ಅಲ್ ಖೈದಾ ಭಯೋತ್ಪಾದಕರ ಬಳಿ ಪತ್ತೆಯಾಯಿತು ಶ್ರೀರಾಮಮಂದಿರದ ನಕಾಶೆ !

ಕಾಶಿ ಮತ್ತು ಮಥುರಾದಲ್ಲಿನ ಧಾರ್ಮಿಕ ಸ್ಥಳಗಳ ನಕಾಶೆಯೂ ಜಪ್ತಿ

ಭಯೋತ್ಪಾದಕರಿಗೆ ಧರ್ಮ ಇರುತ್ತದೆ ಮತ್ತು ಅವರು ಹಿಂದೂಗಳನ್ನು ಮತ್ತು ಅವರ ಧಾರ್ಮಿಕ ಸ್ಥಳಗಳನ್ನು ಗುರಿ ಮಾಡುತ್ತಾರೆ, ಇದು ಪದೇ ಪದೇ ಬೆಳಕಿಗೆ ಬರುತ್ತದೆ, ಎಂಬುದು ಗಮನದಲ್ಲಿಟ್ಟುಕೊಳ್ಳಿ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿ ಜುಲೈ ೧೧ ರಂದು ಬಂಧಿಸಲಾದ ಅಲ್ ಖೈದಾದ ಇಬ್ಬರು ಭಯೋತ್ಪಾದಕರಿಂದ ನಿಯೋಜಿತ ಶ್ರೀರಾಮಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮಮಂದಿರ ಮತ್ತು ಅದರ ಸುತ್ತಮುತ್ತಲಿನ ಪರಿಸರದ ನಕಾಶೆಯು ಪತ್ತೆಯಾಗಿವೆ. ಕಾಶಿ ಮತ್ತು ಮಥುರಾದ ಹಿಂದೂಗಳ ಧಾರ್ಮಿಕ ಸ್ಥಳಗಳ ನಕಾಶೆಯನ್ನೂ ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾಗಿದೆ. ಈ ನಕಾಶೆಯಲ್ಲಿ ಕೆಲವು ಸ್ಥಳಗಳ ಮೇಲೆ ಗುರುತು ಮಾಡಲಾಗಿದೆ. ಈ ಭಯೋತ್ಪಾದಕರ ಬಂಧನದ ನಂತರ ಕಾನಪುರದಿಂದ ೩ ಮಂದಿ ಮತ್ತು ಸಂಭಲದಿಂದ ಓರ್ವನನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ಅನೇಕರ ವಿಚಾರಣೆಯನ್ನು ನಡೆಸಲು ವಶಕ್ಕೆ ಪಡೆಯಲಾಗಿದೆ. ಭಯೋತ್ಪಾದಕರು ಬಾಂಬ್ ನಿರ್ಮಿಸಲು ಬೆಂಕಿಪೊಟ್ಟಣದ ಮೇಲೆ ಹಾಕಲಾಗುವ ಮದ್ದನ್ನು ಉಪಯೋಗಿಸಿರುವುದು ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿದೆ. ಭಯೋತ್ಪಾದಕರಿಗೆ ಅವರ ಮುಖ್ಯಸ್ಥರಿಂದ ಹಣಕಾಸು ಸಿಕ್ಕಿರಲಿಲ್ಲ. ಆದ್ದರಿಂದ ಅವರು ೨ ಸಾವಿರ ರೂಪಾಯಿಯ ಪ್ರೆಶರ ಕುಕರ ಬಾಂಬ್ ನಿರ್ಮಿಸಿದ್ದರು.

( ಸೌಜನ್ಯ: Zee News )