ಪರಾತ್ಪರ ಗುರು ಡಾಕ್ಟರರು ಸಾಧಕರ ಪ್ರತಿ ಕ್ಷಣ ಹಾಗೂ ಮೃತ್ಯುವಿನ ನಂತರವೂ ಕಾಳಜಿಯನ್ನು ಖಂಡಿತ ವಹಿಸಲಿರುವುದರಿಂದ ಸಾಧಕರೇ, ಭಕ್ತಿಭಾವವನ್ನು ಹೆಚ್ಚಿಸಿ !

ಸಾಧಕರಿಗೆ ಮುಂಬರುವ ಆಪತ್ಕಾಲದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದವರ ರಕ್ಷಣೆಯು ಹೇಗೆ ಆಗುವುದು ?, ಇಂತಹ ಅನೇಕ ವಿಷಯಗಳ ಚಿಂತೆಯಿರುತ್ತದೆ. ಆಗ ಯಾವ ದೇವರು ನಮ್ಮನ್ನು ಹುಟ್ಟಿಸಿದ್ದಾನೋ ಅವನೇ ರಕ್ಷಣೆಯನ್ನು ಮಾಡುವನು ಎಂಬುದನ್ನು ಸಾಧಕರು ಮರೆಯುತ್ತಾರೆ. ನಾವು ಕೇವಲ ಭಗವಂತನ ಅನುಸಂಧಾನದಲ್ಲಿದ್ದುಕೊಂಡು ಭಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುವುದು ಆವಶ್ಯಕವಾಗಿದೆ. ಪರಾತ್ಪರ ಗುರು ಡಾ.ಆಠವಲೆಯವರೊಂದಿಗೆ ಸೇವೆಯನ್ನು ಮಾಡುವಾಗ ಗಮನಕ್ಕೆ ಬಂದಂತಹ ಕೆಲವು ಉದಾಹರಣೆಗಳಿಂದ ಅರಿವಾದ ಅವರ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಕು. ಪ್ರಿಯಾಂಕಾ ಲೋಟಲೀಕರ

ಪರಾತ್ಪರ ಗುರು ಡಾಕ್ಟರರು ತಮ್ಮ ಕೋಣೆಯ ಹೊರಗಿನ ಜಗಲಿಯಲ್ಲಿ ಗೂಡನ್ನು ಕಟ್ಟುವ ಗುಬ್ಬಚ್ಚಿಗೆ ಸಹಾಯ ಮಾಡುವುದು ಹಾಗೂ ಆ ಮರಿಗಳು ದೊಡ್ಡದಾಗಿ ಹಾರಿ ಹೋಗುವ ತನಕ ಪ್ರತಿದಿನ ಅದರ ಕಾಳಜಿ ತೆಗೆದುಕೊಳ್ಳುವುದು

ಕಸಪೊರಕೆಯ ಮೇಲೆ ಗುಬ್ಬಚ್ಚಿ ಕಟ್ಟಿದ ಗೂಡು

ಪರಾತ್ಪರ ಗುರು ಡಾಕ್ಟರರು ಗ್ರಂಥ ಬರೆಯುವುದಕ್ಕಾಗಿ ಕುಳಿತುಕೊಳ್ಳುವ ಕೋಣೆಯ ಜಗುಲಿಯಲ್ಲಿ ಒಂದು ಬಲೆ ತೆಗೆಯುವ ಪೊರಕೆ ಇತ್ತು. ಆ ಕೋಲಿನಲ್ಲಿದ್ದ ಕಸಬರಿಕೆಯಲ್ಲಿ ಒಂದು ಗುಬ್ಬಚ್ಚಿಯು ಗೂಡನ್ನು ಕಟ್ಟಲಾರಂಭಿಸಿತು. ಅಭ್ಯಾಸ ಕೊಠಡಿಯ ಜಗುಲಿಯಲ್ಲಿ ಕೆಲವೊಮ್ಮೆ ಗೂಡನ್ನು ಕಟ್ಟುತ್ತವೆ, ಇದು ತಿಳಿದಿದ್ದರಿಂದ ಅದಕ್ಕೆ ಗೂಡು ಕಟ್ಟಲು ಸುಲಭವಾಗಲೆಂದು ಸೌ. ಜಾಹ್ನವಿ ಶಿಂದೆಯವರು ಹುಲ್ಲನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಟೆರಸ್ ಮೇಲೆ ಇಟ್ಟಿದ್ದರು. ಆ ಪೆಟ್ಟಿಗೆಯನ್ನು ಪರಾತ್ಪರ ಗುರು ಡಾಕ್ಟರರು ಗ್ರಂಥ ಬರೆಯುವ ಮೇಜಿನ ಎದುರು ಇರುವ ಕಿಟಕಿಯಲ್ಲಿ ಇಟ್ಟಿದ್ದರು. ಆದರೆ ಗುಬ್ಬಚ್ಚಿಯು ಆ ಪೆಟ್ಟಿಗೆಯ ಹುಲ್ಲಿನಲ್ಲಿ ಮೊಟ್ಟೆಯನ್ನಿಡದೆ ಅದರಲ್ಲಿದ್ದ ಕಡ್ಡಿಯನ್ನು ತೆಗೆದುಕೊಂಡು ಕಿಟಕಿಯ ಹತ್ತಿರವಿದ್ದ ಬಲೆ ತೆಗೆಯುವ ಕೋಲಿನ ಪೊರಕೆಯಲ್ಲಿ ಗೂಡನ್ನು ಕಟ್ಟಲು ಆರಂಭಿಸಿತು. ಆ ಗುಬ್ಬಚ್ಚಿಯು ಕಿಟಕಿಯಲ್ಲಿದ್ದ ಪೆಟ್ಟಿಗೆಯಿಂದ ಒಂದೊಂದೇ ಕಡ್ಡಿಯನ್ನು ತೆಗೆದುಕೊಂಡು ಪೊರಕೆಯ ಮೇಲೆ ಹಾರಿ ಹೋಗಿ ಕುಳಿತುಕೊಳ್ಳುತ್ತಿತ್ತು. ಈ ರೀತಿ ಸತತವಾಗಿ ಮೇಲೆ ಕೆಳಗೆ ಹಾರುತ್ತಿತ್ತು. ಅದನ್ನು ನೋಡಿದ ಪರಾತ್ಪರ ಗುರು ಡಾಕ್ಟರರು ಗುಬ್ಬಚ್ಚಿಗೆ ಸತತವಾಗಿ ಹಾರಬಾರದೆಂದು ಅವರು ಕಡ್ಡಿಗಳಿದ್ದ ಪೆಟ್ಟಿಗೆಯಿಂದ ಸ್ವಲ್ಪ ಕಡ್ಡಿಯನ್ನು ತೆಗೆದುಕೊಂಡು ಹೋಗಿ ಆ ಗೂಡಿನ ಹತ್ತಿರ ಇಟ್ಟರು ಇದರಿಂದ ಗುಬ್ಬಚ್ಚಿಯ ಶ್ರಮವು ಉಳಿಯಿತು ಹಾಗೂ ಅದು ಆ ಕಡ್ಡಿಗಳನ್ನು ತೆಗೆದುಕೊಂಡು ಗೂಡನ್ನು ಕಟ್ಟಿತು. ಸಾಧಕರಿಂದ ಗುಬ್ಬಚ್ಚಿಯು ಗೂಡು ಕಟ್ಟಿದ ಪೊರಕೆಯು ಬಿದ್ದು ಮರಿಗಳಿಗೆ ಗಾಯವಾಗಬಾರದೆಂದು ಅವರು ಆ ಕೋಲಿಗೆ ಇದರಲ್ಲಿ ಗುಬ್ಬಚ್ಚಿಯ ಗೂಡು ಇದೆ. ದಯವಿಟ್ಟು ಯಾರೂ ಮುಟ್ಟಬೇಡಿ, ಎಂಬ ಚೀಟಿಯನ್ನು ಅಂಟಿಸಲು ಹೇಳಿದರು. ಆ ಮರಿಗಳು ದೊಡ್ಡದಾಗಿ ಹಾರಿ ಹೋಗುವ ತನಕ ಪ್ರತಿದಿನ ಪರಾತ್ಪರ ಗುರು ಡಾಕ್ಟರರು ಗೂಡಿನ ಹತ್ತಿರ ಹೋಗಿ ಮರಿಗಳು ಕ್ಷೇಮವಾಗಿ ಇವೆಯಲ್ಲ ಎಂದು ನೋಡುತ್ತಿದ್ದರು.

