ಸಾತ್ತ್ವಿಕ ವಿನ್ಯಾಸಗಳಿರುವ ಆಭರಣಗಳು ವ್ಯಕ್ತಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕ !
ಆಭರಣಗಳಿಂದ ಸಮಾಜಕ್ಕೆ ಆಧ್ಯಾತ್ಮಿಕ ದೃಷ್ಟಿಯಿಂದ ಸಕಾರಾತ್ಮಕ ಲಾಭಗಳಾಗುತ್ತವೆ, ಹಾಗೆಯೇ ಮಹಿಳೆಯರಿಗೆ ಅವರ ಸಾಧನೆಯಲ್ಲಿ ಸಹಾಯವಾಗುತ್ತವೆ. ಬಂಗಾರವು ಆಧ್ಯಾತ್ಮಿಕವಾಗಿ ಹೆಚ್ಚು ಪ್ರಯೋಜನಕಾರಿಯಾದ ಲೋಹವಾಗಿದ್ದರೂ, ಈ ಲೋಹದಿಂದ ಮಾಡಿದ ಆಭರಣಗಳ ವಿನ್ಯಾಸವು ಸಾತ್ತ್ವಿಕವಲ್ಲದಿದ್ದರೆ, ಅದರಿಂದ ಧರಿಸುವವರಿಗೆ ಅಪೇಕ್ಷಿತ ಆಧ್ಯಾತ್ಮಿಕ ಲಾಭವಾಗುವುದಿಲ್ಲ. ಆಭರಣವನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದರ ಆಧಾರದಲ್ಲಿ ಸಾತ್ತ್ವಿಕ, ರಾಜಸಿಕ ಅಥವಾ ತಮಾಸಿಕ ಸ್ಪಂದನಗಳು ಪ್ರಕ್ಷೇಪಿತವಾಗುವುದು, ಎಂಬುದು ನಿರ್ಧರಿತವಾಗುತ್ತದೆ. ಆಧ್ಯಾತ್ಮಿಕ ಮಟ್ಟದಲ್ಲಿ ಈ ದೃಷ್ಟಿಕೋನವು ತಿಳಿದಿಲ್ಲದಿದ್ದರೆ, ಕೇವಲ ಮಾನಸಿಕ ಸ್ತರದಲ್ಲಿ ಮಾತ್ರ ಆರಿಸಲ್ಪಟ್ಟ ಆಭರಣಗಳಿಂದ ವ್ಯಕ್ತಿಗೆ ಆಧ್ಯಾತ್ಮಿಕದೃಷ್ಟಿಯಿಂದ ಹೆಚ್ಚೇನೂ ಲಾಭವಾಗುವುದಿಲ್ಲ. ಆದ್ದರಿಂದ ಸಾತ್ತ್ವಿಕ ವಿನ್ಯಾಸದ ಆಭರಣವು ವ್ಯಕ್ತಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪೂ. (ಸೌ.) ಭಾವನಾ ಶಿಂದೆಯವರು ಹೇಳಿದರು. ಅವರು ಶ್ರೀಲಂಕಾದ ದಿ ಇಂಟರ್‌ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ನಾಲೆಡ್ಜ್ ಮ್ಯಾನೇಜ್ಮೆಂಟ್ ಆಯೋಜಿಸಿದ್ದ ವರ್ಲ್ಡ್ ಕಾನ್ಫರೆನ್ಸ್ ಆನ್ ವಿಮನ್ಸ್ ಸ್ಟಡೀಸ್ ೨೦೨೧ ರ ೭ ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು. ಈ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಅವರು ಆಭರಣವು ಸ್ತ್ರೀಯರ ಮೇಲೆ ಆಧ್ಯಾತ್ಮಿಕ ಮಟ್ಟದಲ್ಲಿ ಯಾವ ಪರಿಣಾಮ ಬೀರುತ್ತದೆ ? ಎಂಬ ಬಗ್ಗೆ ಪ್ರಬಂಧವನ್ನು ಮಂಡಿಸಿದರು. ಪರಾತ್ಪರ ಗುರು ಡಾ. ಆಠವಲೆಯವರು ಈ ಶೋಧ ಪ್ರಬಂಧದ ಲೇಖಕರಾಗಿದ್ದು ಪೂ. (ಸೌ.) ಭಾವನಾ ಶಿಂದೆಯವರು ಸಹಲೇಖಕರಾಗಿದ್ದಾರೆ.
