ನಾಳೆಯಿಂದ ನೋಂದಣಿ ಆರಂಭ

ಶ್ರೀನಗರ (ಜಮ್ಮು-ಕಾಶ್ಮೀರ) – ಈ ವರ್ಷದ ಅಮರನಾಥ ಯಾತ್ರೆಯು ಜುಲೈ 3 ರಿಂದ ಪ್ರಾರಂಭವಾಗಲಿದೆ. ಯಾತ್ರೆಗಾಗಿ ನೋಂದಣಿಯು ಏಪ್ರಿಲ್ 15 ರಿಂದ ಪ್ರಾರಂಭವಾಗಲಿದೆ. ಈ ವರ್ಷ ಈ ಯಾತ್ರೆಯು ಆಗಸ್ಟ್ 28 ರವರೆಗೆ ಇರಲಿದೆ ಎಂದು ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರು ಮಾಹಿತಿ ನೀಡಿದ್ದಾರೆ. ಜಮ್ಮುವಿನ ಭಗವತಿನಗರ ಬೇಸ್ ಕ್ಯಾಂಪ್‌ನಿಂದ ಯಾತ್ರಿಕರ ಮೊದಲ ತಂಡವು ಹೊರಡಲಿದೆ. ಒಟ್ಟು 57 ದಿನಗಳ ಕಾಲ ನಡೆಯುವ ಈ ಯಾತ್ರೆಗಾಗಿ ಅನಂತನಾಗ್‌ನಿಂದ ಸಾಂಪ್ರದಾಯಿಕ 48 ಕಿ.ಮೀ ಉದ್ದದ ನುನವಾನ್-ಪಹಲ್ಗಾಮ್ ಮಾರ್ಗ, ಹಾಗೆಯೇ ಗಂದರ್ಬಾಲ್‌ನಿಂದ 14 ಕಿ.ಮೀ ಉದ್ದದ ಬಾಲ್ಟಾಲ್ ಮಾರ್ಗವು ಲಭ್ಯವಿದೆ.
ಈ ರೀತಿಯಾಗಿ ನೋಂದಣಿ ಮಾಡಿಕೊಳ್ಳಬಹುದು!
1. 13 ರಿಂದ 70 ವರ್ಷ ವಯಸ್ಸಿನ ಜನರು ಈ ಯಾತ್ರೆಯನ್ನು ಮಾಡಬಹುದು.
2. ದೇಶಾದ್ಯಂತ ಇರುವ 556 ನಿಗದಿತ ಬ್ಯಾಂಕ್ ಶಾಖೆಗಳ ಮೂಲಕ ಯಾತ್ರೆಗೆ ನೋಂದಣಿ ಮಾಡಿಕೊಳ್ಳಬಹುದು.
3. ಇದರ ಜೊತೆಗೆ ‘ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್’ನ ಅಧಿಕೃತ ಜಾಲತಾಣದ ಮೂಲಕವೂ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
4. ನೋಂದಣಿಗಾಗಿ ‘ಯೆಸ್ ಬ್ಯಾಂಕ್’, ‘ಐಸಿಐಸಿಐ ಬ್ಯಾಂಕ್’, ‘ಪಂಜಾಬ್ ನ್ಯಾಷನಲ್ ಬ್ಯಾಂಕ್’, ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ಮತ್ತು ‘ಆಕ್ಸಿಸ್ ಬ್ಯಾಂಕ್’ ಶಾಖೆಗಳಲ್ಲಿ ಯಾತ್ರೆಯ ನೋಂದಣಿ ಅರ್ಜಿಗಳು ಲಭ್ಯವಿರುತ್ತವೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !