ಬಾಂಗ್ಲಾದೇಶದಲ್ಲಿ ರಾಧಾಗೋಬಿಂದ ಆಶ್ರಮಕ್ಕೆ ಬೆಂಕಿ ಹಚ್ಚಿದ ಮತಾಂಧರು !

ದೇವಾಲಯದಲ್ಲಿನ ವಿಗ್ರಹಗಳು ಮತ್ತು ರಥಗಳು ಭಸ್ಮ !

‘ಬಾಂಗ್ಲಾದೇಶ ನಮ್ಮ ರಾಜ್ಯವಾಗಿದೆ’, ಎಂಬುದನ್ನೇ ಈ ಘಟನೆಯ ಮೂಲಕ ಬಾಂಗ್ಲಾದೇಶದ ಮತಾಂಧರು ಭಾರತಕ್ಕೆ ಮತ್ತು ಹಿಂದೂಗಳಿಗೆ ತೋರಿಸಿಕೊಡುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಿ ಮೋದಿಯವರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಮೇಲೆ ಒತ್ತಡ ಹೇರಿ ಅಲ್ಲಿ ಹಿಂದೂಗಳನ್ನು ರಕ್ಷಿಸಲು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಹಮ್ಮದಪುರ ಉಪ ಜಿಲ್ಲೆಯ ೪೦೦ ವರ್ಷಗಳ ಹಳೆಯ ಪರುರ್ಕುಲ ಅಷ್ಟಗ್ರಾಮ ಮಹಾ ಸ್ಮಶಾನವನ್ನು ಮತ್ತು ರಾಧಾ ಗೋಬಿಂದ ಆಶ್ರಮವನ್ನು ಅಪರಿಚಿತ ವ್ಯಕ್ತಿಗಳು ಸುಟ್ಟುಹಾಕಿದ್ದಾರೆ. ಇದರಿಂದಾಗಿ ಅಲ್ಲಿಯ ರಥಗಳು ಮತ್ತು ವಿಗ್ರಹಗಳು ಭಸ್ಮವಾದವು.

ಈ ಘಟನೆಯನ್ನು ಮಹಮ್ಮದಪುರ ಉಪ ಜಿಲ್ಲಾ ಮಂಡಳಿಯ ಮಾಜಿ ಉಪಾಧ್ಯಕ್ಷ ಮತ್ತು ಹಿಂದೂ-ಬೌದ್ಧ ಕ್ರಿಶ್ಚಿಯನ್ ಐಕ್ಯ ಪರಿಷತ್ತಿನ ಆಯೋಜನಾ ಸಮಿತಿಯ ಮಾಜಿ ಕಾರ್ಯದರ್ಶಿ ಸ್ವಪ್ನರಾಣಿ ಬಿಸ್ವಾಸ್ ವರದಿ ಮಾಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಾಂಗ್ಲಾದೇಶದ ಭೇಟಿಯ ನಂತರ, ಜಿಹಾದಿ ಸಂಘಟನೆ ಹಿಫಾಜತ್-ಎ-ಇಸ್ಲಾಂ ನ ಕಾರ್ಯಕರ್ತರು ಬ್ರಹ್ಮಣಬರಿಯಾದಲ್ಲಿ ಹಿಂದೂ ದೇವಾಲಯವೊಂದರಲ್ಲಿ ಕಾಳಿಮಾತೆ ಮತ್ತು ಭಗವಾನ ಶ್ರೀಕೃಷ್ಣರ ವಿಗ್ರಹಗಳನ್ನು ಧ್ವಂಸ ಮಾಡಿದ್ದರು.