ಸ್ತ್ರೀಯರು ಮತ್ತು ಪುರುಷರು ಹಣೆಗೆ ಕುಂಕುಮ ಅಥವಾ ಗಂಧವನ್ನು ಹಚ್ಚುವ ಪದ್ಧತಿ ಮತ್ತು ಅದರ ಆಧ್ಯಾತ್ಮಿಕ ಮಹತ್ವ

‘ಹೆಚ್ಚಿನ ಹಿಂದೂ ಸ್ತ್ರೀಯರು ಮತ್ತು ಕೆಲವು ಪುರುಷರು ಹಣೆಗೆ ಕುಂಕುಮ ಅಥವಾ ಗಂಧವನ್ನು ಹಚ್ಚುತ್ತಾರೆ. ಅವರ ಪದ್ಧತಿಯು ಆಯಾ ಪ್ರದೇಶಕ್ಕನುಸಾರ ಅಥವಾ ಸಂಪ್ರದಾಯ ಕ್ಕನುಸಾರ ಬೇರೆ ಬೇರೆ ಆಗಿರು ತ್ತದೆ. ಸ್ತ್ರೀಯರು ಮತ್ತು ಕೆಲವು ಪುರುಷರು ಹಣೆಗೆ ಕುಂಕುಮವನ್ನು ಅಥವಾ ಗಂಧವನ್ನು ಹಚ್ಚುವುದರ ಆಧ್ಯಾತ್ಮಿಕ ಮಹತ್ವ ಮುಂದಿನಂತಿದೆ.

೧. ಹಣೆಗೆ ಕುಂಕುಮ ಮತ್ತು ಗಂಧವನ್ನು ಹಚ್ಚುವ ಪದ್ಧತಿ

೧ ಅ. ಆಧ್ಯಾತ್ಮಿಕ ಮಟ್ಟ ಶೇ. ೭೦ ಕ್ಕಿಂತ ಕಡಿಮೆ ಇರುವವರು ತಮ್ಮ ಆಜ್ಞಾಚಕ್ರ ಜಾಗೃತವಾಗಲು ಹಣೆಗೆ ಶಕ್ತಿವರ್ಧಕ ಗೋಲಾಕಾರದಲ್ಲಿ ಅಥವಾ ಲಂಬಾಕಾರದಲ್ಲಿ (ಉದ್ದ) ಕುಂಕುಮವನ್ನು ಹಚ್ಚುವುದು ಆಧ್ಯಾತ್ಮಿಕ ದೃಷ್ಟಿಯಿಂದ ಯೋಗ್ಯವಾಗಿದೆ : ಯಾರ ಆಧ್ಯಾತ್ಮಿಕ ಮಟ್ಟವು ಶೇ. ೭೦ ಕ್ಕಿಂತ ಕಡಿಮೆಯಿದೆಯೋ, ಅವರು ಭ್ರೂಮಧ್ಯದ ಸ್ಥಳದಲ್ಲಿರುವ ಆಜ್ಞಾಚಕ್ರವನ್ನು ಜಾಗೃತಗೊಳಿಸಲು ಹಣೆಗೆ ಭ್ರೂಮಧ್ಯದಲ್ಲಿ ಶಕ್ತಿವರ್ಧಕ ಕುಂಕುಮವನ್ನು ಹಚ್ಚುವುದು ಯೋಗ್ಯವಾಗಿದೆ. ಸ್ತ್ರೀಯರು ಶ್ರೀ ದುರ್ಗಾದೇವಿಯ ಶಕ್ತಿಯ ಪ್ರತೀಕವಾಗಿರುವ ಗೋಲಾಕಾರದಲ್ಲಿ ಕುಂಕುಮವನ್ನು ಹಣೆಗೆ ಹಚ್ಚುವುದು ಮತ್ತು ಪುರುಷರು ಶಿವಜ್ಯೋತಿಯ ಪ್ರತೀಕವಾಗಿರುವ ಜ್ಯೋತಿಯಂತೆ ಕಾಣಿಸುವ ಕುಂಕುಮದ ಲಂಬಾಕಾರದ ತಿಲಕವನ್ನು ಹಣೆಗೆ ಹಚ್ಚುವುದು ಆಧ್ಯಾತ್ಮಿಕ ದೃಷ್ಟಿಯಿಂದ ಯೋಗ್ಯವಾಗಿದೆ.

ಕು. ಮಧುರಾ ಭೋಸಲೆ

೧ ಆ. ಈಶ್ವರನ ನಿರ್ಗುಣ ರೂಪದ ಕಡೆಗೆ ಸಂತರ ಪ್ರವಾಸವು ಪ್ರಾರಂಭವಾಗಿರುವುದರಿಂದ ಅವರು ಜ್ಯೋತಿರ್ಮಯ ತೇಜದ ಪೂಜೆಯನ್ನು ಮಾಡಲು ತಮ್ಮ ಹಣೆಗೆ ಕುಂಕುಮವನ್ನು ಹಚ್ಚದೇ ಗೋಲಾಕಾರದಲ್ಲಿ ಅಥವಾ ಲಂಬಾಕಾರದಲ್ಲಿ (ಉದ್ದ) ಗಂಧವನ್ನು ಹಚ್ಚುವುದು ಯೋಗ್ಯವಾಗಿದೆ : ಗಂಧವನ್ನು ಎರಡೂ ಹುಬ್ಬುಗಳ ಮಧ್ಯದಲ್ಲಿ ಅರ್ಧ ಸೆಂ.ಮೀ. ಕ್ಕಿಂತ ಸ್ವಲ್ಪ ಮೇಲೆ ಹಚ್ಚಬೇಕು. ಆಜ್ಞಾಚಕ್ರದಿಂದ ಸಹಸ್ರಾರಚಕ್ರದೆಡೆಗೆ ಕುಂಡಲಿನಿಯ ಪ್ರವಾಸ ಪ್ರಾರಂಭವಾಗಿರುವಾಗ ಮತ್ತು ಅದರಲ್ಲಿ ತೇಜತತ್ತ್ವ ಪ್ರಕಟಾವಸ್ಥೆಯಲ್ಲಿರುವಾಗ ಅದು ಗೋಲಾಕಾರದ ಬಿಂದುವಿನಂತೆ ಮತ್ತು ಅಪ್ರಕಟ ಅವಸ್ಥೆಯಲ್ಲಿರುವಾಗ ಅದು ಜ್ಯೋತಿಯಂತೆ ರೂಪವನ್ನು ಧರಿಸುತ್ತದೆ. ಆಧ್ಯಾತ್ಮಿಕ ಉನ್ನತಿಯನ್ನು ಹೊಂದಿರುವವರ ಪ್ರವಾಸ ಈಶ್ವರನ ನಿರ್ಗುಣ ರೂಪದ ಕಡೆಗೆ ಪ್ರಾರಂಭವಾಗಿರುವುದರಿಂದ ಅವರು ಜ್ಯೋತಿರ್ಮಯ ತೇಜದ ಪೂಜೆಯನ್ನು ಮಾಡಲು ತಮ್ಮ ಹಣೆಗೆ ಕುಂಕುಮವನ್ನು ಹಚ್ಚದೇ ಗೋಲಾಕಾರ ಅಥವಾ ಲಂಬಾಕಾರದಲ್ಲಿ ಗಂಧವನ್ನು ಹಚ್ಚುವುದು ಯೋಗ್ಯವಾಗಿದೆ. ಗಂಧದಲ್ಲಿ ಕುಂಕುಮದ ತುಲನೆಯಲ್ಲಿ ಅಧಿಕ ಪ್ರಮಾಣದಲ್ಲಿ ನಿರ್ಗುಣ ಚೈತನ್ಯವನ್ನು ಧರಿಸುವ  ಮತ್ತು ಪ್ರಕ್ಷೇಪಿಸುವ ಕ್ಷಮತೆಯಿರುವುದರಿಂದ, ಸಂತರು (ಶೇ. ೭೦ ಮತ್ತು ಅದಕ್ಕಿಂತ ಅಧಿಕ ಮಟ್ಟ ಇರುವವರು) ಹಣೆಗೆ ಚಂದನ, ಗೋಪಿಚಂದನ, ರಕ್ತಚಂದನ, ಅಷ್ಟಗಂಧ ಇತ್ಯಾದಿಗಳ ಗಂಧವನ್ನು ಹಚ್ಚುವುದು ಆಧ್ಯಾತ್ಮಿಕ ದೃಷ್ಟಿಯಿಂದ ಯೋಗ್ಯವಾಗಿದೆ.

