ಮುಸಲ್ಮಾನರು ೮ ಮಕ್ಕಳನ್ನು ಹಡೆದರೂ ಅವರು ಸೈಕಲ್‍ನ ಪಂಚರ ತೆಗೆಯುತ್ತಲೇ ಇರುವರು ! – ಉತ್ತರಪ್ರದೇಶದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮೊಹಸಿನ್ ರಜಾ

ಉತ್ತರಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆಯ ಪ್ರಕರಣ

ಉತ್ತರಪ್ರದೇಶದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮೊಹಸಿನ್ ರಜಾ

ಲಕ್ಷ್ಮಣಪುರಿ (ಉತ್ತರಪ್ರದೇಶ) – ನಮ್ಮ ಸರಕಾರ ಮುಸಲ್ಮಾನರಿಗೆ ‘ಟೋಪಿ’ ತೆಗೆದು ‘ಟೈ’ ನತ್ತ ಕೊಂಡೊಯ್ಯಲು ಬಯಸುತ್ತಿದೆ; ಆದರೆ ವಿರೋಧಿ ಪಕ್ಷಗಳಿಗೆ, ‘ಮುಸಲ್ಮಾನರು ಅಶಿಕ್ಷಿತರಾಗಿಯೇ ಇರಬೇಕು; ಮುಸಲ್ಮಾನರು ಅಲೆದಾಡಬೇಕು, ರದ್ದಿ ಮಾರಬೇಕು, ನಿರುಪಯುಕ್ತವಸ್ತುಗಳ ಮಾರಾಟ ಮಾಡಬೇಕು ಎಂದು ಅನಿಸುತ್ತದೆ. ಮುಸಲ್ಮಾನರು ೮ ಮಕ್ಕಳನ್ನು ಹಡೆದರೂ ಅವರು ಸೈಕಲ್ ಪಂಚರನ್ನೇ ತೆಗೆಯುತ್ತಿರುತ್ತಾರೆ. ಹಿಂದೆ ಕಾಂಗ್ರೇಸ್ ಇದನ್ನೇ ಮಾಡಿತ್ತು ಮತ್ತು ಈಗ ರಾಜ್ಯದ ಸಮಾಜವಾದಿ ಪಕ್ಷವೂ ಅದೇ ಮಾಡುತ್ತಿದೆ. ನಮ್ಮ ನಿಲುವು ಎಲ್ಲರನ್ನೂ ಒಟ್ಟಿಗೆ ಮುಂದೆ ಕರೆದೊಯ್ಯುವುದಾಗಿದೆ, ಎಂದು ಉತ್ತರಪ್ರದೇಶದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮೊಹಸಿನ್ ರಜಾ ಇವರು ರಾಜ್ಯದಲ್ಲಿ ‘ಜನಸಂಖ್ಯಾ ನಿಯಂತ್ರಣ ನೀತಿ’ಯ ಮೇಲೆ ಆಗುತ್ತಿದ್ದ ಟೀಕೆಗೆ ಬಗ್ಗೆ ಹೇಳಿಕೆ ನೀಡಿದರು.

ಮೊಹಸಿನ್ ರಜಾ ಮಾತನ್ನು ಮುಂದುವರೆಸುತ್ತಾ, ಜನಸಂಖ್ಯಾ ನಿಯಂತ್ರಣ ತರುವುದು, ಇದು ನಮ್ಮೆಲ್ಲರ ಚಿಂತೆಯೇ ಆಗಿದೆ. ನಾವು ೮ ಸಹೋದರರಿದ್ದೇವೆ; ಆದರೆ ನಾವು ೮ ಮಕ್ಕಳನ್ನು ಜನ್ಮ ನೀಡಲು ಸಾಧ್ಯವಿಲ್ಲ; ಏಕೆಂದರೆ ನಾವು ಅವರಿಗೆ ಉತ್ತಮವಾದ ಸೌಲಭ್ಯವನ್ನು ನೀಡಲು ಆಗುವುದಿಲ್ಲ, ಶಿಕ್ಷಣ ನೀಡಲು ಸಾಧ್ಯವಿಲ್ಲ; ಹಾಗಾದರೆ ಈ ಕಾನೂನನ್ನು ಏಕೆ ವಿರೋಧಿಸಲಾಗುತ್ತಿದೆ ? ೨ ಮಕ್ಕಳು ಇದ್ದರೆ, ನಾವು ಅವರನ್ನು ವೈದ್ಯ ಮತ್ತು ಇಂಜಿನಿಯರ ಮಾಡಬಹುದು; ಆದರೆ ೮ ಮಕ್ಕಳು ಇದ್ದರೆ, ಅವರು ಗುದ್ದಲಿಯನ್ನು ತೆಗೆದುಕೊಂಡು ಕೂಲಿ ಕೆಲಸ ಮಾಡುವರು. ನಾವು ಯಾವುದೇ ಧರ್ಮವನ್ನು ಗುರಿಯಾಗಿಸುತ್ತಿಲ್ಲ, ಬದಲಾಗಿ ದೇಶವು ಪ್ರಗತಿ ಪಥದಲ್ಲಿ ಸಾಗಬೇಕು ಎಂದು ನಮಗೆ ಅನಿಸುತ್ತಿದೆ ಎಂದು ಹೇಳಿದರು.