‘ಕಲಮ್ 370’ರ ನಂತರ, ಕೇಂದ್ರ ಸರಕಾರವು ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ದಿಟ್ಟ ಹೆಜ್ಜೆಯನ್ನಿಡಬೇಕು ! – ಶ್ರೀ. ರಾಹುಲ್ ಕೌಲ್, ರಾಷ್ಟ್ರೀಯ ಸಂಯೋಜಕರು, ಯುಥ್ ಫಾರ್ ಪನುನ್ ಕಾಶ್ಮೀರ
ಕಾಶ್ಮೀರಿ ಹಿಂದೂಗಳು ಕಳೆದ ೩೨ ವರ್ಷಗಳಿಂದ ಜನಾಂಗೀಯ ನರಮೇಧವನ್ನು ಎದುರಿಸಿದ್ದಾರೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯು ಈ ನರಮೇಧವನ್ನು ನಿರ್ಲಕ್ಷಿಸುತ್ತಿದೆ. ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡಕ್ಕೆ ಕಾರಣವಾದ ‘ಜಿಹಾದ್’, ಇದರ ಬೇರುಗಳು ಈಗ ದೇಶಾದ್ಯಂತ ಹರಡುತ್ತಿದೆ. ಈ ‘ಜಿಹಾದ್’ನ ಬೇರುಗಳ ಮೇಲೆ ಎಲ್ಲಿಯವರೆಗೆ ನಾವು ದಾಳಿ ಮಾಡುವುದಿಲ್ಲವೋ, ಅಲ್ಲಿಯವರೆಗೆ ಅದರ ಶಾಖೆಗಳು ದೇಶಾದ್ಯಂತ ಹರಡುತ್ತಲೇ ಇರುತ್ತವೆ. ಪ್ರಸ್ತುತ ಸರಕಾರವು ಕಾಶ್ಮೀರಿ ಹಿಂದೂಗಳ ನರಮೇಧವನ್ನು ‘ಜನಾಂಗೀಯ ನರಮೇಧ’ ಎಂದು ಘೋಷಿಸಬೇಕು. ಕಾಶ್ಮೀರದಲ್ಲಿ ಪ್ರಸಕ್ತ ಪರಿಸ್ಥಿತಿಯನ್ನು ಗಮನಿಸಿದರೆ, ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳನ್ನು ಅವರ ಭೂಮಿಗೆ ತರಲು ಸಾಧ್ಯವಿಲ್ಲ. ಕೇಂದ್ರ ಸರಕಾರವು ಕಾಶ್ಮೀರದಿಂದ ‘370 ನೇ ವಿಧಿ’ಯನ್ನು ತೆಗೆದರೂ ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ದಿಟ್ಟ ಹೆಜ್ಜೆಯನ್ನಿಡಬೇಕು ಎಂದು ‘ಯುಥ ಫಾರ್ ಪನುನ್ ಕಾಶ್ಮೀರ’ದ ರಾಷ್ಟ್ರೀಯ ಸಂಯೋಜಕ ಶ್ರೀ. ರಾಹುಲ್ ಕೌಲ್ ಹೇಳಿದರು. ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಭಾರತದಲ್ಲಿ ಹಿಂದೂಗಳ ಸ್ಥಳಾಂತರ – ಕಾರಣಗಳು ಮತ್ತು ಪರಿಹಾರಗಳು ?’ ಎಂಬ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಸಮಿತಿಯ Hindujagruti.org ಜಾಲತಾಣದಲ್ಲಿ ಮತ್ತು ಯೂಟ್ಯೂಬ್ ಮತ್ತು ಟ್ವಿಟರ್‌ನಲ್ಲಿ ೨,೧೭೩ ಜನರು ನೇರವಾಗಿ ವೀಕ್ಷಿಸಿದ್ದಾರೆ.
