ಕೃಪಾಸಿಂಧು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಶತಕೋಟಿ ಕೃತಜ್ಞತೆಗಳು 

‘ಪ.ಪೂ. ಭಕ್ತರಾಜ ಮಹಾರಾಜರು (ಪ.ಪೂ. ಬಾಬಾ ಅಂದರೆ ಡಾ. ಜಯಂತ ಆಠವಲೆಯವರ ಗುರುಗಳು) ಹೇಳುತ್ತಿದ್ದರು, ‘ನನ್ನ ಗುರು (ಶ್ರೀ. ಅನಂತಾನಂದ ಸಾಯೀಶ)ರವರು ನನಗೆ, ‘ನನ್ನ ಭಜನೆ ಯಾರು ಮಾಡುವರೋ, ಅವರಿಗೆ ಭೋಜನ ನಾನು ಕೊಡುವೆನು ಎನ್ನುತ್ತಿದ್ದರು. ಈ ವಚನದ ಸಾರಾಂಶ ಹೀಗಿದೆ – ‘ಪ.ಪೂ. ಬಾಬಾರವರು ಗುರುಗಳ ಮಹತ್ವ, ನಾಮಜಪ, ಭಕ್ತಿಯೋಗ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅನೇಕ ಭಜನೆಗಳನ್ನು ಬರೆದರು ಹಾಗೂ ‘ಗುರು ಸೇವೆ ಎಂದು ಜೀವಮಾನವಿಡಿ ಆ ಭಜನೆಗಳ ಪ್ರಚಾರ ಮಾಡಿದರು. ‘ಗುರು ಕಾರ್ಯ ಮಾಡುವವರ ಪಾಲನೆ ಪೋಷಣೆಯನ್ನು ಸಾಕ್ಷಾತ್ ಗುರುಗಳೇ ನಿರಂತರವಾಗಿ ವಹಿಸಿಕೊಳ್ಳುತ್ತಾರೆ, ಎಂಬ ಆಶೀರ್ವಾದವನ್ನೇ ಗುರುಗಳು ತಮ್ಮ ವಚನದಿಂದ ನೀಡಿದ್ದರು. ಈ ವಿಷಯದಲ್ಲಿ ಪ.ಪೂ. ಬಾಬಾರವರು ಹೇಳುತ್ತಾರೆ, ‘ನಾನು ಗುರುಗಳು ಹೇಳಿದಂತೆ ಭಜನೆಗಳ ಪ್ರಚಾರ ಮಾಡಿದೆ ಹಾಗೂ ನನ್ನ ಯೋಗಕ್ಷೇಮವನ್ನೆಲ್ಲ ಗುರುಗಳೇ ನೋಡಿಕೊಂಡರು. ಪ.ಪೂ. ಬಾಬಾರವರು ತಮ್ಮ ಗುರುಗಳು ಮಾಡಿದಂತೆ ತಮ್ಮ ಭಕ್ತರ ಯೋಗಕ್ಷೇಮವನ್ನು ಎಲ್ಲ ನಿಟ್ಟಿನಿಂದಲೂ ನೋಡಿಕೊಂಡರು.

