ಸಾಧಕರ ಸಾಧನೆಯಾಗಬೇಕು ಮತ್ತು ಗುರುಕಾರ್ಯ ವೃದ್ಧಿಯಾಗಬೇಕು, ಎಂಬ ತೀವ್ರ ತಳಮಳವಿರುವ ಕರ್ನಾಟಕದ ಧರ್ಮಪ್ರಚಾರಕ ಪೂ. ರಮಾನಂದ ಗೌಡ !

ಕರ್ನಾಟಕ ರಾಜ್ಯದ ಸಾಧಕರಿಗೆ ಸಾಧನೆಯ ದಿಶೆ ಮತ್ತು ಸಾಧನೆಯ ಯೋಗ್ಯ ದೃಷ್ಟಿಕೋನವನ್ನು ನೀಡಿ ಸಾಧನೆಯಲ್ಲಿ ಮುಂದೆ ಕರೆದುಕೊಂಡು ಹೋಗಲು ಪೂ. ರಮಾನಂದ ಗೌಡ ಇವರು ಅನೇಕ ಶಿಬಿರಗಳನ್ನು ಆಯೋಜಿಸಿ ಸಾಧಕರಿಗೆ ಪ್ರೋತ್ಸಾಹವನ್ನು ನೀಡಿದರು ಮತ್ತು ಅವರ ಸಾಧನೆಯಾಗಬೇಕು, ಎಂಬ ತೀವ್ರ ತಳಮಳದಿಂದ ಪ್ರಯತ್ನಿಸಿ, ಅನೇಕ ಸಾಧಕರನ್ನು ರೂಪಿಸಿದರು. ಅದಕ್ಕಾಗಿ ಅವರು ಮಾಡಿದ ಪ್ರಯತ್ನ ಮತ್ತು ಅದರಿಂದ ಗಮನಕ್ಕೆ ಬಂದಿರುವ ಅವರ ಗುರುಕಾರ್ಯದ ತಳಮಳ ಮತ್ತು ಅವರಲ್ಲಿರುವ ಸಾಧಕರ ಬಗೆಗಿನ ವಾತ್ಸಲ್ಯಭಾವ ಇತ್ಯಾದಿ ಅನೇಕ ಅಂಶಗಳು ನಮಗೆ ಕಲಿಯಲು ಸಿಕ್ಕಿದವು. ಅವರು ಸಾಧಕರನ್ನು ರೂಪಿಸಲು ಮಾಡಿದ ಪ್ರಯತ್ನಗಳನ್ನು ಮುಂದೆ ಕೊಡಲಾಗಿದೆ.  

(ಭಾಗ ೧)

ಪೂ. ರಮಾನಂದ ಗೌಡ

ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ, ಸನಾತನ ಪ್ರಭಾತ ಇತ್ಯಾದಿ ಎಲ್ಲ ಕಾರ್ಯವನ್ನು ಮಾಡುವ ಭಾರತದ ಎಲ್ಲೆಡೆಯ ಪ್ರಚಾರಕರಿಗೆ ಮಾರ್ಗದರ್ಶಕ !

ಸಮಷ್ಟಿ ಸಾಧನೆಯನ್ನು ಹೇಗೆ ಮಾಡಬೇಕು, ಎಂಬುದರ ಬಗ್ಗೆ ಕರ್ನಾಟಕದ ಶ್ರೀ. ಕಾಶಿನಾಥ ಪ್ರಭು, ಸೌ.ಮಂಜುಳಾ ಗೌಡ ಮತ್ತು ಶ್ರೀ. ಗುರುಪ್ರಸಾದ ಗೌಡ, ಇವರು ಬೆಳಕಿಗೆ ತಂದಿರುವ ಧರ್ಮಪ್ರಚಾರಕ ಪೂ. ರಮಾನಂದ ಗೌಡ ಇವರ ಅದ್ವಿತೀಯತೆ !

ಪರಾತ್ಪರ ಗುರು ಡಾ. ಆಠವಲೆ

ಪೂ. ರಮಾನಂದ ಗೌಡ ಇವರೊಬ್ಬರೇ ಕರ್ನಾಟಕ ರಾಜ್ಯದಲ್ಲಿ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ, ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತ ಇತ್ಯಾದಿ ಎಲ್ಲ ಕಾರ್ಯವನ್ನು ಇಷ್ಟು ಕಡಿಮೆ ವರ್ಷಗಳಲ್ಲಿ ಶರವೇಗದಲ್ಲಿ ಹೇಗೆ ಹಚ್ಚಿಸಿದರು ಎನ್ನುವ ಬಗ್ಗೆ ನನಗೆ ಕೆಲವು ವರ್ಷಗಳಿಂದ ಬಹಳ ಜಿಜ್ಞಾಸೆ ಇತ್ತು. ಕರ್ನಾಟಕದ ಶ್ರೀ. ಕಾಶೀನಾಥ ಪ್ರಭು, ಸೌ. ಮಂಜುಳಾ ಗೌಡ ಮತ್ತು ಶ್ರೀ. ಗುರುಪ್ರಸಾದ ಗೌಡ ಇವರು ಪೂ. ರಮಾನಂದ ಗೌಡ ಇವರ ಕುರಿತು ಬರೆದ ಲೇಖನಮಾಲೆಯಿಂದ ಈ ಜಿಜ್ಞಾಸೆ ಈಗ ಉಳಿಯಲಿಲ್ಲ. ಏಕೆಂದರೆ ಪೂ.ರಮಾನಂದಗೌಡ ಇವರ ಎಲ್ಲ ರೀತಿಯ ಕಾರ್ಯಗಳ ಎಲ್ಲ ಗುಣಗಳ ಪರಿಚಯ ಈ ಲೇಖನಮಾಲೆಯಿಂದ ಆಯಿತು. ಇದರಿಂದಾದ ಬಹುದೊಡ್ಡ ಲಾಭವೆಂದರೆ ಭಾರತದ ಎಲ್ಲ ರಾಜ್ಯಗಳ ಪ್ರಮುಖ ಪ್ರಚಾರಕರಿಗಾಗಿ ಪೂ. ರಮಾನಂದ ಗೌಡ ಇವರು ಶಿಬಿರಗಳನ್ನು ತೆಗೆದುಕೊಂಡರೆ ಎಲ್ಲ ರಾಜ್ಯಗಳು ಕರ್ನಾಟಕದಂತೆ ಮುಂದೆ ಹೋಗಬಹುದು ಎಂಬುದು ಗಮನಕ್ಕೆ ಬಂದಿತು. ಇದರಿಂದ ಈಗ ನನಗೆ ಭಾರತದ ಚಿಂತೆ ಉಳಿಯಲಿಲ್ಲ. ನನ್ನ ಚಿಂತೆಯನ್ನು ದೂರಗೊಳಿಸಿದ ಕರ್ನಾಟಕದ ಶ್ರೀ. ಕಾಶಿನಾಥ ಪ್ರಭು, ಸೌ. ಮಂಜುಳಾ ಗೌಡ ಮತ್ತು ಶ್ರೀ. ಗುರುಪ್ರಸಾದ ಗೌಡ ಇವರಿಗೆ ನಾನು ಕೃತಜ್ಞನಾಗಿದ್ದೇನೆ. – (ಪರಾತ್ಪರ ಗುರು) ಡಾ. ಆಠವಲೆ

ದೇಶ-ವಿದೇಶಗಳಲ್ಲಿ ಎಲ್ಲ ಧರ್ಮಪ್ರಚಾರಕರು ಪೂ. ರಮಾನಂದ ಗೌಡ ಇವರು ಹೇಳಿದ ಮಾರ್ಗದರ್ಶನದಂತೆ ಧರ್ಮಪ್ರಚಾರದ ಕಾರ್ಯ ಮಾಡಿದರೆ ಎಲ್ಲೆಡೆ ಅತ್ಯಂತ ವೇಗವಾಗಿ ಕಾರ್ಯವಾಗುವುದು ! – ಪರಾತ್ಪರ ಗುರು ಡಾ. ಆಠವಲೆ

ಶ್ರೀ. ಕಾಶಿನಾಥ ಪ್ರಭು, ಸೌ. ಮಂಜುಳಾ ಗೌಡ ಮತ್ತು ಶ್ರೀ. ಗುರುಪ್ರಸಾದ ಗೌಡ ಇವರು ಇಂತಹ ಲೇಖನಗಳನ್ನು ಹೇಗೆ ಬರೆಯಬೇಕು ? ಎಂಬುದರ ಬಗ್ಗೆ ಎಲ್ಲೆಡೆ ಶಿಬಿರಗಳನ್ನು ತೆಗೆದುಕೊಂಡರೆ, ಅವರಂತಹ ಲೇಖಕರೂ ಎಲ್ಲೆಡೆ ಸಿದ್ಧರಾಗುವರು ಮತ್ತು ಇದರಿಂದ ಭಾರತದಲ್ಲಿ ಎಲ್ಲೆಡೆ ಶೀಘ್ರ ಗತಿಯಿಂದ ಪ್ರಸಾರವಾಗಬಹುದು. – (ಪರಾತ್ಪರ ಗುರು) ಡಾ. ಆಠವಲೆ

೧. ಗುರುಪೂರ್ಣಿಮೆಯ ಸೇವೆ ಚೆನ್ನಾಗಿ ಆಗಬೇಕು ಮತ್ತು ಅದರಿಂದ ಸಾಧಕರ ಸಾಧನೆಯಾಗಬೇಕು, ಎಂಬುದಕ್ಕಾಗಿ ಅವರು ಮಾಡಿದ ಪ್ರಯತ್ನಗಳು

೧ ಅ. ಗುರುಪೂರ್ಣಿಮೆಯ ಸಿದ್ಧತೆ ನಡೆಯುವಾಗ ಪೂ. ರಮಾನಂದ ಅಣ್ಣನವರು ಸ್ವತಃ ಅಲ್ಲಿ ಹೋಗಿ ಸಿದ್ಧತೆಯನ್ನು ಪರಿಶೀಲಿಸುವುದು ಮತ್ತು ಪರಿಪೂರ್ಣ ಸೇವೆಯಾಗಲು ಹೇಗೆ ಪ್ರಯತ್ನಿಸಬೇಕು?, ಎನ್ನುವ ವಿಷಯದಲ್ಲಿ  ಮಾರ್ಗದರ್ಶನ ಮಾಡುವುದು : ೨೦೧೯ ನೇ ಇಸವಿಯಲ್ಲಿ ಗುರುಪೂರ್ಣಿಮೆಯ ೩-೪ ದಿನಗಳ ಮೊದಲು ಪೂ. ರಮಾನಂದ ಅಣ್ಣನವರು ಬೆಂಗಳೂರಿಗೆ ಹೋಗಿದ್ದರು. ಆಗ ಬೆಂಗಳೂರಿನಲ್ಲಿರುವ ಎರಡೂ ಗುರುಪೂರ್ಣಿಮೆಗಳ ಸ್ಥಳಕ್ಕೆ ಪೂ. ಅಣ್ಣನವರು ಪ್ರತ್ಯಕ್ಷ ಭೇಟಿ ನೀಡಿದರು. ಅವರು ಗುರು ಪೂರ್ಣಿಮೆಯ ಸಿದ್ಧತೆ ಹೇಗೆ ನಡೆದಿದೆ ?, ಎಂಬುದನ್ನು ಪರಿಶೀಲಿಸಿ, ಸಾಧಕರಿಗೆ ೨೦-೨೫ ನಿಮಿಷಗಳಲ್ಲಿ ಸೇವೆಯನ್ನು ಪರಿಪೂರ್ಣ ಮಾಡಲು ಸೇವೆಯ ವ್ಯಾಪ್ತಿಯನ್ನು ತೆಗೆದು, ಅದರ ಪರಿಶೀಲನಾ ಪಟ್ಟಿಯನ್ನು ತಯಾರಿಸಿದರು. ಅದಕ್ಕನುಗುಣವಾಗಿ ಹೇಗೆ ಪ್ರಯತ್ನಿಸಬೇಕು ? ಸಮಯವನ್ನು ನಿಗದಿಪಡಿಸಿ, ಆ ಸಮಯದಲ್ಲಿ ಹೇಗೆ ಸೇವೆಯನ್ನು ಪೂರ್ಣಗೊಳಿಸಬೇಕು ? ಸೇವೆಯನ್ನು ಮಾಡುವಾಗ ಭಾವದಿಂದ ಹೇಗೆ ಪ್ರಯತ್ನಿಸಬೇಕು ?, ಇಂತಹ ಅನೇಕ ವಿಷಯಗಳನ್ನು ಹೇಳಿ ಸಾಧನೆಯ ದಿಶೆಯನ್ನು ನೀಡಿದರು. ಇದರಿಂದ ಸಾಧಕರಿಗೆ ಸೇವೆಯನ್ನು ಪರಿಪೂರ್ಣ ಮತ್ತು ಭಾವಪೂರ್ಣವಾಗಿ ಹೇಗೆ ಮಾಡಬೇಕು ?, ಎಂಬುದು ಗಮನಕ್ಕೆ ಬಂದಿತು.

೧ ಆ. ಸಾಧಕರು ಭಾವದ ಸ್ತರದಲ್ಲಿದ್ದು ಸೇವೆಯನ್ನು ಮಾಡಿದ್ದರಿಂದ, ಅವರಿಗೆ ಸೇವೆಯಿಂದ ಆನಂದ ಸಿಕ್ಕಿತು : ಸಾಧಕರು ತಕ್ಷಣವೇ ಅದಕ್ಕನುಸಾರ ಕೃತಿಗಳನ್ನು ಮಾಡಲು ಆರಂಭಿಸಿದರು. ಇದರಿಂದ ಸೇವೆಯಲ್ಲಾಗುವ ತಪ್ಪುಗಳ ಪ್ರಮಾಣ ಕಡಿಮೆಯಾಗಿರುವುದನ್ನು ಸಾಧಕರು ಅನುಭವಿಸಿದರು. ಎಲ್ಲ ಸಾಧಕರಿಗೆ ಸೇವೆಯಲ್ಲಿ ಆನಂದವೂ ಸಿಕ್ಕಿತು. ಸಾಧಕರು ಇಷ್ಟು ವರ್ಷಗಳಿಂದ ಗುರುಪೂರ್ಣಿಮೆಯನ್ನು ಆಚರಿಸುತ್ತಿದ್ದರೂ, ಸೇವೆಯಲ್ಲಿ ತಪ್ಪುಗಳಾಗುತ್ತಿದ್ದವು. ಆದರೆ ಈ ಸಲ ಸೇವೆಯನ್ನು ಭಾವದ ಸ್ತರದಲ್ಲಿ ಮಾಡಿದ್ದರಿಂದ ಸಾಧಕರಿಗೆ ಸೇವೆಯ ಫಲಶೃತಿ ಗಮನಕ್ಕೆ ಬಂದಿತು. ಈ ಎಲ್ಲ ಬದಲಾವಣೆ ಕೇವಲ ಪೂ. ಅಣ್ಣನವರು ಇಲ್ಲಿ ಬಂದಿದ್ದರಿಂದ ಆಯಿತು, ಎಂದು ಸಾಧಕರ ಗಮನಕ್ಕೆ ಬಂದಿತು. ಇದರಿಂದ ಎಲ್ಲರಲ್ಲಿ ಉತ್ಸಾಹ, ಕೃತಜ್ಞತೆ ಮತ್ತು ಭಾವ ಹೆಚ್ಚಾಯಿತು.

೧ ಇ. ಗುರುಪೂರ್ಣಿಮೆಯಾದ ತಕ್ಷಣ ಕೂಡಲೇ ಸ್ವಭಾವದೋಷ ಸತ್ಸಂಗವನ್ನು ತೆಗೆದುಕೊಳ್ಳುವುದು, ಉತ್ತಮ ಕ್ಷಮತೆಯಿರುವ ಸಾಧಕರನ್ನು ಗುರುತಿಸಿ ಅವರಿಗೆ ಕೆಲವು ಸೇವೆಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹೇಳುವುದು ಮತ್ತು ಇದರಿಂದ ಸೇವೆಯ ಫಲನಿಷ್ಪತ್ತಿ ಹೆಚ್ಚಾಗುವುದು: ಗುರುಪೂರ್ಣಿಮೆಯ ನಂತರ ಪೂ. ಅಣ್ಣನವರು ಅನೇಕ ಸ್ಥಳಗಳಿಗೆ ಸ್ವತಃ ಹೋಗಿ ಸಾಧಕರ ಸ್ವಭಾವದೋಷ ಸತ್ಸಂಗವನ್ನು ತೆಗೆದುಕೊಂಡರು. ಸಾಧಕರ ಸಾಧನೆಯು ವ್ಯವಸ್ಥಿತವಾಗಿ ಆಗಬೇಕು ಮತ್ತು ಅವರಲ್ಲಿ ಅಂತರ್ಮುಖತೆ ನಿರ್ಮಾಣವಾಗಬೇಕು, ಎಂದು ಸಾಧಕರಿಂದ ಸೇವೆಯಲ್ಲಿ ಆಗಿರುವ ತಪ್ಪುಗಳನ್ನು ತಿಳಿದುಕೊಂಡು, ಅವರಿಗೆ ಅವರಲ್ಲಿರುವ ಮೂಲ ಸ್ವಭಾವದೋಷಗಳವರೆಗೆ ಹೋಗಲು ಪೂ. ಅಣ್ಣನವರು ಸಹಾಯ ಮಾಡಿದರು. ಅದರೊಂದಿಗೆ ಆಯಾ ಸ್ಥಳದಲ್ಲಿ ಜವಾಬ್ದಾರಿಯಿಂದ ಮತ್ತು ಪರಿಶ್ರಮದಿಂದ ಸೇವೆಯನ್ನು ಮಾಡಿರುವ ಸಾಧಕರನ್ನು ಗುರುತಿಸಿ, ಅವರಲ್ಲಿನ ಒಳ್ಳೆಯ ಕ್ಷಮತೆಯುಳ್ಳ ಸಾಧಕರಿಗೆ ಮುಂದಿನ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಹೇಳಿದರು. ಇದರಿಂದ ಗುರುಕಾರ್ಯದಲ್ಲಿನ ವಿವಿಧ ಉಪಕ್ರಮಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹೊಸ ಸಾಧಕರು ತಯಾರಾದರು ಮತ್ತು ಅದರಿಂದ ಒಳ್ಳೆಯ ಫಲಶೃತಿ ದೊರಕಿತು.