ಈ ಸಮಯದಲ್ಲಿ ‘ವಿಶ್ವ ಹಿಂದೂ ಪರಿಷದ್’ನ ರಾಷ್ಟ್ರೀಯ ವಕ್ತಾರರಾದ ಶ್ರೀ. ವಿನೋದ ಬನ್ಸಾಲ್ ಅವರು ಮಾತನಾಡುತ್ತಾ, ಭಾರತವು ಅಲ್ಪಸಂಖ್ಯಾತ ಸಮುದಾಯದಿಂದ ಬಹುಸಂಖ್ಯಾತ ಸಮುದಾಯವು ತುಳಿತಕ್ಕೊಳಗಾಗುತ್ತಿರುವ ವಿಶ್ವದ ಏಕೈಕ ದೇಶವಾಗಿದೆ. ಮೇವಾತ (ಹರಿಯಾಣ)ನ ಹಿಂದೂಗಳ ಪಲಾಯನದ ನಂತರ, ‘ನಾವು ಮೇವಾತ್‌ನಲ್ಲಿ ಪರಿಸ್ಥಿತಿಯನ್ನು ಬದಲಾಯಿಸುತ್ತೇವೆ’ ಎಂದು ಆಗ ಅಂದಿನ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು; ಆದರೆ ದುರದೃಷ್ಟವಶಾತ್, ಪರಿಸ್ಥಿತಿ ಹೆಚ್ಚು ಬದಲಾಗಲಿಲ್ಲ. ಮೇವಾತದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಅನೇಕ ನಗರಗಳು ಮತ್ತು ಜಿಲ್ಲೆಗಳು ಈಗ ವಿಭಜನೆಯಾಗುತ್ತಿವೆ. ಪ್ರತಿಯೊಬ್ಬ ಹಿಂದೂವು ನಮ್ಮ ಸ್ವಾಭಿಮಾನ, ರಾಷ್ಟ್ರ ಮತ್ತು ಧರ್ಮವನ್ನು ರಕ್ಷಿಸುವ ಜವಾಬ್ದಾರಿಯನ್ನು ತನ್ನ ಜವಾಬ್ದಾರಿಯಾಗಿದೆ ಎಂದು ತಿಳಿದು ಕೃತಿ ಮಾಡದೇ ಈ ಸಮಸ್ಯೆಗಳನ್ನು ಪರಿಹರಿಸುವುದು ಕಷ್ಟವಾಗಿದೆ. ಇದಕ್ಕಾಗಿ ಜಾಗೃತವಾಗಿದ್ದು ಹೋರಾಡುವುದು ಅವಶ್ಯಕವಾಗಿದೆ’, ಎಂದರು.
ಈ ಸಮಯದಲ್ಲಿ, ‘ಭಾರತ್ ರಕ್ಷಾ ಮಂಚ್’ನ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಶ್ರೀ. ಅನಿಲ್ ಧೀರ್ ಅವರು ಮಾತನಾಡುತ್ತಾ, ‘ಈ ವರ್ಷದ ೨೦೨೧ ರ ಜನಗಣತಿಯಲ್ಲಿ ಎಲ್ಲಾ ಸಮುದಾಯಗಳ ಜನಸಂಖ್ಯೆಯ ಚಿತ್ರಣ ಸ್ಪಷ್ಟವಾಗಲಿದೆ; ಆದರೆ ಇಂದು, ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ ಯ ತೀವ್ರ ಅವಶ್ಯಕತೆಯಿದೆ. ಬಂಗಾಳದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳು ಮತ್ತು ನಂತರದ ಹಿಂಸಾಚಾರದಿಂದಾಗಿ ಹಿಂದೂಗಳು ಜೀವದ ಭಯದಿಂದ ಪಲಾಯನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಹಿಂದೂಗಳ ಪಲಾಯನವಾಗಲು ಕಾರಣಗಳನ್ನು ಪತ್ತೆಹಚ್ಚುವುದು ಮತ್ತು ಪರಿಹಾರವನ್ನು ಕಂಡುಹಿಡಿಯುವುದು ಅವಶ್ಯಕವಾಗಿದೆ. ಭಾರತವು ಇತರ ದೇಶಗಳಿಂದ ಕಲಿಯಬೇಕು ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಕಾನೂನು ಮತ್ತು ಪರಿಹಾರಗಳನ್ನು ತರಬೇಕು’ ಎಂದು ಹೇಳಿದರು.
ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಸಂಘಟಕರಾದ ಶ್ರೀ. ಸುನಿಲ್ ಘನವಟ ಇವರು ಮಾತನಾಡುತ್ತಾ, ಇಂದು ಹಿಂದೂಗಳ ಪಲಾಯನದ ಜೊತೆಗೆ ಹಿಂದೂ ದೇವಾಲಯಗಳ ನಾಶ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಇಂತಹ ಅನೇಕ ಘಟನೆಗಳು ದೇಶಾದ್ಯಂತ ನಡೆಯುತ್ತಿದೆ. ದೇಶದ ಗಡಿ ಪ್ರದೇಶಗಳಲ್ಲಿ ಮಾತ್ರವಲ್ಲ, ದೇಶದ ಅನೇಕ ಭಾಗಗಳಲ್ಲಿ ‘ಲ್ಯಾಂಡ್ ಜಿಹಾದ್’ ಕಾರಣದಿಂದಾಗಿ ಹಿಂದೂಗಳು ಬಲವಂತವಾಗಿ ಪಲಾಯನ ಮಾಡಬೇಕಾಗುತ್ತಿದೆ. ಇದು ದೇಶದ ಭದ್ರತೆಗೆ ದೊಡ್ಡ ಅಪಾಯವಾಗಿದೆ. ದೇಶದ ಅಲ್ಲಲ್ಲಿ ‘ಮಿನಿ-ಪಾಕಿಸ್ತಾನ’ವಾಗದಂತೆ ಹಿಂದೂಗಳು ಜಾಗರೂಕರಾಗಿರಬೇಕು. ಕಾಶ್ಮೀರಿ ಹಿಂದೂಗಳು ಮಾತ್ರವಲ್ಲ, ದೇಶಾದ್ಯಂತ ಹೊರಹಾಕಲ್ಪಟ್ಟ ಎಲ್ಲ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಹೇಳಿದರು.