ಧಾನ್ಯಗಳನ್ನು ದೀರ್ಘಕಾಲ ಸಂಗ್ರಹಿಸಿಡಲು ಸಾಧ್ಯವಾಗುವಂತಹ ಚಿಕ್ಕ ಮತ್ತು ದೊಡ್ಡ ಆಕಾರಗಳ ಗೋದಾಮುಗಳ(godown) ಕಟ್ಟಡಕಾಮಗಾರಿಯನ್ನು ಕಡಿಮೆ ಖರ್ಚಿನಲ್ಲಿ ಹೇಗೆ ಮಾಡಬೇಕು, ಎಂಬುದರ ಮಾಹಿತಿಯನ್ನು ತಿಳಿಸಿ !

ಸಾಧಕರಿಗೆ ಸೂಚನೆ ಮತ್ತು ವಾಚಕರು ಮತ್ತು ಹಿತಚಿಂತಕರಿಗೆ ವಿನಂತಿ !

ಆಪತ್ಕಾಲದ ದೃಷ್ಟಿಯಿಂದ ಆಶ್ರಮ ಮತ್ತು ಸೇವಾಕೇಂದ್ರಗಳಿರುವ ಸ್ಥಳಗಳಲ್ಲಿ ಆಹಾರಧಾನ್ಯಗಳನ್ನು ಸಂಗ್ರಹಿಸಿಡುವುದು ಆವಶ್ಯಕವಾಗಿದೆ. ಅದಕ್ಕಾಗಿ ಚಿಕ್ಕ ಅಥವಾ ದೊಡ್ಡ ಗೋದಾಮುಗಳನ್ನು ಕಟ್ಟುವ ಅವಶ್ಯಕವಿದೆ. ಆಪತ್ಕಾಲದ ಕಾಲಾವಧಿಯನ್ನು ನೋಡಿದರೆ ಗೋದಾಮುಗಳಲ್ಲಿ ೫-೬ ವರ್ಷಗಳ ಕಾಲ ಧಾನ್ಯಗಳು ಸುರಕ್ಷಿತವಾಗಿರುವುದು ಆವಶ್ಯಕವಾಗಿದೆ. ಅದಕ್ಕಾಗಿ ಕೆಳಗಿನ ಮಾಹಿತಿಯ ಅವಶ್ಯಕತೆ ಇದೆ.

೧. ಪ್ರಾಂತಗಳಿಗನುಸಾರ ಹವಾಮಾನವು ಬೇರೆಬೇರೆಯಾಗಿರುತ್ತದೆ. ಅದಕ್ಕನುಸಾರ ಧಾನ್ಯಗಳನ್ನು ಸಂಗ್ರಹಿಸುವ ಪದ್ಧತಿಯೂ ಬೇರೆ ಬೇರೆಯಾಗಿರುತ್ತದೆ. ಅದರಂತೆ ಪ್ರಾಂತಗಳಿಗನುಸಾರ ಉಪಯುಕ್ತವೆನಿಸುವ ಧಾನ್ಯಗಳನ್ನು ಸಂಗ್ರಹಿಸಿಡುವ ಪದ್ಧತಿಗಳ ಮಾಹಿತಿ

೨. ಪರಂಪರಾಗತ ಮತ್ತು ಆಧುನಿಕ ಇಂತಹ ಎರಡೂ ಪದ್ಧತಿಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸಿಡುತ್ತಾರೆ. ಧಾನ್ಯಗಳು ಹಾಳಾಗದಂತೆ ಕಾಪಾಡಲು ಪರಂಪರಾಗತ ಪದ್ಧತಿಯಲ್ಲಿ ಔಷಧಿ ವನಸ್ಪತಿ ಮತ್ತು ಆಧುನಿಕ ಪದ್ಧತಿಯಲ್ಲಿ ವಿವಿಧ ಔಷಧಿಗಳ ಉಪಯೋಗವನ್ನು ಮಾಡಲಾಗುತ್ತದೆ. ಈ ವಿವಿಧ ಪದ್ಧತಿಗಳ ಮಾಹಿತಿ

೩. ದೀರ್ಘಕಾಲ ಧಾನ್ಯಗಳನ್ನು ಸಂಗ್ರಹಿಸಿಡಲು ಗೋದಾಮುಗಳ ವಿವಿಧ ಪದ್ಧತಿಗಳು ವಿಕಸಿತಗೊಂಡಿವೆ. ಈ ಪದ್ಧತಿಗಳ ಮಾಹಿತಿ

೪. ೫-೬ ಜನರ ಕುಟುಂಬ, ೫೦-೬೦ ವ್ಯಕ್ತಿಗಳ ಸಮೂಹ, ೫೦೦-೬೦೦ ವ್ಯಕ್ತಿಗಳು ಹೀಗೆ ವಿವಿಧ ಗುಂಪುಗಳಿಗಾಗಿ ಧಾನ್ಯಗಳನ್ನು ಸಂಗ್ರಹಿಸಿಡುವ ಪದ್ಧತಿಯು ಹೇಗಿರಬೇಕು, ಈ ಬಗೆಗಿನ ಮಾಹಿತಿ

ಈ ಕುರಿತಾದ ಮಾಹಿತಿಯು ಲಭ್ಯವಿದ್ದಲ್ಲಿ ಅಥವಾ ಇಂತಹ ಮಾಹಿತಿಯು ಎಲ್ಲಿಯಾದರೂ ಸಿಗಬಹುದು ಎಂಬುದರ ಮಾಹಿತಿ ಇದ್ದರೆ ಅದನ್ನು ಕೆಳಗಿನ ವಿಳಾಸಕ್ಕೆ ತಿಳಿಸಬೇಕು.

ಸೌ. ಭಾಗ್ಯಶ್ರೀ ಸಾವಂತ : ಸಂಚಾರವಾಣಿ ಕ್ರ. ೭೦೫೮೮೮೫೬೧೦, ಗಣಿಕೀಯ ವಿಳಾಸ : [email protected]
ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