ಇಂತಹ ಕೇಂದ್ರಗಳು ಎಲ್ಲೆಡೆ ಇರಬೇಕು !

೧. ಇಂತಹ ಕೇಂದ್ರಗಳು ಎಲ್ಲೆಡೆ ಇರಬೇಕು !

ಬನಾಸಕಾಂಠ (ಗುಜರಾತ)ದಲ್ಲಿನ ತೆತೋಡಾ ಗ್ರಾಮದ ಒಂದು ಗೋಶಾಲೆಯನ್ನು ಕೋವಿಡ್ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಇಲ್ಲಿಯ ರೋಗಿಗಳಿಗೆ ಗೋವಿನ ಹಾಲು ಮತ್ತು ಗೋಮೂತ್ರ ಇವುಗಳಿಂದ ಸಿದ್ಧಪಡಿಸಿದ ಔಷಧಗಳ ಸಹಾಯದಿಂದ ಉಪಚಾರ ನೀಡಲಾಗುತ್ತಿದೆ.

೨. ಹಿಂದೂಗಳ ಹಬ್ಬಗಳ ಸಮಯಕ್ಕೆ ರಿಯಾಯತಿ ಏಕಿಲ್ಲ ?

ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯಲ್ಲಿ ‘ಲಾಕ್‌ಡೌನ್’ ಇರುವಾಗ ಮೇ ೧೪ ರಂದು ಇದ್ದ ರಂಜಾನ ಈದ್‌ನ ನಿಮಿತ್ತ ಮೇ ೧೨ ರಿಂದ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಬೆಳಗ್ಗೆ ೭ ರಿಂದ ೧೧ ಈ ಸಮಯದಲ್ಲಿ ತೆರೆಯಲಾಗುವುದು, ಎಂಬ ಆದೇಶವನ್ನು ಜಿಲ್ಲಾಧಿಕಾರಿಗಳು ಹೊರಡಿಸಿದ್ದರು.

೩. ಇಂತಹವರ ಮೇಲೆ ಉಗ್ರ ಕ್ರಮವನ್ನು ಕೈಗೊಳ್ಳಬೇಕು !

ನಟಿ ಪ್ರಿಯಾಂಕಾ ಚೋಪ್ರಾ ಇವರ ಒಂದು ಛಾಯಾಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿದೆ. ಇದರಲ್ಲಿ ಅವರು ಧರಿಸಿರುವ ಜಾಕೇಟಿನ ಹಿಂಬದಿಯಲ್ಲಿ ಶ್ರೀ ಮಹಾಕಾಳಿ ದೇವಿಯ ಚಿತ್ರವಿದೆ. ಇದರಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಟೀಕಿಸಲಾಗುತ್ತಿದೆ.

೪. ರಂಜಾನ ಅನ್ನು ‘ಅಪವಿತ್ರವನ್ನಾಗಿಸಿದ ಜಿಹಾದಿ ಭಯೋತ್ಪಾದಕರು !

ಅಫ್ಘಾನಿಸ್ತಾನದಲ್ಲಿ ರಂಜಾನನ ತಿಂಗಳಲ್ಲಿ ತಾಲೀಬಾನದಿಂದ ೧೫ ಆತ್ಮಾಹುತಿ ಮತ್ತು ಇನ್ನಿತರ ೨೦೦ ಬಾಂಬ್‌ಸ್ಫೋಟಿಸಿ ಆಕ್ರಮಣಗಳನ್ನು ಮಾಡಲಾಯಿತು. ಇದರಲ್ಲಿ ಒಟ್ಟು ೨೫೫ ನಾಗರಿಕರು ಮೃತಪಟ್ಟರೆ, ೫೦೦ ಕ್ಕೂ ಹೆಚ್ಚು ಜನರು ಗಾಯಗೊಂಡರು.

೫. ‘ಶಾರ್ಲೀ ಹೆಬ್ದೊ ಹಿಂದೂಗಳಲ್ಲಿ ಕ್ಷಮೆ ಕೇಳಬೇಕು !

ಫ್ರಾನ್ಸ್‌ನ ‘ಶಾರ್ಲೀ ಹೆಬ್ದೊ ನಿಯತಕಾಲಿಕೆಯು ತನ್ನ ಸಂಚಿಕೆಯಲ್ಲಿ ಪ್ರಕಟಿಸಲಾಗಿದ್ದ ಚಿತ್ರದ ಕೆಳಗೆ, ‘೩ ಕೋಟಿ ೩೦ ಲಕ್ಷ ದೇವತೆಗಳು; ಆದರೆ ಒಬ್ಬರಲ್ಲಿಯೂ ಆಕ್ಸಿಜನ್‌ನ ಉತ್ಪಾದಿಸುವ ಕ್ಷಮತೆ ಇಲ್ಲ’, ಎಂದು ಬರೆದು ಹಿಂದೂಗಳ ದೇವತೆಗಳ ಅವಮಾನ ಮಾಡಿದೆ.

೬. ಢೋಂಗಿ ಜಾತ್ಯತೀತ ಕಾಂಗ್ರೆಸ್‌ನ ಮುಂದುವರಿದ ಓಲೈಕೆ !

ಈದ್  ನಿಮಿತ್ತ ಪಂಜಾಬ್‌ನ ಕಾಂಗ್ರೆಸ್ ಸರಕಾರವು ರಾಜ್ಯದ ಮಲೇರಕೋಟಲಾ ಈ ಮುಸಲ್ಮಾನ ಬಹುಸಂಖ್ಯಾತ ಪ್ರದೇಶವನ್ನು ಪ್ರತ್ಯೇಕ ಜಿಲ್ಲೆ ಎಂದು ಘೋಷಿಸಿದೆ. ಈ ಜಿಲ್ಲೆಯಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. ೯೦ ರಷ್ಟು ಇದೆ.

೭. ಕ್ರೈಸ್ತ ಓಲೈಕೆಯ ವೈ.ಎಸ್.ಆರ್. ಕಾಂಗ್ರೆಸ್ಸಿನ ಹಿಂದೂವಿರೋಧ ತಿಳಿಯಿರಿ !

ಆಂಧ್ರಪ್ರದೇಶದಲ್ಲಿ ಆಡಳಿತದಲ್ಲಿರುವ ವೈ.ಎಸ್.ಆರ್. ಕಾಂಗ್ರೆಸ್ಸಿನ ಬಂಡಾಯ ಸಂಸದ ರಘುರಾಮ ರಾಜು ಇವರನ್ನು ಬಂಧಿಸಿದ ನಂತರ ಪೊಲೀಸ ಕಸ್ಟಡಿಯಲ್ಲಿ ತಮಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ರಾಜು ಇವರು ರಾಜ್ಯದಲ್ಲಿ ಕ್ರೈಸ್ತ ಮಿಶನರಿಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ.