ಅಮರನಾಥ ಯಾತ್ರೆಯನ್ನು ಗುರಿಯಾಗಿಸಲು ಭಯೋತ್ಪಾದಕ ಸಂಚು !

ಪ್ರತಿ ವರ್ಷ ಈ ಯಾತ್ರೆಗೆ ಜಿಹಾದಿ ಭಯೋತ್ಪಾದಕರಿಂದ ಆಕ್ರಮಣಕ್ಕೆ ಒಳಗಾಗುವ ಅಪಾಯ ಇದ್ದೇ ಇರುತ್ತದೆ. ಈ ಪರಿಸ್ಥಿತಿಯನ್ನು ಶಾಶ್ವತವಾಗಿ ಬದಲಾಯಿಸಲು, ಭಯೋತ್ಪಾದಕರನ್ನು ಸೃಷ್ಟಿಸುವ ಪಾಕಿಸ್ತಾನವನ್ನು ನಾಶಪಡಿಸುವುದನ್ನು ಬಿಟ್ಟು ಬೇರೆ ಪರ್ಯಾಯವಿಲ್ಲ!

ಶ್ರೀನಗರ : ಜೂನ್‍ನಿಂದ ಪ್ರಾರಂಭವಾಗಲಿರುವ ಅಮರನಾಥ ಯಾತ್ರೆ ಮೇಲೆ ಜಿಹಾದಿ ಉಗ್ರರಿಂದ ದಾಳಿ ನಡೆಸುವ ಸಂಚು ರೂಪಿಸಿದ್ದಾರೆಂಬ ಸುದ್ದಿಯು ಕೇಳಿಬರುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರು ದಾಳಿಯ ಘಟನೆಗಳಲ್ಲಿ ಹೆಚ್ಚಳ ಮಾಡಿದ್ದಾರೆ. ಭದ್ರತಾ ಪಡೆಗಳನ್ನು ಗುರಿಯಾಗಿಸಲಾಗುತ್ತಿದೆ. ಅನಂತನಾಗ, ಕುಲಗಾಮ ಮತ್ತು ಪುಲವಾಮಾ ಜಿಲ್ಲೆಗಳ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಗ್ರರು ನೆಲೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮಾರ್ಗದಿಂದ ಅಮರನಾಥಕ್ಕೆ ಹೋಗುವ ಯಾತ್ರಿಗಳು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿ ಮಾಡುವುದು ಅವರ ಯೋಜನೆಯಾಗಿದೆ.

ಕಳೆದ ವರ್ಷ, ಕೊರೋನಾದಿಂದ ಅಮರನಾಥ ತೀರ್ಥಯಾತ್ರೆ ರದ್ದುಗೊಂಡಿದ್ದರೆ, ಅದರ ಹಿಂದಿನ ವರ್ಷ ಸೆಕ್ಷನ್  ೩೭೦ ರದ್ದು ಪಡಿಸಿದ್ದರಿಂದ ರಾಜ್ಯದಲ್ಲಿ ಕಫ್ರ್ಯೂ ವಿಧಿಸಿ ಯಾತ್ರಾರ್ಥಿಗಳನ್ನು ಹಿಂದಕ್ಕೆ ಕಳುಹಿಸಲಾಗಿತ್ತು. ಆದ್ದರಿಂದ, ಭಯೋತ್ಪಾದಕರಿಂದ ಈ ವರ್ಷದ ಯಾತ್ರೆಯನ್ನು ಗುರಿಯಾಗಿಸಲು ಇನ್ನೂ ಹೆಚ್ಚು ಪ್ರಯತ್ನಗಳಾಗಬಹುದು.