ಈ ಪರಿಷತ್ತಿನಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಸಂಗೀತ ಮತ್ತು ನೃತ್ಯದ ಪ್ರತಿಯೊಂದರ ಒಂದೊಂದು ಸಾತ್ತ್ವಿಕ ಸಾದರೀಕರಣ ಮತ್ತು ಅದರಿಂದ ಆಧ್ಯಾತ್ಮಿಕ ಸ್ತರದಲ್ಲಾಗುವ ಪರಿಣಾಮ ಈ ವಿಷಯದಲ್ಲಿ ಸಂಶೋಧನೆಯ ಆಧಾರದ ಮೇಲೆ ಒಂದು ವಿಡಿಯೋವನ್ನು ತೋರಿಸಲಾಯಿತು. ಕೊರಳಿನಲ್ಲಿ ಹಾಕುವ ಮೂರು ರೀತಿಯ ಹಾರಗಳನ್ನು ಹಾಕಿದ್ದರಿಂದ ಅದು ಹಾಕಿದವರ ಮೇಲಾಗುವಂತಹ ಸೂಕ್ಷ್ಮ ಪರಿಣಾಮಗಳನ್ನು ಅಧ್ಯಯನ ಮಾಡಲು ಪ್ರಭಾವಲಯ ಮತ್ತು ಊರ್ಜೆಯನ್ನು ಅಳೆಯುವ ಯಂತ್ರಗಳು ಮತ್ತು ಸೂಕ್ಷ್ಮ ಪರೀಕ್ಷಣೆ ಇವುಗಳ ಮೂಲಕ ನಡೆಸಿದ ಸಂಶೋಧನೆಯ ಬಗ್ಗೆ ಪೂ. (ಸೌ.) ಭಾವನಾ ಶಿಂದೆ ಇವರು ಉಪಸ್ಥಿತರಿಗೆ ಮಾಹಿತಿ ನೀಡಿದರು. ಈ ಸಂಶೋಧನೆಗಾಗಿ ಮಾಜಿ ಅಣು ವಿಜ್ಞಾನಿ ಡಾ. ಮುನ್ನಮ್ ಮೂರ್ತಿಯವರು ಅಭಿವೃದ್ಧಿಪಡಿಸಿದ ಯು.ಟಿ.ಎಸ್. (ಯುನಿವರ್ಸಲ್ ಥರ್ಮೋ ಸ್ಕ್ಯಾನರ್) ಈ ಉಪಕರಣದ ಹಾಗೂ ಪಿಪ್ (ಪಾಲಿಕಾಂಟ್ರಾಸ್ಟ್ ಇಂಟರಫೆರನ್ಸ್ ಫೊಟೊಗ್ರಾಫಿ) ಈ ತಂತ್ರಜ್ಞಾನವನ್ನು ಉಪಯೋಗಿಸಲಾಯಿತು. ಯು.ಟಿ.ಎಸ್. ಮತ್ತು ಪಿಪ್ ಇದರ ಮೂಲಕ ವಸ್ತುಗಳು ಮತ್ತು ವ್ಯಕ್ತಿಗಳ ಊರ್ಜೆಯ ವಲಯವನ್ನು (ಔರಾ) ಅಧ್ಯಯನ ಮಾಡಬಹುದು.
ಈ ಸಂಶೋಧನೆಯ ಅಂತರ್ಗತ ಮಾಡಿದ ಪ್ರಯೋಗದಲ್ಲಿ ಮೂರು ವಿಧಗಳ ಹಾರಗಳ ಪರೀಕ್ಷಣೆಯನ್ನು ಮಾಡಲಾಯಿತು. ಮೊದಲ ಹಾರವು ಫ್ಯಾಶನ್ ಜ್ಯೂವೆಲ್ಲರಿ ಅಥವಾ ಜಂಕ್ ಜ್ಯುವೆಲ್ಲರಿ ಈ ವಿಧದ್ದಾಗಿತ್ತು. ಎರಡನೇಯ ಮತ್ತು ಮೂರನೇಯ ಈ ಎರಡೂ ಹಾರಗಳು ೨೨ ಕ್ಯಾರೆಟ್ ಬಂಗಾರದ್ದಾಗಿದ್ದವು. ಎರಡನೇಯ ಹಾರದ ವಿನ್ಯಾಸವು ಅಸಾತ್ತ್ವಿಕವಾಗಿತ್ತು ಮತ್ತು ಮೂರನೇಯ ಹಾರದ ವಿನ್ಯಾಸವು ಸಾತ್ತ್ವಿಕವಾಗಿತ್ತು. ಮೊದಲ ಮತ್ತು ಎರಡನೇಯ ಹಾರಗಳಿಂದ ನಕಾರಾತ್ಮಕ ಊರ್ಜೆಯು ಪ್ರಕ್ಷೇಪಿತವಾಗುವುದರ ಮತ್ತು ಕೇವಲ ಮೂರನೇಯ ಹಾರದಿಂದ ಸಕಾರಾತ್ಮಕ ಊರ್ಜೆಯು ಪ್ರಕ್ಷೇಪಿತವಾಗುತ್ತಿದೆ ಎಂಬುದು ಪ್ರಭಾವಲಯ ಮತ್ತು ಊರ್ಜೆಯ ಅಳತೆ ಯಂತ್ರಗಳು ಮಾಡಿದ ಪರೀಕ್ಷಣೆಯಿಂದ ಕಂಡು ಬಂದಿತು. ಇದರಿಂದ ಸಾತ್ತ್ವಿಕ ವಿನ್ಯಾಸವಿರುವ ಆಭರಣಗಳು ವ್ಯಕ್ತಿಗಾಗಿ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ, ಎಂದು ಸ್ಪಷ್ಟವಾಯಿತು. ಈ ಮೂರು ಹಾರಗಳ ಹಾಗೆಯೇ ಬಳೆಗಳು, ಉಂಗುರ ಈ ಆಭರಣಗಳ ಸೂಕ್ಷ್ಮ ಸ್ಪಂದನಶಾಸ್ತ್ರದ ಅಧ್ಯಯನ ಮಾಡಿ ಬಿಡಿಸಿದ ಚಿತ್ರಗಳನ್ನು ಈ ಸಮಯದಲ್ಲಿ ಪೂ. (ಸೌ.) ಭಾವನಾ ಶಿಂದೆಯವರು ಎಲ್ಲರಿಗೂ ತೋರಿಸಿದರು. ಆದುದರಿಂದ ಉಪಸ್ಥಿತರಿಗೆ ಸಾತ್ತ್ವಿಕ ಮತ್ತು ಅಸಾತ್ತ್ವಿಕ ಆಭರಣಗಳ ಕುರಿತಾದ ಸೂಕ್ಷ್ಮದಲ್ಲಿ ಘಟಿಸುವ ಪ್ರಕ್ರಿಯೆಯು ತಿಳಿಯಲು ಸಾಧ್ಯವಾಯಿತು.