ಕರ್ನಾಟಕ ಉಚ್ಚನ್ಯಾಯಾಲಯದ ಮಾಜಿ ನ್ಯಾಯಾಧೀಶ ಮೈಕೆಲ್ ಫ್ರಾನ್ಸಿಸ್ ಸಲಢಾಣಾರವರ ಆರೋಪ !
* ಓರ್ವ ನಿವೃತ್ತ ನ್ಯಾಯಾಧೀಶರು ಹೇಳುತ್ತಿದ್ದಾರೆಂದರೆ ಇದು ತಪ್ಪಿದೆ ಎನ್ನಲು ಸಾಧ್ಯವಿಲ್ಲ ! ಆದ್ದರಿಂದ ದೇಶದಲ್ಲಿ ಅಪರಾಧಿಗಳನ್ನು ಯಾರು ಬೆಂಬಲಿಸುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ ! * ಹಿಂದೂ ಸಂತರ ವಿರುದ್ಧ ಸುಳ್ಳು ಆರೋಪಗಳ ವಿರುದ್ಧ ಕ್ರಮಕೈಗೊಳ್ಳಲು ಆಕಾಶ ಪಾತಾಳ ಒಂದು ಮಾಡಲು ಪ್ರಯತ್ನಿಸುತ್ತಿರುವ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಈಗ ಪಾದ್ರಿಗಳ ಈ ಕೃತ್ಯದ ಬಗ್ಗೆ ಏಕೆ ಮಾತನಾಡುತ್ತಿಲ್ಲ ? |
ಬೆಂಗಳೂರು – ಅತ್ಯಾಚಾರದ ಆರೋಪವಿರುವ ಮಾಜಿ ಬಿಶಪ್ ಫ್ರಾಂಕೊ ಮುಲಕ್ಕಲ್ ಅವರು ಹಣ ಮತ್ತು ರಾಜಕೀಯ ಬೆಂಬಲವಿದ್ದ ಕಾರಣ ಕಾನೂನುಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದರು. ಆತನಿಂದ ಆಗಿದ್ದ ಅತ್ಯಾಚಾರದ ಆರೋಪಗಳು ಹೊರಬಿದ್ದ ನಂತರವೂ ಅವರನ್ನು ಬಂಧಿಸಲಾಗಿಲ್ಲ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಮೈಕೆಲ್ ಫ್ರಾನ್ಸಿಸ್ ಸಾಲಢಾಣಾ ಅವರು ಹೇಳಿದ್ದಾರೆ. ಅವರು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.
ಸಾಲಢಾಣಾ ತಮ್ಮ ಮಾತನ್ನು ಮುಂದುವರೆಸುತ್ತಾ, ಮುಲಕ್ಕಲ್ ವಿಷಯವು ರಾಷ್ಟ್ರೀಯ ಅಂಶವಾಗಿ ಮಾರ್ಪಟ್ಟಿದೆ. ಸಮೀಕ್ಷೆಯೊಂದರ ಪ್ರಕಾರ, ಕೇರಳದಲ್ಲಿಯೇ ಸುಮಾರು ೬೦,೦೦೦ ನನ್‍ಗಳು ಲೈಂಗಿಕ ಕಿರುಕುಳದ ವಿರುದ್ಧ ಧ್ವನಿ ಎತ್ತಿದ್ದಾರೆ. ನನ್‍ಗಳು ಧ್ವನಿ ಎತ್ತಿದ ನಂತರವೂ ಮುಲಕ್ಕಲ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನನ್‍ಗಳ ಏಕೈಕ ಬೇಡಿಕೆಯೆಂದರೆ ಅಂತಹ ಅಪರಾಧಿಗಳಿಗೆ ತಕ್ಷಣ ಶಿಕ್ಷೆಯಾಗಬೇಕು ಎಂದು ಹೇಳಿದರು.