೨. ಹಣೆಗೆ ಕುಂಕುಮ ಮತ್ತು ಗಂಧದ ಲಂಬಾಕಾರ ತಿಲಕವನ್ನು ಹಚ್ಚುವಾಗ ಅದರ ಎತ್ತರ ಎಷ್ಟಿರಬೇಕು

೨ ಅ. ಕುಂಕುಮದ ಲಂಬಾಕಾರ (ಉದ್ದ) ತಿಲಕದ ಮೇಲಿನ ತುದಿಯನ್ನು ಹಣೆಯ ಎತ್ತರದ ಅರ್ಧದಷ್ಟು ಇಡುವುದು ಯೋಗ್ಯವಾಗಿರುವುದು : ಶೇ. ೭೦ ಕ್ಕಿಂತ ಕಡಿಮೆ ಮಟ್ಟ ಇರುವವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಸಕ್ರಿಯರಾಗಲು ಆಧ್ಯಾತ್ಮಿಕ ಶಕ್ತಿ ದೊರಕುವುದು ಅಧಿಕ ಮಹತ್ವದ್ದಾಗಿರುತ್ತದೆ. ಕುಂಕುಮದಲ್ಲಿ ಬಹಳಷ್ಟು ಆಧ್ಯಾತ್ಮಿಕ ಊರ್ಜೆಯಿದೆ. ಆದುದರಿಂದ ಇಂತಹ ವ್ಯಕ್ತಿಗಳು ತಮ್ಮ ಹಣೆಯ ಮೇಲೆ ಕುಂಕುಮದ ಲಂಬಾಕಾರದ ತಿಲಕವನ್ನು ಹಚ್ಚಬೇಕು. ಕುಂಕುಮದ ಲಂಬಾಕಾರದ ತಿಲಕದ ಎತ್ತರವನ್ನು ಹಣೆಯ ಎತ್ತರದ ಅರ್ಧ ಇಡುವುದು ಸೂಕ್ತವಾಗಿದೆ. ಹೀಗೆ ಮಾಡುವುದರಿಂದ ಕುಂಕುಮದ ತಿಲಕದಲ್ಲಿ ಕ್ರಿಯಾಶಕ್ತಿ ಕಾರ್ಯನಿರತವಾಗುತ್ತದೆ ಮತ್ತು ಕುಂಕುಮದ ತಿಲಕ ಹಚ್ಚುವ ವ್ಯಕ್ತಿ ಆಧ್ಯಾತ್ಮಿಕ ಸ್ತರದಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ರಿಯನಾಗುತ್ತಾನೆ.

೨ ಆ. ಗಂಧದ ಮೇಲಿನ ತುದಿಯು ಹಣೆಯ ಎತ್ತರದ ಅರ್ಧದಷ್ಟು ಎತ್ತರವಿರುವುದು ಸೂಕ್ತವಾಗಿದೆ : ‘ಗಂಧದ ಮೇಲಿನ ತುದಿ ಹಣೆಯ ಎತ್ತರದ ಸಂದರ್ಭದಲ್ಲಿ ಎಲ್ಲಿಯವರೆಗೆ ಇರಬೇಕು ?, ಎನ್ನುವ ಪ್ರಶ್ನೆ ಎಲ್ಲರಿಗೂ ಮೂಡುತ್ತದೆ. ಗಂಧದ ಎತ್ತರ ಸಾಧಾರಣವಾಗಿ ೧ ಇಂಚು ಇರಬೇಕು. ಗಂಧವು ಆತ್ಮಜ್ಯೋತಿಯ ಪ್ರತೀಕವಾಗಿರುವುದರಿಂದ ಅದರ ಎತ್ತರವು ಹಣೆಯ ಎತ್ತರದ ಅರ್ಧದಷ್ಟು ಇದ್ದರೆ ಅದರಲ್ಲಿ ಜ್ಞಾನಶಕ್ತಿ ಅಧಿಕ ಪ್ರಮಾಣದಲ್ಲಿ ಕಾರ್ಯನಿರತವಾಗುತ್ತದೆ. ಗಂಧದ ಎತ್ತರ ಒಂದು ಇಂಚಿಗಿಂತ ಕಡಿಮೆಯಿದ್ದರೆ ಇಚ್ಛಾಶಕ್ತಿ ಮತ್ತು ಒಂದು ಇಂಚಿಗಿಂತ ಅಧಿಕವಿದ್ದರೆ ಕ್ರಿಯಾಶಕ್ತಿ ಕಾರ್ಯನಿರತವಾಗುತ್ತದೆ.

೩. ಕುಂಕುಮ ಮತ್ತು ಗಂಧವನ್ನು ಹಚ್ಚುವ ಪದ್ಧತಿ

೩ ಅ ಕುಂಕುಮವನ್ನು ಹಚ್ಚುವ ಪದ್ಧತಿ : ಕುಂಕುಮವನ್ನು ಹಚ್ಚುವ ಎರಡು ಪ್ರಮುಖ ಪದ್ಧತಿಗಳು ಮುಂದಿನಂತಿವೆ.

೩ ಅ ೧. ಗೋಲಾಕಾರದಲ್ಲಿ ಕುಂಕುಮವನ್ನು ಹಚ್ಚುವುದು : ಇದರಿಂದ ಸ್ತ್ರೀಯರಲ್ಲಿ ದುರ್ಗಾದೇವಿಯ ತತ್ತ್ವವು ಅಧಿಕ ಪ್ರಮಾಣದಲ್ಲಿ ಕಾರ್ಯನಿರತವಾಗುತ್ತದೆ ಮತ್ತು ಅವಳ ಶಕ್ತಿಯು ಬಹಳಷ್ಟು ಪ್ರಮಾಣದಲ್ಲಿ ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತದೆ. ಇಂತಹ ಸ್ತ್ರೀಯರಿಗೆ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಲು ದುರ್ಗಾದೇವಿಯ ಸಗುಣ ಶಕ್ತಿ ಮತ್ತು ಚೈತನ್ಯವು ಅಧಿಕ ಪ್ರಮಾಣದಲ್ಲಿ ಸಿಗುತ್ತದೆ.

೩ ಅ ೨. ಜ್ಯೋತಿಯಂತೆ ಕುಂಕುಮದ ಉದ್ದ ತಿಲಕವನ್ನು ಹಚ್ಚುವುದು : ಇದರಿಂದ ಪುರುಷರಲ್ಲಿ ಶಿವಜ್ಯೋತಿಸ್ವರೂಪ ಶಕ್ತಿ ಮತ್ತು ಚೈತನ್ಯ ಅಧಿಕ ಪ್ರಮಾಣದಲ್ಲಿ ಕಾರ್ಯನಿರತವಾಗಿ, ಅವರಿಗೆ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಲು ಶಿವನ ನಿರ್ಗುಣ ಶಕ್ತಿ ಮತ್ತು ಚೈತನ್ಯ ಅಧಿಕ ಅಧಿಕ ಪ್ರಮಾಣದಲ್ಲಿ ಸಿಗುತ್ತದೆ.

೩ ಆ. ಗಂಧವನ್ನು ಹಚ್ಚುವ ಪದ್ಧತಿ : ಗಂಧವನ್ನು ಹಚ್ಚುವ ಎರಡು ಪ್ರಮುಖ ಪದ್ಧತಿಗಳು ಮುಂದಿನಂತಿವೆ.

೩ ಆ ೧. ಗೋಲಾಕಾರದಲ್ಲಿ ಗಂಧವನ್ನು ಹಚ್ಚುವುದು : ಇದರಿಂದ ಜ್ಞಾನಶಕ್ತಿಗೆ ಸಂಬಂಧಿತ ಶಕ್ತಿ ಕಾರ್ಯನಿರತವಾಗುತ್ತದೆ. ಇದರಿಂದ ಬೌದ್ಧಿಕ ಸ್ತರದಲ್ಲಿ ಸೇವೆಯನ್ನು, ಉದಾ. ಗ್ರಂಥಲೇಖನ ಮಾಡುವುದು ಸುಲಭವಾಗುತ್ತದೆ.

