ನಿಯಮಿತವಾಗಿ ಸರಿಯಾದ ಸಾಧನೆ ಮಾಡುವುದರಿಂದ ಆಪತ್ಕಾಲದಲ್ಲಿ ದೇವರ ಸಹಾಯದಿಂದ ನಮ್ಮ ರಕ್ಷಣೆಯಾಗುತ್ತದೆ !
ಹವಾಮಾನದಲ್ಲಾಗುತ್ತಿರುವ ಅತ್ಯಂತ ಪ್ರತಿಕೂಲ ಘಟನೆಗಳು ಮತ್ತು ನೈಸರ್ಗಿಕ ವಿಪತ್ತುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹವಾಮಾನದಲ್ಲಿನ ಅನಿಷ್ಟ ಬದಲಾವಣೆಗಳ ಹಿಂದೆ ಮಾನವರ ಕೈವಾಡ ಇದೆ, ಎಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ; ಆದರೆ ಮನುಷ್ಯನು ಸರಿಯಾದ ಸಾಧನೆಯನ್ನು ಪ್ರಾರಂಭಿಸಿ ಅದರಲ್ಲಿ ಸಾತತ್ಯವಿರಿಸಿ ಹೆಚ್ಚಿಸುತ್ತಿರಬೇಕು, ಹಾಗೆ ಮಾಡಿದ್ದಲ್ಲಿ ನಮ್ಮಲ್ಲಿ ಅದೇರೀತಿ ನಮ್ಮ ಸುತ್ತಲೂ ಸಾತ್ತ್ವಿಕತೆಯು ನಿರ್ಮಾಣವಾಗುತ್ತದೆ, ಆದ್ದರಿಂದ, ವಾತಾವರಣದಲ್ಲಿ ಅನಿಷ್ಟ ಬದಲಾವಣೆಯಾದರೂ ಸಾಧನೆ ಮಾಡುವವರಿಗೆ ಮುಂಬರುವ ಆಪತ್ಕಾಲದಲ್ಲಿ ದೇವರ ಸಹಾಯ ದೊರಕಿ ಅವರ ರಕ್ಷಣೆಯಾಗುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಶೋಧ ಪ್ರಬಂಧವನ್ನು ಮಂಡಿಸಿದರು. ಅವರು ನವ ದೆಹಲಿಯಲ್ಲಿ ನಡೆದ ‘ಸಸ್ಟೆನೆಬಿಲಿಟೀ ಸ್ಪಿರಿಚ್ಯುವಾಲಿಟಿ ಸಿಂಪ್ಲಿಸಿಟಿ : ದ ೩ ಎಸ್ ಇಂಟರನ್ಯಾಶನಲ್ ಕಾನ್ಫರೆನ್ಸ್(ಇಸ್ಕಾನ್)’ ಈ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ‘ಅಧ್ಯಾತ್ಮದ ಆಧಾರದಲ್ಲಿ ಹವಾಮಾನದಲ್ಲಿನ ಬದಲಾವಣೆಯನ್ನು ಸೀಮಿತಗೊಳಿಸುವುದು’, ಈ ಶೋಧಪ್ರಬಂಧವನ್ನು ಮಂಡಿಸಿದರು. ‘ಇಸ್ಕಾನ್ ರಿಸರ್ಚ್ ವಿಂಗ್ (ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಸ್ಪಿರಿಚುವಲಿಟಿ (ಐಎಸ್‌ಎಸ್))’ ಈ ಪರಿಷತ್ತನ್ನು ಆಯೋಜಿಸಿತ್ತು. ಪರಾತ್ಪರ ಗುರು ಡಾ. ಆಠವಲೆಯವರು ಈ ಶೋಧ ಪ್ರಬಂಧದ ಲೇಖಕರಾಗಿದ್ದು ಶ್ರೀ. ಶಾನ್ ಕ್ಲಾರ್ಕ್ ಸಹ ಲೇಖಕರಾಗಿದ್ದಾರೆ.
ಮೇಲಿನ ಶೋಧಪ್ರಬಂಧವು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ವೈಜ್ಞಾನಿಕ ಪರಿಷತ್ತಿನಲ್ಲಿ ಮಂಡಿಸಿದ ೭೦ ನೇ ಶೋಧಪ್ರಬಂಧವಾಗಿದೆ. ಈ ಹಿಂದೆ ವಿಶ್ವವಿದ್ಯಾಲಯವು ೧೫ ರಾಷ್ಟ್ರೀಯ ಮತ್ತು ೫೪ ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಶೋಧಪ್ರಬಂಧಗಳನ್ನು ಮಂಡಿಸಿದೆ. ಇವುಗಳಲ್ಲಿ ೪ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ‘ಅತ್ಯುತ್ತಮ ಶೋಧಪ್ರಬಂಧ’ ಪ್ರಶಸ್ತಿಯನ್ನು ಪಡೆದಿದೆ.
ಶ್ರೀ. ಶಾನ್ ಕ್ಲಾರ್ಕ್ ಇವರು ಮುಂದೆ ಮಾತನಾಡುತ್ತಾ, ಯಾವುದೇ ಘಟನೆಯ ಮೂಲಭೂತ ಕಾರಣಮಿಮಾಂಸೆಯ ಅಧ್ಯಯನ ಮಾಡುವಾಗ ಆಧ್ಯಾತ್ಮಿಕ ಸ್ತರದಲ್ಲಿಯೂ ಅದರ ಅಧ್ಯಯನವಾಗುವುದು ಆವಶ್ಯಕವಿರುತ್ತದೆ. ಯಾವಾಗ ಹವಾಮಾನದಲ್ಲಿ ಸ್ವಾಭಾವಿಕವಾಗಿ ಅಪೇಕ್ಷಿತವಿರುವುದರ ಬದಲಾಗಿ ವಿಚಿತ್ರ ಬದಲಾವಣೆಗಳಾಗುವುದು ಕಂಡು ಬರುವುದೋ, ಆಗ ಅದರ ಹಿಂದೆ ನಿಶ್ಚಿತವಾಗಿಯೂ ಆಧ್ಯಾತ್ಮಿಕ ಕಾರಣವಿರುತ್ತದೆ. ಪೃಥ್ವಿಯಲ್ಲಿನ ಸಾತ್ತ್ವಿಕತೆಯು ಕಡಿಮೆಯಾಗಿ ಮತ್ತು ತಾಮಸಿಕತೆಯು ಹೆಚ್ಚಾದರೆ, ಮಾನವನ ಅಧೋಗತಿಯಾಗಿ ಪೃಥ್ವಿಯಲ್ಲಿ ಸಾಧನೆ ಮಾಡುವವರ ಒಟ್ಟು ಸಂಖ್ಯೆಯು ಕಡಿಮೆಯಾಗುತ್ತದೆ. ಮನುಷ್ಯನಲ್ಲಿನ ಸ್ವಭಾವದೋಷ ಮತ್ತು ಅಹಂ ಇವುಗಳ ಪ್ರಮಾಣವು ಹೆಚ್ಚಾಗಿ ಅವನಿಂದ ವಾತಾವರಣದ ಕಡೆಗೆ ಅಕ್ಷಮ್ಯ ದುರ್ಲಕ್ಷವಾಗುತ್ತದೆ. ಸ್ವಲ್ಪದರಲ್ಲಿ, ಅಧರ್ಮದಲ್ಲಿ ಹೆಚ್ಚಳವಾಗುತ್ತದೆ. ಸೂಕ್ಷ್ಮದಲ್ಲಿನ ಶಕ್ತಿಶಾಲಿ ಕೆಟ್ಟ ಶಕ್ತಿಗಳು ವಾತಾವರಣದಲ್ಲಿನ ಈ ಅಧೋಗತಿಯ ದುರ್ಲಾಭ ಪಡೆದು ತಮೋಗುಣವನ್ನು ಹೆಚ್ಚಿಸುತ್ತವೆ, ಹಾಗೆಯೇ ಮನುಷ್ಯನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ. ಯಾವ ರೀತಿ ಧೂಳು ಮತ್ತು ಹೊಗೆಯಿಂದ ಸ್ಥೂಲ ಸ್ತರದಲ್ಲಿ ಪ್ರದೂಷಣೆಯಾದಾಗ ನಾವು ಪ್ರತಿದಿನ ಸ್ವಚ್ಛತೆಯನ್ನು ಮಾಡುತ್ತೇವೆಯೋ, ಅದರಂತೆ ಅಧರ್ಮಾಚರಣೆಯಿಂದಾಗುವ ರಜ-ತಮದಲ್ಲಿನ ಹೆಚ್ಚಳವು ಸೂಕ್ಷ್ಮ ಸ್ತರದ ಪ್ರದೂಷಣೆಯಾಗಿದೆ. ನೈಸರ್ಗಿಕ ಆಪತ್ತುಗಳ ಮಾಧ್ಯಮದಿಂದ ನಿಸರ್ಗವು ವಾತಾವರಣದಲ್ಲಿನ ಈ ಸೂಕ್ಷ್ಮ ರಜ-ತಮದ ಸ್ವಚ್ಛತೆಯನ್ನು ಮಾಡುತ್ತದೆ. ಈ ಪ್ರಕ್ರಿಯೆಯ ಸವಿಸ್ತಾರ ಮಾಹಿತಿಯನ್ನು ‘ಚರಕ ಸಂಹಿತೆ’ ಗ್ರಂಥದಲ್ಲಿ ನೀಡಲಾಗಿದೆ ಎಂದು ಹೇಳಿದರು.
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಜಗತ್ತಿನಾದ್ಯಂತದ ೩೨ ದೇಶಗಳಲ್ಲಿನ ಸುಮಾರು ೧೦೦೦ ಮಣ್ಣಿನ ಮಾದರಿಗಳಲ್ಲಿನ ಸೂಕ್ಷ್ಮ ಸ್ಪಂದನಗಳ ಅಧ್ಯಯನ ಮಾಡಿತು. ಈ ಅಧ್ಯಯನವನ್ನು ಆಧುನಿಕ ವೈಜ್ಞಾನಿಕ ಉಪಕರಣಗಳು ಮತ್ತು ಸೂಕ್ಷ್ಮ ಪರೀಕ್ಷಣೆ ಮುಂತಾದವುಗಳ ಮೂಲಕ ಮಾಡಲಾಗಿದೆ. ಈ ಅಧ್ಯಯನದಲ್ಲಿನ ಶೇ. ೮೦ ರಷ್ಟು ಮಾದರಿಗಳಲ್ಲಿ ತೊಂದರೆದಾಯಕ ಸ್ಪಂದನಗಳಿರುವುದು ಕಂಡು ಬಂದಿತು. ಇದರಲ್ಲಿನ ಮಣ್ಣಿನ ಕೆಲವು ಮಾದರಿಗಳನ್ನು ನಾವು ಅದೇ ಸ್ಥಳದಿಂದ ೨೦೧೮ ಮತ್ತು ೨೦೧೯ ರಲ್ಲಿ ಪಡೆದಿದ್ದೆವು. ವೈಜ್ಞಾನಿಕ ಉಪಕರಣದಿಂದ ಮಾಡಿದ ಪರೀಕ್ಷಣೆಯಲ್ಲಿ ಕೇವಲ ಒಂದು ವರ್ಷದ ಕಾಲಾವಧಿಯಲ್ಲಿ ಈ ಮಾದರಿಗಳಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಶೇ. ೧೦೦ ರಿಂದ ೫೦೦ ಪಟ್ಟುಗಳಷ್ಟು ಹೆಚ್ಚಳವಾದುದು ಕಂಡು ಬಂದಿತು. ಸಾರಾಂಶವೇನೆಂದರೆ ಜಗತ್ತಿನಾದ್ಯಂತ (ಕೆಲವು ಧಾರ್ಮಿಕ ಸ್ಥಳಗಳಲ್ಲಿಯೂ) ನಕಾರಾತ್ಮಕತೆಯಲ್ಲಿ ಬಹಳಷ್ಟು ಹೆಚ್ಚಳವಾದುದು ಕಂಡು ಬಂದಿದೆ’, ಎಂದು ಹೇಳಿದರು.
