ರಾಜಸ್ಥಾನದಲ್ಲಿ ಕಾಂಗ್ರೆಸ್ ಪ್ರಾಯೋಜಿತ ಅಪಕ್ಷ ಶಾಸಕರ ಸಮ್ಮುಖದಲ್ಲಿ ಶ್ರೀ ರಾಮ ಎಂದು ಬರೆಯಲಾಗಿದ್ದ ಕೇಸರಿ ಧ್ವಜವನ್ನು ಹರಿದುಹಾಕಿದ ಮೀಣಾ ಸಮುದಾಯದ ಯುವಕರು !

ಹಿಂದೂದ್ವೇಷಿ ಕಾಂಗ್ರೆಸ್ ಆಡಳಿತದ ರಾಜಸ್ಥಾನದಲ್ಲಿ ಕೇಸರಿ ಧ್ವಜವನ್ನು ಹರಿದು ಹಾಕುವುದರಲ್ಲಿ ಅಚ್ಚರಿಯೇನಿಲ್ಲ? ಅಂತಹ ಜನರನ್ನು ಆಯ್ಕೆ ಮಾಡುವ ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ !

ಕಾಂಗ್ರೆಸ್ ಪ್ರಾಯೋಜಿತ ಅಪಕ್ಷ ಶಾಸಕರ ಸಮ್ಮುಖದಲ್ಲಿ ಶ್ರೀ ರಾಮ ಎಂದು ಬರೆಯಲಾಗಿದ್ದ ಕೇಸರಿ ಧ್ವಜವನ್ನು ಹರಿದುಹಾಕಿದ ಮೀಣಾ ಸಮುದಾಯದ ಯುವಕರು

ಜೈಪುರ (ರಾಜಸ್ಥಾನ) – ರಾಜಸ್ಥಾನದ ಆಮಾಗಡ ಕೋಟೆಯಲ್ಲಿ ಶ್ರೀರಾಮ ಎಂದು ಬರೆಯಲಾಗಿದ್ದ ಕೇಸರಿ ಧ್ವಜವನ್ನು ಕಾಂಗ್ರೆಸ್ ಪ್ರಾಯೋಜಿತ ಅಪಕ್ಷ ಶಾಸಕ ರಾಮಕೇಶ್ ಮೀಣಾ ಅವರ ಸಮ್ಮುಖದಲ್ಲಿ, ಮೀಣಾ ಸಮುದಾಯದ ಕೆಲವು ಯುವಕರು ಹರಿದು ಎಸೆದು ಬಿಟ್ಟರು. ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ.

೧. ಶಾಸಕ ಹಾಗೂ ರಾಜಸ್ಥಾನ ಆದಿವಾಸಿ ಮೀಣಾ ಸೇವಾ ಸಂಘದ ಅಧ್ಯಕ್ಷ ರಾಮಕೇಶ್ ಮೀಣಾ ಇವರು ಈ ಘಟನೆಯ ಬಗ್ಗೆ ಮಾತನಾಡುತ್ತಾ, ಆಮಾಗಡ ಕೋಟೆ ಮೀಣಾ ಸಮುದಾಯದ ಐತಿಹಾಸಿಕ ಪರಂಪರೆಯಾಗಿದೆ. ಅಲ್ಲಿ ಮೀಣಾ ಸಮುದಾಯದ ಆಳ್ವಿಕೆ ನಡೆಯುತ್ತದೆ. ಅಲ್ಲಿ ಅಂಬಾಮಾತೆಯ ದೇವಾಲಯ ಇದೆ. ಕೆಲವು ದುಷ್ಕರ್ಮಿಗಳು ಇಲ್ಲಿ ಕೇಸರಿ ಧ್ವಜಗಳನ್ನು ಹಾರಿಸಿ ಮೀಣಾ ಸಮುದಾಯದ ಇತಿಹಾಸವನ್ನು ಹಾಳು ಮಾಡಿದ್ದಾರೆ. (ಮೀಣಾ ಸಮಾಜವು ವಿಷ್ಣುವಿನ ಮತ್ಸ್ಯವತಾರದಿಂದ ಉತ್ಪನ್ನವಾಗಿದೆ ಎಂದು ದಾಖಲು ಇದೆ. ಶ್ರೀರಾಮನು ವಿಷ್ಣುವಿನ ಅವತಾರವಾಗಿದ್ದಾರೆ. ಹೀಗಿರುವಾಗ ಶ್ರೀರಾಮನ ಚಿತ್ರವಿರುವ ಕೇಸರಿ ಧ್ವಜವನ್ನು ಹಾರಿಸುವುದರಲ್ಲಿ ತಪ್ಪೇನಿದೆ ? ಇದರಿಂದ ಇತಿಹಾಸವು ಹೇಗೆ ಹಾಳಾಗುತ್ತದೆ ? ತಮ್ಮ ಹಿಂದೂ ಮೂಲವನ್ನು ಮರೆತು ಇಂತಹ ಹಿಂದೂಗಳ ದೇವತೆಗಳ ಅವಮಾನ ಮಾಡುವವರು ನತದೃಷ್ಟರೇವಗಿದ್ದಾರೆ ! – ಸಂಪಾದಕರು) ಆದ್ದರಿಂದ ಈ ಧ್ವಜವನ್ನು ಅಲ್ಲಿಂದ ತೆಗೆಯಲಾಯಿತು. ಇಂತಹ ಘಟನೆಗಳು ಮತ್ತೆ ಸಂಭವಿಸಬಾರದು ಆದ್ದರಿಂದ, ಈ ಕೋಟೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಇಲ್ಲಿ ನಮ್ಮ ತಂಡದ ಶಾಖೆಗೆ ವಹಿಸಲಾಗಿದೆ ಎಂದು ಹೇಳಿದರು. (ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹಿಂದೂ ಧರ್ಮದಿಂದ ವಿಮುಖರಾಗುತ್ತಿರುವ ಹಿಂದೂಗಳು ! – ಸಂಪಾದಕರು)

೨. ಕೆಲವು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಭಗವಾನ್ ಶಿವನ ವಿಗ್ರಹವನ್ನು ಧ್ವಂಸ ಮಾಡಲಾಗಿತ್ತು. ಪೊಲೀಸರು ಕೆಲವು ಜನರನ್ನು ಬಂಧಿಸಿದ್ದರು.