ಕೇವಲ ಒಂದು ಮಗುವನ್ನು ಜನ್ಮ ನೀಡಿದರೆ, ಹಿಂದೂಗಳೇ ಹಿಂದೂಗಳ ಜನಸಂಖ್ಯೆಯನ್ನು ಕಡಿಮೆ ಮಾಡುವರು ! – ವಿ.ಹಿಂ.ಪ

ಉತ್ತರಪ್ರದೇಶ ಸರಕಾರದ ಜನಸಂಖ್ಯಾ ನಿಯಂತ್ರಣ ಮಸೂದೆಯಲ್ಲಿ ಒಂದು ಮಗು ಹೊಂದಿರುವವರಿಗೆ ವಿಶೇಷ ಏರ್ಪಾಡುಗಳು

ಮತಾಂಧರ ಹೆಚ್ಚುತ್ತಿರುವ ಹಿಂದೂ ವಿರೋಧಿ ಚಟುವಟಿಕೆಗಳಿಂದಾಗಿ ಹಿಂದೂಗಳಲ್ಲಿ ಭಯದ ವಾತಾವರಣವಿದೆ. ಇದಕ್ಕಾಗಿ ಹಿಂದೂಗಳ ಜನಸಂಖ್ಯೆಯನ್ನು ಹೆಚ್ಚಿಸುವುದೊಂದೇ ಸಮಸ್ಯೆಯ ಪರಿಹಾರವಲ್ಲ ಅದರೊಂದಿಗೆ ಹಿಂದೂಗಳಿಗೆ ಧರ್ಮ ಶಿಕ್ಷಣ ನೀಡುವುದು ಮತ್ತು ಅವರನ್ನು ಆಧ್ಯಾತ್ಮಿಕವಾಗಿ ಸಬಲಗೊಳಿಸುವುದು. ಇದೇ ನಿಜವಾದ ಉಪಾಯವಾಗಿದೆ. ಅಂತಹ ಹಿಂದೂಗಳಿಗೆ ಈಶ್ವರನು ಸಹಾಯ ಮಾಡುತ್ತಾನೆ ಮತ್ತು ಅವರ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ !

ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ

ನವ ದೆಹಲಿ : ಕುಟುಂಬದಲ್ಲಿ ಕೇವಲ ಒಂದು ಮಗು ಇದ್ದರೆ, ಹಿಂದೂಗಳೇ ಹಿಂದೂಗಳ ಜನಸಂಖ್ಯೆಯನ್ನು ಕಡಿಮೆ ಮಾಡುತ್ತಾರೆ. ಆದ್ದರಿಂದ, ಜನಸಂಖ್ಯಾ ನಿಯಂತ್ರಣವನ್ನು ಪರಿಗಣಿಸುವಾಗ, ಹಿಂದೂ ಪ್ರಾಬಲ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಹಿಂದೂಗಳು ವಿಚಾರ ಮಾಡಬೇಕು; ಏಕೆಂದರೆ ಹಿಂದೂಗಳ ಜನಸಂಖ್ಯೆಯ ಪ್ರಭಾವದಿಂದ ದೇಶದಲ್ಲಿ ರಾಜಕಿಯ, ಜಾತ್ಯತೀತ ಹಾಗೂ ಸಹಿಷ್ಣುತೆ ಇವುಗಳ ಸಂಚಾಲನೆಯನ್ನು ನಡೆಸಲಾಗುತ್ತದೆ, ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು. ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಉತ್ತರಪ್ರದೇಶ ಸರಕಾರವು ಅಂಗೀಕರಿಸಿದೆ. ಇದು ಒಂದೇ ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸುತ್ತದೆ. ಇದರ ಬಗ್ಗೆ ಪರಾಂಡೆ ಅವರನ್ನು ಕೇಳಿದಾಗ, ಅವರು ಮೇಲಿನ ಉತ್ತರವನ್ನು ನೀಡಿದರು.

ಪರಾಂಡೆ ತಮ್ಮ ಮಾತನ್ನು ಮುಂದುವರೆಸುತ್ತಾ, ಹಿಂದೂಗಳು ತಮ್ಮನ್ನು ದೇಶದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಬಹುಮತದಲ್ಲಿ ಉಳಿಸಿಕೊಳ್ಳಲು ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು ಒಂದು ಮಗುವನ್ನು ಹೊಂದುವ ನೀತಿಯು ಸಮಾಜದ ಜನಸಂಖ್ಯೆಯಲ್ಲಿ ಅಸಮತೋಲನವನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.

ದೇವಾಲಯದ ಸರಕಾರಿಕರಣವನ್ನು ರದ್ದು ಪಡಿಸಲು ಪ್ರಯತ್ನ ಮಾಡುವೆವು !

ಫರಿದಾಬಾದ (ಹರಿಯಾಣಾ)ದಲ್ಲಿ ವಿಎಚ್‍ಪಿಯ ಕಾರ್ಯಕಾರಣಿ ಪರಿಷತ್ತು ಮತ್ತು ನ್ಯಾಯಾಂಗದ ಎರಡು ದಿನಗಳ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಸರಕಾರೀಕರಣವಾಗಿರುವ ದೇವಸ್ಥಾನ, ಮತಾಂತರ ಹಾಗೂ ಬಂಗಾಳದಲ್ಲಿ ಚುನಾವಣಾ ನಂತರ ನಡೆದ ಹಿಂಸಾಚಾರದ ಮೇಲೆ ವಿಶೇಷ ಚರ್ಚೆಯಾಗುತ್ತಿದೆ.

ಈ ಸಭೆಯ ಬಗ್ಗೆ ಪರಾಂಡೆಯವರು, ದೇವಾಲಯಗಳ ವ್ಯವಸ್ಥಾಪನೆಯನ್ನು ಸಮಾಜದಿಂದ ನಿರ್ವಹಿಸಲಾಗಬೇಕು; ಆದರೆ ಅನೇಕ ರಾಜ್ಯಗಳಲ್ಲಿ ದೊಡ್ಡ ದೇವಾಲಯಗಳು ಸರಕಾರದ ನಿಯಂತ್ರಣದಲ್ಲಿವೆ. ಈ ಸಭೆಯಲ್ಲಿ ದೇವಾಲಯಗಳನ್ನು ಸರಕಾರದ ನಿಯಂತ್ರಣದಿಂದ ಹೇಗೆ ಮುಕ್ತಗೊಳಿಸುವುದು ಎಂದು ಚರ್ಚಿಸಲಾಗುವುದು. ಅದಕ್ಕಾಗಿ ಸರ್ವೋಚ್ಚ ನ್ಯಾಯಾಲಯದರೆಗಿನ ಕ್ರಮಗಳನ್ನೂ ಪರಿಗಣಿಸಲಾಗುವುದು. ಅದೇರೀತಿ ಮತಾಂತರವನ್ನು ನಿಗ್ರಹಿಸಲು ಕೇಂದ್ರದ ಮಟ್ಟದಲ್ಲಿ ಕಾನೂನನ್ನು ನಿರ್ಮಿಸಲು ಚರ್ಚಿಸಲಾಗುವುದು. ಹಿಂದೂಗಳನ್ನು ಕ್ರೈಸ್ತ ಧರ್ಮಪ್ರಚಾರಕರು ಮತ್ತು ಜಿಹಾದಿಗಳು ಮತಾಂತರಗೊಳಿಸುತ್ತಿದ್ದಾರೆ. ಇದು ರಾಷ್ಟ್ರವ್ಯಾಪಿ ಸಮಸ್ಯೆಯಾಗಿದೆ. ಈ ಬಗ್ಗೆ ಪ್ರಸ್ತಾವನೆಯನ್ನು ಮುಂದಿಡಲಾಗುವುದು ಎಂದು ಹೇಳಿದರು.