ಪಾಕ್‍ನಲ್ಲಿ ಕುರಿಯ ಮೇಲೆ ಐವರಿಂದ ಲೈಂಗಿಕ ಅತ್ಯಾಚಾರ ನಡೆಸಿ ಅದರ ಕೊಲೆ !

* ಜನರು ಸಾಮಾಜಿಕ ಮಾಧ್ಯಮಗಳಿಂದ ಇಮ್ರಾನ್ ಖಾನ್ ಸರಕಾರವನ್ನು ಟೀಕಿಸುತ್ತಾ ‘ಕುರಿಗಳಿಗೂ ಬುರಖಾ ತೊಡಲು ಹೇಳುವಿರೇನು ?’, ಎಂದು ಕೇಳಿದ್ದಾರೆ !

* ಪಾಕಿಸ್ತಾನವು ವಾಸನಾಂಧರಿಂದ ತುಂಬಿರುವುದರಿಂದ ಅಲ್ಲಿ ಮಹಿಳೆಯರಷ್ಟೇ ಅಲ್ಲ; ಪ್ರಾಣಿಗಳು ಸಹ ಅಸುರಕ್ಷಿತ ಎಂಬುದು ಇದರಿಂದ ತಿಳಿದು ಬರುತ್ತದೆ. ಅಲ್ಲಿನ ಜನರ ವಾಸನಾಂಧ ಮಾನಸಿಕತೆಯನ್ನು ನೋಡಿದರೆ ಪಾಕಿಸ್ತಾನಕ್ಕೆ ಯಾವುದೇ ವಿದೇಶಿ ಮಹಿಳೆಯು ಹೋಗಲೇಬಾರದು, ಎಂದು ಜಾಗತಿಕ ಸಮುದಾಯವು ತೀರ್ಮಾನ ತೆಗೆದುಕೊಳ್ಳಬೇಕು !

ಓಕಾರಾ (ಪಾಕಿಸ್ತಾನ)– ಇಲ್ಲಿ 5 ಜನರು ಕುರಿಯನ್ನು ಕಳ್ಳತನ ಮಾಡಿ ಅದರ ಲೈಂಗಿಕ ಶೋಷಣೆ ಮಾಡಿ ಅನಂತರ ಅದನ್ನು ಹತ್ಯೆ ಮಾಡಿದರು. ಈ ಪ್ರಕರಣದಲ್ಲಿ ಪೊಲೀಸರು ಅಪರಾಧವನ್ನು ನೋಂದಾಯಿಸಿದ್ದಾರೆ. ಕುರಿಯ ಮಾಲೀಕನು ಕುರಿಯನ್ನು ಹುಡುಕುತ್ತಿದ್ದಾಗ ಅದು ಮೃತಾವಸ್ಥೆಯಲ್ಲಿ ಕಾಡಿನಲ್ಲಿ ಸಿಕ್ಕಿದೆ. ಮಾಲೀಕನು ಪಶುವೈದ್ಯರ ಬಳಿ ಅದನ್ನು ಕರೆದುಕೊಂಡು ಹೋದಾಗ ಅದರ ಮೇಲೆ ಲೈಂಗಿಕ ಶೋಷಣೆಯಾಗಿರುವುದು ಬೆಳಕಿಗೆ ಬಂತು. ನಂತರ ಅವನು ಪೊಲೀಸರ ಬಳಿ ತಕರಾರು ನೀಡಿದನು. ಐವರ ಪೈಕಿ ನಈಮ್, ನದೀಪ್ ಹಾಗೂ ರಬ್ ನವಾಜ್ ಎಂಬ ಮೂವರ ಹೆಸರು ತಿಳಿದು ಬಂದಿದೆ. ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ.

ಪ್ರಧಾನಮಂತ್ರಿ ಇಮ್ರನ್ ಖಾನ್ ರವರ ಮೇಲೆ ಸಾಮಾಜಿಕ ಮಾಧ್ಯಮಗಳಿಂದ ತೀಕ್ಷ್ಣ ಟೀಕೆ !

ಕೆಲವು ದಿನಗಳ ಹಿಂದೆ ಪ್ರಧಾನಮಂತ್ರಿ ಇಮ್ರಾನ್ ಖಾನರು ‘ಅಶ್ಲೀಲತೆಯಿಂದ ಲೈಂಗಿಕ ಅತ್ಯಾಚಾರಗಳು ನಡೆಯುತ್ತವೆ ಹಾಗೂ ಈ ಅಶ್ಲೀಲತೆಯು ಪಾಶ್ಚಾತ್ಯ ದೇಶಗಳಿಂದ ಹಾಗೂ ಭಾರತದಿಂದ ಬಂದಿದೆ. ಪುರುಷರು ರೋಬೋಟುಗಳಲ್ಲ. ಒಂದು ವೇಳೆ ಮಹಿಳೆಯರು ತುಂಡುಬಟ್ಟೆ ಧರಿಸಿದರೆ, ಆಗ ಅದರ ಪರಿಣಾಮವಂತೂ ಕಾಣಿಸಬೇಕಾದದ್ದೇ’, ಎಂಬ ಹೇಳಿಕೆ ನೀಡಿದ್ದರು. ಈಗ ಕುರಿಯ ಮೇಲಾದ ಲೈಂಗಿಕ ಅತ್ಯಾಚಾರದ ಘಟನೆಯ ಬಳಿಕ ಸಾಮಾಜಿಕ ಮಾಧ್ಯಮಗಳಿಂದ ಇಮ್ರಾನ್ ಖಾನನ ಮೇಲೆ ಟೀಕೆಯಾಗುತ್ತಿದೆ. ಪಾಕ್‍ನ ಕ್ರಿಕೆಟ್‍ಪಟು ವಾಸೀಮ್ ಅಕ್ರಮ್‍ನ ಪತ್ನಿ ಶಾನಿಎರಾ ಅಕ್ರಮ್ ಇವರು ಮುಂದಿನಂತೆ ಹೇಳಿದ್ದಾರೆ ‘ಇಂದು ಕುರಿ ನಾಳೆ ಯಾರು?’ ಆಗ ಆರೋಪಿಗಳು ಹೇಳುತ್ತಾರೆ, ಅದು ಕುರಿಯ ತಪ್ಪು. ಅದು ಒಂಟಿಯಾಗಿತ್ತು ಹಾಗೂ ಅದು ತನ್ನ ಮೈ ಮುಚ್ಚಿಕೊಂಡಿರಲಿಲ್ಲ.

ಟ್ವಿಟರ್ ನಲ್ಲಿ ಕೆಲವರು ಟ್ವಿಟ್ ಮಾಡಿ ಇಮ್ರಾನ್ ಖಾನ್‍ರವರನ್ನು ‘ಟ್ಯಾಗ್’ (ಸಂಬಂಧಪಟ್ಟವರನ್ನು ಉದ್ದೇಶಿಸಿ ಬರೆಯುವುದು) ಮಾಡಿದ್ದಾರೆ. ಅದರಲ್ಲಿ ಅವರು, ಈಗ ಕುರಿಗಳೂ ಕೂಡ ಬುರಖಾ ತೊಟ್ಟುಕೊಳ್ಳಬೇಕಾಗುವುದೇನು? ಇದರಿಂದ ‘ರೊಬೋಟ್’ (ವಾಸನಾಂಧ ಪುರುಷರು) ನಂತಹವರ ಮೇಲೆ ನಿಯಂತ್ರಣವಿರುವುದು. ಎಂದು ಬರೆದಿದ್ದಾರೆ.