ಕೊನೆಯಲ್ಲಿ ‘ಹವಾಮಾನದಲ್ಲಿನ ಈ ಹಾನಿಕರ ಬದಲಾವಣೆಯ ಕುರಿತು ಏನು ಮಾಡಬಹುದು ?’ ಎಂಬ ಬಗ್ಗೆ ಹೇಳುವಾಗ ಶ್ರೀ. ಶಾನ್ ಕ್ಲಾರ್ಕ ಇವರು, ಈ ಸಮಸ್ಯೆಗೆ ಅಧ್ಯಾತ್ಮವೇ ಮೂಲಭೂತ ಕಾರಣವಾಗಿರುವುದರಿಂದ ಹವಾಮಾನದಲ್ಲಿನ ಸಕಾರಾತ್ಮಕ ಬದಲಾವಣೆ ಮತ್ತು ಅದರ ರಕ್ಷಣೆಯ ಪರಿಹಾರೋಪಾಯಗಳು ಸಹ ಆಧ್ಯಾತ್ಮಿಕ ಸ್ತರದ್ದೇ ಆಗಿರುವುದು ಆವಶ್ಯಕವಾಗಿದೆ. ಸಂಪೂರ್ಣ ಸಮಾಜವು ಯೋಗ್ಯ ಸಾಧನೆಯನ್ನು ಮಾಡತೊಡಗಿದರೆ, ಹವಾಮಾನದಲ್ಲಿನ ಹಾನಿಕರ ಬದಲಾವಣೆ ಮತ್ತು ಮೂರನೇಯ ಮಹಾಯುದ್ಧ ಇವುಗಳಿಂದ ಬರಲಿರುವ ಭೀಕರ ಸಂಕಟಗಳನ್ನು ಎದುರಿಸಲು ಸಾಧ್ಯವಾಗುವುದು. ಹೀಗಿದ್ದರೂ ಪ್ರತ್ಯಕ್ಷದಲ್ಲಿ ನಾವು ಕೇವಲ ನಮಗಷ್ಟೇ ಸಹಾಯ ಮಾಡಿಕೊಳ್ಳಬಹುದು. ಇದಕ್ಕಾಗಿ ಸರ್ವೋತ್ತಮ ಉಪಾಯವೆಂದರೆ ಸಾಧನೆಯನ್ನು ಆರಂಭಿಸುವುದು ಅಥವಾ ಆರಂಭಿಸಿದ್ದರೆ ಅದನ್ನು ಹೆಚ್ಚಿಸುತ್ತಾ ಹೋಗುವುದು.
ಕಾಲಮಹಿಮೆಗನುಸಾರ ಸದ್ಯದ ಕಾಲಕ್ಕಾಗಿ ನಾಮಜಪವು ಸರಳ ಮತ್ತು ಪ್ರಭಾವಿ ಉಪಾಯವಾಗಿದೆ. ಸದ್ಯದ ಕಾಲಕ್ಕಾಗಿ ‘ಓಂ ನಮೋ ಭಗವತೆ ವಾಸುದೇವಾಯ’, ಜಪವು ಆಧ್ಯಾತ್ಮಿಕ ದೃಷ್ಟಿಯಿಂದ ಅತ್ಯಂತ ಉಪಯುಕ್ತವಾದ ನಾಮಜಪವಾಗಿದೆ, ಎಂದು ಸಂತರು ಹೇಳಿರುವ ಬಗ್ಗೆ ಶ್ರೀ. ಶಾನ್ ಕ್ಲಾರ್ಕ ಇವರು ತಿಳಿಸಿದರು.