ಲಸಿಕೀಕರಣದ ಭಾರತೀಯ ಇತಿಹಾಸ

ದೇಶದಲ್ಲಿ ಕೋವಿಡ್ ಲಸಿಕೀಕರಣದ ಎರಡನೇಯ ಹಂತ ಪ್ರಾರಂಭವಾಗಿದೆ. ಸ್ವತಃ ಪ್ರಧಾನಮಂತ್ರಿ ಮೋದಿಯವರು ಲಸಿಕೆಯನ್ನು ತೆಗೆದುಕೊಂಡು ಎರಡನೇಯ ಹಂತದ ಲಸಿಕೀಕರಣವನ್ನು ಪ್ರಾರಂಭಿಸಿದ್ದಾರೆ. ನಾವು ಲಸೀಕರಣವು ಆಧುನಿಕ ವೈದ್ಯರ ಕೊಡುಗೆಯಾಗಿದೆ ಎಂದು ಎಲ್ಲೆಡೆ ಓದುತ್ತೇವೆ; ಆದರೆ ಇತಿಹಾಸವನ್ನು ನೋಡಿದರೆ ಒಂದು ಬೇರೆಯೇ ಸತ್ಯ ನಮ್ಮೆದುರಿಗೆ ಬರುತ್ತದೆ. ಆಯುರ್ವೇದದಲ್ಲಿ ಸರ್ಪವಿಷದ ಚಿಕಿತ್ಸೆಗಾಗಿ ತಲೆಯ ಮೇಲೆ ಕಾಕಪಾದ (ಕಾಗೆಯ ಕಾಲಿನಂತೆ) ಛೇದವನ್ನು ಮಾಡಿ ನೇರವಾಗಿ ರಕ್ತಪ್ರವಾಹದಲ್ಲಿ ಔಷಧಿಯನ್ನು ಬಿಡಬೇಕು ಎಂಬ ವರ್ಣನೆ ಇದೆ. ಸೂಚಿಭರಣ ರಸ ಅರ್ಥಾತ್ ಸೂಜಿಯಿಂದ ಚುಚ್ಚುವ ಔಷಧಿಯ ವರ್ಣನೆಯೂ ಕೆಲವು ಆಯುರ್ವೇದ ಗ್ರಂಥಗಳಲ್ಲಿದೆ. ಕೌಟಿಲ್ಯ ಅರ್ಥಶಾಸ್ತ್ರದಲ್ಲಿ ವರ್ಣಿಸಿರುವ ‘ವಿಷಕನ್ಯೆ ಪ್ರಕರಣವೂ ಲಸಿಕೀಕರಣದ ಮೂಲಭೂತ ಸಿದ್ಧಾಂತವನ್ನೇ ಆಧರಿಸಿದೆ. ಕೇವಲ ಸಾಹಿತ್ಯಿಕ ಸಂದರ್ಭದಲ್ಲಿಯಷ್ಟೇ ಅಲ್ಲ, ಭಾರತೀಯರಿಗೆ ಪ್ರಾಚೀನ ಕಾಲದಿಂದಲೂ ಲಸಿಕೀಕರಣದ ಉಪಯೋಗವು ತಿಳಿದಿತ್ತು ಮತ್ತು ಅವರು ಅದರ ಉಪಯೋಗವನ್ನೂ ಮಾಡುತ್ತಿದ್ದರು ಎಂದು ಹೇಳುವ ಅನೇಕ ಐತಿಹಾಸಿಕ ದಾಖಲೆಗಳು ಕೂಡ ಲಭ್ಯವಿವೆ. ದೇವಿ (ಸಿಡುಬು) ರೋಗಕ್ಕೆ ಆಯುರ್ವೇದದಲ್ಲಿ ‘ಶೀತಲಾ ಎಂದು ಹೇಳಲಾಗಿದ್ದು, ಅದರ ವರ್ಣನೆಯೂ ಆಯುರ್ವೇದದಲ್ಲಿದೆ. ವಿಶೇಷವಾಗಿ ಬಂಗಾಲದಿಂದ ನೇಪಾಳದವರೆಗಿನ ಪ್ರದೇಶದಲ್ಲಿ ಶೀತಲೆ (ದೇವಿಯ)ಯ ಉಪಚಾರದ ಸಮಕಾಲೀನ ಸಂದರ್ಭಗಳೂ ಕಂಡು ಬರುತ್ತವೆ. 

ವೈದ್ಯ ಪರೀಕ್ಷಿತ ಶೇವಡೆ

ಭಾರತದಲ್ಲಿ ವರ್ಷ ೧೭೫೪ ಕ್ಕಿಂತ ಮೊದಲಿನಿಂದಲೇ ಲಸಿಕೆಯನ್ನು ನೀಡುವ ಪ್ರಕ್ರಿಯೆ ಚಾಲನೆಯಲ್ಲಿತ್ತು

೧೭೫೪ ರಲ್ಲಿ ರೆವರೆಂಡ್ ಚಾರ್ಲ್ಸ್ ಕಾಯಿಸ್ ಇವರು, ಡಿ. ಆರ್ಮ್ಸ್‌ಸ್ಟರಡ್ಯಾಮ್ ಎಂಬ ಹೆಸರಿನ ಭಾರತದಲ್ಲಿ ವಾಸಿಸುತ್ತಿದ್ದ ತಮ್ಮ ಮಿತ್ರರಿಗೆ ಈ ಕುರಿತು ವಿಚಾರಿಸಿದಾಗ ಡಿ. ಆರ್ಮ್ಸ್‌ಸ್ಟರಡ್ಯಾಮ್ ಇವರು ಬಂಗಾಳ ಪ್ರಾಂತ್ಯದ ನಿವಾಸಿಗಳು ಶುದ್ಧಗೊಳಿಸಿದ ಮುಳ್ಳು ಮತ್ತು ಕೆಲವು ಪಟ್ಟಿಕಟ್ಟುವ ಸಾಮಗ್ರಿಗಳೊಂದಿಗೆ ದೇವಿ (ಸ್ಮಾಲ್ ಪ್ವಾಕ್ಸ್) ಲಸಿಕೆಯನ್ನು ನೀಡುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದರು. ತಮ್ಮ ಪರಿಚಯದ ಒಬ್ಬ ಬ್ರಿಟಿಷ ಮಹಿಳೆಯು ತನ್ನ ಮಕ್ಕಳಿಗೆ ಈ ಲಸಿಕೆಯನ್ನು ನೀಡಿರುವ ಮಾಹಿತಿಯನ್ನು ಅವರು ನಮೂದಿಸಿದ ಬಗ್ಗೆ ರೆವರೆಂಡ್ ಚಾರ್ಲ್ಸ್ ಇವರು ತಮ್ಮ ಪುಸ್ತಕ Essai Apologetique’ ನಲ್ಲಿ ಉಲ್ಲೇಖಿಸಿದ್ದಾರೆ. ಅಮೇರಿಕಾದ ಡಾಕ್ಟರ ಜೇಮ್ಸ್ ಕರ್ಕಪ್ಯಾಟ್ರಿಕ್ ಇವರು ತಮ್ಮ ಹೆಸರಾಂತ ‘An analysis of inoculation’ ಪುಸ್ತಕದಲ್ಲಿ ಕೂಡ ಇದೇ ರೀತಿ ನಮೂದಿಸಿದ್ದಾರೆ. ಆದರೆ ಅದರ ಶ್ರೇಯಸ್ಸನ್ನು ‘ಸ್ಥಳೀಯ ಚಿಕಿತ್ಸಕರಿಗೆ ನೀಡದೇ, ಆ ಬ್ರಿಟಿಷ ಮಹಿಳೆಗೆ ನೀಡಲಾಗಿದೆ. ಅವಳು ತನ್ನ ಮಕ್ಕಳ ಮೇಲೆ ಈ ಪ್ರಯೋಗವನ್ನು ಮಾಡಲು ಒಪ್ಪಿಗೆ ನೀಡಿದ್ದಳು ಎಂದು ಹೇಳಿ ಅದರ ಶ್ರೇಯಸ್ಸನ್ನು ಪಡೆಯಲು ಡಾ. ಜೇಮ್ಸ ಮರೆತಿಲ್ಲ. ೧೯೩೧ ಇಸವಿಯ ಫೆಬ್ರುವರಿ ೧೦ ರಂದು ಬ್ರಿಟಿಷ ಡಾ. ಆಲಿವರ್ ಕಾಲ್ಟ್ ತಮ್ಮ ಪುಸ್ತಕದಲ್ಲಿ ಕನಿಷ್ಟ ೧೫೦ ವರ್ಷಗಳಿಂದ ಬಂಗಾಲ ಪ್ರಾಂತ್ಯದ ಬ್ರಾಹ್ಮಣರು ಅಲ್ಲಿಯ ನಿವಾಸಿಗರಿಗೆ ದೇವಿ (ಸಿಡುಬು ರೋಗಿನ) ಲಸಿಕೆಯನ್ನು ನೀಡುತ್ತಿದ್ದಾರೆ ಎಂದು ಬರೆದಿದ್ದಾರೆ. ಅದನ್ನು ಸ್ಥಳೀಯ ಭಾಷೆಯಲ್ಲಿ ‘ಟಿಕಾ ಎನ್ನುತ್ತಾರೆ ಮತ್ತು ಇಂದಿಗೂ ಲಸಿಕೆಗೆ ಹಿಂದಿಯಲ್ಲಿ ‘ಟಿಕಾ ಎಂದೇ ಹೇಳಲಾಗುತ್ತದೆ.

ದೇವಿ ಲಸಿಕೆಯನ್ನು ಕಂಡು ಹಿಡಿಯುವ ಮೊದಲೇ ಭಾರತದಲ್ಲಿ ಆ ಲಸಿಕೆಯನ್ನು ಕೊಡಲಾಗುತ್ತಿತ್ತು

೧೭೯೭ ರಲ್ಲಿ ಎಡ್ವರ್ಡ ಜೆನ್ನರ್ ಇವರು ದೇವಿ ರೋಗಕ್ಕೆ ಲಸಿಕೆಯನ್ನು ಕಂಡು ಹಿಡಿದರು ಮತ್ತು ಅದರಿಂದ ಕ್ರಾಂತಿಯಾಯಿತು ಎಂದು ನಾವು ವೈಜ್ಞಾನಿಕ ಸಾಹಿತ್ಯಗಳಲ್ಲಿ ಆಗಾಗ ಓದುತ್ತೇವೆ. ನಾವು ಇದನ್ನು ಒಪ್ಪಿಕೊಳ್ಳಲೇ ಬೇಕು; ಆದರೆ ಪ್ರತ್ಯಕ್ಷದಲ್ಲಿ ಮಾತ್ರ ಅದಕ್ಕಿಂತ ಮೊದಲಿನಿಂದಲೂ ಭಾರತದಲ್ಲಿ ದೇವಿ(ಸಿಡುಬು) ರೋಗಕ್ಕೆ ಲಸಿಕೀಕರಣ ಕೇವಲ ತಿಳಿದಿರುವುದಷ್ಟೇ ಅಲ್ಲ, ಅದನ್ನು ಉಪಯೋಗಿಸುತ್ತಿದ್ದ ಬಗ್ಗೆ ಮೇಲಿನ ಸಮಕಾಲೀನ ಸಂದರ್ಭಗಳು ಲಭ್ಯವಿವೆ. ಸತ್ಯವು ಕಲ್ಪನೆಗಿಂತಲೂ ಅದ್ಭುತವಾಗಿರುತ್ತದೆಯೆನ್ನಲು ಇದೊಂದು ಪುರಾವೆಯಾಗಿದೆ. ಈ ಎಲ್ಲ ಸಂದರ್ಭಗಳನ್ನು ನಮೂದಿಸುವ ಮಹತ್ವದ ಕಾರಣವೆಂದರೆ ಆಸ್ಟ್ರೇಲಿಯಾದಲ್ಲಿರುವ ಲೇಖಕಿ ಮಿತ್ರಾ ದೇಸಾಯಿಯವರು ಬರೆದಿರುವ ‘ಶೀತಲಾ ಈ ಆಂಗ್ಲ ಪುಸ್ತಕವಾಗಿದೆ. ಮುದ್ರಣದ ಮೊದಲೇ ಈ ಪುಸ್ತಕವನ್ನು ಓದುವ ಸೌಭಾಗ್ಯ ಲಭಿಸಿದ ಕೆಲವೇ ಓದುಗರಲ್ಲಿ ನಾನೂ ಒಬ್ಬನಾಗಿದ್ದೇನೆ !

ಭಾರತದ ಸಂಸ್ಕೃತಿ ಮತ್ತು ಅದರ ಪುರಾತನದ ಶೋಧದ ಬಗ್ಗೆ ಪ್ರಯತ್ನಿಸುವ ಮಿತ್ರಾ ದೇಸಾಯಿ !

ಲೇಖಕಿ ಮಿತ್ರಾ ದೇಸಾಯಿಯವರು ಮೂಲದಲ್ಲಿ ಮಹಾರಾಷ್ಟ್ರದ ಸಾತಾರಾದವರಾಗಿದ್ದಾರೆ. ಅವರು ವಿವಾಹದ ಬಳಿಕ ಕೊಲ್ಹಾಪುರದಲ್ಲಿ ವಾಸಿಸುತ್ತಿದ್ದರು. ಕಾನೂನು, ಕ್ರಿಮಿನಲ್ ಜಸ್ಟೀಸ್, ಇಂಟೀರಿಯರ್ ಡಿಝೈನ್ ಇತ್ಯಾದಿ ವಿಷಯಗಳಲ್ಲಿ ಪದವಿಗಳನ್ನು ಪಡೆದು ವಿವಿಧ ಕ್ಷೇತ್ರಗಳಲ್ಲಿ ಪ್ರಾವೀಣ್ಯ ಗಳಿಸಿರುವ ಅನೇಕ ವಿದ್ಯೆಗಳನ್ನು ಬಲ್ಲ, ಓರ್ವ ಬುದ್ಧಿವಂತ ಮಹಿಳೆ ಎಂದು ಅವರನ್ನು ಪರಿಚಯಿಸಬಹುದು. ಭಾರತೀಯ ಸಂಸ್ಕೃತಿ ಮತ್ತು ಅದರ ಪುರಾತನದ ಶೋಧದ ಅಧ್ಯಯನವನ್ನು ಮಾಡುತ್ತಾ, ಈ ಜ್ಞಾನವನ್ನು ಮುಂದಿನ ಪೀಳಿಗೆಗೆ ಹೇಗೆ ತಲುಪಿಸಬಹುದು ಎಂದು ಲೇಖಕಿಯು ವಿಚಾರ ಮಾಡಿದರು. ‘ತೇಜೋಮಯ ಭಾರತ ಹೆಸರಿನ ಜಾಲತಾಣ ಮತ್ತು ಯೂ ಟ್ಯೂಬ್ ಚಾನೆಲ್ ಇವುಗಳ ಮೂಲಕ ಲೇಖಕಿಯು ಚಿಕ್ಕ ಮತ್ತು ದೊಡ್ಡ ವಿಷಯ ಗಳನ್ನು ‘ಪಾಡ್‌ಕಾಸ್ಟ್, ವಿಡಿಯೋ ಮತ್ತು ಲೇಖನಗಳ ಮೂಲಕ ಜನರೆದುರಿಗೆ ಮಂಡಿಸಲು ಪ್ರಾರಂಭಿಸಿದರು. ಅವರು ಪ್ರಾರಂಭದಲ್ಲಿ ಚಿಕ್ಕ ಚಿಕ್ಕ ವಿಷಯಗಳನ್ನು ಹೇಳುತ್ತಾ ನೇರವಾಗಿ ‘ಸುಶ್ರುತರ ಶೋಧ ಈ ಮಾಲಿಕೆಯವರೆಗೆ ಎತ್ತರಕ್ಕೇರಿದರು. ಮಹಾಭಾರತದ ಗಾಢ ಅಭ್ಯಾಸಕರಾದ ನೀಲೇಶ ಓಕ್ ಇವರೊಂದಿಗೆ ಅಧ್ಯಯನ ಮಾಡಿ ಲೇಖಕಿಯು ಆಯುರ್ವೇದದ ಶಸ್ತ್ರಚಿಕಿತ್ಸೆಯಲ್ಲಿ ಪ್ರಾವೀಣ್ಯರಾಗಿದ್ದ ಮಹರ್ಷಿ ಸುಶ್ರುತರ ವಿಷಯದಲ್ಲಿ ೧೦ ಭಾಗಗಳ ಒಂದು ಮಾಲಿಕೆಯನ್ನು ಕಥೆಯ ರೂಪದಲ್ಲಿ ಮಂಡಿಸಿದರು. ಅತ್ಯಂತ ಕ್ಲಿಷ್ಟಕರ ವಿಷಯವನ್ನು ಅತ್ಯಂತ ಸರಳ ಶಬ್ದಗಳಲ್ಲಿ ಮತ್ತು ಅದೂ ಕಥೆಗಳ ರೂಪದಲ್ಲಿ ವಿಡಿಯೋಗಳ ಮಾಧ್ಯಮದಿಂದ ಮಂಡಿಸಿರುವುದು ಕೇಳುಗರಿಗೆ ಬಹಳ ಇಷ್ಟವಾಯಿತು. ತದನಂತರ ದೇಸಾಯಿಯವರು ವಿವಿಧ ವಿಷಯಗಳನ್ನು ಕೈಗೆತ್ತಿಕೊಂಡು ಜನರಿಗೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸವನ್ನು ಸಮಾಜಮಾಧ್ಯಮಗಳ ಮೂಲಕ ತಿಳಿಸಿಕೊಡುವ ಕಾರ್ಯವನ್ನು ಪ್ರಾರಂಭಿಸಿದರು. ವಿಶೇಷವೆಂದರೆ ಲೇಖಕಿಯು ಆಸ್ಟ್ರೇಲಿಯಾದಲ್ಲಿ ಸರಕಾರಿ ನೌಕರಿ ಮಾಡುತ್ತಾರೆ. ಅದೇ ಸಮಯದಲ್ಲಿ ‘ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ ‘ಹಿಂದೂ ರೆಸೊನಾನ್ಸ್ ಫೋರಂ, ‘ಹಿಂದೂ ಸ್ವಯಂಸೇವಕ ಸಂಘ ಕ್ಯಾನ್‌ಬೆರಾ ಹೀಗೆ ವಿವಿಧ ಸಂಘಟನೆಗಳ ಮೂಲಕ ಕೆಲಸವನ್ನು ಮಾಡುತ್ತಲೇ ಭಾರತದ ವಿರುದ್ಧ ವಿನಾಕಾರಣ ತಪ್ಪು ಮಾಹಿತಿಯನ್ನು ಹರಡುವವರನ್ನು ತರಾಟೆಗೆ ತೆಗೆದುಕೊಳ್ಳುವ ಕೆಲಸವನ್ನು ತಮ್ಮ ‘ಬ್ಲಾಗ್ ಅಥವಾ ಲೇಖನಗಳ ಮೂಲಕ ಮಾಡು ತ್ತಿರುತ್ತಾರೆ.

ಭಾರತದಲ್ಲಿ ಲಸಿಕೀಕರಣದ ತಂತ್ರಜ್ಞಾನ ಎಷ್ಟು ಪುರಾತನವಾಗಿದೆ ಎಂಬ ಮಾಹಿತಿಯನ್ನು ನೀಡುವ ‘ಶೀತಲಾ ಪುಸ್ತಕ !

ಮಿತ್ರಾ ದೇಸಾಯಿಯವರ ಹೊಸ ಪುಸ್ತಕವೆಂದರೆ ‘ಶೀತಲಾ: How India enabled vaccination’ ಈ ಪುಸ್ತಕದಲ್ಲಿ ಭಾರತದಲ್ಲಿ ಲಸಿಕೀಕರಣದ ತಂತ್ರಜ್ಞಾನ ಎಷ್ಟು ಪುರಾತನವಾಗಿದೆ ಎನ್ನುವ ಆಶ್ಚರ್ಯಚಕಿತಗೊಳಿಸುವ ಮಾಹಿತಿಯು ರೋಚಕ ಪದ್ಧತಿಯಲ್ಲಿ ಸಿಗುತ್ತದೆ. ಭಾರತದಲ್ಲಿ ಹರಡಿರುವ ಕೊರೊನಾದ ಹಿನ್ನೆಲೆಯಲ್ಲಿ ವಿದೇಶದಲ್ಲಿ ಕಲಿಯಲು ಸಾಧ್ಯವಾಗದ ಮತ್ತು ಮನೆಯಲ್ಲಿ ಸಿಲುಕಿದ ತಾರಾ ಹೆಸರಿನ ಯುವತಿಯು ತನ್ನ ‘ಆಯುರ್ವೇದತೀರ್ಥ ಅಜ್ಜರಾದ ‘ನಾನಾ ರೊಂದಿಗೆ ನಡೆಯುವ ಸಂವಾದದಿಂದ ಈ ವಿಷಯ ತೆರೆದುಕೊಳ್ಳುತ್ತಾ ಹೋಗುತ್ತದೆ. ನಮ್ಮೆಲ್ಲರ ಮನಸ್ಸಿನಲ್ಲಿ ಮೂಡುವ ಅನೇಕ ಪ್ರಶ್ನೆಗಳು ತಾರಾಳಿಗೂ ಬಂದಿವೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿ ೭೦ ವರ್ಷಗಳಾದರೂ, ನಾವು ಯಾವುದೇ ಪ್ರಗತಿಯನ್ನು ಏಕೆ ಸಾಧಿಸಲಿಲ್ಲ? ಇಷ್ಟು ದೊಡ್ಡ ಮಹಾಮಾರಿ (ಪ್ಯಾನ್‌ಡೆಮಿಕ್) ತಡೆಯಲು, ನಮ್ಮಲ್ಲಿ ಯಾವುದೇ ವ್ಯವಸ್ಥೆ ಇಲ್ಲದೇ ಇರುವಾಗ ಭಾರತ ಅಥವಾ ಆಯುರ್ವೇದವು ಲಸಿಕೀಕರಣದ ವಿಷಯದಲ್ಲಿ ನಮಗೆ ಮೊದಲೇ ತಿಳಿದಿತ್ತು ಎಂದು ತನ್ನ ಬೆನ್ನನ್ನು ತಟ್ಟಿಕೊಳ್ಳುವುದು ಎಷ್ಟು ಸರಿ? ಇಂತಹ ಒಂದಲ್ಲ ಅನೇಕ ಪ್ರಶ್ನೆಗಳಿಗೆ ನಿಧಾನವಾಗಿ ಉತ್ತರಗಳನ್ನು ನೀಡುತ್ತಾ ತಾರಾಳಿಗೆ ಸಂಶೋಧನೆಯ ಆಸಕ್ತಿಯನ್ನು ತೋರಿಸುತ್ತಾ, ಅವಳೆದುರಿಗೆ ಸಮಕಾಲೀನ ಸಂದರ್ಭಗಳನ್ನು ಮಂಡಿಸಿ ಆಯುರ್ವೇದತೀರ್ಥ ನಾನಾ ಅವಳೊಂದಿಗೆ ನಿಧಾನವಾಗಿ ಸಂವಾದ ಮಾಡುತ್ತಾರೆ. ಅದನ್ನು ಲೇಖಕಿಯು ಸರಳವಾಗಿ ಓದುವ ಭಾಷೆಯಲ್ಲಿ ಮಂಡಿಸಿದ್ದಾರೆ. ಇತಿಹಾಸದಿಂದ ದೂರವಿರದೇ ಸಂದರ್ಭಗಳ ಯೋಗ್ಯ ಮಂಡಣೆಯನ್ನು ಮಾಡುತ್ತಾ ಲೇಖಕಿಯು ಅದನ್ನು ರೋಚಕವಾಗಿ ಮಂಡಿಸಿದ್ದಾಳೆ.

ಆಯುರ್ವೇದದಲ್ಲಿನ ಲಸಿಕೀಕರಣದ ಸಂಕಲ್ಪನೆ ಪುನರುಜ್ಜೀವನವಾಗುವುದು ಅವಶ್ಯಕ !

ಹೀಗಿದ್ದರೂ, ಈ ನಿಮಿತ್ತದಿಂದ ಕೇವಲ ಇತಿಹಾಸದಲ್ಲಿಯೇ ಸಂತೋಷ ಪಡೆಯುವುದಕ್ಕಿಂತ ಆಯುರ್ವೇದದಲ್ಲಿರುವ ಲಸಿಕೀ ಕರಣದ ಸಂಕಲ್ಪನೆಯನ್ನು ಪುನರುಜ್ಜೀವನಗೊಳಿಸಬೇಕೆಂದು ಒಬ್ಬ ವೈದ್ಯನಾಗಿ ನನಗೆ ಅನಿಸುತ್ತದೆ. ಇಂದಿಗೂ ಇಂತಹ ಪ್ರಯೋಗಗಳಿಗೆ ನಮ್ಮ ದೇಶದಲ್ಲಿ ವಿವಿಧ ‘ಎಥಿಕಲ್ ಕಮಿಟಿಗಳಿಂದ (ನೈತಿಕ ಸಮಿತಿ) ಅನುಮತಿ ದೊರೆಯುವುದಿಲ್ಲ ಎನ್ನುವುದು ದುರ್ದೈವವಾಗಿದ್ದರೂ ಅದು ಸತ್ಯವಾಗಿದೆ. ಆಯುರ್ವೇದದ ಔಷಧಗಳ ಉತ್ಪಾದಕರ ಜೀವಗಳು ತುಲನೆಯಲ್ಲಿ ಚಿಕ್ಕದಾಗಿರುವುದರಿಂದ ಅವರೂ ಇದರಲ್ಲಿ ಕಡಿಮೆ ಬೀಳುತ್ತಾರೆ. ಆದರೆ ಈ ಚಿತ್ರಣವನ್ನು ಪ್ರಯತ್ನಪೂರ್ವಕವಾಗಿ ಬದಲಾಯಿಸಬೇಕಾಗುವುದು. ಹೀಗೆ ಆಗಲು ಸಮಾಜಕ್ಕೆ ಆಯುರ್ವೇದದ ಪ್ರೇರಣೆ ಮತ್ತು ಭಾರತೀಯರಿಗೆ ಜನಜಾಗೃತಿಯೆಂದು ‘ಶೀತಲಾ ದಂತಹ ಪುಸ್ತಕಗಳು ಉಪಯುಕ್ತವಾಗಲಿವೆ. ನೀಲೇಶ ಓಕ, ಮಿತ್ರಾ ದೇಸಾಯಿ ಮತ್ತು ಸಂಕೇತ ಕುಲಕರ್ಣಿ ಇಂತಹ ಅಧ್ಯಯನಕಾರರು ವಿದೇಶದಲ್ಲಿದ್ದು ಭಾರತೀಯರ ಮೇಲೆ ಬ್ರಿಟಿಷರು ಹೇರಿದ್ದ ತಪ್ಪು ಕಲ್ಪನೆಗಳನ್ನು ಬುಡಸಮೇತ ಕಿತ್ತೆಸೆಯುತ್ತಿದ್ದಾರೆ.

– ವೈದ್ಯ ಪರೀಕ್ಷಿತ ಶೇವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಿಲಿ          

(ಆಧಾರ: ತರುಣ ಭಾರತ)