಿ(ಅಧೋಗತಿ)ಪರರು ಈಗ ‘ಚ’ ಕಾರವನ್ನು ಎತ್ತುವುದಿಲ್ಲ, ಎಂಬುದನ್ನು ಗಮನದಲ್ಲಿಡಿ ! * ‘ಅಲ್ಪಸಂಖ್ಯಾತರ ವಿರುದ್ಧ ಮಾತನಾಡುವುದು ಅಂದರೆ ಮತಾಂಧತೆ’ ಇದು ಜಾತ್ಯತೀತ ಶಬ್ದದ ವ್ಯಾಖ್ಯೆ ಆಗಿರುವುದರಿಂದ ಕೊರೊನಾದ ಎರಡನೇ ಅಲೆಯಲ್ಲಿ ಉತ್ತರಪ್ರದೇಶದಲ್ಲಿ ಹೆಚ್ಚಾಗುತ್ತಿರುವ ಕೊರೊನಾದ ಸೋಂಕಿನಿಂದ ಉತ್ತರಪ್ರದೇಶದ ರಾಜಧಾನಿ ‘ಲಖನೌ’ಗೆ ‘ಲಾಶ’ನೌ(‘ಲಾಶ’ ಎಂದರೆ ಶವ) ಎಂದು ಹೀಯಾಳಿಸುವ ಜಾತ್ಯತೀತವಾದಿಗಳು ಈಗ ಕಮ್ಯುನಿಸ್ಟ್ ಸರಕಾರವಿರುವ ಕೇರಳದ ದುಸ್ಥಿತಿಯ ಬಗ್ಗೆ ಮೌನ ವಹಿಸಿದ್ದಾರೆ ! * ಹರಿದ್ವಾರ ಕುಂಭಮೇಳವನ್ನು ‘ಸೂಪರ್ ಸ್ಪ್ರೆಡರ್’ (ವ್ಯಾಪಕ ಸೋಂಕಿನ ಕಾರಣ) ಎಂದು ಹೀಯಾಳಿಸುತ್ತಿದ್ದ ರಾಜಕೀಯ ಪಕ್ಷಗಳು ಈಗ ಕೇರಳದ ಸ್ಥಿತಿಯ ಬಗ್ಗೆ ವಹಿಸಿದ ಮೌನವನ್ನು ಹಿಂದೂಗಳು ಎಂದಿಗೂ ಮರೆಯಲಾರರು! |
ನವ ದೆಹಲಿ : ಭಾರತದಲ್ಲಿ ಕೊರೊನಾದ ಎರಡನೇ ಅಲೆಯು ಸಂಚಾರ ನಿಷೇಧ ಹಾಗೂ ಇತರ ನಿಯಮಗಳಿಂದ ನಿಯಂತ್ರಣಕ್ಕೆ ಬಂದಿತ್ತು. ಹೀಗಿದ್ದರೂ, ಕೇರಳದಲ್ಲಿ ಮಾತ್ರ ಬೇರೆಯೇ ಒಂದು ಚಿತ್ರಣವು ಕಾಣಿಸುತ್ತಿದೆ. ಇತ್ತೀಚೆಗೆ ಜರುಗಿದ ‘ಬಕರಿ ಈದ್’ನ ಕಾಲಾವಧಿಯಲ್ಲಿ ಕೇರಳದ ಕಮ್ಯುನಿಸ್ಟ್ ಸರಕಾರವು ಸಂಚಾರ ನಿಷೇಧದ ಅಡಿಯಲ್ಲಿ ಅನೇಕ ನಿಯಮಗಳನ್ನು ಸಡಿಲಿಸಿತು. ಇದರಿಂದ, ಜುಲೈ 28 ರಂದು ಒಂದೇ ದಿನದಲ್ಲಿ ಕೇರಳ ರಾಜ್ಯದಲ್ಲಿ 22 ಸಾವಿರಕ್ಕೂ ಹೆಚ್ಚು ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ, ಹಾಗೂ 153 ಜನರು ಸಾವನ್ನಪ್ಪಿದ್ದಾರೆ. ಆದ್ದರಿಂದ `ಈದ್’ `ಸೂಪರ್ ಸ್ಪ್ರೆಡರ್'(ಬೃಹತ್ ಪ್ರಮಾಣದಲ್ಲಿ ಹರಡುವಿಕೆ) ಆಗಿ ಕೆಲಸ ಮಾಡಿದೆ, ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿದೆ.
ಆರೋಗ್ಯ ಸಚಿವಾಲಯದಿಂದ ಸಿಕ್ಕಿದ ಮಾಹಿತಿಯ ಪ್ರಕಾರ, ಜುಲೈ 28 ರಂದು ದೇಶದಲ್ಲಿ ಒಟ್ಟು 43,509 ಕೊರೊನಾ ರೋಗಿಗಳು ಪತ್ತೆಯಾಗಿದ್ದಾರೆ. ಆದ್ದರಿಂದ ಸಂಪೂರ್ಣ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಕೇವಲ ಕೇರಳ ರಾಜ್ಯ ಒಂದರಲ್ಲಿಯೇ ಶೇಕಡಾ 53 ರಷ್ಟು ಪತ್ತೆಯಾಗಿರುವುದು ಇದೇ ಮೊದಲಬಾರಿಯಾಗಿದೆ.