(ಪೂ.) ಶ್ರೀ. ಸಂದೀಪ ಆಳಶಿ,

ಶಿಷ್ಯ ಡಾ. ಜಯಂತ ಆಠವಲೆಯವರು ಸಹ ಪ.ಪೂ. ಬಾಬಾರವರನ್ನೇ ಅನುಸರಿಸಿ ಆಯುಷ್ಯವಿಡೀ ಅಧ್ಯಾತ್ಮಪ್ರಚಾರದ ಕಾರ್ಯ ಮಾಡಿದರು ಹಾಗೂ ಇಂದಿಗೂ ಮಾಡುತ್ತಿದ್ದಾರೆ. ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಸನಾತನದ ಸಾಧಕರ ಸಾಧನೆ ಚೆನ್ನಾಗಿ ಆಗಬೇಕು ಹಾಗೂ ರಾಷ್ಟ್ರ ಹಾಗೂ ಧರ್ಮದ ವಿಷಯದಲ್ಲಿ ಕಾರ್ಯ ಹೆಚ್ಚಾಗಬೇಕು ಎಂದು ಆಶ್ರಮಗಳನ್ನು ನಿರ್ಮಿಸಿದರು. ಈ ಆಶ್ರಮಗಳಲ್ಲಿ ಅನೇಕ ಸಾಧಕರು ಸೇವೆ ಮಾಡುತ್ತಿದ್ದಾರೆ. ಅವರ ಪೈಕಿ ಎಷ್ಟೋ ಸಾಧಕರಿಗೆ ಇಂದು ಅನಾರೋಗ್ಯ, ಆಧ್ಯಾತ್ಮಿಕ ತೊಂದರೆ ಹಾಗೂ ವೃದ್ಧಾಪ್ಯದಿಂದ ಹೇಳಿಕೊಳ್ಳುವಷ್ಟು ಸೇವೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗಲೂ ಕೃಪಾಳು ಹಾಗೂ ಭಕ್ತವತ್ಸಲ ಪರಾತ್ಪರ ಗುರು ಡಾಕ್ಟರರು ಅಂತಹ ಸಾಧಕರಿಗೂ ಗೋಕುಲಕ್ಕೆ ಸಮಾನವಾಗಿರುವ ಸನಾತನದ ಆಶ್ರಮಗಳಲ್ಲಿ ವಾಸಿಸಲು ಅಮೂಲ್ಯವಾದ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ. ಏಕೆಂದರೆ ಅವರಿಗೆ ಕೇವಲ ‘ಸಾಧಕರು ಚೆನ್ನಾಗಿ ಸಾಧನೆ ಮಾಡಬೇಕು ಎಂಬ ಒಂದೇ ಒಂದು ಅಪೇಕ್ಷೆಯಿದೆ. ಪರಾತ್ಪರ ಗುರು ಡಾಕ್ಟರರು ಗುರುಪರಂಪರೆಗನುಸಾರ ಸರ್ವತೋಮುಖವಾಗಿ ಸಾಧಕರ ಯೋಗಕ್ಷೇಮವನ್ನು ವಹಿಸುತ್ತಿದ್ದಾರೆ. ಅದರ ಕೆಲವು ಉದಾಹರಣೆಗಳು

೧. ಸನಾತನದ ಆಶ್ರಮಗಳಲ್ಲಿ ಎಲ್ಲ ದೃಷ್ಟಿಗಳಿಂದಲೂ ಸಾಧಕರ ಪಾಲನೆಪೋಷಣೆ ನಡೆಯುತ್ತಿದೆ, ಉದಾ. ಸಾಧಕರ ಪಥ್ಯಕ್ಕನುಸಾರ ಆಹಾರ, ರೋಗ ನಿವಾರಣೆಗಾಗಿ ವಿವಿಧ ಉಪಚಾರಪದ್ಧತಿಗಳು ಇತ್ಯಾದಿಗಳ ಸೌಕರ್ಯಗಳನ್ನು ಮಾಡಲಾಗುತ್ತದೆ.

. ಪ್ರಸ್ತುತ ‘ಕೊರೋನಾ ಮಹಾಮಾರಿಯಿಂದ ಜಗತ್ತಿನಾದ್ಯಂತ ಅತ್ಯಂತ ಭೀಕರ ಸ್ಥಿತಿಯು ಉದ್ಭವಿಸಿದೆ. ಪ್ರತೀದಿನ ಅನೇಕರು ಮರಣ ಹೊಂದುತ್ತಿದ್ದಾರೆ. ಅನೇಕರು ತಮ್ಮ ನೌಕರಿಗಳನ್ನು ಕಳೆದುಕೊಂಡು ಉಪವಾಸವಿರುವ ಪ್ರಮೇಯ ಬಂದಿದೆ. ಹೀಗಿದ್ದರೂ ಸನಾತನದ ಆಶ್ರಮಗಳಲ್ಲಿ ಹಾಗೂ ಎಲ್ಲೆಡೆ ಧರ್ಮಪ್ರಚಾರದ ಸೇವೆ ಮಾಡುವ ಸನಾತನದ ಸಾಧಕರು ಎಂದಿನಂತೆ ಜೀವನ ನಡೆಸುತ್ತಾ ಅವಿರತವಾಗಿ ಸಾಧನೆಯನ್ನೂ ಮಾಡುತ್ತಿದ್ದಾರೆ. ಮುಂಬರುವ ಆಪತ್ಕಾಲವು ‘ಕೊರೋನಾ ಮಹಾಮಾರಿಗಿಂತಲೂ ಮಹಾಭಯಂಕರವಾಗಿರುವುದು. ಆಗ ‘ಸಾಧನೆ ಮಾಡದಿರುವ ಸಮಾಜದ ಸ್ಥಿತಿ ಎಷ್ಟು ಶೋಚನೀಯವಾಗಿರಲಿದೆ, ಎಂಬುದನ್ನು ಕಲ್ಪನೆ ಮಾಡದಿರುವುದೇ ಒಳಿತು ! ‘ಅಂತಹ ಆಪತ್ಕಾಲದಲ್ಲಿ ಸನಾತನದ ಆಶ್ರಮದಲ್ಲಿರುವ ಹಾಗೂ ಸನಾತನದ ಎಲ್ಲೆಡೆಯ ಸಾಧಕರ ರಕ್ಷಣೆಯಾಗಲಿದೆ, ಎಂದು ಪರಾತ್ಪರ ಗುರು ಡಾಕ್ಟರರ ಮೇಲೆ ಎಲ್ಲ ಸಾಧಕರಿಗೆ ಶ್ರದ್ಧೆಯಿದೆ.

