‘ಭಾರತೀಯ ಸಂಸ್ಕೃತಿಗೆ ಅನೇಕ ಯುಗಗಳ ವಂಶಾಧಿಕಾರ ಲಭಿಸಿದ್ದು, ಅದು ಸಮೃದ್ಧ ಮತ್ತು ಪರಿಪೂರ್ಣವಾಗಿದೆ. ಈ ಸನಾತನ ಸಂಸ್ಕೃತಿಯಲ್ಲಿ ಅಮೃತ ಸಮಾನ ತುಂಬಿರುವ ಕಲಶ ಮೊದಲೂ ಇತ್ತು ಮತ್ತು ಈಗಲೂ ಇದೆ; ಆದರೆ ಭಾರತೀಯರು ಇಂತಹ ಚೈತನ್ಯಮಯ ಸಂಸ್ಕೃತಿಯನ್ನು ಬಿಟ್ಟು ಭೋಗವಾದ ಮತ್ತು ರಜ-ತಮಪ್ರಧಾನ ಸಂಸ್ಕೃತಿಯ ಬೆನ್ನು ಹತ್ತಿದ್ದಾರೆ. ಇದು ಅಮೃತವನ್ನು ಬಿಟ್ಟು ಕೆಸರಿನ ಹಿಂದೆ ಓಡಿದಂತಿದೆ.
೧. ನಮ್ಮಲ್ಲಿ ಮಾತೃನವಮಿ ಇದೆ. ಮಾತೃನವಮಿಯಂದು ನಮಗೆ ಮಾತೆಯರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸಲು ಆಗುವುದಿಲ್ಲವೇ ? ಹೀಗಿರುವಾಗ ಇಲ್ಲಿ ‘ಮದರ್ಸ ಡೇಯನ್ನು ಏಕೆ ತರಲಾಯಿತು?
೨. ನಮ್ಮಲ್ಲಿ ಕೌಮುದಿ ಮಹೋತ್ಸವ ಮತ್ತು ಮಧುಮಾಸವಿತ್ತು. ಈ ತಿಂಗಳುಗಳಲ್ಲಿ ನಾವು ನಮ್ಮ ಆಪ್ತರಿಗೆ ಅಥವಾ ಮಿತ್ರರಿಗೆ ಪ್ರೇಮವನ್ನು ವ್ಯಕ್ತಪಡಿಸುತ್ತಿದ್ದೆವು; ಆದರೆ ಈಗ ಇಲ್ಲಿ ‘ವಾಲೆಂಟೈನ್ ಡೇ ತರಲಾಯಿತು. ಇದರಿಂದ ಯುವ ಪೀಳಿಗೆಗೆ ನೈತಿಕತೆ ದೊರೆಯುವ ಬದಲು ಅನೈತಿಕತೆ ದೊರಕಿತು.
೩. ನಮ್ಮ ದೇಶದಲ್ಲಿ ಕತ್ತಲೆಯಿಂದ ಜ್ಞಾನರೂಪಿ ಬೆಳಕಿನೆಡೆಗೆ ಕರೆದೊಯ್ಯುವ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅನಾದಿ ಕಾಲದಿಂದಲೂ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಆದರೆ ನಾವು ಈಗ ‘ಟೀಚರ್ಸ್ ಡೇ (ಶಿಕ್ಷಕರ ದಿನಾಚರಣೆ) ಆಚರಿಸತೊಡಗಿದೆವು. ಇದರಿಂದ ನಾವು ಗುರುಕೃಪೆಯಿಂದ ವಂಚಿತರಾದೆವು.
೪. ನಮ್ಮಲ್ಲಿ ಆರೋಗ್ಯಸಂಪನ್ನತೆಯನ್ನು ನೀಡಿ, ದೀರ್ಘಾಯುಷ್ಯಿಗಳನ್ನಾಗಿಸುವ ನೀಡುವ ಧನ್ವಂತರಿ ದೇವತೆಯ ‘ಧನ್ವಂತರಿ ಜಯಂತಿ ಇರುವಾಗ ‘ಡಾಕ್ಟರ್ಸ್ ಡೇ ಯನ್ನು ಏಕೆ ತರಲಾಯಿತು?
೫. ನಮ್ಮಲ್ಲಿ ವಿಶ್ವಕರ್ಮ ಜಯಂತಿ ಇರುವಾಗ ‘ಇಂಜನಿಯರ್ಸ್ ಡೇ ಮತ್ತು ‘ಕಾರ್ಮಿಕ ದಿನಾಚರಣೆ ಗಳನ್ನು ಏಕೆ ತರಲಾಯಿತು?
೬. ಪುತ್ರನ ದೀರ್ಘಾಯುಷ್ಯಕ್ಕಾಗಿ ಮತ್ತು ಸಮೃದ್ಧಿಗಾಗಿ ‘ಸಂತಾನ ಸಪ್ತಮಿ ಮತ್ತು ಅಹೋಯಿ ಇರುವಾಗ ‘ಚಿಲ್ಡ್ರನ್ಸ ಡೇ ಯನ್ನು ಏಕೆ ತರಲಾಯಿತು ?
