ಭಾರತೀಯ ಸಂಸ್ಕೃತಿಗನುಸಾರ ಯುಗಾದಿಯಂದು ಸಾತ್ತ್ವಿಕ ವಾತಾವರಣದಲ್ಲಿ ಬ್ರಹ್ಮಧ್ವಜದ ಪೂಜೆಯನ್ನು ಮಾಡಿ ಹೊಸವರ್ಷವನ್ನು ಸ್ವಾಗತಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕ !

ವೈದ್ಯೆ (ಸೌ.) ನಂದಿನಿ ಸಾಮಂತ

‘ಭಾರತೀಯ ಪರಂಪರೆಗನುಸಾರ ಚೈತ್ರ ಶುಕ್ಲಪಕ್ಷ ಪಾಡ್ಯ, ಅಂದರೆ ಯುಗಾದಿಯು ಹೊಸ ವರ್ಷದ ಆರಂಭವಾಗಿದೆ ! ಈ ದಿನ ಪ್ರಾತಃಕಾಲ ಅಭ್ಯಂಗಸ್ನಾನ ಮಾಡಿ, ಬ್ರಹ್ಮಧ್ವಜದ ಪೂಜೆಯನ್ನು ಮಾಡಿ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ. ಕಳೆದ ಕೆಲವು ದಶಕಗಳಿಂದ ಪಾಶ್ಚಾತ್ಯ ಸಂಸ್ಕೃತಿಗನುಸಾರ ೩೧ ಡಿಸೆಂಬರ್‌ನ ಮಧ್ಯರಾತ್ರಿ ಪಾಶ್ಚಾತ್ಯ ಪದ್ಧತಿಯ ಭೋಜನ, ಮದ್ಯಪಾನ, ನೃತ್ಯ ಇಂತಹ ವಾತಾವರಣದಲ್ಲಿ ಹೊಸವರ್ಷವನ್ನು ಆರಂಭಿಸುವ ರೂಢಿಯಾಗಿದೆ. ಇವೆರಡೂ ಪದ್ಧತಿಗಳಿಂದ ಮಾಡಿದ ಹೊಸವರ್ಷದ ಸ್ವಾಗತದಲ್ಲಿ ಪಾಲ್ಗೊಂಡ ವ್ಯಕ್ತಿಗಳ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಏನು ಪರಿಣಾಮವಾಗುತ್ತದೆ, ಎಂಬುದನ್ನು ತಿಳಿದುಕೊಳ್ಳಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಎಂಬ ಆಧುನಿಕ ವೈಜ್ಞಾನಿಕ ಯಂತ್ರ, ಹಾಗೆಯೇ ಸೂಕ್ಷ್ಮ ಪರೀಕ್ಷಣೆಯ ಮೂಲಕ ಅಧ್ಯಯನವನ್ನು ಮಾಡಲಾಯಿತು. ಈ ಅಧ್ಯಯನಗಳ ನಿಷ್ಕರ್ಷವನ್ನು ಸಾರಾಂಶರೂಪದಲ್ಲಿ ಇಲ್ಲಿ ನೀಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೧. ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಈ ಯಂತ್ರದ ಮೂಲಕ ಮಾಡಿದ ಅಧ್ಯಯನ

ಮಾಜಿ ಅಣು ವಿಜ್ಞಾನಿ ಡಾ. ಮನ್ನಮ್ ಮೂರ್ತಿ ಇವರು ಈ ಉಪಕರಣವನ್ನು ತಯಾರಿಸಿದ್ದಾರೆ. ಈ ಉಪಕರಣದ ಮೂಲಕ ಯಾವುದಾದರೂ ವಸ್ತು, ವಾಸ್ತು, ವನಸ್ಪತಿ, ಪ್ರಾಣಿ ಅಥವಾ ಮನುಷ್ಯ ಇವುಗಳಲ್ಲಿನ ಸೂಕ್ಷ್ಮ ಸಕಾರಾತ್ಮಕ ಊರ್ಜೆಯ ಮತ್ತು ಸೂಕ್ಷ್ಮ ನಕಾರಾತ್ಮಕ ಊರ್ಜೆಯ ಪ್ರಭಾವಲಯ, ಹಾಗೆಯೇ ಅದರ ಒಟ್ಟು ಪ್ರಭಾವಲಯವನ್ನು ಅಳೆಯಬಹುದು. ನಕಾರಾತ್ಮಕ ಊರ್ಜೆ ಎರಡು ವಿಧದ್ದಾಗಿರುತ್ತದೆ. ಅವುಗಳ ಪೈಕಿ ‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯು ಆ ಘಟಕದ ಸುತ್ತಲಿನ ನಕಾರಾತ್ಮಕ ಊರ್ಜೆಯಾಗಿರುತ್ತದೆ, ಮತ್ತು ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಯು ಆ ಘಟಕದಲ್ಲಿ ನಕಾರಾತ್ಮಕ ಸ್ಪಂದನ ದರ್ಶಿಸುತ್ತದೆ.

ಸರ್ವಸಾಮಾನ್ಯ ವ್ಯಕ್ತಿ ಅಥವಾ ವಸ್ತುಗಳಲ್ಲಿ ನಕಾರಾತ್ಮಕ ಊರ್ಜೆ ಇರಬಹುದು; ಆದರೆ ಸಕಾರಾತ್ಮಕ ಊರ್ಜೆ ಇದ್ದೇ ಇರುತ್ತದೆ ಎಂದೇನಿಲ್ಲ. ಕಳೆದ ೫ ವರ್ಷಗಳಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಯು.ಎ.ಎಸ್.’ ಉಪಕರಣದ ಮೂಲಕ ವ್ಯಾಪಕ ಸಂಶೋಧನೆಯನ್ನು ಮಾಡಲಾಗಿದೆ. ೨೦೧೪ ರಿಂದ ೨೦೧೯ ರ ಕಾಲಾವಧಿಯಲ್ಲಿ ೧೦ ಸಾವಿರಗಳಿಗಿಂತ ಹೆಚ್ಚು ಸಜೀವ ಮತ್ತು ನಿರ್ಜೀವ ಘಟಕಗಳ ಅಳತೆಗಳ ನೋಂದಣಿಗಳನ್ನು (ಪರೀಕ್ಷಣೆಗಳನ್ನು) ಮಾಡಲಾಗಿದೆ.

೧ ಅ. ಪಾಶ್ಚಾತ್ಯ ಪದ್ಧತಿಯಿಂದ ೩೧ ಡಿಸೆಂಬರ್ ರಂದು ಮಧ್ಯರಾತ್ರಿ ಆಚರಿಸಲಾದ ಹೊಸವರ್ಷಾರಂಭದ ಪರಿಣಾಮದ ಪರೀಕ್ಷಣೆ : ೩೧ ಡಿಸೆಂಬರ್ ೨೦೧೮ ರ ರಾತ್ರಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ದೇಶ-ವಿದೇಶಗಳ ೧೨ ಜನ ಸಾಧಕರು ಪಾಶ್ಚಾತ್ಯ ಸಂಸ್ಕೃತಿಗನುನಾರ ಕೇಶಾಲಂಕಾರ (ಹೇರ್‌ಸ್ಟೈಲ್), ಮೆಕಪ್ ಮತ್ತು ಉಡುಪುಗಳನ್ನು ಧರಿಸಿ ಗೋವಾದ ಒಂದು ಪ್ರಸಿದ್ಧ ಹೊಟೇಲ್‌ನಲ್ಲಿ ಆಯೋಜಿಸಲಾದ ‘ನ್ಯೂ ಇಯರ್ ಪಾರ್ಟಿ’ಯಲ್ಲಿ ಪಾಲ್ಗೊಂಡರು. ಈ ಎಲ್ಲ ಸಾಧಕರು ಅಲ್ಲಿ ೫ ಗಂಟೆಗಳ ಕಾಲ ಇದ್ದರು. ೩೧.೧೨.೨೦೧೮ ರಂದು ರಾತ್ರಿ ಪಾರ್ಟಿಗೆ ಹೋಗುವ ಮೊದಲು, ಹಾಗೆಯೇ ೧.೧.೨೦೧೯ ಈ ದಿನ ಪ್ರಾತಃಕಾಲ ಪಾರ್ಟಿಯಿಂದ ಹಿಂದಿರುಗಿದ ನಂತರ ಅವರೆಲ್ಲರ ‘ಯು.ಎ.ಎಸ್.’ ಉಪಕರಣದ ಮೂಲಕ ಮಾಡಿದ ಅಳತೆಗಳ ನೋಂದಣಿಯನ್ನು ಮಾಡಲಾಯಿತು.

