೫ ಲಕ್ಷ ಭಾರತೀಯರ ೧೫೦ ಕೋಟಿ ರೂಪಾಯಿ ಲೂಟಿ !
ಭಾರತ ಸರಕಾರವು ಈಗ ಪ್ರತಿಯೊಂದು ಚೀನೀ ಆ್ಯಪ್ ಅನ್ನು ದೇಶದಾದ್ಯಂತ ನಿಷೇಧಿಸಬೇಕು ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !
ನವ ದೆಹಲಿ – ದೆಹಲಿ ಪೊಲೀಸರ ಸೈಬರ್ ಶಾಖೆಯು ಒಂದು ಗ್ಯಾಂಗ್ ಅನ್ನು ಬಂಧಿಸಿದೆ. ಈ ಗುಂಪು ಚೀನಾದ ಆ್ಯಪ್ ಮೂಲಕ ೫ ಲಕ್ಷ ಭಾರತೀಯರಿಗೆ ಮೋಸ ಮಾಡಿ ೧೫೦ ಕೋಟಿ ರೂಪಾಯಿ ಲೂಟಿ ಮಾಡಿದೆ. ಈ ಮೊತ್ತ ೨೫೦ ಕೋಟಿ ರೂಪಾಯಿವರೆಗೆ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಗ್ಯಾಂಗ್ ‘೨೪ ದಿನಗಳಲ್ಲಿ ಹಣವನ್ನು ದ್ವಿಗುಣಗೊಳಿಸಿ ಕೊಡುತ್ತೇವೆ’, ಎಂದು ಹೇಳುವ ಮೂಲಕ ಜನರನ್ನು ಮೋಸ ಮಾಡಿದೆ. ಅದೇರೀತಿ ಅವರ ವೈಯಕ್ತಿಕ ಮಾಹಿತಿಯನ್ನೂ ಸಹ ಕಳವು ಮಾಡಲಾಗಿದೆ. ಇಬ್ಬರು ಚಾರ್ಟರ್ಡ್ ಅಕೌಂಟೆಂಟ್‍ಗಳು ಸೇರಿದಂತೆ ಒಟ್ಟು ೧೧ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಚೀನಾದ ೨ ಆ್ಯಪ್‍ಗಳ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
Chinese scam that cheated 5 lakh Indians of Rs 150 crore busted https://t.co/chltxlbgBM
— The Times Of India (@timesofindia) June 10, 2021
ಪೊಲೀಸ್ ಉಪಾಯುಕ್ತ ಅನ್ಯೇಶ್ ರಾಯ್ ಅವರು ಹೇಳಿದ ಅಂಶಗಳು
೧. ‘ನ್ಯೂ ಬ್ಲಡ್’, ‘ಈಸಿ ಪ್ಲಾನ್’ ಮತ್ತು ‘ಸನ್ ಫ್ಯಾಕ್ಟರಿ’ ಎಂಬ ಅಪ್ಲಿಕೇಶನ್‍ಗಳನ್ನು ಭಾರತದಲ್ಲಿ ವ್ಯಾಪಕವಾಗಿ ಡೌನ್‍ಲೋಡ್ ಮಾಡಲಾಗುತ್ತಿದೆ. ಕೇವಲ ಒಂದೂವರೆ ತಿಂಗಳಲ್ಲಿ ೫೦ ಲಕ್ಷ ಭಾರತೀಯರು ಈ ಆ್ಯಪ್‍ಅನ್ನು ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ನಮ್ಮ ಸೈಬರ್ ಶಾಖೆಯು ಈ ಅಪ್ಲಿಕೇಶನ್‍ಗಳಲ್ಲಿ ಒಂದನ್ನು ಡೌನ್‍ಲೋಡ್ ಮಾಡಿ ಅದನ್ನು ವಿಶ್ಲೇಷಿಸಿದ ನಂತರ ಈ ಅಪ್ಲಿಕೇಶನ್ ಅನ್ನು ಚೀನಾದಿಂದ ನಿರ್ವಹಿಸಲಾಗುತ್ತಿದೆ ಮತ್ತು ಅದರ ಸರ್ವರ್ ಚೀನಾದಲ್ಲಿ ಇದೆ ಎಂಬುದು ಗಮನಕ್ಕೆ ಬಂತು.
