‘ಪೂ. ರಾಧಾ ಅಜ್ಜಿ (ಪೂ. ರಾಧಾ ಪ್ರಭು) ಪೂ. ಭಾರ್ಗವರಾಮರಿಗೆ ವಿವಿಧ ಚಿತ್ರಗಳ ಮತ್ತು ಕಥೆಗಳ ಮೂಲಕ ಕಲಿಸುತ್ತಿರುತ್ತಾರೆ. ಪೂ. ಭಾರ್ಗವರಾಮರಿಗೆ ಒಳ್ಳೆಯ ಸಂಸ್ಕಾರವಾಗಬೇಕೆಂದು ಅವರಿಗೆ ಸಾಧನೆಯನ್ನು ಕಲಿಸುವ ಅವರ ತಳಮಳವನ್ನು ನೋಡಿದರೆ ಭಾವಜಾಗೃತಿಯಾಗುತ್ತದೆ. ಒಮ್ಮೆ ಪೂ. ರಾಧಾ ಅಜ್ಜಿ ಪೂ. ಭಾರ್ಗವರಾಮರಿಗೆ ರಾಜಣ್ಣ ಮತ್ತು ಅವರ ಎತ್ತಿನ ಬಂಡಿಯ ವಿಷಯವನ್ನು ಹೇಳಿದರು.
೧ ಅ. ಪೂ. ರಾಧಾ ಪ್ರಭು ಇವರು ಪೂ. ಭಾರ್ಗವರಾಮರಿಗೆ ರಾಮನಾಥಿ ಆಶ್ರಮದ ಶ್ರೇಷ್ಠತೆಯ ಬಗ್ಗೆ ವಿವರಿಸುವುದು
ಪೂ. ಭಾರ್ಗವರಾಮ : ಮುತ್ತಜ್ಜಿ, ಇದು (ಎತ್ತಿನ ಬಂಡಿಯ ಚಿತ್ರವನ್ನು ತೋರಿಸುತ್ತಾ) ಎಲ್ಲಿಂದ ಬಂದಿದೆ ? ಎಲ್ಲಿಗೆ ಹೋಗಲಿಕ್ಕಿದೆ ?
ಪೂ. ರಾಧಾ ಪ್ರಭು : ಅದು ಕರ್ನಾಟಕದ ಯಾವುದೋ ಒಂದು ಊರಿನಿಂದ ಬಂದಿದೆ. ಅದು ಮಂಗಳೂರಿಗೆ ಹೋಗಲಿಕ್ಕಿದೆ.
ಪೂ. ಭಾರ್ಗವರಾಮ : ಏಕೆ ? ಅಲ್ಲಿ ಏನು ವಿಶೇಷವಿದೆ ?
ಪೂ. ರಾಧಾ ಪ್ರಭು : ಮಂಗಳೂರಿನಲ್ಲಿ ಸಾಧಕರು ಸೇವೆ ಮಾಡುವ ಸ್ಥಾನವು ಭಗವಾನ ವಿಷ್ಣುವಿನ ವೈಕುಂಠದಂತೆ ಇದೆ.
ಪೂ. ರಾಧಾ ಪ್ರಭು : ಹಾಗಾದರೆ ನಿಜವಾದ ವೈಕುಂಠವೆಲ್ಲಿದೆ ?
ಪೂ. ರಾಧಾ ಪ್ರಭು : ಅದು ಗೋವಾದ ರಾಮನಾಥಿಯಲ್ಲಿದೆ. ಅಲ್ಲಿ ಭಗವಾನ ಶ್ರೀವಿಷ್ಣುವು ಮನುಷ್ಯ ಅವತಾರವನ್ನು ಧಾರಣೆ ಮಾಡಿ ಪ್ರಮುಖ ದೇವತೆಗಳೊಂದಿಗೆ ವಾಸಿಸುತ್ತಿದ್ದಾರೆ.
೧ ಆ. ಪೂ. ರಾಧಾ ಪ್ರಭು ಇವರು ಪೂ. ಭಾರ್ಗವರಾಮರಿಗೆ ಸನಾತನದ ಸಾಧಕರು ಮಾಡುತ್ತಿರುವ ಸೇವೆಯ ವಿಷಯಗಳನ್ನು ಹೇಳುವುದು
ಪೂ. ಭಾರ್ಗವರಾಮ : ಮಂಗಳೂರಿನಲ್ಲಿ ಯಾರಿದ್ದಾರೆ ?
ಪೂ. ರಾಧಾ ಪ್ರಭು : ಮಂಗಳೂರಿನಲ್ಲಿ ಸಂತರು ಮತ್ತು ಸಾಧಕರು ಇದ್ದಾರೆ. ಅಲ್ಲಿ ಓರ್ವ ಬಾಲಸಂತರಿದ್ದಾರೆ. ಈಗ ಅವರ ವಯಸ್ಸು ಎರಡೂವರೆ ವರ್ಷ. ಅವರು ಈಗಷ್ಟೇ ಮಾತನಾಡಲು ಕಲಿತ್ತಿದ್ದಾರೆ. ‘ಅವರನ್ನು ನೋಡಬೇಕು, ಅವರೊಂದಿಗೆ ಮಾತನಾಡಬೇಕು ಹಾಗೂ ಅವರ ಸೇವೆ ಮಾಡಬೇಕು, ಎಂದು ರಾಜಣ್ಣನ ಬಂಡಿಯ ಎತ್ತುಗಳು ಉತ್ಸಾಹ ಪಡುತ್ತಿವೆ. ಅದಕ್ಕಾಗಿ ರಾಜಣ್ಣ ಆ ಎತ್ತುಗಳನ್ನು ಬಂಡಿಗೆ ಕಟ್ಟಿಕೊಂಡು ಬಂದಿದ್ದಾರೆ. ಅವರ ಬಂಡಿ ಅರ್ಧ ಗಂಟೆಯಲ್ಲಿ ಇಲ್ಲಿಗೆ ಬಂದು ತಲುಪುತ್ತದೆ.
ಪೂ. ಭಾರ್ಗವರಾಮ : ಆ ಎತ್ತುಗಳು ಮಾತನಾಡುತ್ತವೆಯೇ ? ರಾಜಣ್ಣ ಸಾಧಕರಾಗಿದ್ದಾರೆಯೇ ?
ಪೂ. ರಾಧಾ ಪ್ರಭು : ರಾಜಣ್ಣ ಸಾಧಕರಲ್ಲ. ಅವರಲ್ಲಿ ಅನೇಕ ವರ್ಷಗಳಿಂದ ಎತ್ತಿನ ಬಂಡಿಯಿದೆ. ಅವರು ಮಾತನಾಡುವುದೆಲ್ಲ ಆ ಎತ್ತುಗಳಿಗೆ ತಿಳಿಯುತ್ತದೆ.
ಪೂ. ಭಾರ್ಗವರಾಮ : ರಾಜಣ್ಣನವರಿಗೆ ಇಲ್ಲಿಗೆ ಬರಲು ಪ್ರೇರಣೆಯನ್ನು ಯಾರು ಕೊಟ್ಟರು ?
ಪೂ. ರಾಧಾ ಪ್ರಭು : ಸನಾತನದ ಸಾಧಕರು ರಾಜಣ್ಣನವರ ಊರಿಗೆ ಹೋಗಿ ಪ್ರಚಾರ ಮಾಡಿದರು. ಅನೇಕ ಹಿಂದುತ್ವವಾದಿ ಸಂಘಟನೆಗಳಿವೆ. ಪಕ್ಕದ ಊರಿನ ಸಾಧಕರು ಕೂಡ ಸನಾತನದ ಕಾರ್ಯಕ್ರಮಗಳಿಗೆ ಬರುತ್ತಾರೆ.
ಪೂ. ಭಾರ್ಗವರಾಮ : ಸನಾತನ ಸಂಸ್ಥೆಯ ಕಾರ್ಯಕ್ರಮಕ್ಕೆ ರಾಜಣ್ಣ ಕೂಡ ಹೋಗಿದ್ದರೆ ?
ಪೂ. ರಾಧಾ ಪ್ರಭು : ಹೌದು. ನಮ್ಮ ಸಾಧಕರು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ರಮಗಳ ಪ್ರಚಾರ ಮಾಡುತ್ತಾರೆ. ಈಗ ರಾಜಣ್ಣನವರು ಸಹ ಸಾಧನೆ ಮಾಡಲು ಆರಂಭಿಸಿದ್ದಾರೆ. ಅವರು ಸತ್ಸಂಗಕ್ಕೆ ಮತ್ತು ತರಬೇತಿ ವರ್ಗಗಳಿಗೆ ಹೋಗುತ್ತಾರೆ. ಅಲ್ಲಿ ನೋಡಿದ್ದ ಹಾಗೂ ಕೇಳಿದ್ದನ್ನೆಲ್ಲ ಅವರು ಎತ್ತುಗಳಿಗೆ ಹೇಳುತ್ತಾರೆ.
೧ ಇ. ಪೂ. ರಾಧಾ ಪ್ರಭು ಇವರು ಪೂ. ಭಾರ್ಗವರಾಮರಿಗೆ ‘ಎತ್ತು (ನಂದಿ) ಇದು ಶಂಕರನ ವಾಹನವಾಗಿದೆ, ಎಂದು ಹೇಳಿ ಅವರ ಮನಸ್ಸಿನಲ್ಲಿ ಪ್ರಾಣಿಗಳ ವಿಷಯದಲ್ಲಿ ಗೌರವಭಾವವನ್ನು ನಿರ್ಮಾಣ ಮಾಡುವುದು
ಪೂ. ಭಾರ್ಗವರಾಮ : ಎತ್ತುಗಳಿಗೆ ಅವೆಲ್ಲವೂ ತಿಳಿಯುತ್ತದೆಯೇ ?
ಪೂ. ರಾಧಾ ಪ್ರಭು : ತಿಳಿಯುತ್ತದೆ. ಎತ್ತು ಭಗವಾನ ಶಂಕರನ ವಾಹನವಾಗಿದೆ. ಭಾರತದಲ್ಲಿ ಭಗವಾನ ವಿಷ್ಣುವಿನ ಹಿಂದೂ ರಾಷ್ಟ್ರ (ರಾಮರಾಜ್ಯ) ವನ್ನು ಸ್ಥಾಪನೆ ಮಾಡುವ ಶ್ರೇಷ್ಠ ಕಾರ್ಯದಲ್ಲಿ ಭಗವಾನ ಶಿವನ ಅನುಗ್ರಹವಿದೆ. ಸನಾತನ ಸಂಸ್ಥೆಯಲ್ಲಿ ವಿಷ್ಣುಭಕ್ತರು, ಶಿವಭಕ್ತರು ಮಾತ್ರವಲ್ಲ, ಅನೇಕ ದೇವತೆಗಳನ್ನು ಪೂಜಿಸುವ ಸಾಧಕರಿದ್ದಾರೆ.
ಪೂ. ಭಾರ್ಗವರಾಮ : ಅಲ್ಲಿ ನೋಡಿ ಬಂಡಿ ಬರುತ್ತಿದೆ. (ಪೂ. ಭಾರ್ಗವರಾಮ ಆನಂದದಿಂದ ಕುಣಿಯುತ್ತಾರೆ.)
೨ ರಾಜಣ್ಣ ಮತ್ತು ಅವರ ಎತ್ತಿನ ಬಂಡಿ ಮಂಗಳೂರಿಗೆ ಬರುತ್ತದೆ
ರಾಜಣ್ಣ ಮತ್ತು ಅವರ ಎತ್ತಿನ ಬಂಡಿ ಮಂಗಳೂರಿಗೆ ಬಂದಾಗ ಪೂ. ಭಾರ್ಗವರಾಮರು ಇತರ ಸಾಧಕರ ಸಹಾಯದಿಂದ ಪ್ರವೇಶದ್ವಾರವನ್ನು ತೆರೆದರು. ಎಲ್ಲರೂ ಅವರನ್ನು ಸ್ವಾಗತಿಸಿದರು. ರಾಜಣ್ಣ ಬಂಡಿಯಿಂದ ಇಳಿದು ಸಂತರಿಗೆ ಮತ್ತು ಸಾಧಕರಿಗೆ ನಮಸ್ಕಾರ ಮಾಡಿದರು. ಎತ್ತುಗಳು ಮುಂದಿನ ಕಾಲುಗಳನ್ನು ಮಡಚಿ ತಲೆತಗ್ಗಿಸಿ ನಮಸ್ಕಾರ ಮಾಡಿದವು. ಅದನ್ನು ನೋಡಿ ಅಲ್ಲಿದ್ದ ಸಂತರು ಮತ್ತು ಸಾಧಕರ ಭಾವಜಾಗೃತಿಯಾಯಿತು. ಅವರು ಪರಸ್ಪರರ ಪರಿಚಯ ಮಾಡಿಸಿಕೊಂಡರು.
೨ ಅ. ರಾಜಣ್ಣ ಸಂತ ಜ್ಞಾನೇಶ್ವರರ ಕಾಲದಲ್ಲಿ ಎತ್ತುಗಳು ಅವರಿಗೆ ಮಾಡಿದ ಸಹಾಯದ ವಿಷಯವನ್ನು ಹೇಳಿ ಸಾಧಕರಲ್ಲಿ ಸೇವೆಯನ್ನು ಬೇಡುತ್ತಾರೆ
ರಾಜಣ್ಣ : ಸಂತಜ್ಞಾನೇಶ್ವರ, ಅವರ ಇಬ್ಬರು ಸಹೋದರರು ಮತ್ತು ಸಹೋದರಿಯನ್ನು ಆಳಂದಿಯ ಪಂಡಿತರು ಹೀನ ಜಾತಿಯವರೆಂದು ಹೀಯಾಳಿಸಿದ್ದರಿಂದ ದಾರಿ ಕಾಣದೆ ಎಲ್ಲಿಗೋ ಹೋಗುತ್ತಿರುವಾಗ ಭಗವಂತನು ಆ ಬಾಲಕರನ್ನು ನಮ್ಮ ಬಂಡಿಯಲ್ಲಿ ಕೂರಿಸಿ ನಮ್ಮ ಮತ್ತು ಊರಿನವರ ಸಹಾಯದಿಂದ ಆಶ್ರಯವನ್ನು ನೀಡಿದರು. ಅವರು ಪ್ರತಿದಿನ ಸತ್ಸಂಗ ತೆಗೆದುಕೊಳ್ಳುತ್ತಿದ್ದರು. ಅವರು ಭಗವದ್ಗೀತೆಯ ಸಾರವನ್ನು ಊರಿನ ಜನರಿಗೆ ಅರ್ಥವಾಗುವ ಹಾಗೆ ಸುಲಭ ಭಾಷೆಯಲ್ಲಿ ಹೇಳುತ್ತಿದ್ದರು. ನಾನು ಪ್ರತಿದಿನ ಈ ಎತ್ತುಗಳಿಗೆ ಆ ವಿಷಯವನ್ನು ಹೇಳುತ್ತಿದ್ದೆನು. ಸಾಧಕರೆ, ತಾವು ದಯವಿಟ್ಟು ನಮಗೆ ಸೇವೆಯನ್ನು ಕೊಡಬೇಕು.
ಸಾಧಕರು : ಆಗಲಿ, ನಾವು ನಿಮಗೆ ಸೇವೆಯನ್ನು ಕೊಡುವೆವು.
೨ ಆ. ರಾಜಣ್ಣ ಮುಂಬರುವ ಆಪತ್ಕಾಲದಲ್ಲಿ ಎತ್ತುಗಳು ಮಾಡುವ ಸೇವೆಯ ವಿಷಯವನ್ನು ಹೇಳುತ್ತಾರೆ.
ರಾಜಣ್ಣ : ಈ ಎತ್ತುಗಳ ಸೇವೆ ಕೂಡ ಅಪ್ರತಿಮವಾಗಿದೆ. ಭಾರವನ್ನು ಎತ್ತುವುದು, ಸಾಹಿತ್ಯಗಳನ್ನು ಹಾಗೂ ಜನರನ್ನು ಸಾಗಿಸುವುದು, ಹಸಿದವರಿಗೆ ದೂರದಿಂದ ಆಹಾರವನ್ನು ತಂದುಕೊಡುವುದು ಇತ್ಯಾದಿ ಸೇವೆಗಳನ್ನು ಈ ಎತ್ತುಗಳು ಮಾಡುತ್ತವೆ. ‘ಆಪತ್ಕಾಲ ಯಾವಾಗ ಮತ್ತು ಹೇಗೆ ಬರುತ್ತದೆ ?, ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆಗ ವಿದ್ಯುತ್, ನೀರು, ಪೆಟ್ರೋಲ್, ಡಿಸೇಲ್ ಇರುವುದಿಲ್ಲ, ವೈದ್ಯರು ಇರುವುದಿಲ್ಲ, ಔಷಧಗಳಿರುವುದಿಲ್ಲ, ಅನ್ನಧಾನ್ಯಗಳ ಕೊರತೆಯುಂಟಾಗಬಹುದು, ಆಗ ಈ ಎತ್ತುಗಳು ತುಂಬಾ ಸಹಾಯ ಮಾಡುವವು. ನಮ್ಮ ಊರಿನಲ್ಲಿ ಹಲವಾರು ಎತ್ತಿನ ಬಂಡಿಗಳಿವೆ. ಅವಶ್ಯಕತೆಯಿದ್ದರೆ ನಾವು ಅವರನ್ನು ಸಹಾಯಕ್ಕಾಗಿ ಕರೆಯೋಣ. ‘ಶ್ರೀರಾಮನಿಗೆ ಸೀತೆಯ ಹುಡುಕಾಟದಲ್ಲಿ ಗರುಡ, ವಾನರ, ಅಳಿಲು ಇತ್ಯಾದಿ ಪ್ರಾಣಿ ಮತ್ತು ಪಕ್ಷಿಗಳು ಸಹಾಯ ಮಾಡಿದವು, ಎಂಬುದು ನಮಗೆ ಗೊತ್ತಿದೆ. ಅವೆಲ್ಲವುಗಳ ಸಹಾಯದಿಂದ ಮತ್ತು ಗುರುಕೃಪೆಯಿಂದ ಸಾಧಕರನ್ನು ಅನೇಕ ಪ್ರಕಾರದಲ್ಲಿ ರಕ್ಷಣೆ ಮಾಡಲು ಎಲ್ಲ ನಂದಿಗಳಿಗೆ ಭಗವಾನ ಶಂಕರನು ಆಶೀರ್ವಾದ ನೀಡಿದ್ದಾನೆ.
ಸಾಧಕರು : ಈ ನಂದಿಗಳಿಗೆ ಎಲ್ಲಿ ಆಶ್ರಯ ನೀಡಬೇಕು ? ಯಾವಾಗ ಆಹಾರ ಕೊಡಬೇಕು ?
೨ ಇ. ರಾಜಣ್ಣ ಇವರು ‘ಎತ್ತುಗಳು ಸಂಪತ್ಕಾಲ ಮತ್ತು ಆಪತ್ಕಾಲದಲ್ಲಿ ಗುರುಗಳು ಮತ್ತು ಸ್ವಾಮಿಯವರ ಸೇವೆ ಮಾಡಬಹುದು ಎಂದು ಹೇಳಿದರು
ರಾಜಣ್ಣ : ಈ ನಂದಿ ಶಿವನ ಪರಿವಾರದ್ದಾಗಿರುವುದರಿಂದ ನಮಗೆ ಪಾಲನೆ ಮಾಡಲು ಏನೂ ತೊಂದರೆಯಾಗಲಿಕ್ಕಿಲ್ಲ. ಸಂಪತ್ಕಾಲ ಮತ್ತು ಆಪತ್ಕಾಲದಲ್ಲಿ ಎತ್ತುವು ಗುರು ಮತ್ತು ಸ್ವಾಮಿಗಳ ಸೇವೆ ಮಾಡಿ ಅನುಭೂತಿ ಕೊಡುವುದು. ಭೂಕಂಪ ಆದರೆ ದೊಡ್ಡ-ದೊಡ್ಡ ಬಂಡೆಗಳು ಬಿದ್ದು ಪ್ರಯಾಣದಲ್ಲಿ ಅಡಚಣೆಯುಂಟಾಗುವುದು. ಆ ಸಮಯದಲ್ಲಿ ಈ ಎತ್ತುಗಳು ಕಲ್ಲುಗಳನ್ನು ಎತ್ತಿ ಬದಿಗೆ ಹಾಕುತ್ತವೆ.
ಪೂ. ಭಾರ್ಗವರಾಮ : ಎತ್ತುಗಳಿಗೆ ಕೈಗಳಿಲ್ಲವೇ ?
ರಾಜಣ್ಣ : ಎತ್ತುಗಳಿಗೆ ಗಟ್ಟಿಮುಟ್ಟಾದ ಕೋಡುಗಳಿವೆ. ಅವುಗಳ ಸಹಾಯದಿಂದ ಅವುಗಳು ಕಲ್ಲುಗಳನ್ನು ಎತ್ತಿ ಬದಿಗೆ ಹಾಕುತ್ತವೆ. ಮಾನವನಿಗೆ ಆಗದ ಕೆಲವು ಕೆಲಸಗಳನ್ನು ಎತ್ತುಗಳು ಮಾಡುತ್ತವೆ. (ರಾಜಣ್ಣ ಸಾಧಕರ ಜೊತೆಗೆ ತುಂಬಾ ಸೇವೆ ಮಾಡಿದರು. ಎತ್ತುಗಳನ್ನು ತೋಟದಲ್ಲಿ ತೆಂಗಿನ ಮರಕ್ಕೆ ಕಟ್ಟಿ ಹಾಕಿ ನೀರು ಮತ್ತು ತಿನ್ನಲು ಕೊಟ್ಟು ಸನ್ಮಾನ ಮಾಡಿದರು. ‘ಭಗವಾನ ಶಿವನು ನಂದಿಯನ್ನು ಕಳಿಸಿದ್ದಾನೆ, ಎನ್ನುವ ಭಾವದಿಂದ ಎಲ್ಲ ಸಾಧಕರು ಅವುಗಳಿಗೆ ಪೂಜೆ ಮತ್ತು ಸತ್ಕಾರ ಮಾಡಿ ಧನ್ಯತೆಯ ಭಾವ ಅನುಭವಿಸಿದರು.)
ಇಂತಹ ಸಂತರ ಸಹವಾಸದಲ್ಲಿ ಪೂ. ಭಾರ್ಗವರಾಮ ಇರುವಾಗ ನನಗೆ ಅವರ ಭವಿಷ್ಯದ ಚಿಂತೆ ಮಾಡುವ ಅವಶ್ಯಕಯೇ ಇಲ್ಲ, ಎನ್ನುವ ವಿಚಾರದಿಂದ ನನಗೆ ಪರಾತ್ಪರ ಗುರು ಡಾಕ್ಟರ್ ಆಠವಲೆ ಮತ್ತು ಪೂ. ಅಜ್ಜಿಯವರ ಬಗ್ಗೆ ಕೃತಜ್ಞತೆಯೆನಿಸುತ್ತದೆ. ‘ಮಕ್ಕಳಿಗೆ ಮುಂಬರುವ ಈ ಆಪತ್ಕಾಲದ ವಿಷಯದಲ್ಲಿ ಹೇಳಲು ಇದು ಒಳ್ಳೆಯ ವಿಷಯವಾಗಿದೆ, ಎಂದು ಅನಿಸಿತು.
– ಸೌ. ಭವಾನಿ ಪ್ರಭು, ಮಂಗಳೂರು, ಕರ್ನಾಟಕ, (೨೭.೧೧.೨೦೧೯)