. ‘ವೈಷ್ಣವ ಜನ ತೋ ತೆನೆ ಕಹಿಯೆ ಜೆ ಪೀಡ ಪರಾಯಿ ಜಾಣೆ ರೆ |, ಎಂದು ಗುಜರಾತಿನ ಮಹಾನ್ ಸಂತ ನರಸೀ ಮೆಹತಾರವರು ಹೇಳಿದ್ದಾರೆ. ಸಾಧಕರಿಗೆ ಆಗುತ್ತಿರುವ ಆಧ್ಯಾತ್ಮಿಕ ತೊಂದರೆಗಳ ತೀವ್ರತೆಯನ್ನು ಗಮನದಲ್ಲಿಟ್ಟು ಅವರ ತೊಂದರೆಗಳು ಆದಷ್ಟು ಬೇಗನೆ ಕಡಿಮೆಯಾಗಲು ಪರಾತ್ಪರ ಗುರು ಡಾಕ್ಟರರು ವಿವಿಧ ಉಪಾಯ ಯೋಜನೆಗಳನ್ನು ಹೇಳುತ್ತಿರುತ್ತಾರೆ. ಸಾಧಕರ ತೊಂದರೆಗಳ ನಿವಾರಣೆಗಾಗಿ ಅವರಿಗೆ ನಾಮಜಪಾದಿ ಉಪಾಯಗಳನ್ನು ಹೇಳಲು ಹಾಗೂ ಅವರಿಗೆ ಉಪಾಯ ಮಾಡಲು ಸಹಾಯ ಮಾಡುವ ಸಂತರು ಹಾಗೂ ಉನ್ನತ ಸಾಧಕರು ಕೇವಲ ಆಶ್ರಮಗಳಲ್ಲಷ್ಟೇ ಅಲ್ಲ, ಎಲ್ಲೆಡೆಗಳಲ್ಲಿರುವ ಸಾಧಕರಿಗಾಗಿ ಲಭ್ಯ ಮಾಡಿಕೊಟ್ಟಿರುವವರಲ್ಲಿ ಪರಾತ್ಪರ ಗುರು ಡಾಕ್ಟರರು ಅದ್ವಿತೀಯರಾಗಿದ್ದಾರೆ !

೪. ಎಷ್ಟೋ ಸಲ ಸಾಧಕರ ಅನಾರೋಗ್ಯ ಹಾಗೂ ಆಧ್ಯಾತ್ಮಿಕ ತೊಂದರೆಗಳು ಅವರ ಹಿಂದಿನ ಜನ್ಮಗಳ ಪಾಪಗಳ ಪರಿಣಾಮವಾಗಿರುತ್ತದೆ. ಅಂತಹ ಸಾಧಕರು ಮನೆಯಲ್ಲಿರುತ್ತಿದ್ದರೆ, ಅನಾರೋಗ್ಯ ಹಾಗೂ ಆಧ್ಯಾತ್ಮಿಕ ತೊಂದರೆಯ ಮುಂದೆ ಅಸಹಾಯಕರಾಗಿ ಸಾಧನೆಯು ಸೀಮಿತವಾಗಿರುತ್ತಿತ್ತು. ಆದರೆ ಆಶ್ರಮದಲ್ಲಿನ ಸೌಲಭ್ಯಗಳು, ಸಹಸಾಧಕರ ಸಹಾಯ ಹಾಗೂ ಸಾಧನೆಯ ಪೂರಕ ವಾತಾವರಣದಿಂದ ಅಂತಹ ಸಾಧಕರಿಂದ ಸ್ವಲ್ಪಮಟ್ಟಿಗೆ ಸಾಧನೆ ಆಗುತ್ತಿದೆ. ಸಾಧನೆಯಾಗುತ್ತಿರುವುದರಿಂದ ಅವರ ಪಾಪಗಳು ನಾಶವಾಗಲು ಸಹಾಯವಾಗುತ್ತದೆ. ಈ ಪಾಪಗಳು ನಾಶವಾಗದಿದ್ದರೆ, ಅವರು ಪುನಃಪುನಃ ಭೂಮಿಯ ಮೇಲೆ ಜನಿಸಬೇಕಾಗುತ್ತಿತ್ತು.