೨. ಜವಾಬ್ದಾರಿಯನ್ನು ತೆಗೆದುಕೊಂಡು ಸೇವೆಯನ್ನು ಮಾಡುವ ಪ್ರತಿಯೊಬ್ಬ ಸಾಧಕನ ಸಾಧನೆ ಮತ್ತು ಸೇವೆ ಪರಿಪೂರ್ಣವಾಗಬೇಕೆಂದು ಸುವ್ಯವಸ್ಥಾಪನ ಸುನಿಯೋಜನ ಶಿಬಿರವನ್ನು ಆಯೋಜಿಸುವುದು

೨ ಅ. ಸಾಧಕರ ಕೌಶಲ್ಯ ಮತ್ತು ಕ್ಷಮತೆಯ ನಿರೀಕ್ಷಣೆಯನ್ನು ಮಾಡಿ ಅವುಗಳಿಗನುಸಾರ ಅವರಿಗೆ ಸೇವೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹೇಳುವುದು : ಗುರುಪೂರ್ಣಿಮೆಯ ಬಳಿಕ ಸಾಧಕರ ಕ್ಷಮತೆ ಮತ್ತು ಅವರ ಕೌಶಲ್ಯದ ಅಧ್ಯಯನ ಮಾಡಿ ಅವರಿಗೆ ವಿವಿಧ ಜವಾಬ್ದಾರಿಗಳನ್ನು ಕೊಡಲಾಯಿತು. ತದನಂತರ ಜಿಲ್ಲೆಯ ಎಲ್ಲ ಉಪಕ್ರಮಗಳು ಸಮರ್ಪಕವಾಗಿ ಮುಂದುವರಿಯಬೇಕು, ಎಂದು ಜಿಲ್ಲಾಮಟ್ಟದಲ್ಲಿ ಸುವ್ಯವಸ್ಥಾಪನೆ ಸುನಿಯೋಜನೆ ಶಿಬಿರಗಳ ಆಯೋಜನೆಯನ್ನು ಮಾಡಲಾಯಿತು. ಈ ಶಿಬಿರದಲ್ಲಿ ಒಳ್ಳೆಯ ಸೇವೆಯನ್ನು ಮಾಡುವ ಸಾಧಕರನ್ನು ಕರೆಯಲಾಗಿತ್ತು.

೨ ಆ. ಪೂ. ಅಣ್ಣನವರು ಈ ಶಿಬಿರದ ಮಾರ್ಗದರ್ಶನದಲ್ಲಿ ಜವಾಬ್ದಾರಿ ವಹಿಸಿಕೊಂಡು ಸೇವೆಯನ್ನು ಮಾಡುವುದರ ಮಹತ್ವವನ್ನು ಹೇಳುವುದು ಮತ್ತು ಅದರಿಂದ ಸಾಧಕರಲ್ಲಿ ಸ್ಫೂರ್ತಿ (ಉತ್ಸಾಹ) ಮತ್ತು ಸೇವೆಯ ವಿಷಯದಲ್ಲಿ ಸಕಾರಾತ್ಮಕತೆ ನಿರ್ಮಾಣವಾಗುವುದು : ಶಿಬಿರದ ಪ್ರಾರಂಭದಲ್ಲಿ ಪೂ.ಅಣ್ಣನವರು ಶಿಬಿರದ ಉದ್ದೇಶ ಮತ್ತು ಮಹತ್ವ ಈ ವಿಷಯದ ಬಗ್ಗೆ ಎಲ್ಲರಿಗೂ ಮಾರ್ಗದರ್ಶನ ಮಾಡಿದರು. ಅವರು ಈ ಮಾರ್ಗದರ್ಶನದಲ್ಲಿ ಜವಾಬ್ದಾರಿ ವಹಿಸಿ ಸೇವೆಯನ್ನು ಮಾಡುವುದರಿಂದ ಹೇಗೆ ಸಾಧನೆಯಾಗುತ್ತದೆ ಮತ್ತು ಗುರುಕಾರ್ಯದಲ್ಲಿ ಮುಂದಾಳತ್ವವನ್ನು ವಹಿಸಿಕೊಳ್ಳುವುದರಿಂದ ನಮ್ಮ ಮೇಲೆ ಗುರುಕೃಪೆ ಹೇಗೆ ಆಗುತ್ತದೆ? ಎನ್ನುವ ವಿಷಯದಲ್ಲಿ ಸಾಧಕರಿಗೆ ೩೦ ರಿಂದ ೪೦ ನಿಮಿಷಗಳವರೆಗೆ ಮಾರ್ಗದರ್ಶನ ಮಾಡಿದರು. ಶಿಬಿರದ ಪ್ರಾರಂಭದಲ್ಲಿ ಪೂ. ಅಣ್ಣನವರು ಮಾರ್ಗದರ್ಶನ ಮಾಡಿದ್ದರಿಂದ, ಸಾಧಕರ ಮೇಲಿನ ತೊಂದರೆದಾಯಕ ಆವರಣ ದೂರವಾಯಿತು ಮತ್ತು ಸಾಧಕರಲ್ಲಿ ಸ್ಫೂರ್ತಿ ಮತ್ತು ಸೇವೆಯ ಕುರಿತು ಸಕಾರಾತ್ಮಕತೆ ನಿರ್ಮಾಣವಾಯಿತು.

೧ ಇ. ಸೇವೆಯ ವ್ಯಾಪ್ತಿಯನ್ನು ಗಮನಕ್ಕೆ ತಂದು ಕೊಡಲು ಗುಂಪುಚರ್ಚೆಯನ್ನು ನಡೆಸುವುದು : ತದನಂತರ ಶಿಬಿರದಲ್ಲಿ ಸಾಧಕರ, ಅವರ ಸೇವೆಗಳಿಗನುಸಾರ ಗುಂಪುಗಳನ್ನು ಮಾಡಿ ಪೂ. ಅಣ್ಣನವರು ಅವರಲ್ಲಿ ವಿವಿಧ ಗುಂಪು ಚರ್ಚೆಗಳನ್ನು  ತೆಗೆದುಕೊಂಡರು. ಅದರಲ್ಲಿ ಪೂ. ಅಣ್ಣನವರು ಸಾಧಕರಿಗೆ ಅವರ ಸೇವೆಯ ವ್ಯಾಪ್ತಿಯನ್ನು ಗಮನಕ್ಕೆ ತಂದುಕೊಟ್ಟರು ಮತ್ತು ಸೇವೆಯನ್ನು ಸುಲಭ ಪದ್ಧತಿಯಿಂದ ಹೇಗೆ ಮಾಡಬೇಕು ?, ಎನ್ನುವುದನ್ನು ಹೇಳಿದರು. ಇದರಿಂದ ಈ ಶಿಬಿರದಲ್ಲಿ ಬರುವಾಗ ಸಾಧಕರ ಮನಸ್ಸಿನ ಸ್ಥಿತಿ ಹೇಗಿತ್ತು? ಮತ್ತು ಗುಂಪು ಚರ್ಚೆಯಾದ ಬಳಿಕ ಹೇಗೆ ಅನಿಸುತ್ತಿದೆ? ಏನು ಬದಲಾವಣೆ ಆಗಿದೆ?, ಎಂಬುದನ್ನು ಸಾಧಕರೇ ಪೂ. ಅಣ್ಣನವರಿಗೆ ಹೇಳಿದರು.

೨ ಈ. ಶಿಬಿರದ ಕೊನೆಗೆ ಪೂ. ಅಣ್ಣನವರು ಮಾಡಿದ ಮಾರ್ಗದರ್ಶನ

೨ ಈ. ೧. ವ್ಯಷ್ಟಿ ಸಾಧನೆಯ ಕುರಿತು ಮಾಡಿದ ಮಾರ್ಗದರ್ಶನ : ಸಾಧನೆಯಲ್ಲಿ ಮುಂದೆ ಹೋಗಲು ಯಾವ ಧ್ಯೇಯವನ್ನು ಇಟ್ಟುಕೊಂಡು ಪ್ರಯತ್ನಿಸಬೇಕು? ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಯೋಗ್ಯ ಸಮನ್ವಯವನ್ನಿಟ್ಟುಕೊಂಡು ಹೇಗೆ ಪ್ರಯತ್ನಿಸಬೇಕು? ತ್ಯಾಗ ಮತ್ತು ಪ್ರೇಮಭಾವವನ್ನು ಹೇಗೆ ಹೆಚ್ಚಿಸಬೇಕು? ಸಾಧನೆಯನ್ನು ಮಾಡುವಾಗ ನಮ್ಮಲ್ಲಿರುವ ಯಾವ ಪ್ರಮುಖ ಸ್ವಭಾವ ದೋಷಗಳನ್ನು ದೂರಗೊಳಿಸಬೇಕು? ಗುರುಕಾರ್ಯವು ನಮ್ಮ ಕಾರ್ಯವೇ ಆಗಿದೆ, ಎಂಬ ವಿಚಾರವನ್ನಿಟ್ಟುಕೊಂಡು ಗುರುಕಾರ್ಯಕ್ಕಾಗಿ ಹೇಗೆ ಪ್ರಯತ್ನಿಸಬೇಕು? ಮನುಷ್ಯನ ಪಂಚ ಜ್ಞಾನೇಂದ್ರಿಯಗಳು, ಪಂಚಕರ್ಮೇಂದ್ರಿಯಗಳು, ಪಂಚಪ್ರಾಣ, ಬಾಹ್ಯಮನಸ್ಸು (ಮನಸ್ಸು), ಬುದ್ಧಿ, ಅಂತರ್ಮನಸ್ಸು (ಚಿತ್ತ) ಮತ್ತು ಅಹಂ ಇವುಗಳ ಕಾರ್ಯ, ಈ ವಿಷಯದಲ್ಲಿ ಸವಿಸ್ತಾರ ಮಾರ್ಗದರ್ಶನ ಮಾಡಿದರು.

