ಕೊರೋನಾ : ಜನರಿಗೆದುರಾದ ಈ ದುರವಸ್ಥೆಗೆ ಯಾರು ಕಾರಣ ?

‘ಇಂತಹ ಆಪತ್ಕಾಲದಲ್ಲಿ ಜೀವಂತವಾಗಿರಲು ಭಗವಂತನ ಭಕ್ತರಾಗಿ ಮತ್ತು ಸಾಧನೆಯನ್ನು ಹೆಚ್ಚಿಸಿ. ಇತರ ಯಾರೂ ಅಲ್ಲ ಕೇವಲ ಭಗವಂತನೇ ಕಾಪಾಡುವನು  ! – (ಪರಾತ್ಪರ ಗುರು) ಡಾ. ಆಠವಲೆ

ಆಂಬ್ಯುಲೆನ್ಸ್ ಮತ್ತು ಅಂತ್ಯಕ್ರಿಯೆಯ ಖರ್ಚಿಗಾಗಿ ಬೆಂಗಳೂರಿನಲ್ಲಿ ಮೂರುವರೆ ಸಾವಿರದ ಬದಲು ೬೦ ಸಾವಿರ ರೂಪಾಯಿಯ ಬೇಡಿಕೆ !

ಮತ್ತಿಕೆರೆಯಲ್ಲಿ ಕೊರೋನಾದಿಂದಾಗಿ ಓರ್ವ ವಿವಾಹಿತೆಯ ತಂದೆಯು ಮನೆಯಲ್ಲಿ ತೀರಿಕೊಂಡಿದ್ದರು. ತಂದೆಯು ಸಾವನ್ನಪ್ಪಿರುವುದು ಆಕೆಗೆ ಗೊತ್ತಿರಲಿಲ್ಲ. ಚಿಕಿತ್ಸೆಗಾಗಿ ಆಕೆಯು ತಂದೆಯನ್ನು ಆಂಬ್ಯುಲೆನ್ಸ್‌ನಿಂದ ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಅವರು ತೀರಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದರು. ಶವವನ್ನು ಕೊಂಡೊಯ್ಯುವ ವಾಹನದಿಂದ ಶವವನ್ನು ಖಾಸಗಿ ಚಿತಾಗಾರದಲ್ಲಿ ಇಡಲಾಗಿತ್ತು. ಆಗ ಶವ ಇಡಲು ಅದೇರೀತಿ ಅಂತ್ಯಕ್ರಿಯೆಗಾಗಿ ಆಂಬ್ಯುಲೆನ್ಸ್‌ನ ಮಾಲೀಕನು ತಂದೆಯ ಅಂತಿಮಕ್ರಿಯೆಗಾಗಿ ೬೦ ಸಾವಿರ ರೂಪಾಯಿ ಕೇಳಿದನು. ೪೦ ಸಾವಿರ ಕೊಡದಿದ್ದರೆ ಫ್ಲೈಓವರ್‌ನಿಂದ ಶವವನ್ನು ಕೆಳಗೆ ಎಸೆಯುತ್ತೇನೆಂದು ಸಹ ಆಂಬ್ಯುಲೆನ್ಸ್ಸ್‌ನ ಮಾಲೀಕನು ಬೆದರಿಕೆಯೊಡ್ಡಿದ. ಅದಕ್ಕೆ ವಿವಾಹಿತೆಯು ಮಾಂಗಲ್ಯ ಮಾರಲೂ ಸಿದ್ಧಳಿದ್ದಳು. ಅಷ್ಟರಲ್ಲಿ ಸುದ್ದಿ ವಾಹಿನಿಯ ಪ್ರತಿನಿಧಿಯು ಅಲ್ಲಿ ಬಂದಾಕ್ಷಣ  ಅವರನ್ನು ನೋಡಿ ಮಾಲೀಕರು ಹೆದರಿದ ೧೩ ಸಾವಿರ ತೆಗೆದುಕೊಳ್ಳಲು ಒಪ್ಪಿದನು.

ರೆಮ್ಡೆಸಿವಿರ್ ಚುಚ್ಚು ಮದ್ದಿನ ಹೆಸರಿನಲ್ಲಿ ಅದರ ಬಾಟಲಿಯಿಂದ ಲವಣಯುಕ್ತ ನೀರು ಮತ್ತು ಅಂಟಿಬಯೋಟಿಕ್ಸ್ ಅನ್ನು ಸೇರಿಸಿ ಮಾರಾಟ ಮಾಡುತ್ತಿದ್ದ ಗಿರೀಶ ಎಂಬ ನರ್ಸ್‌ನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ.

ಮೃತ ರೋಗಿಯ ಕೊರೋನಾ ಪರೀಕ್ಷಣೆಯ ವರದಿಯು ಮೂರು ಬಾರಿ ಬದಲಾದ ಕಾರಣ ಕಂಗೆಟ್ಟ ಕುಟುಂಬದವರು !

ಕೊರೋನಾ ಪರೀಕ್ಷಾ ವರದಿಯು ನೆಗೆಟಿವ್‌ವಾಗಿದ್ದು ಮೃತಪಟ್ಟ ವ್ಯಕ್ತಿಯ ಅಂತಿಮ ಸಂಸ್ಕಾರದ ಸಮಯದಲ್ಲಿ ವ್ಯಕ್ತಿಯ ವರದಿಯಲ್ಲಿ ಪಾಸಿಟಿವ್ ಇದೆ ಎಂದು ತಿಳಿದ ನಂತರ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭಯಗೊಂಡರು. ಮೃತ ವ್ಯಕ್ತಿಯು ಕೊರೋನಾ ಪೀಡಿತನೆಂದು ತಿಳಿದ ನಂತರ ಅಂತಿಮಕ್ರಿಯೆಗೆ ಬಂದಿದ್ದ ಅವರ ಸಂಬಂಧಿಕರು ಪರಾರಿಯಾಗಿರುವ ಘಟನೆ ಇಲ್ಲಿಯ ಶಹಾಪುರ ಗ್ರಾಮದಲ್ಲಿ ನಡೆದಿದೆ. ತದನಂತರ ಮತ್ತೊಮ್ಮೆ ವರದಿ ನೆಗೆಟಿವ್ ಬಂದಿದೆ ಎಂದು ಹೇಳಿದಾಗ ಗೊಂದಲವು ಸೃಷ್ಟಿಯಾಯಿತು. ಆಶ್ಚರ್ಯವೆಂದರೆ ಆ ವ್ಯಕ್ತಿಯ ಗಂಟಲಿನ ಹಾಗೂ ಮೂಗಿನ ದ್ರವವನ್ನು ಒಂದೇ ಸಲ ತೆಗೆದುಕೊಂಡು ಪರೀಕ್ಷಣೆಗಾಗಿ ಕಳುಹಿಸಿದ ನಂತರ ಅದರ ೩ ವರದಿಯು ಬಂದಿತ್ತು.

ಕೊರೋನಾ ಮಹಾಮಾರಿಯ ಸ್ಥಿತಿಯು ಗಂಭೀರವಾಗುತ್ತಿರುವಾಗ ಆಸ್ಪತ್ರೆಗಳು, ಪರೀಕ್ಷಾ ಕೇಂದ್ರಗಳು, ಪ್ರಯೋಗಾಲಯಗಳಂತಹ ಸ್ಥಳಗಳಲ್ಲಿ ಅನುಭವಿಸಿದ ಕಹಿ ಅನುಭವಗಳನ್ನು ತಿಳಿಸಿರಿ ! ತಮಗೂ ಇಂತಹ ವಿಧದ ಕಹಿ ಅನುಭವಗಳು ಬಂದಿದ್ದರೆ ಆರೋಗ್ಯ ಸಹಾಯ ಸಮಿತಿಗೆ ಮುಂದಿನ ವಿಳಾಸಕ್ಕೆ ತಕ್ಷಣ ತಿಳಿಸಿರಿ. ಸಮಾಜದ ಪ್ರಬೋಧನೆಗಾಗಿ ಇಂತಹ ಅನುಭವಗಳನ್ನು ಕೂಡಲೇ ಲಿಖಿತಸ್ವರೂಪದಲ್ಲಿ ತಿಳಿಸುವುದು ಕಾಲಾನುಸಾರ ಸಮಷ್ಟಿ ಸಾಧನೆಯೇ ಆಗಿದೆ, ಎಂಬುದನ್ನು ಗಮನದಲ್ಲಿರಿಸಿ ಸಾಧಕರು, ವಾಚಕರು, ಹಿತಚಿಂತಕರು, ಧರ್ಮಪ್ರೇಮಿಗಳು ಮತ್ತು ಜಾಹೀರಾತುದಾರರು ತಮಗೆ ಅಥವಾ ಪರಿಚಿತರಿಗೆ ಬಂದಿರುವ ಕಟು ಅಥವಾ ಒಳ್ಳೆಯ ಅನುಭವಗಳನ್ನು ಕೂಡಲೇ ಕಳುಹಿಸಿರಿ.

ಆರೋಗ್ಯ ಸಹಾಯ ಸಮಿತಿ

ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಆರೋಗ್ಯ ಸಹಾಯ ಸಮಿತಿ, ‘ಮಧುಸ್ಮೃತಿ, ಸತ್ಯನಾರಾಯಣ ದೇವಸ್ಥಾನದ ಹತ್ತಿರ, ಫೋಂಡಾ, ಗೋವಾ – 4030401.

ಸಂಪರ್ಕ ಸಂಖ್ಯೆ : 7058885610

ವಿ-ಅಂಚೆ ವಿಳಾಸ : [email protected]