Bakrid celebrations in Kerala turns out to be “Covid-19 Super-Spreader” as state records more than 50% of total new cases in the countryhttps://t.co/9vpRAI2ALu
— OpIndia.com (@OpIndia_com) July 28, 2021
1. ಉತ್ತರ ಕೇರಳವು ಮುಸಲ್ಮಾನ ಬಹುಸಂಖ್ಯಾತ ಪ್ರದೇಶವಾಗಿದ್ದು, ಹೆಚ್ಚಿನ ಸಂಖ್ಯೆಯ ಕೊರೊನಾ ಪೀಡಿತರು ಇಲ್ಲಿಯೇ ಪತ್ತೆಯಾಗಿದ್ದಾರೆ. ಮಲಪ್ಪುರಂ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 4,037 ಕೊರೊನಾ ಪ್ರಕರಣಗಳು ವರದಿಯಾಗಿದ್ದರೆ, ಕೋಳಿಕೋಡ್‍ನಲ್ಲಿ 2,397 ಪ್ರಕರಣಗಳು ನೊಂದಣಿಯಾಗಿವೆ.
2. ಜುಲೈ 21 ರಂದು ‘ಬಕ್ರೀದ್’ ಇತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಜುಲೈ 18, 19 ಮತ್ತು 20 ರಂದು ಕೇರಳದ ಪಿಣರಾಯಿ ವಿಜಯನ್ ಸರಕಾರವು ಸಂಚಾರ ನಿಷೇಧವನ್ನು ಸಡಿಲು ಗೊಳಿಸುತ್ತಾ, ಅಗತ್ಯ ವಸ್ತುಗಳನ್ನು ಪೂರೈಸುವ ಅಂಗಡಿಗಳ ಜೊತೆಗೆ ಬಟ್ಟೆ, ಎಲೆಕ್ಟ್ರಾನಿಕ್ಸ್ ಮತ್ತು ಆಭರಣಗಳ ಅಂಗಡಿಗಳಿಗೆ ರಾತ್ರಿ 8 ಗಂಟೆಯವರೆಗೆ ತೆರೆದಿರಲು ಅವಕಾಶ ಮಾಡಿಕೊಟ್ಟಿತು.
3. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಆಶ್ಚರ್ಯ ವ್ಯಕ್ತಪಡಿಸುತ್ತಾ ‘ಬಕ್ರೀದ್ ನಿಂದ ಕೊರೋನಾ ಸೋಂಕು ಹೆಚ್ಚಾದರೆ ನ್ಯಾಯಾಲಯವು ಅಗತ್ಯ ಕ್ರಮ ಕೈಗೊಳ್ಳುವುದು ಭಾರತೀಯ ನಾಗರಿಕರ ಜೀವನ ಹಕ್ಕು ಅತ್ಯಂತ ಮಹತ್ವದ್ದಾಗಿದೆ. ಅದನ್ನು ಯಾರು ಕಿತ್ತುಕೊಳ್ಳಬಾರದು’, ಎಂದು ಸ್ಪಷ್ಟ ಪಡಿಸಿತ್ತು.
ಸಾಮಾಜಿಕ ಮಾಧ್ಯಮದಿಂದ ನ್ಯಾಯವ್ಯವಸ್ಥೆಯ ಈ ನಿಲುವಿನ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿದೆ !
‘ಕೇರಳದಲ್ಲಿ ಬಕ್ರೀದ್, ಮತ್ತು ಉತ್ತರಪ್ರದೇಶ ಹಾಗೂ ಉತ್ತರಾಖಂಡದ ಕಾವಡ ಯಾತ್ರೆ ಒಂದೇ ಸಮಯದಲ್ಲಿ ಇತ್ತು. ಕಾವಡ ಯಾತ್ರೆಗೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ಉತ್ತರಪ್ರದೇಶ ಸರಕಾರಕ್ಕೆ ಒತ್ತಡವನ್ನು ಹೇರಿತ್ತು. ಬಕ್ರೀದ್ ಬಗ್ಗೆ ಕೇರಳ ಸರಕಾರದ ನಿರ್ಧಾರವನ್ನು ಅದು ಕೇವಲ ಮೌಖಿಕವಾಗಿ ವಿರೋಧಿಸಿದೆ’, ಎಂದು ಹೇಳುತ್ತಾ ಕೆಲವರು ನ್ಯಾಯವ್ಯವಸ್ಥೆಯ ನಿಲುವಿನ ಬಗ್ಗೆ ಪ್ರಶ್ನೆಯನ್ನು ಎತ್ತಿದ್ದಾರೆ.