೩ ಆ ೨ . ಆಂಗ್ಲ ಅಕ್ಷರ ‘U’ ಆಕಾರದಂತೆ (U ನ, ಎರಡೂ ಬದಿಗಳು ಒಂದೇ ರೀತಿಯಲ್ಲಿ ದಪ್ಪವಾಗಿರುವ) ಲಂಬಾಕಾರದ (ಉದ್ದ) ಗಂಧವನ್ನು ಹಚ್ಚುವುದು : ಇದರಿಂದ ಗಂಧದಲ್ಲಿ ವಿಷ್ಣುತತ್ತ್ವ ಅಧಿಕ ಪ್ರಮಾಣದಲ್ಲಿ ಸೆಳೆಯಲ್ಪಟ್ಟು ಕಾರ್ಯನಿರತವಾಗುತ್ತದೆ. ಇದರಿಂದ ಪೂಜಕನಲ್ಲಿ ಶೀಘ್ರಗತಿಯಲ್ಲಿ ಶ್ರೀವಿಷ್ಣುವಿನ ಬಗ್ಗೆ ಭಕ್ತಿಭಾವ ಜಾಗೃತವಾಗುತ್ತದೆ.

೪. ಪೂಜೆಗಾಗಿ ಹಣೆಯ ಮೇಲೆ ಮತ್ತು ಶರೀರದ ಮೇಲೆ ಇತರ ಕಡೆ ಹಚ್ಚುವ ವಿವಿಧ ಪ್ರಕಾರದ ತಿಲಕಗಳಲ್ಲಿ ಸೆಳೆಯಲ್ಪಡುವ ದೇವತೆಗಳ ಲಹರಿಗಳು

ಟಿಪ್ಪಣಿ : ಧಾರ್ಮಿಕ ಕಾರ್ಯಗಳ ಸಮಯದಲ್ಲಿ ಅರಿಶಿಣ ಅಥವಾ ಕುಂಕುಮವನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಬೇಕು. ವೈಯಕ್ತಿಕ ಸ್ತರದಲ್ಲಿ ದೇವತೆಗಳ ಉಪಾಸನೆಯನ್ನು ಮಾಡುವಾಗ ಅಷ್ಟಗಂಧ, ಚಂದನ, ಗೋಪಿಚಂದನ, ರಕ್ತಚಂದನ ಇತ್ಯಾದಿಗಳನ್ನು ಉಪಯೋಗಿಸಬೇಕು. ಅಂತ್ಯಕ್ರಿಯೆ ಅಥವಾ ಶ್ರಾದ್ಧಾದಿ ಕರ್ಮ ಗಳನ್ನು ಮಾಡುವಾಗ ಭಸ್ಮವನ್ನು ಉಪಯೋಗಿಸಬೇಕು. ಹೀಗೆ ಮಾಡುವುದರಿಂದ ಸಂಬಂಧಿತ ಧಾರ್ಮಿಕ ಕಾರ್ಯಗಳನ್ನು ಮಾಡಲು ಆವಶ್ಯಕವಿರುವ ದೇವತೆಗಳ ತತ್ತ್ವ ಮತ್ತು ಶಕ್ತಿಯು ಉಪಾಸಕನಿಗೆ ದೊರಕಿ ಅವರಿಂದ ಪ್ರತಿಯೊಂದು ಧಾರ್ಮಿಕ ಕರ್ಮವು ಚಾಚೂತಪ್ಪದೇ ಮತ್ತು ಪರಿಪೂರ್ಣವಾಗಲು ಸಹಾಯವಾಗುತ್ತದೆ.

ಕೃತಜ್ಞತೆ : ಈಶ್ವರನೇ, ನೀನೇ ನಮಗೆ ಕುಂಕುಮ ಮತ್ತು ಗಂಧದ ವಿಷಯದಲ್ಲಿ ಜ್ಞಾನವನ್ನು ನೀಡಿ ಅವುಗಳ ಮಹತ್ವದ ಅರಿವು ಮೂಡಿಸಿದ್ದಿ. ಇದಕ್ಕಾಗಿ ನಾವು ನಿನ್ನ ಚರಣಗಳಲ್ಲಿ ಕೃತಜ್ಞರಾಗಿದ್ದೇವೆ.

– ಕು. ಮಧುರಾ ಭೋಸಲೆ(ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ (೧.೫.೨೦೧೯, ರಾತ್ರಿ ೧೦.೪೦)