ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯ ಸ್ತರದಲ್ಲಿ ‘ಆನ್‌ಲೈನ್ ವರದಿಗಾರ ತರಬೇತಿ ಶಿಬಿರ’ದ ಆಯೋಜನೆ

ಜನಪ್ರಭೋಧನೆಯೆಂದು ಸಮಾಜದ ಘಟನೆಗಳ ವಾರ್ತೆ ಮಾಡಿದರೆ ಸಮಷ್ಟಿ ಸಾಧನೆ ಆಗುವುದು ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಪೂ. ರಮಾನಂದ ಗೌಡ

ಮಂಗಳೂರು – ಪತ್ರಿಕೋದ್ಯಮವು ಇಂದು ಸಮಾಜದಲ್ಲಿನ ಪ್ರಭಾವಶಾಲಿ ಮಾಧ್ಯಮವಾಗಿದೆ. ಸಮಾಜದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳ ಮಾಹಿತಿಗೆ ಯೋಗ್ಯ ದೃಷ್ಟಿಕೋನವನ್ನು ನೀಡುವುದು ಮತ್ತು ಅದನ್ನು ಜನಮನದ ತನಕ ತಲುಪಿಸಿ ಜಾಗೃತಿಯನ್ನು ಮೂಡಿಸಲು ವಾರ್ತೆಯನ್ನು ತಯಾರಿ ಮಾಡುವುದು ತುಂಬಾ ಮಹತ್ವಪೂರ್ಣವಾಗಿದೆ. ಆ ಮೂಲಕ ನಮ್ಮ ಸಮಷ್ಟಿ ಸಾಧನೆಯಾಗುವುದು. ಈಶ್ವರನಿಷ್ಠ ‘ಸನಾತನ ಪ್ರಭಾತ’ ನಿಯತಕಾಲಿಕೆಗಳಿಗೆ ನಿಯಮಿತವಾಗಿ ವರದಿಯನ್ನು ತಲುಪಿಸುವುದರ ಜೊತೆಗೆ ಅದರಲ್ಲಿ ಬಳಸುವ ಪದಗಳು ಸಾತ್ತ್ವಿಕ, ವ್ಯಾಕರಣ ಶುದ್ಧ ಹಾಗೂ ಸುಲಭವಾಗಿ ಅರ್ಥವಾಗುವಂತೆ ಇರಬೇಕು. ಆ ಸುಂದರ ವಾಕ್ಯಗಳ ವರದಿಯನ್ನು ಪುಷ್ಪಮಾಲೆಯ ರೂಪದಲ್ಲಿ ಗುರುಚರಣಗಳಿಗೆ ಅರ್ಪಿಸುತ್ತಿದ್ದೇನೆ ಎಂಬ ಭಾವದಿಂದ ವರದಿ ಮಾಡಿದರೆ ಈ ಸೇವೆಯಿಂದ ನಮ್ಮ ಸಾಧನೆಯಾಗುತ್ತದೆ. ಇದಕ್ಕಾಗಿ ಪ್ರತಿಯೊಬ್ಬ ಸಾಧಕನಲ್ಲಿ ಜಿಜ್ಞಾಸೆ, ಕಲಿಯುವ ವೃತ್ತಿ ಮತ್ತು ನಿರೀಕ್ಷಣಾಕ್ಷಮತೆ ಹೆಚ್ಚಾಗಬೇಕು. ಅದರ ಜೊತೆಗೆ ವರದಿ ಮಾಡುವುದರ ಬಗ್ಗೆ ನಮ್ಮಲ್ಲಿ ಇಚ್ಚಾಶಕ್ತಿ ಹೆಚ್ಚಿರುವುದು ಅವಶ್ಯಕವಾಗಿದೆ. ಹಾಗೆ ಮಾಡಿದರೆ ಈ ಸೇವೆಯಲ್ಲಿ ಆನಂದವನ್ನು ಪಡೆಯಬಹುದು. ಸಾಧಕರು ವರದಿ ಸೇವೆಯ ಬಗ್ಗೆ ತಮ್ಮಲ್ಲಿರುವ ಉದಾಸೀನತೆಯನ್ನು ದೂರ ಮಾಡಿ, ಪ್ರತಿಯೊಂದು ಘಟನೆ, ಪ್ರಸಂಗ, ಕಾರ್ಯಕ್ರಮಗಳ ವರದಿಯನ್ನು ಮಾಡುವುದು ನಮ್ಮದೇ ಜವಾಬ್ದಾರಿಯಾಗಿದೆ ಎಂದು ತಿಳಿದು ಪ್ರಯತ್ನಿಸಬೇಕು. ಇಂತಹ ಗುಣ ನಮ್ಮಲ್ಲಿ ಬಂದರೆ ಪ್ರತಿಯೊಬ್ಬ ಸಾಧಕನೂ ಉತ್ತಮ ವರದಿಗಾರನಾಗಬಹುದು, ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ತಮ್ಮ ಮಾರ್ಗದರ್ಶನದಲ್ಲಿ ತಿಳಿಸಿದರು.
ಅವರು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಟ್ಟದಲ್ಲಿ ಆಯೋಜಿಸಲಾಗಿದ್ದ ‘ಆನ್‌ಲೈನ್ ವರದಿಗಾರ ತರಬೇತಿ ಶಿಬಿರ’ದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಅನೇಕ ಸಾಧಕರು ಈ ಶಿಬಿರದ ಲಾಭ ಪಡೆದರು.