ಪರಾತ್ಪರ ಗುರು ಡಾಕ್ಟರರು ಒಂದು ಗೂಡಿನಲ್ಲಿರುವ ಗುಬ್ಬಚ್ಚಿಯ ಹಾಗೂ ಮರಿಗಳ ಬಗ್ಗೆ ಅಷ್ಟು ಕಾಳಜಿಯನ್ನು ತೆಗೆದುಕೊಳ್ಳುತ್ತಿರುವಾಗ ತನು-ಮನ-ಧನಗಳ ತ್ಯಾಗ ಮಾಡಿ ಸಾಧನೆಯನ್ನು ಮಾಡುವ ಸಾಧಕರ ಕಾಳಜಿಯನ್ನು ಗುರುದೇವರು ತೆಗೆದುಕೊಳ್ಳದಿರುವರೇ ? ಅದುದರಿಂದ ಸಾಧಕರೆಲ್ಲರೂ ನಿಶ್ಚಿಂತರಾಗಿ ಸಾಧನೆಯನ್ನು ಮಾಡಿರಿ.

ತಮಿಳುನಾಡಿನಲ್ಲಿ ದೇವಸ್ಥಾನದ ಸ್ವಚ್ಛತೆಯನ್ನು ಮಾಡುವ ವೃದ್ಧೆ ವಸುಮತಿ ಅಜ್ಜಿಯನ್ನು ಸಂತರೆಂದು ಘೋಷಿಸಿ ಅವರ ಕೊನೆಯ ಸಮಯದಲ್ಲಿ ತಿನಿಸು ಹಾಗೂ ಉಡುಗೊರೆಯನ್ನು ಕಳುಹಿಸುವುದು

ಪೂ. ವಸುಮತಿ ಅಜ್ಜಿ

ಪೂ. ವಸುಮತಿ ಅಜ್ಜಿ (ವಯಸ್ಸು ೮೫) ಇವರು ತಮಿಳುನಾಡಿನ ನಾಗರಕೊವಿಲ ಜಿಲ್ಲೆಯ ತಿರುವಟ್ಟಾರ ಎಂಬಲ್ಲಿ ವಾಸಿಸುತ್ತಿದ್ದರು. ಅವರು ಶ್ರೀ ಆದಿಕೇಶವ ದೇವಸ್ಥಾನದ ಸ್ವಚ್ಛತೆ ಮುಂತಾದ ಸೇವೆಗಳನ್ನು ಮಾಡುತ್ತಿದ್ದರು. ಅವರಿಗೆ ಪ್ರತಿ ತಿಂಗಳು ೧೦೦ ರೂಪಾಯಿ ಸಿಗುತ್ತಿತ್ತು. ಅವರಿದ್ದ ಗ್ರಾಮದ ಸಮೀಪ ಯಾವ ಸಾಧಕರಾಗಲಿ ಅಥವಾ ಸನಾತನ ಸಂಸ್ಥೆಯ ಸಂಪರ್ಕದಲ್ಲಿದ್ದ ಹಿಂದುತ್ವನಿಷ್ಠರಾಗಲಿ ಯಾರೂ ಇಲ್ಲ. ಅದುದರಿಂದ ಯಾರಿಗೂ ಅವರ ಬಗ್ಗೆ ತಿಳಿದಿರಲಿಲ್ಲ.