೨ ಈ. ೨. ಸಮಷ್ಟಿ ಸಾಧನೆ ಮತ್ತು ಸೇವೆಯ ವಿಷಯದಲ್ಲಿ ಮಾಡಿದ ಮಾರ್ಗದರ್ಶನ : ಪೂ.ಅಣ್ಣನವರು ಸೇವೆಯಲ್ಲಿನ ಸಾಧಕರು ಸೇವೆಯನ್ನು ಮಾಡುವಾಗ ಪರಸ್ಪರ ಯಾವ ರೀತಿ ಸಮನ್ವಯವನ್ನು ಇಟ್ಟುಕೊಳ್ಳಬೇಕು ? ಯಾವುದೇ ಸತ್ಸಂಗವನ್ನು ತೆಗೆದುಕೊಳ್ಳುವ ಮೊದಲು ಅದರ ಪೂರ್ವ ಸಿದ್ಧತೆಯನ್ನು ಹೇಗೆ ಮಾಡಬೇಕು?, ಇತ್ಯಾದಿ ವಿಷಯಗಳನ್ನು ಉದಾಹರಣೆಗಳೊಂದಿಗೆ ಹೇಳಿದರು. ಈ ಶಿಬಿರದಲ್ಲಿ ಅವರು ಜಿಲ್ಲೆಯ ಉಪಕ್ರಮಗಳ ವ್ಯಾಪ್ತಿಯನ್ನು ಹೇಗೆ ತೆಗೆಯಬೇಕು, ಈ ವಿಷಯದ ಬಗ್ಗೆಯೂ ವಿವರವಾಗಿ ಮಾಹಿತಿ ನೀಡಿದರು. ಸತತವಾಗಿ ಸೇವೆಯಲ್ಲಿ ನಿರತರಾಗಿರಲು ಹೇಗೆ ಪ್ರಯತ್ನಿಸಬೇಕು ?, ಈ ವಿಷಯದಲ್ಲಿಯೂ ಹೇಳಿದರು. ಇದರಿಂದ ಸಾಧಕರಿಗೆ ತಮ್ಮ ಜವಾಬ್ದಾರಿಯ ಅರಿವಾಯಿತು ಮತ್ತು ಸೇವೆ ಹಾಗೂ ಸಾಧನೆಯನ್ನು ಮಾಡುವ ಇಚ್ಛೆ ನಿರ್ಮಾಣವಾಯಿತು.

೨ ಈ ೩. ಭಾವಜಾಗೃತಿಗಾಗಿ ಮಾಡಿದ ಮಾರ್ಗದರ್ಶನ : ಸಾಧನೆಯಲ್ಲಿ ಪಂಚಸೂತ್ರಗಳ, ಅಂದರೆ ಕೇಳಿಕೊಳ್ಳುವುದು, ಹೇಳಿದ್ದನ್ನು ಕೇಳುವುದು, ಕೇಳಿದ್ದನ್ನು ಸ್ವೀಕರಿಸುವುದು, ಅದರಿಂದ ಕಲಿಯುವುದು ಮತ್ತು ಅದರಂತೆ ಕೃತಿ ಮಾಡುವುದು, ಈ ಐದು ಅಂಶಗಳನ್ನು ಉಪಯೋಗಿಸಿ ಸೇವೆಯನ್ನು ಮಾಡಲು ಮತ್ತು ಜವಾಬ್ದಾರ ಸಾಧಕರಿಗೆ ತಮ್ಮ ವರದಿಯನ್ನು ಆತ್ಮನಿವೇದನೆಯ ಭಾವದಲ್ಲಿ ಕೊಡಲು ಹೇಳಿದರು. ತದನಂತರ ಪೂ. ಅಣ್ಣನವರು ಮಾರ್ಗ ದರ್ಶನದಲ್ಲಿ ಗುರುದೇವರ ಮಹಾನತೆಯನ್ನು ಭಾವದ ಸ್ತರದಲ್ಲಿ ಹೇಳಿದರು. ಇದರಿಂದ ಶಿಬಿರದಲ್ಲಿ ಭಾವದ ವಾತಾವರಣ ಮೂಡಿತು.

೨ ಉ. ಈ ಶಿಬಿರದಿಂದ ಸಾಧಕರಲ್ಲಿ ಆಂತರಿಕ ಬದಲಾವಣೆಯಾಗಿ ಅವರಲ್ಲಿ ಜವಾಬ್ದಾರಿಯನ್ನು ತೆಗೆದುಕೊಂಡು ಸಾಧನೆ ಮತ್ತು ಸೇವೆಯನ್ನು ಮಾಡುವ ಉತ್ಸಾಹ ಹೆಚ್ಚಾಯಿತು : ಈ ಶಿಬಿರದ ಬಳಿಕ ಸಾಧಕರಲ್ಲಿ ತಾವು ಸಾಧನೆಯಲ್ಲಿ ಎಲ್ಲಿ ಕಡಿಮೆ ಬೀಳುತ್ತಿದ್ದೇವೆ?, ಎನ್ನುವುದು ಅರಿವಾಗಿ ಅಂತರ್ಮುಖತೆ ನಿರ್ಮಾಣವಾಯಿತು. ಪೂ. ಅಣ್ಣನವರ ಮಾರ್ಗದರ್ಶನದ ಬಳಿಕ ಸಾಧಕರು ಅವರ ಮನಸ್ಸಿನಲ್ಲಿರುವ ಎಲ್ಲ ವಿಚಾರಗಳನ್ನು ಮುಕ್ತ ಮನಸ್ಸಿನಿಂದ ಹೇಳಿದರು.

ಪೂ. ಅಣ್ಣನವರು ತಾವೇ ಸ್ವತಃ ೩ ಜಿಲ್ಲೆಗಳಿಗೆ ಹೋಗಿ ಇಂತಹ ಶಿಬಿರಗಳನ್ನು ತೆಗೆದುಕೊಂಡರು. ಇತರ ಜಿಲ್ಲೆಯ ಸಾಧಕರು ಆನ್‌ಲೈನ್ ಮೂಲಕ ಶಿಬಿರದಲ್ಲಿ ಭಾಗವಹಿಸಿದ್ದರು. ಇದರಿಂದ ಸಂಪೂರ್ಣ ಕರ್ನಾಟಕದಲ್ಲಿರುವ ಸಾಧಕರಲ್ಲಿ ಉತ್ಸಾಹ ಮತ್ತು ಪರಿಶ್ರಮದಿಂದ ಸಾಧನೆಯನ್ನು ಮಾಡಬೇಕು, ಎನ್ನುವ ಇಚ್ಛಾಶಕ್ತಿ ನಿರ್ಮಾಣವಾಯಿತು. ಈ ಶಿಬಿರದ ಬಳಿಕ ಸಾಧಕರಲ್ಲಿ ಆಂತರಿಕ ಬದಲಾವಣೆಯಾಯಿತು. ಎಲ್ಲರೂ ಜವಾಬ್ದಾರಿ ತೆಗೆದುಕೊಂಡು ಸೇವೆಯನ್ನು ಮಾಡಲು ಪ್ರಾರಂಭಿಸಿದ್ದರಿಂದ ಕಾರ್ಯದ ಫಲಶೃತಿಯೂ ಹೆಚ್ಚಾಯಿತು. ಜವಾಬ್ದಾರಿ ತೆಗೆದುಕೊಂಡು ಸೇವೆಯನ್ನು ಮಾಡುವುದು ಮತ್ತು ಸೇವೆಗೆ ಹೆಚ್ಚೆಚ್ಚು ಸಮಯವನ್ನು ನೀಡಲು, ಸಾಧಕರಿಗೆ ಪ್ರೇರಣೆ ಸಿಕ್ಕಿತು. ಈ ರೀತಿ ಸಾಧಕರ ಪ್ರಯತ್ನಗಳು ಪ್ರಾರಂಭವಾಗಿದ್ದರಿಂದ ಈಗ ಸಾಧಕರಲ್ಲಿಯೂ ಬಹಳ ಬದಲಾವಣೆ ಕಂಡು ಬರುತ್ತಿದೆ.

– ಶ್ರೀ. ಕಾಶಿನಾಥ ಪ್ರಭು, ಸೌ. ಮಂಜುಳಾ ಗೌಡ ಮತ್ತು ಶ್ರೀ. ಗುರುಪ್ರಸಾದ ಗೌಡ, ಕರ್ನಾಟಕ (ಎಪ್ರಿಲ್ ೨೦೨೦)

(ಮುಂದುವರಿಯುವುದು)