ಬೆಳಗಾವಿ ಜಿಲ್ಲೆಯಲ್ಲಿ ಆಸಕ್ತ ಜಿಜ್ಞಾಸುಗಳಿಗೆ ‘ಆನ್‌ಲೈನ್ ಸಾಧನಾ ವೃದ್ದಿ’ ಶಿಬಿರ ಸಂಪನ್ನ

ಸೌ. ವಿದುಲಾ ಹಳದಿಪುರ

ಬೆಳಗಾವಿ – ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಸಾಧನೆಯಲ್ಲಿ ಆಸಕ್ತಿ ಇರುವ ಜಿಜ್ಞಾಸುಗಳಿಗಾಗಿ ಇತ್ತೀಚೆಗೆ ‘ಆನ್‌ಲೈನ್ ಸಾಧನಾವೃದ್ದಿ’ ಶಿಬಿರದ ಆಯೋಜನೆ ಮಾಡಲಾಗಿತ್ತು. ಅದರಲ್ಲಿ ಮಾತನಾಡಿದ ಸನಾತನ ಸಂಸ್ಥೆಯ ಸೌ. ವಿದುಲಾ ಹಳದಿಪುರ ಇವರು, ‘ಸುಖ-ದುಃಖದ ಪರಿಧಿ ದಾಟಿ ಆನಂದಪ್ರಾಪ್ತಿಗಾಗಿ ಪ್ರಯತ್ನಿಸುವುದು ಅವಶ್ಯಕವಿದೆ. ಅಂದರೆ ಪ್ರಾರಬ್ಧ ಭೋಗಿಸಿ ಆನಂದ ಅನುಭವಿಸಲು ಸಾಧನೆಯೊಂದೇ ಮಾರ್ಗವಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸೌ. ಕೋಮಲ ಮೂದನೂರ ಹಾಗೂ ಹಿಂದೂ ಜನಜಾಗೃತಿ ಸಮಿತಿ ಕು. ಸರಿತಾ ಮುಗಳಿ ಇವರು ಮಾರ್ಗದರ್ಶನ ಮಾಡಿದರು.

ಅಭಿಪ್ರಾಯ

ಸಾಧನೆ ಮಾಡಲು ಕಡಿಮೆ ಬೀಳುತ್ತಿದ್ದೇನೆ, ಈಗ ಅದರ ಅರಿವಾಯಿತು. ಸಾಧನೆಗೆ ಹೆಚ್ಚು ಸಮಯ ನೀಡುತ್ತೇನೆ – ಸೌ ಸುರೇಖಾ ಮೂರ್ತಲಿ.

ಗಮನಾರ್ಹ ಅಂಶಗಳು

ಸೂಕ್ಷ್ಮ ಪ್ರಯೋಗಗಳ ಮೂಲಕ ಸ್ಪಂದನಗಳ ಬಗ್ಗೆ ಪ್ರಾಯೋಗಿಕ ಭಾಗವನ್ನು ತೋರಿಸಲಾಯಿತು.