೨. ಈ ಆ್ಯಪ್ ಮೂಲಕ ೨೪ ದಿನಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು ಎಂದು ಜನರಿಗೆ ತಿಳಿಸಲಾಗುತ್ತಿತ್ತು. ಕನಿಷ್ಠ ೩೦೦ ರೂಪಾಯಿಗಳನ್ನು ಹೂಡಿಕೆ ಮಾಡಲಾಗುತ್ತಿತ್ತು. ಸೈಬರ್ ಶಾಖೆಯೂ ನಕಲಿ ಗ್ರಾಹಕರಾಗಿ ಅದರಲ್ಲಿ ಹಣವನ್ನು ಹೂಡಿಕೆ ಮಾಡಿತು. ಚೀನಾದ ನಾಗರಿಕರು ಹೇಳಿದಂತೆ ಅವರ ಭಾರತದಲ್ಲಿನ ಜನರು ಗ್ರಾಹಕರನ್ನು ದೋಚುತ್ತಿದ್ದಾರೆ ಎಂದು ತಿಳಿದುಬಂದಿದೆ.
೩. ನಂತರ ದೆಹಲಿ ಮತ್ತು ಬಂಗಾಲದಲ್ಲಿ ಕಾರ್ಯಾಚರಣೆ ಮಾಡಿ ಕೆಲವರನ್ನು ಬಂಧಿಸಲಾಗಿದೆ. ಬಂಗಾಲದಿಂದ ಶೇಖ್ ರೊಬಿನ್ ಅವರನ್ನು ಬಂಧಿಸಿದ ನಂತರ, ದೆಹಲಿಯಿಂದ ಅವಿಕ್ ಕಾಡಿಯಾ, ರೌನಕ್ ಬಂಸಲ್, ಉಮಕಾಂತ ಆಕಾಶ ಜೊಯಸ್, ವೇದ ಚಂದ್ರಾ, ಹರಿಯೊಮ್, ಅಭಿಷೇಕ್, ಅರವಿಂದ್, ಶಶಿ ಬಂಸಲ್, ಮಿಥಲೇಶ್ ಶರ್ಮಾ ಮತ್ತು ಇತರರನ್ನು ದೆಹಲಿಯಿಂದ ಬಂಧಿಸಲಾಗಿದೆ. ಅವರಲ್ಲಿ ಅವಿಕ್ ಕಾಡಿಯಾ ಮತ್ತು ರೌನಕ್ ಬಂಸಲ್ ಚಾರ್ಟೆಡ್ ಅಕೌಂಟೆಟ್ ಆಗಿದ್ದಾರೆ. ಅವರಿಂದ ೩೦ ಸಂಚಾರವಾಣಿಯನ್ನು ಜಫ್ತಿ ಮಾಡಿಕೊಳ್ಳಲಾಗಿದೆ. ಅವರ ಬಳಿ ೨೯ ಬ್ಯಾಂಕ್ ಖಾತೆಗಳಿವೆ ಎಂದು ತಿಳಿದುಬಂದಿದೆ. ಅದರಲ್ಲಿ ೯೭ ಲಕ್ಷ ರೂಪಾಯಿಗಳಿದ್ದವು. ಈ ಪ್ರಕರಣದಲ್ಲಿ ಚೀನಾ ಸರಕಾರದ ಹಸ್ತಕ್ಷೇಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
೪. ಈ ಆರೋಪಿಗಳು ನಕಲಿ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದರು, ಜೊತೆಗೆ ಸಂಸ್ಥೆಯನ್ನೂ ಸ್ಥಾಪಿಸಿದ್ದರು. ಶೇಖ್ ರಾಬಿನ್ ೩೦ ಸಂಸ್ಥೆಗಳನ್ನು ನಡೆಸುತ್ತಿದ್ದರೆ, ಅವಿಕ್ ಕಾಡಿಯಾ ೧೧೦ ಸಂಸ್ಥೆಗಳನ್ನು ನಡೆಸುತ್ತಿದ್ದನು.
೫. ಮೊದಲು ೩೦೦ ರೂಪಾಯಿಗಳನ್ನು ಹೂಡಿಕೆ ಮಾಡಿದಾಗ, ಅವರು ೨೪ ದಿನಗಳಲ್ಲಿ ಗ್ರಾಹಕರಿಗೆ ಎರಡು ಪಟ್ಟು ಹೆಚ್ಚು ಪಾವತಿಸುತ್ತಿದ್ದರು. ನಂತರ, ಜನರು ಹೆಚ್ಚು ಹಣವನ್ನು ಹೂಡಿಕೆ ಮಾಡಿದಾಗ, ಅವುಗಳನ್ನು ಮರುಪಾವತಿ ಮಾಡುತ್ತಿರಲಿಲ್ಲ. ಆ್ಯಪ್‍ನಲ್ಲಿ ಮಾತ್ರ ‘ಪಾವತಿಸಲಾಗಿದೆ’ ಎಂದು ಸಂದೇಶವನ್ನು ಕಳುಹಿಸುತ್ತಿದ್ದರು; ಆದರೆ ಹಣವನ್ನು ಪ್ರತ್ಯಕ್ಷವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿರಲಿಲ್ಲ.