೭. ನಮ್ಮಲ್ಲಿ ನವರಾತ್ರಿಯಲ್ಲಿ ೯ ದಿನಗಳವರೆಗೆ ದೇವಿಯನ್ನು ಆರಾಧಿಸಿ ಕನ್ಯಾಭೋಜನ ನೀಡುವ ಪದ್ಧತಿಯಿದೆ. ಹೀಗಿರುವಾಗ ‘ಮಹಿಳಾ ದಿನ ವನ್ನು ಏಕೆ ತರಲಾಯಿತು ?
೮. ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾಬಂಧನವು ಸಹೋದರಿ ಮತ್ತು ಸಹೋದರಲ್ಲಿ ಪ್ರೇಮವನ್ನು ವೃದ್ಧಿಸುವ ಹಬ್ಬವಾಗಿದೆ. ಹೀಗಿರುವಾಗ ‘ಸಿಸ್ಟರ‍್ಸ ಡೇ ಏತಕ್ಕಾಗಿ ? ಆ ದಿನ ಸಹೋದರಿಗೆ ಶುಭಾಶಯಗಳನ್ನು ನೀಡುವುದರಿಂದ ಎಂತಹ ಆತ್ಮೀಯತೆ ಮೂಡುವುದು ?
೯. ಸಾವಿರಾರು ವರ್ಷಗಳಿಂದ ಭಾರತದಲ್ಲಿ ಸಹೋದರ ಬಿದಿಗೆಯನ್ನು ಆಚರಿಸಲಾಗುತ್ತದೆ. ಹೀಗಿರುವಾಗ ‘ಬ್ರದರ್ಸ ಡೇ ಏತಕ್ಕೆ ಬೇಕು ? ಸಹೋದರ ಶಬ್ದದಲ್ಲಿನ ಪ್ರೇಮ ‘ಬ್ರದರ್ ಶಬ್ದದಲ್ಲಿ ವ್ಯಕ್ತವಾಗಬಹುದೇ ?
೧೦. ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಕರವಾಚೌತ ವ್ರತವನ್ನು ಮಾಡಲಾಗುತ್ತದೆ. ಈ ದಿನ ಹಿಂದೂ ಮಹಿಳೆಯರು ತಮ್ಮ ಪತಿಗೆ ದೀರ್ಘಾಯುಷ್ಯ ಮತ್ತು ಆರೋಗ್ಯ ಚೆನ್ನಾಗಿರಬೇಕೆಂದು ಪ್ರಾರ್ಥಿಸುತ್ತಾರೆ. ಹೀಗಿರುವಾಗ ‘ಹಸ್ಬಂಡ ಡೇ ಏಕೆ ಬೇಕು ?
೧೧. ಆವಳಾ ನವಮಿ (ನೆಲ್ಲಿಕಾಯಿ ನವಮಿ), ತುಳಸಿ ವಿವಾಹವನ್ನು ಆಚರಿಸುವ ಮತ್ತು ಪ್ರತಿದಿನ ಅರಳಿಮರವನ್ನು ಪೂಜಿಸುವ ಸನಾತನ ಭಾರತೀಯರು ‘ಮರ-ಬಳ್ಳಿಗಳು ನಮ್ಮ ನೆಂಟರು ಎಂದು ನಮ್ಮ ಸಂತರು ಕಲಿಸಿರುವುದನ್ನು ಆಚರಣೆಯಲ್ಲಿ ತರುತ್ತಾರಲ್ಲವೇ? ಹೀಗಿರುವಾಗ ನಮಗೆ ‘ಪರಿಸರ ದಿನಾಚರಣೆಯ ಅವಶ್ಯಕತೆ ಇದೆಯೇ ?
೧೨. ಇಷ್ಟೇ ಅಲ್ಲ, ನಾರದ ಜಯಂತಿ, ಅಂದರೆ ಬ್ರಹ್ಮಾಂಡದ ಪತ್ರಕರ್ತನ ದಿನವಾಗಿದೆ.
೧೩. ಪಿತೃಪಕ್ಷ ೭ ಪೀಳಿಗೆಯವರೆಗಿನ ಪೂರ್ವಜರ ಪಿತೃಪರ್ವವಾಗಿದೆ. ನಮ್ಮನ್ನು ಸನಾತನ ಸಂಸ್ಕೃತಿಯಿಂದ ದೂರಗೊಳಿಸಿ, ಮತಾಂತರದೆಡೆಗೆ ಒಯ್ಯಲಾಗುತ್ತಿದೆ. ಈಗ ಪೃಥ್ವಿಯ ಮೇಲಿನ ಸನಾತನ ಭಾವವನ್ನು ಸ್ವೀಕರಿಸಲೇ ಬೇಕಾಗುವುದು. ಅದಕ್ಕಾಗಿ ಸನಾತನ ಉತ್ಸವದ ದಿನಗಳನ್ನು ಅವಶ್ಯ ಆಚರಿಸಿ.