. ಸನಾತನದ ಆಶ್ರಮಗಳಲ್ಲಿ ಕೆಲವು ಸಾಧಕರಿಂದ ಸಮಷ್ಟಿಯ ಮಟ್ಟದಲ್ಲಿ ಗಂಭೀರ ತಪ್ಪುಗಳಾದವು, ಆದರೆ ಆ ತಪ್ಪುಗಳನ್ನು ಸರಿಪಡಿಸಲು ಅವರಿಗೆ ಪ್ರೀತಿಯಿಂದ ತಿಳಿಸಿ ಹೇಳಿ ಅವರಿಗೆ ಸಾಧನೆ ಮಾಡಲು ಮೇಲಿಂದ ಮೇಲೆ ಅವಕಾಶವನ್ನು ನೀಡಲಾಗುತ್ತದೆ.

. ಇಲ್ಲಿಯವರೆಗೂ ಸಾಧನೆ ಹಾಗೂ ಗುರುಕಾರ್ಯಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿರುವ ಸಾಧಕರ ಮನಸ್ಸು ವಯಸ್ಸಾದ ಬಳಿಕ ‘ಮಕ್ಕಳ ಮನೆಯಲ್ಲಿದ್ದುಕೊಂಡು ಮೊಮ್ಮೊಕ್ಕಳೊಂದಿಗೆ ಆಟವಾಡುವುದು, ಮನೆಯಲ್ಲಿ ದೂರದರ್ಶನವಾಹಿನಿಯಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸುವುದು ಇತ್ಯಾದಿ ವಿಷಯಗಳಿಂದ ಪ್ರಸನ್ನವಾಗುವುದಿಲ್ಲ. ಅವರಿಗೆ ಸಾಧನೆಯನ್ನು ಬಿಟ್ಟು ಇತರ ಏನೂ ಬೇಡವೆಂದು ಅನಿಸುತ್ತದೆ. ವೃದ್ಧಾವಸ್ಥೆಯಲ್ಲಿರುವ ಸಾಧಕರಿಗೆ ಆಶ್ರಮದಲ್ಲಿರಲು ಅವಕಾಶವನ್ನು ನೀಡಿದ್ದರಿಂದ ಅವರಿಗೂ ‘ನಮ್ಮ ಕೊನೆಯ ಶ್ವಾಸದವರೆಗೂ ಚೆನ್ನಾಗಿ ಸಾಧನೆಯಾಗಲಿದೆ, ಎಂಬುದರ ಬಗ್ಗೆ ಖಾತ್ರಿಯೆನಿಸುತ್ತದೆ.

– (ಪೂ.) ಶ್ರೀ. ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೨.೪.೨೦೨೧)

