ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮತ್ತು ಮುಂಬರುವ ಭೀಕರ ಕಾಲದಲ್ಲಿ ಶಿವನು ಸನಾತನ ಸಂಸ್ಥೆಯ ಎಲ್ಲ ಸಾಧಕರನ್ನು ರಕ್ಷಿಸಲೆಂದು’, ಸದ್ಗುರು (ಸೌ.) ಅಂಜಲಿ ಗಾಡಗೀಳರಿಂದ ಕೈಲಾಸ-ಮಾನಸ ಸರೋವರ ಯಾತ್ರೆ !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

‘ಜುಲೈ ೨೦೧೯ ರಲ್ಲಿ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಈ ಪೃಥ್ವಿಯ ಮೇಲಿರುವ ಸಾಕ್ಷಾತ್ ಶಿವನ ಸ್ಥಾನವಾಗಿರುವ ಕೈಲಾಸ ಪರ್ವತ ಮತ್ತು ಮಾನಸ ಸರೋವರಕ್ಕೆ ಹೋಗುವ ಭಾಗ್ಯವು ಅವರ ಜೊತೆಯಲ್ಲಿದ್ದ ಸಾಧಕರಿಗೆ ಲಭಿಸಿತು. ನಿಜವಾಗಿಯೂ ಕೈಲಾಸ ಪರ್ವತ ಮತ್ತು ಮಾನಸ ಸರೋವರಕ್ಕೆ ಹೋಗುವ ಬಗ್ಗೆ ನಾವು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಕಳೆದ ೪ ವರ್ಷಗಳಿಂದ ಚರ್ಚೆ ಮಾಡುತ್ತಿದ್ದೆವು. ಈ ವರ್ಷ ಆ ಸಮಯವು ಕೂಡಿ ಬಂದಿತು. ಪ್ರತಿ ವರ್ಷ ಜೂನನಿಂದ ಸೆಪ್ಟೆಂಬರ್ ಹೀಗೆ ೪ ತಿಂಗಳು ಅಲ್ಲಿಗೆ ಹೋಗಬಹುದು.

ಶ್ರೀ. ವಿನಾಯಕ ಶಾನಭಾಗ

೧. ಕೈಲಾಸ ಪರ್ವತದ ಮಹಾತ್ಮೆ

೧ ಅ. ಪರ್ವತದ ಆಯುಷ್ಯವು ಅನೇಕ ಕೋಟಿ ವರ್ಷಗಳಿರುವುದೆಂದು ಸಂಶೋಧಕರ ಅಭಿಪ್ರಾಯವಿರುವುದು, ಕೈಲಾಸ ಪರ್ವತವು ಸಾಕ್ಷಾತ್ ಶಿವನಾಗಿರುವುದು ಮತ್ತು ಪೃಥ್ವಿಯ ಮೇಲೆ ಘಟಿಸುವ ಅಸಂಖ್ಯಾತ ಘಟನಾವಳಿಗಳ ಸಾಕ್ಷಿದಾರನಾಗಿರುವುದು : ಕೈಲಾಸ ಪರ್ವತಕ್ಕೆ ‘ಪೃಥ್ವಿಯ ಮೇರುದಂಡ’ ಎಂದು ಹೇಳಲಾಗಿದೆ. ಕೈಲಾಸವು ಕೇವಲ ಒಂದು ಸಾಮಾನ್ಯ ಹಿಮಾವೃತ್ತ ಪರ್ವತವಲ್ಲ ಅದು ಸಂಪೂರ್ಣ ಪೃಥ್ವಿಯ ಆಧಾರಸ್ತಂಭವಾಗಿದೆ. ಅನೇಕ ಸಂಶೋಧಕರು ಕೈಲಾಸದಿಂದ ಕಲ್ಲಿನ ಮಾದರಿಯನ್ನು ತೆಗೆದುಕೊಂಡು ಅದರ ಸಂಶೋಧನೆಯನ್ನು ಮಾಡಿದಾಗ ‘ಕೈಲಾಸ ಪರ್ವತವು ಹಿಮಾಲಯ ಪರ್ವತಕ್ಕಿಂತ ಪ್ರಾಚೀನವಾಗಿದೆ. ಕೈಲಾಸ ಪರ್ವತದ ಆಯುಷ್ಯವು ಅನೇಕ ಕೋಟಿ ವರ್ಷಗಳಾಗಿವೆ’, ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ. ನಮ್ಮ ಧರ್ಮಶಾಸ್ತ್ರಗಳಲ್ಲಿ ‘ಕೈಲಾಸ ಪರ್ವತದ ಆಯುಷ್ಯವನ್ನು ಯಾರಿಗೂ ಹೇಳಲು ಸಾಧ್ಯವಿಲ್ಲ’, ಎಂದು ಬರೆದಿಟ್ಟಿದ್ದಾರೆ. ಸಂಕ್ಷಿಪ್ತವಾಗಿ ‘ಕೈಲಾಸ ಪರ್ವತವು ಸಾಕ್ಷಾತ್ ಶಿವನೇ ಆಗಿದ್ದಾನೆ.’ ಪೃಥ್ವಿಯ ಮೇಲಿನ ಅನೇಕ ಯುಗಗಳು, ಭಗವಂತನ ಅನೇಕ ಅವತಾರಗಳು, ಧರ್ಮ-ಅಧರ್ಮ ಇವುಗಳ ನಡುವಿನ ಯುದ್ಧಗಳು, ಅನೇಕ ಪ್ರಳಯಗಳು ಮತ್ತು ಅನೇಕ ಸೃಷ್ಟಿ ಚಕ್ರಗಳು ಇವುಗಳಿಗೆಲ್ಲ ಸೂರ್ಯ ಮತ್ತು ಚಂದ್ರ ಇವರು ಹೇಗೆ ಸಾಕ್ಷಿದಾರರಾಗಿದ್ದಾರೆಯೋ, ಅದೇ ರೀತಿ ಕೈಲಾಸ ಪರ್ವತವೂ ಸಾಕ್ಷಿದಾರವಾಗಿದೆ.

೧ ಆ. ಧರ್ಮಗ್ರಂಥಗಳಲ್ಲಿ ಉಲ್ಲೇಖವಿರುವ ಕೈಲಾಸ ಪರ್ವತದಲ್ಲಿ ಭಗವಾನ ಶಿವನ ನಿವಾಸ ಸ್ಥಾನವಿರುವುದು : ಯಾರ ಉಲ್ಲೇಖವು ನಮ್ಮ ಎಲ್ಲ ಧರ್ಮಗ್ರಂಥಗಳಲ್ಲಿವೆ ಮತ್ತು ಯಾರ ಮಹಿಮೆಯನ್ನು ಋಷಿಮುನಿಗಳು ಕೊಂಡಾಡಿರುವರೋ, ಅಂತಹ ಆ ಕೈಲಾಸ ಪರ್ವತವು ಭಗವಾನ ಶಿವ, ದೇವಿ ಪಾರ್ವತಿ, ಶಿವಪುತ್ರ ಕಾರ್ತಿಕೆಯ ಮತ್ತು ವಿಘ್ನಹರ್ತಾ ಗಣೇಶ, ಹಾಗೆಯೇ ನಂದಿ ಸಹಿತ ಎಲ್ಲ ಶಿವ ಗಣಗಳ ನಿವಾಸಸ್ಥಾನವಾಗಿದೆ. ಹೊರಗಡೆಯಿಂದ ಸಂಪೂರ್ಣವಾಗಿ `ಗ್ರೆನೈಟ್’ ಬಂಡೆಗಲ್ಲಿನಂತೆ ಕಾಣುವ ಈ ಪರ್ವತವು ಮನುಷ್ಯನ ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿದೆ.

ಭಗವಾನ ಶಿವನ ನಿವಾಸಸ್ಥಾನವಾಗಿರುವ ಕೈಲಾಸ ಪರ್ವತದ ಎದುರಿಗೆ ಪ್ರಸನ್ನಮುದ್ರೆಯಲ್ಲಿ ಕುಳಿತಿರುವ ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ

೧ ಇ. ಕೈಲಾಸ ಪರ್ವತದ ಶಿಖರದವರೆಗೆ ಯಾವುದೇ ಮನುಷ್ಯನು ಇಂದಿನವರೆಗೆ ತಲುಪದಿರುವುದು : ಕೈಲಾಸ ಪರ್ವತದ ಶಿಖರವು ಪ್ರತಿಯೊಂದು ಕ್ಷಣಕ್ಷಣಕ್ಕೆ ಬದಲಾಗುತ್ತಿರುತ್ತದೆ, ಆ ಪರ್ವತದ ಶಿಖರದ ವರೆಗೆ ಇಂದಿನವರೆಗೆ ಯಾವುದೇ ಮನುಷ್ಯನಿಗೆ  ತಲುಪಲು ಸಾಧ್ಯವಾಗಿಲ್ಲ. ಯಾವ ಪರ್ವತದ ಮೇಲೆ ಸತತವಾಗಿ ‘ಓಂ’ ಕಾರನಾದವು ಕೇಳಿ ಬರುತ್ತದೋ, ಆ ಪರ್ವತದ ಮೇಲೆ ಇಂದಿನವರೆಗೆ ಯಾವುದೇ ಮನುಷ್ಯನಿಗೆ ವಾಸಿಸಲು ಸಾಧ್ಯವಾಗಿಲ್ಲ.

೧ ಈ. ಉಪಗ್ರಹದಿಂದ ತೆಗೆದ ಛಾಯಾಚಿತ್ರಗಳಲ್ಲಿ ‘ಕೈಲಾಸ ಪರ್ವತವು ಒಂದು ದೊಡ್ಡದಾದ ಪಾಣಿಪೀಠದಲ್ಲಿರುವ ಶಿವಲಿಂಗವಾಗಿದೆ’, ಎಂದು ಸ್ಪಷ್ಟವಾಗಿ ಕಾಣಿಸುವುದು : ಪಾಣಿಪೀಠವಿರುವ ಪ್ರತ್ಯಕ್ಷ ಶಿವಲಿಂಗ ಸ್ವರೂಪವಾಗಿರುವ ಕೈಲಾಸ ಪರ್ವತದ ಚಿಕ್ಕ-ಚಿಕ್ಕ ರೂಪಗಳನ್ನು ಮನುಷ್ಯನು ಸಾಕ್ಷಾತ್ ಶಿವನೆಂದು ಭಾವವಿರಿಸಿ ದೇವಸ್ಥಾನಗಳಲ್ಲಿ ಪೂಜೆಯನ್ನು ಮಾಡುತ್ತಾ ಬಂದಿದ್ದಾನೆ. ಉಪಗ್ರಹವು ತೆಗೆದ ಛಾಯಾಚಿತ್ರಗಳಲ್ಲಿ ‘ಕೈಲಾಸ ಪರ್ವತವು ಒಂದು ದೊಡ್ಡದಾದ ಪಾಣಿಪೀಠದಲ್ಲಿರುವ ಶಿವಲಿಂಗವಿದೆ’, ಎಂದು ಸ್ಪಷ್ಟವಾಗಿ ಕಾಣಿಸುತ್ತದೆ.

. ಕೈಲಾಸ ಪರ್ವತದೊಂದಿಗೆ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಆತ್ಮೀಯ ಸಂಬಂಧ

ಕಳೆದ ನಾಲ್ಕು ವರ್ಷಗಳಿಂದ ನಮಗೆ ಸದ್ಗುರು ಗಾಡಗೀಳ ಕಾಕೂರವರು, “ನಾನು ಮಲಗಿರುವಾಗ ನನಗೆ ಯಾವಾಗಲೂ, ‘ನಾನು ಓರ್ವ ಚಿಕ್ಕ ಬಾಲಕಿಯಾಗಿದ್ದೇನೆ ಮತ್ತು ಕೈಲಾಸ ಪರ್ವತದ ಎದುರಿನಲ್ಲಿ ಒಂಟಿ ಕಾಲಲ್ಲಿ ನಿಂತು ಶಿವನ ತಪಸ್ಸು ಮಾಡುತ್ತಿದ್ದೇನೆ’, ಎಂದು ಕಾಣಿಸುತ್ತದೆ. ಕೆಲವೊಮ್ಮೆ ಶಿವನ ಬಗ್ಗೆ ಭಾವಜಾಗೃತವಾಗಿ ‘ನಾನು ಕೈಲಾಸದ ಮಣ್ಣಿನಲ್ಲಿ ಉರುಳಾಡುತ್ತಿದ್ದೇನೆ ಮತ್ತು ಆ ಮಣ್ಣನ್ನು ನನ್ನ ಹಣೆಗೆ ಹಚ್ಚಿಕೊಳ್ಳುತ್ತಿದ್ದೇನೆ’, ಎಂದು ನನಗೆ ಅನಿಸುತ್ತಿತ್ತು’, ಎಂದು ಹೇಳುತ್ತಿದ್ದರು.

ಸದ್ಗುರು ಕಾಕೂರವರು ನಮಗೆ ನಡುನಡುವೆ ಅವರು ಕೈಲಾಸದ ಬಗ್ಗೆ ಕೆಲವು ಸಂತರಿಂದ ಕೇಳಿದ ಅಥವಾ ಗ್ರಂಥದಲ್ಲಿರುವ ಮಾಹಿತಿಗಳನ್ನು ಹೇಳುತ್ತಿದ್ದರು. ಆದುದರಿಂದ ನಮ್ಮೆಲ್ಲ ಸಾಧಕರಿಗೆ ಕೈಲಾಸ ಪರ್ವತದ ಬಗ್ಗೆ ವಿಶೇಷ ಪ್ರೀತಿಯೆನಿಸ ತೊಡಗಿತು. ಸದ್ಗುರು ಅಂಜಲಿ ಗಾಡಗೀಳ ಕಾಕೂರವರ ಬಗ್ಗೆ ‘ಈ ಮೊದಲು, ಒಂದು ನಾಡಿಪಟ್ಟಿ ವಾಚನದಲ್ಲಿ ‘ಅವರ ಹೆಸರು ಶಿವಾಂಜಲಿ ಎಂದಾಗಿದೆ ಮತ್ತು ಅವರು ಹಿಂದಿನ ಜನ್ಮದಲ್ಲಿ ಶಿವನ ಉಪಾಸನೆಯನ್ನು ಮಾಡಿದ್ದಾರೆ’, ಎಂಬ ಉಲ್ಲೇಖವು ಬಂದಿತ್ತು.

೩. ಹೀಗಾಯಿತು ಕೈಲಾಸ-ಮಾನಸ ಸರೋವರದ ಯಾತ್ರೆ !

