ಪಾಪ ಮತ್ತು ಪುಣ್ಯದ ಲೆಕ್ಕಾಚಾರ

ಗುರುದೇವ ಡಾ. ಕಾಟೆಸ್ವಾಮೀಜಿ

‘ಮಹಾಪುರುಷರ  ಮೇಲೆ ಬಹಳ ದೊಡ್ಡ ಜವಾಬ್ದಾರಿ ಇರುತ್ತದೆ. ಅವರು ಧರ್ಮವನ್ನು ಬಿಟ್ಟರೆ, ಜನರೂ ಧರ್ಮವನ್ನು ಬಿಡುವರು, ಅವರು ಮನಸ್ಸಿಗೆ ಬಂದಂತೆ  ವರ್ತಿಸುವರು ಮತ್ತು ಪಾಪಗಳನ್ನು ಮಾಡುವರು. ಆ ಮಹಾಪುರುಷನೇ ಆ ಪಾಪಗಳನ್ನು ಮಾಡಿದವನಾಗುವನು. ವರ್ಣಸಂಕರದ ಆ ಜವಾಬ್ದಾರಿ, ಆ ದೋಷ, ಆ ಪಾಪ ಅವನ ಮೇಲೆಯೇ ಬರುವುದು. ಆ ಮಹಾಪುರುಷನು ಪ್ರಜೆಗಳನ್ನು ಪಾಪಿಗಳನ್ನಾಗಿ ಮಾಡಿದ  ದೋಷಿಯಾಗುತ್ತಾನೆ. ಅಧರ್ಮಕ್ಕೆ-ಪಾಪಕ್ಕೆ ಸಹಾಯ ಮಾಡುವ, ಪ್ರತ್ಯಕ್ಷ ಅಥವಾ ಪರೋಕ್ಷ ಹೇಗೆಯೇ ಇರಲಿ, ಶಾರೀರಿಕ-ಮಾನಸಿಕ ಎಂತಹುದೇ ಇರಲಿ, ಅವನಿಗೆ ಆ ಪ್ರಮಾಣದಲ್ಲಿ ‘ಪಾಪದ’ ಪಾಲು ಸಿಗುತ್ತದೆ.  ಅವನು ದೋಷಿಯಾಗಿಯೇ ಆಗುತ್ತಾನೆ.

ಹೀಗೆಯೇ ಧರ್ಮದ ಬಗ್ಗೆ ಮತ್ತು ಪುಣ್ಯದ ಬಗ್ಗೆಯೂ ಇದೆ. ಧರ್ಮಕರ್ಮವನ್ನು ಮಾಡುವವರು, ಅವರಿಗೆ ಜೊತೆ ನೀಡುವವರು, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ರೀತಿಯ ಸಹಕಾರ ನೀಡಿದರೂ, ಶಾರೀರಿಕ-ವಾಚಿಕ ಯಾವುದೇ ಇರಲಿ ಅಥವಾ ಮಾನಸಿಕವಿರಲಿ, ಹೇಗಾದರೂ ಇರಲಿ, ಅವರಿಗೆ ಆ ಪ್ರಮಾಣದಲ್ಲಿ ಪುಣ್ಯವು ಲಭಿಸುತ್ತದೆ.’

– ಗುರುದೇವ ಡಾ. ಕಾಟೆಸ್ವಾಮೀಜಿ (ಆಧಾರ : ಮಾಸಿಕ `ಘನಗರ್ಜಿತ’, ಅಕ್ಟೋಬರ್ ೨೦೧೭)