ತೃಣಮೂಲ ಕಾಂಗ್ರೆಸ್ ಗೂಂಡಾಗಳಿಂದ ಹಲ್ಲೆ ಮಾಡಲಾಗಿದೆ ಎಂದು ಆರೋಪ
ಎಲ್ಲಿ ಕೇಂದ್ರ ಸಚಿವರು ಸುರಕ್ಷಿತ ಇಲ್ಲವೋ, ಅಲ್ಲಿ ಜನ ಸಾಮಾನ್ಯರು ಹೇಗೆ ಸುರಕ್ಷಿತವಾಗಿರಲು ಸಾಧ್ಯ ? ಇಂತಹ ಘಟನೆಗಳು ಹೇಗೆ ನಡೆಯುತ್ತಿವೆ ?, ಈ ಬಗ್ಗೆ ಮಮತಾ ಬ್ಯಾನರ್ಜಿಯವರು ಹೇಳಬೇಕು !
ಮಿದನಾಪುರ (ಬಂಗಾಲ) – ಇಲ್ಲಿ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಲಿಧರನ ಇವರ ಮೇಲೆ ಕೆಜಿಟಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪಂಚಕುಡಿಯಲ್ಲಿ ಹಲ್ಲೆ ನಡೆಸಲಾಗಿದೆ. ಅವರ ವಾಹನಗಳ ಗಾಜುಗಳನ್ನು ಒಡೆಯಲಾಗಿದೆ. ಈ ಘಟನೆಯ ವಿಡಿಯೋವೊಂದನ್ನು ಮುರಳೀಧರನ್ ಟ್ವೀಟ್ ಮಾಡಿ ಬರೆದಿದ್ದಾರೆ, ‘ಪಶ್ಚಿಮ ಮಿದನಾಪುರದ ಪ್ರವಾಸದ ಸಂದರ್ಭದಲ್ಲಿ ನನ್ನ ವಾಹನದ ಮೇಲೆ ಕೆಲವು ತೃಣಮೂಲ ಕಾಂಗ್ರೆಸ್ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ವಾಹನದ ಗಾಜು ಒಡೆದಿದ್ದಾರೆ. ನನ್ನ ಸಹಚರರ ಮೇಲೆ ದಾಳಿ ಮಾಡಿದ್ದಾರೆ. ಹಾಗಾಗಿ ನನ್ನ ಪ್ರವಾಸವನ್ನು ಅರ್ಧದಾರಿಯಲ್ಲೇ ನಿಲ್ಲಿಸಿ ವಾಪಾಸು ಬರಬೇಕಾಯಿತು’. ಎಂದು ಬರೆದಿದ್ದಾರೆ. ಚುನಾವಣಾ ನಂತರದ ಹಿಂಸಾಚಾರವನ್ನು ಪರಿಶೀಲಿಸಲು ಭಾಜಪವು ರಚಿಸಿದ ನಾಲ್ಕು ಸದಸ್ಯರ ಸಮಿತಿಯಲ್ಲಿ ಮುರಳೀಧರನ್ ಇವರೂ ಸೇರಿದ್ದಾರೆ.
TMC goons attacked my convoy in West Midnapore, broken windows, attacked personal staff. Cutting short my trip. #BengalBurning @BJP4Bengal @BJP4India @narendramodi @JPNadda @AmitShah @DilipGhoshBJP @RahulSinhaBJP pic.twitter.com/b0HKhhx0L1
— V Muraleedharan (@VMBJP) May 6, 2021