೧ ಆ. ಭಾರತೀಯ ಪದ್ಧತಿಯಿಂದ ಯುಗಾದಿಯಂದು ಬ್ರಹ್ಮಧ್ವಜದ ಪೂಜೆಯಿಂದ ಮಾಡಿದ ಹೊಸವರ್ಷಾರಂಭದ ಪರಿಣಾಮದ ಪರೀಕ್ಷಣೆ : ೬.೪.೨೦೧೯ ಈ ದಿನದಂದು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ವಿಧಿವತ್ತಾಗಿ ಬ್ರಹ್ಮಧ್ವಜದ ಪೂಜೆಯನ್ನು ಮಾಡಿ ಹೊಸವರ್ಷದ ಸ್ವಾಗತವನ್ನು ಮಾಡಲಾಯಿತು. ಈ ಪೂಜೆಗೆ ಅಂಶ ಕ್ರ. ‘೧ ಅ.’ ನಲ್ಲಿನ ೧೨ ರ ಪೈಕಿ ೧೦ ಜನ ಸಾಧಕರು ಉಪಸ್ಥಿತರಿದ್ದರು. ಆ ಸಮಯದಲ್ಲಿ ಹಿಂದಿನ ಪರೀಕ್ಷಣೆಯ ಇಬ್ಬರು ಸಾಧಕರು ವಿದೇಶದಲ್ಲಿರುವುದರಿಂದ ಅವರಿಗೆ ಈ ಪರೀಕ್ಷಣೆಯಲ್ಲಿ ಉಪಸ್ಥಿತರಿರಲು ಸಾಧ್ಯವಾಗಲಿಲ್ಲ. ಬ್ರಹ್ಮಧ್ವಜದ ಪೂಜೆಯ ಮೊದಲು ಮತ್ತು ಪೂಜೆಯ ನಂತರ ಅವರೆಲ್ಲರ ‘ಯು.ಎ.ಎಸ್.’ ಉಪಕರಣದ ಮೂಲಕ ಮಾಡಿದ ಅಳತೆಗಳ ನೋಂದಣಿಗಳನ್ನು ಮಾಡಲಾಯಿತು.

೧ ಇ. ಪಾಶ್ಚಾತ್ಯ ಮತ್ತು ಭಾರತೀಯ ಪದ್ಧತಿಯಿಂದ ಮಾಡಿದ ಹೊಸವರ್ಷಾರಂಭದ ಪರಿಣಾಮಗಳ ತುಲನೆ : ಎರಡೂ ಪರೀಕ್ಷಣೆಗಳಲ್ಲಿ ಮಾಡಿದ ಅಳತೆಗಳ ನೋಂದಣಿಗಳ ವಿಶ್ಲೇಷಣೆಯನ್ನು ಮಾಡಿದಾಗ ಮುಂದಿನ ಅಂಶಗಳು ಸ್ಪಷ್ಟವಾಗಿ ಗಮನಕ್ಕೆ ಬಂದವು.

೧ ಇ ೧. ಪಾಶ್ಚಾತ್ಯ ಪದ್ಧತಿಯಿಂದ ಆಚರಿಸಲಾದ ಹೊಸ ವರ್ಷಾರಂಭದ ಪರಿಣಾಮ

ಅ. ಸಾಧಕರಲ್ಲಿನ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ಎರಡೂ ಪ್ರಕಾರದ ನಕಾರಾತ್ಮಕ ಊರ್ಜೆಗಳಲ್ಲಿ ಕಾರ್ಯಕ್ರಮದ ಮೊದಲಿನ ತುಲನೆಯಲ್ಲಿ ಕಾರ್ಯಕ್ರಮದ ನಂತರ ಸರಾಸರಿ ಮೂರು ಪಟ್ಟುಗಳಿಗಿಂತ ಅಧಿಕ ಹೆಚ್ಚಳವಾಯಿತು.

. ಸಾಧಕರಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಕಾರ್ಯಕ್ರಮದ ಮೊದಲಿನ ತುಲನೆಯಲ್ಲಿ ಕಾರ್ಯಕ್ರಮದ ನಂತರ ಸರಾಸರಿ ಅರ್ಧಕ್ಕಿಂತ ಹೆಚ್ಚು  ಕಡಿಮೆಯಾಯಿತು.

೧ ಇ ೨. ಭಾರತೀಯ ಪದ್ಧತಿಯಿಂದ ಆಚರಿಸಿದ ಹೊಸ ವರ್ಷಾರಂಭದ ಪರಿಣಾಮ

ಅ. ಸಾಧಕರಲ್ಲಿ ಎರಡೂ ಪ್ರಕಾರದ ನಕಾರಾತ್ಮಕ ಊರ್ಜೆಗಳಲ್ಲಿ ಕಾರ್ಯಕ್ರಮದ ಮೊದಲಿನ ತುಲನೆಯಲ್ಲಿ ಕಾರ್ಯಕ್ರಮದ ನಂತರ ಸರಾಸರಿ ಅರ್ಧಕ್ಕಿಂತ ಹೆಚ್ಚು ಕಡಿಮೆ ಆಯಿತು.

. ಸಾಧಕರಲ್ಲಿ ಸಕಾರಾತ್ಮಕ ಊರ್ಜೆಯಲ್ಲಿ ಕಾರ್ಯಕ್ರಮದ ಮೊದಲಿನ ತುಲನೆಯಲ್ಲಿ ಕಾರ್ಯಕ್ರಮದ ನಂತರ ಸರಾಸರಿ ಒಂದೂವರೆ ಪಟ್ಟುಗಳಷ್ಟು ಹೆಚ್ಚಳವಾಯಿತು.

೨. ಪಾಶ್ಚಾತ್ಯ ಮತ್ತು ಭಾರತೀಯ ಪದ್ಧತಿಯಿಂದ ಮಾಡಿದ ಹೊಸವರ್ಷಾರಂಭದ ಸ್ವಾಗತದ ಸಮಯದಲ್ಲಿ ಪಾಲ್ಗೊಂಡ ಸಾಧಕರಿಗೆ ಅರಿವಾದ ತುಲನಾತ್ಮಕ ಅಂಶಗಳು

. ೩೧ ಡಿಸೆಂಬರ್ ೨೦೧೮ ರ ಹಿಂದಿನ ರಾತ್ರಿ ನಾನು ಬಹಳಷ್ಟು ಅಸ್ಥಿರಳಾಗಿದ್ದೆ. ನನ್ನ ಮನಸ್ಸಿನಲ್ಲಿ ನಿರಂತರವಾಗಿ ಮರುದಿನದ ಪಾರ್ಟಿಯಲ್ಲಿನ ಹಾಡುಗಳು, ಕುಣಿತ ಇತ್ಯಾದಿ ವಿಚಾರಗಳೇ ಬರುತ್ತಿದ್ದವು. ಇದಕ್ಕೆ ವಿರುದ್ಧ ಯುಗಾದಿಯ ಹಿಂದಿನ ರಾತ್ರಿ ಮನಸ್ಸು ಶಾಂತ ಮತ್ತು ಆನಂದದಲ್ಲಿತ್ತು. ೩೧ ಡಿಸೆಂಬರ್‌ನ ಪಾರ್ಟಿಯ ಮರುದಿನ ನನಗೆ ಬಹಳ ತೊಂದರೆಯಾಯಿತು. ನನ್ನ ಮನಸ್ಸು ಯಾವುದರಲ್ಲಿಯೂ ಸ್ಥಿರವಾಗುತ್ತಿರಲಿಲ್ಲ. ನನ್ನಲ್ಲಿ ಶಕ್ತಿಯೇ ಇಲ್ಲದಂತಾಗಿತ್ತು. ಯುಗಾದಿಯ ಮರುದಿನ ನನಗೆ ಹುರುಪು ಮತ್ತು ಉತ್ಸಾಹದ ಅರಿವಾಗುತ್ತಿತ್ತು. ನಾನು ಶಾಂತ ಮತ್ತು ಸ್ಥಿರಳಾಗಿದ್ದೆನು. ನನಗೆ ಅನೇಕ ಸೇವೆಗಳನ್ನು ಉತ್ಸಾಹದಿಂದ ಪೂರ್ಣಗೊಳಿಸಲು ಸಾಧ್ಯವಾಯಿತು.

. ಹೊಸವರ್ಷದ ಪಾರ್ಟಿಯಲ್ಲಿ ಮೇಲ್ನೋಟಕ್ಕೆ ನಾನು ಬಹಳಷ್ಟು ಮೋಜು-ಮಜಾ ಮಾಡುವುದು ಕಾಣಿಸುತ್ತಿದ್ದರೂ, ನನ್ನ ಮೇಲೆ ಸೂಕ್ಷ್ಮದ ತೊಂದರೆದಾಯಕ ಶಕ್ತಿಯ ಆವರಣ ಬರುವುದು ಸ್ಪಷ್ಟವಾಗಿ ಅರಿವಾಗುತ್ತಿತ್ತು. ನನ್ನಲ್ಲಿ ಸಕಾರಾತ್ಮಕ ಊರ್ಜೆಯು ಕಡಿಮೆಯಾಗುತ್ತಿರುವುದರ ಅರಿವಾಯಿತು. ಅಲ್ಲಿನ ಎಲ್ಲ ವಾತಾವರಣವು ಬಹಿರ್ಮುಖ ಮತ್ತು ಅಹಂನ್ನು ಹೆಚ್ಚಿಸುವುದಾಗಿತ್ತು. ಅಲ್ಲಿನ ವ್ಯಕ್ತಿಗಳಿಂದ ಬಹಳಷ್ಟು ಪ್ರಮಾಣದಲ್ಲಿ ಲೈಂಗಿಕ ಸ್ಪಂದನಗಳು ಪ್ರಕ್ಷೇಪಿತವಾಗುವುದು ಅರಿವಾಯಿತು. ತದ್ವಿರುದ್ಧ ಯುಗಾದಿಯ ಕಾರ್ಯಕ್ರಮದಲ್ಲಿ ವಾತಾವರಣದಲ್ಲಿ ಸಕಾರಾತ್ಮಕತೆಯು ಉತ್ತರೋತ್ತರ ಹೆಚ್ಚಾಗುತ್ತಿರುವುದರ ಅರಿವಾಯಿತು. ನನ್ನ ಮನಸ್ಸು ಅಂತರ್ಮುಖವಾಯಿತು. ಎಲ್ಲರ ಮೇಲೆ ಆಧ್ಯಾತ್ಮಿಕ ಉಪಯವಾಗುತ್ತಿರುವುದರ ಅರಿವಾಯಿತು.

ಇ. ಪಾಶ್ಚಾತ್ಯ ಮತ್ತು ಭಾರತೀಯ ಹೊಸವರ್ಷವನ್ನು ಪರಸ್ಪರ ತುಲನೆ ಮಾಡಲು ಸಾಧ್ಯವೇ ಇಲ್ಲ. ಎರಡೂ ಕಾರ್ಯಕ್ರಮಗಳಲ್ಲಿ ಅನುಕ್ರಮವಾಗಿ ತಮ ವಿರುದ್ಧ ಸತ್ತ್ವ, ಶಬ್ದಮಾಲಿನ್ಯದ ವಿರುದ್ಧ ಶಾಂತಿ, ಭ್ರಮೆಯ ವಿರುದ್ಧ ಸತ್ಯತೆ, ಅಲ್ಪಕಾಲದ ವಿರುದ್ಧ ದೀರ್ಘಕಾಲ ಉಳಿಯುವ, ಬಹಿರ್ಮುಖ ವಿರುದ್ಧ ಅಂತರ್ಮುಖ, ಹೀಗೆ ಸ್ಪಷ್ಟವಾದ ವ್ಯತ್ಯಾಸಗಳ ಅರಿವಾಯಿತು. ಆ ಪಾರ್ಟಿಯ ವಿಚಾರಗಳಿಂದಲೇ ಮನಸ್ಸಿಗೆ ತೊಂದರೆಯ ಅರಿವಾಗುತ್ತದೆ. ತದ್ವಿರುದ್ಧ ಬ್ರಹ್ಮಧ್ವಜದ ಪೂಜೆಯ ಸಮಯದಲ್ಲಿ ನನ್ನ ವಿಚಾರಗಳು ಬಹಳಷ್ಟು ಶುದ್ಧ, ಸರಳ ಮತ್ತು ಸಕಾರಾತ್ಮಕವಾಗಿದ್ದವು.

– ಆಧುನಿಕ ವೈದ್ಯೆ (ಸೌ.) ನಂದಿನಿ ಸಾಮಂತ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೯.೩.೨೦೨೦)