ಗಡಿ ಭದ್ರತಾ ಪಡೆಯ ಸೈನಿಕರ ವ್ಯವಸ್ಥೆಯ ಕಡೆಗೆ ರೈಲ್ವೆ ಆಡಳಿತದ ಅಕ್ಷಮ್ಯ ನಿರ್ಲಕ್ಷ್ಯ!

ಅಗರ್ತಲಾ (ತ್ರಿಪುರಾ) – ಅಮರನಾಥ ಯಾತ್ರೆಗೆ ಭದ್ರತಾ ಸೇವೆ ಒದಗಿಸಲು ತೆರಳಿದ್ದ 1 ಸಾವಿರದ 200 ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಸೈನಿಕರಿಗೆ ಭಾರತೀಯ ರೈಲ್ವೆ ಇಲಾಖೆಯು ಗುಜರಿ ರೈಲನ್ನು ಕಳುಹಿಸಿದೆ. ರೈಲಿನ ದುಃಸ್ಥಿತಿಯನ್ನು ನೋಡಿ ಸೈನಿಕರು ಹತ್ತಲು ನಿರಾಕರಿಸಿದರು. ರೈಲಿನ ಕಿಟಕಿಗಳು, ಬಾಗಿಲುಗಳು, ವಿದ್ಯುತ್ ಉಪಕರಣಗಳು ಮತ್ತು ಶೌಚಾಲಯಗಳು ಸಂಪೂರ್ಣವಾಗಿ ಹಾಳಾಗಿದ್ದವು. ಸೈನಿಕರ ಪ್ರತಿಭಟನೆಯ ನಂತರ, ನಾಲ್ಕು ದಿನಗಳ ನಂತರ ಭಾರತೀಯ ರೈಲ್ವೆ ಮತ್ತೊಂದು ರೈಲನ್ನು ಒದಗಿಸಿತು. ಸೈನಿಕರು ಅಮರನಾಥ ಯಾತ್ರಿಕರಿಗೆ ಸೇವೆ ಒದಗಿಸಲು ಕಾಶ್ಮೀರಕ್ಕೆ ತಲುಪಬೇಕಿತ್ತು.
Amarnath Yatra Troop Deployment: Railway Authorities Show Alarming Negligence Towards BSF Personnel
Brave BSF jawans, sent to protect devotees, were forced to travel in a dilapidated train!
📌During Operation Sindoor, as Pakistan targeted civilian areas in Jammu & Kashmir, BSF… pic.twitter.com/6Sqhre26nu
— Sanatan Prabhat (@SanatanPrabhat) June 11, 2025
1. ಈ ವಿಶೇಷ ರೈಲು ಜೂನ್ 6 ರಂದು ತ್ರಿಪುರಾದ ಉದಯಪುರ ರೈಲು ನಿಲ್ದಾಣದಿಂದ ಜಮ್ಮು ತವಿ ರೈಲು ನಿಲ್ದಾಣಕ್ಕೆ ಹೊರಡಬೇಕಿತ್ತು.
2. ಗಡಿ ಭದ್ರತಾ ದಳದ ಕಮಾಂಡರ ಉದಯಪುರದಿಂದ ಹೊರಡುವ ವಿಶೇಷ ರೈಲನ್ನು ಪರಿಶೀಲಿಸಿದಾಗ, ಅದು ಸೈನಿಕರ ಸುರಕ್ಷತೆ ಮತ್ತು ಇತರ ಅವಶ್ಯಕತೆಗಳಿಗೆ ಯೋಗ್ಯವಾಗಿಲ್ಲ ಎಂದು ಅರಿತರು. ಆದ್ದರಿಂದ ಆ ರೈಲನ್ನು ರದ್ದುಪಡಿಸಲಾಯಿತು.
3. ಈ ಪರಿಸ್ಥಿತಿಯಲ್ಲಿ, ಅಮರನಾಥ ಯಾತ್ರೆಗಾಗಿ ಸೈನಿಕರ ನಿಯೋಜನೆಯೂ ವಿಳಂಬವಾಗಿದೆ. (ಈ ಅವಧಿಯಲ್ಲಿ ಅಮರನಾಥದಲ್ಲಿ ಭಯೋತ್ಪಾದಕ ದಾಳಿ ನಡೆದರೆ, ಅದರ ಹೊಣೆಯನ್ನು ನಿರ್ಧರಿಸುವುದು ಅವಶ್ಯಕ! – ಸಂಪಾದಕರು) ಈ ಮೊದಲು ಈ ಸೈನಿಕರನ್ನು ಜೂನ್ 12 ರೊಳಗೆ ಕಾಶ್ಮೀರದಲ್ಲಿ ನಿಯೋಜಿಸಬೇಕಿತ್ತು.
ಸಂಪಾದಕೀಯ ನಿಲುವು‘ಆಪರೇಷನ್ ಸಿಂದೂರ್’ ಸಮಯದಲ್ಲಿ ಪಾಕಿಸ್ತಾನವು ಜಮ್ಮು-ಕಾಶ್ಮೀರದ ನಿವಾಸಿ ಪ್ರದೇಶಗಳ ಮೇಲೆ ದಾಳಿ ಮಾಡಿದಾಗ, ಗಡಿ ಭದ್ರತಾ ದಳದ ಸೈನಿಕರು ಏಕಾಂಗಿಯಾಗಿ ಹೋರಾಡಿ ಅವರ 118 ನೆಲೆಗಳನ್ನು ನಾಶಪಡಿಸಿದ್ದರು. ಹೀಗಿದ್ದೂ, ಅವರಿಗೆ ಕೃತಘ್ನರಾಗಿ ನಡೆದುಕೊಂಡಿರುವ ರೈಲ್ವೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು! |
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!