ಸ್ವತಃ ತಮ್ಮ ಮೇಲೆ ಮಹಾಮೃತ್ಯುಯೋಗದ ಛಾಯೆಯಿರುವಾಗಲೂ ರಾಷ್ಟ್ರ ಹಾಗೂ ಧರ್ಮ ಕಾರ್ಯದ ತೀವ್ರ ತಳಮಳದಿಂದ ೭೮ ನೇ ವಯಸ್ಸಿನಲ್ಲಿಯೂ ಕಾರ್ಯನಿರತರಾಗಿರುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಬಂದಿರುವ ಮಹಾಮೃತ್ಯುಯೋಗದಿಂದ ೨೦೦೭ ನೇ ವರ್ಷದಿಂದ ಅವರ ಪ್ರಾಣಶಕ್ತಿ ಅತ್ಯಲ್ಪವಾಗಿದ್ದು ಅವರಿಗೆ ದಿನವೆಲ್ಲ ತುಂಬಾ ಆಯಾಸ ಇರುತ್ತದೆ ಹಾಗೂ ಅವರಿಗೆ ನಾನಾರೀತಿಯ ವ್ಯಾಧಿಗಳಿವೆ. ಅತ್ಯಲ್ಪ ಪ್ರಾಣಶಕ್ತಿಯಿಂದ ಅನೇಕ ಸಲ ಮೃತ್ಯುಸದೃಶ ಸ್ಥಿತಿಯನ್ನು ಅನುಭವಿಸಿದ್ದಾರೆ. ಹೀಗಿದ್ದರೂ ಗ್ರಂಥಗಳ ಸಂಕಲನ, ಪ್ರಚಾರಸಾಹಿತ್ಯ, ಧ್ವನಿಚಿತ್ರೀಕರಣ ಇತ್ಯಾದಿ ವಿಭಾಗಗಳಲ್ಲಿ ಆಧ್ಯಾತ್ಮಿಕ ಮಟ್ಟದಲ್ಲಿ ಸೇವೆಯಾಗಬೇಕೆಂದು ಮಾರ್ಗದರ್ಶನ ಮಾಡುವುದು; ಚಿತ್ರಕಲೆ, ಮೂರ್ತಿ ಕಲೆ, ಸಂಗೀತಕಲೆ ಇತ್ಯಾದಿವಿಷಯಗಳ ಅಭ್ಯಾಸ ಹಾಗೂ ಸಂಶೋಧನಾ ಕಾರ್ಯ ಮಾಡಲು ದಿಶಾದರ್ಶನ ಮಾಡಲು; ಸಾಧಕ-ಕಲಾಕಾರರಿಗೆ ಕಲೆಯ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುವುದು; ರಾಷ್ಟ್ರ ಹಾಗೂ ಧರ್ಮದ ಕಾರ್ಯದ ಸಂದರ್ಭದಲ್ಲಿ ಆಧ್ಯಾತ್ಮಿಕ ಮಟ್ಟದಲ್ಲಿ ಮಾರ್ಗದರ್ಶನ ಮಾಡುವುದು ಇತ್ಯಾದಿ ಸೇವೆಗಳನ್ನು ಅವರು ನಡುವಿನಲ್ಲಿ ಅಲ್ಪಸ್ವಲ್ಪ ವಿಶ್ರಾಂತಿ ಪಡೆಯುತ್ತಾ ದಿನದಲ್ಲಿ ೪-೫ ತಾಸು ಮಾಡುತ್ತಿದ್ದಾರೆ. ಅವರು ಸ್ಥಾಪಿಸಿದ ಅಥವಾ ಅವರ ಪ್ರೇರಣೆಯಿಂದ ಸ್ಥಾಪನೆಯಾದ ಸಂಸ್ಥೆಗಳ ಕಾರ್ಯವು ಅವರದ್ದೇ ಕೃಪಾಶೀರ್ವಾದ ದಿಂದ ದಿನೇದಿನೇ ವೃದ್ಧಿಯಾಗುತ್ತಿದೆ. ಸ್ವತಃ ತಮ್ಮ ಮೇಲೆ ಮಹಾಮೃತ್ಯುಯೋಗದ ಕರಿನೆರಳು ಇರುವಾಗಲೂ ಅಖಿಲ ಮನುಕುಲದ ಉದ್ಧಾರದ ನಿರ್ಮಲ ಆಕಾಂಕ್ಷೆಯಿಂದ ಚೈತನ್ಯ ಶಕ್ತಿಯಿಂದ ಕಾರ್ಯನಿರತವಾಗಿರುವ ಪರಾತ್ಪರ ಗುರು ಡಾಕ್ಟರರ ದೈವತ್ವದ ಅನುಭವ ಇದರಿಂದ ಬರುತ್ತದೆ. ಎಲ್ಲ ಸಾಧಕರು, ರಾಷ್ಟ್ರ-ಧರ್ಮ ಪ್ರೇಮಿಗಳು,  ಎದುರು ಮಹಾನ್ ಆದರ್ಶವಿಟ್ಟಿರುವ ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ತ್ರಿವಾರ ವಂದನೆಗಳು ! – (ಪೂ.) ಸಂದೀಪ ಆಳಶಿ