ಈ ಸಮಯದಲ್ಲಿ ಸನಾತನ ಸಂಸ್ಥೆಯ ಶ್ರೀ. ಕಾಶಿನಾಥ ಪ್ರಭು ಮತ್ತು ಸೌ. ಮಂಜುಳಾ ಗೌಡ ಇವರು ಸಾಧನೆಯ ಬಗ್ಗೆ ಅದೇ ರೀತಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಹಾಗೂ ರಾಜ್ಯ ಸಮನ್ವಯಕಾರ ಶ್ರೀ. ಗುರುಪ್ರಸಾದ ಗೌಡ ಇವರು ರಾಷ್ಟ್ರ ಹಾಗೂ ಧರ್ಮ ಇವುಗಳ ಮೇಲಾಗುವ ಆಘಾತಗಳ ಬಗ್ಗೆ ವರದಿ ಮಾಡುವುದರ ಬಗ್ಗೆ ಮಾರ್ಗದರ್ಶನ ಮಾಡಿದರು. ‘ಸನಾತನ ಪ್ರಭಾತ’ದ ಪ್ರತಿನಿಧಿ ಶ್ರೀ. ಪ್ರಶಾಂತ ಹರಿಹರ ಇವರು ವ್ಯಾಪಕ ರೀತಿಯಲ್ಲಿ ವಾರ್ತೆಗಳನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ಮಾಡಿದರು.

ರಾಷ್ಟ್ರ-ಧರ್ಮದ ಕಾರ್ಯದ ವಾರ್ತೆಯನ್ನು ಒಂದು ಪ್ರದೇಶಕ್ಕೆ ಸೀಮಿತಗೊಳಿಸದೇ ವ್ಯಾಪಕಗೊಳಿಸಿ ! – ಶ್ರೀ. ಪ್ರಶಾಂತ ಹರಿಹರ, ಪ್ರತಿನಿಧಿ, ಸನಾತನ ಪ್ರಭಾತ

ರಾಷ್ಟ್ರ-ಧರ್ಮ ಇವುಗಳ ಕಾರ್ಯಕ್ಕೆ ಸಂಬಂಧಿಸಿದ ಯಾವುದೇ ವರದಿಯನ್ನು ಮಾಡಿದಾಗ ಅದನ್ನು ಕೇವಲ ಒಂದು ಪ್ರದೇಶಕ್ಕೆ ಸೀಮಿತ ಗೊಳಿಸದೇ ಅದನ್ನು ವ್ಯಾಪಕವಾಗಿ ಮಾಡಬೇಕು. ಇಂತಹ ವಾರ್ತೆ ‘ಸನಾತನ ಪ್ರಭಾತ’ ನಿಯತಕಾಲಿಕೆಗಳು, ವಿವಿಧ ಸಾಮಾಜಿಕ ಜಾಲತಾಣಗಳು, ‘ಡೈಲಿಹಂಟ್ ಜಾಲತಾಣಗಳ ಮೂಲಕ ಲಕ್ಷಾಂತರ ಜನರಿಗೆ ತಲುಪುತ್ತದೆ. ಹಾಗಾಗಿ ಘಟನೆಯ ಸಾಮಾಜಿಕ ಮೌಲ್ಯವನ್ನು ಅರಿತು ವಾರ್ತೆ ಮಾಡುವುದು ಆವಶ್ಯಕವಾಗಿದೆ.

ಗಮನಾರ್ಹ ಅಂಶ

ಈ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ‘ಇನ್ನು ಮುಂದೆ ನಾವೆಲ್ಲರೂ ಉತ್ತಮ ರೀತಿಯಲ್ಲಿ ವಾರ್ತೆ ತಯಾರಿ ಮಾಡಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದರು.