ಫೀಜಿಯೋಥೆರಪಿಸ್ಟ್ (ಮಸಾಜ್ ಮುಂತಾದ ಉಪಾಯಗಳನ್ನು ಮಾಡುವವರು) ಮತ್ತು ರೋಗಿಗಳ ಸಂದರ್ಭದಲ್ಲಿನ ಅಂಶಗಳು

ಪರಾತ್ಪರ ಗುರು ಡಾ. ಆಠವಲೆ

. ‘ಯಾವುದಾದರೊಬ್ಬ ಫೀಜಿಯೋಥೆರಪಿಸ್ಟ್‌ನ ಸ್ವಭಾವ ಯಾವುದಾದರೊಬ್ಬ ರೋಗಿಯ ಸ್ವಭಾವಕ್ಕೆ ಹೊಂದಿಕೊಳ್ಳದಿದ್ದರೆ ಫೀಜಿಯೋಥೆರಪಿಸ್ಟನು ಆ ರೋಗಿಗೆ ಉಪಚಾರ ಮಾಡಬಾರದು. ರೋಗಿಯ ಮೇಲೆ ಅವನಿಂದ ನಕಾರಾತ್ಮಕ ಪರಿಣಾಮವಾಗಬಹುದು. ಫೀಜಿಯೋಥೆರಪಿಸ್ಟರಿಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡಲು ಹೇಳಬೇಕು.

. ಇಬ್ಬರು ಫೀಜಿಯೋಥೆರಪಿಸ್ಟ್‌ರ ಸ್ವಭಾವಗಳು ಪರಸ್ಪರ ಹೊಂದಿಕೊಳ್ಳದಿದ್ದರೆ ಅವರಿಗೆ ಒಟ್ಟಿಗೆ ಸೇರಿ ರೋಗಿಯ ಮೇಲೆ ಉಪಚಾರ ಮಾಡಲು ಕೊಡಬಾರದು; ಏಕೆಂದರೆ ಅವರ ಮೂಲಕ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗಿ ರೋಗಿಗೆ ತೊಂದರೆಯಾಗಬಹುದು.

– (ಪರಾತ್ಪರ ಗುರು) ಡಾ. ಆಠವಲೆ