ಕೆಲ ಕಾಲದ ನಂತರ ಶ್ರೀಚಿತ್‌ಶಕ್ತಿ (ಸೌ) ಅಂಜಲಿ ಗಾಡಗೀಳರು ತಮಿಳುನಾಡಿಗೆ ಹೋಗಿದ್ದರು. ಅವರು ಪೂ. ವಸುಮತಿ ಅಜ್ಜಿಯವರು ದೇವಸ್ಥಾನದಲ್ಲಿ ಕಸ ಗುಡಿಸುವುದನ್ನು ನೋಡಿದರು. ಆಗ ಅವರಿಗೆ ಅಜ್ಜಿಯವರಲ್ಲೇನೋ ವೈಶಿಷ್ಟ್ಯ ಇದೆ ಎಂದು ಅರಿವಾಗಿ ಅವರು ಪರಾತ್ಪರ ಗುರು ಡಾಕ್ಟರರಲ್ಲಿ ವಸುಮತಿ ಅಜ್ಜಿಯವರ ಬಗ್ಗೆ ಹೇಳಿದರು. ಆಗ ಪರಾತ್ಪರ ಗುರು ಡಾಕ್ಟರರು ಅವರು ಸಂತರಾಗಿದ್ದಾರೆಂಬುದನ್ನು ಹೇಳಿದರು. ಅನಂತರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಒಂದು ಕಾರ್ಯಕ್ರಮದ ಮೂಲಕ ವಸುಮತಿ ಅಜ್ಜಿಯವರನ್ನು ಸಂತರೆಂದು ಘೋಷಿಸಿ ಅವರನ್ನು ಸನ್ಮಾನಿಸಿದರು. ಆಗ ಅವರಿಗೆ ೮೧ ವರ್ಷ ವಯಸ್ಸಾಗಿತ್ತು. ನಂತರ ನಾವು ಕೇರಳ ಪ್ರವಾಸದಲ್ಲಿರುವಾಗ ನಮಗೆ ತಮಿಳುನಾಡಿನ ನಾಗರಕೋವಿಲಗೆ ಹೋಗುವ ನಿಯೋಜನೆಯಾಯಿತು. ಆಗ ನಾವು ಪೂ.ವಸುಮತಿ ಅಜ್ಜಿಯನ್ನು ಭೇಟಿಯಾಗಿ ಅವರಿಗಾಗಿ ಪರಾತ್ಪರ ಗುರು ಡಾಕ್ಟರರು ನೀಡಿದಂತಹ ಉಡುಗೊರೆ ಹಾಗೂ ತಿನಿಸನ್ನು ನೀಡಿದೆವು. ಆಗ ಅವರಿಗೆ ಅನಾರೋಗ್ಯದಿಂದಾಗಿ ಏಳಲು ಆಗುತ್ತಿರಲಿಲ್ಲ. ಆಗ ಅವರ ಕಡೆಗೆ ನೋಡಿದಾಗ ಅವರು ಈ ಭೇಟಿಗಾಗಿಯೇ ಕಾದಿದ್ದರೇನೋ, ಎಂಬಂತೆ ಅರಿವಾಯಿತು; ಏಕೆಂದರೆ ಕೆಲವು ದಿನಗಳಲ್ಲಿ ಪೂ.ವಸುಮತಿ ಅಜ್ಜಿಯವರು ದೇಹತ್ಯಾಗ ಮಾಡಿದರು.

ಪರಾತ್ಪರ ಗುರು ಡಾಕ್ಟರರು ಕೇವಲ ಸಾಧಕರ ಮನೆಯವರನ್ನಷ್ಟೇ ಅಲ್ಲದೇ ಸಾಧಕರನ್ನು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸಿ ಕೊನೆಯ ಕ್ಷಣದವರೆಗೆ ಹಾಗೂ ನಂತರವು ಸೂಕ್ಷ್ಮದಿಂದ ಖಂಡಿತ ಕಾಳಜಿಯನ್ನು ತೆಗೆದುಕೊಳ್ಳಲಿರುವುದರಿಂದ ಸಾಧಕರು ಭಕ್ತಿಭಾವವನ್ನು ಹೆಚ್ಚಿಸುವುದು ಆವಶ್ಯಕವಾಗಿದೆ

ಯಾರೋ, ಯಾವುದೋ ದೇವಸ್ಥಾನದಲ್ಲಿ ಕಸ ಗುಡಿಸುವ ಸೇವೆ ಮಾಡುವ ಪೂ.ವಸುಮತಿ ಅಜ್ಜಿ ! ಪರಾತ್ಪರ ಗುರು ಡಾಕ್ಟರರು ಅವರನ್ನು ಹುಡುಕಿ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸಿ ಅವರ ಅಂತಿಮ ಸಮಯದಲ್ಲಿ ಪ್ರಸಾದ ಹಾಗೂ ಉಡುಗೊರೆಯನ್ನು ಕಳುಹಿಸುವ ನಮ್ಮ ಗುರುದೇವರು. ಇದರಿಂದ ಗಮನಕ್ಕೆ ಬರುವ ವಿಷಯವೆಂದರೆ ಕೇವಲ ಮನೆಯವರಲ್ಲದೆ ಸಾಧಕರನ್ನು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸಿ ಕೊನೆಯ ಕ್ಷಣದವರೆಗೆ ಹಾಗೂ ನಂತರವು ಪರಾತ್ಪರ ಗುರು ಡಾಕ್ಟರರು ನಮ್ಮನ್ನು ಸೂಕ್ಷ್ಮದಿಂದಲೂ ಖಂಡಿತ ಕಾಳಜಿಯನ್ನು ತೆಗೆದುಕೊಳ್ಳುವವರಿದ್ದಾರೆ. ಅದುದರಿಂದ ಸಾಧಕರೇ, ಭಕ್ತಿಭಾವವನ್ನು ಹೆಚ್ಚಿಸಿ.

– ಕು. ಪ್ರಿಯಾಂಕಾ ಲೋಟಲೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೪.೪.೨೦೨೧)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.