೩ ಅ. ಗುರುಕೃಪೆಯಿಂದ ಕೈಲಾಸ-ಮಾನಸ ಸರೋವರದ ಯಾತ್ರೆಗಾಗಿ ಸಾಧಕರ ಆಯ್ಕೆಯಾಗುವುದು ಮತ್ತು ಆ ಆಯ್ಕೆಯು ಯೋಗ್ಯವೇ ಆಗಿದೆ ಎಂದು ನಂತರ ಗಮನಕ್ಕೆ ಬರುವುದು : ಕೈಲಾಸ- ಮಾನಸ ಸರೋವರದ ಯಾತ್ರೆಗಾಗಿ ಹೋಗುವುದು ಸುಲಭವಿರಲಿಲ್ಲ. ಅದಕ್ಕೆ ಶಾರೀರಿಕ ದೃಷ್ಟಿಯಿಂದ ಗಟ್ಟಿಮುಟ್ಟಾಗಿರಬೇಕಾಗುತ್ತದೆ ಮತ್ತು ಮನೋಬಲವೂ ಚೆನ್ನಾಗಿರಬೇಕಾಗುತ್ತದೆ. ‘ಯಾತ್ರೆಗೆ ಹೋಗುವ ಅನೇಕ ಜನರು ಹೇಗೆ ಅರ್ಧ ದಾರಿಯಲ್ಲಿಯೇ ಹಿಂತಿರುಗಿ ಬರುತ್ತಾರೆ’, ಎಂದು ನಾವು ಕೇಳಿದ್ದೆವು. ಸದ್ಗುರು ಗಾಡಗೀಳ ಕಾಕೂರವರೊಂದಿಗೆ ಕೈಲಾಸ ಪ್ರವಾಸದಲ್ಲಿ ಶ್ರೀ. ಸತ್ಯಕಾಮ ಕಣಗಲೇಕರ, ಶ್ರೀ.ಸ್ನೇಹಲ್ ರಾವೂತ, ಶ್ರೀ. ವಿನಾಯಕ ಶಾನಭಾಗ ಮತ್ತು ಶ್ರೀ. ದಿವಾಕರ ಆಗಾವಣೆ ಈ ೪ ಸಾಧಕರು ಹೋಗುವುದೆಂದು ಖಚಿತವಾಯಿತು. ಮುಂದೆ ಕೆಲವು ದಿನಗಳ ನಂತರ ಪುಣೆಯ ಸಾಧಕರಾದ ಶ್ರೀ. ಅನಿರುದ್ಧ ರಾಜಂದೇಕರ, ಶ್ರೀ. ಶಶಾಂಕ ಸಾನೆ ಮತ್ತು ಶ್ರೀ. ಉಮೇಶ ನಿಕಮ ಇವರು ಹಾಗೂ ಅನಂತರ ಕೆಲವು ದಿನಗಳ ನಂತರ ಸಾಂಗ್ಲಿಯ ಸಾಧಕರಾದ ಶ್ರೀ. ದತ್ತಾತ್ರೇಯ ರೆಠರೆಕರ ಇವರು ಕೈಲಾಸ ಯಾತ್ರೆಗೆ ಬರುವ ಬಗ್ಗೆ ಇಚ್ಛೆಯನ್ನು ವ್ಯಕ್ತ ಪಡಿಸಿದರು. ಇವರೆಲ್ಲರಿಗೂ ಸದ್ಗುರು ಗಾಡಗೀಳ ಕಾಕೂರವರಿಂದ ಒಪ್ಪಿಗೆ ದೊರಕಿದ ನಂತರ ಆ ಸಮಯದಲ್ಲಿ ಅದರ ಕಾರ್ಯಕಾರಣಭಾವವು ತಿಳಿಯಲಿಲ್ಲ. ಪ್ರತ್ಯಕ್ಷ ಕೈಲಾಸಯಾತ್ರೆಯ ಸಮಯದಲ್ಲಿ ನಮ್ಮೊಂದಿಗೆ ಈ ಎಲ್ಲ ಸಾಧಕರು ಇದ್ದುದರಿಂದ ‘ಚಿತ್ರೀಕರಣ, ವಿವಿಧ ದಿಕ್ಕುಗಳಿಂದ ವಿವಿಧ ಪದ್ಧತಿಗಳಿಂದ ಛಾಯಾಚಿತ್ರಗಳನ್ನು ತೆಗೆಯುವುದು, ಸ್ಥಳೀಯ ಮಾಹಿತಿಯನ್ನು ಸಂಗ್ರಹಿಸುವುದು, ದಿನನಿತ್ಯದ ಆಯೋಜನೆ ಮತ್ತು ಕಠಿಣ ಪ್ರವಾಸದಲ್ಲಿ ಪರಸ್ಪರರಿಗೆ ಆಧಾರ ಕೊಡುವುದು’, ಈ ಎಲ್ಲ ಸೇವೆಗಳಲ್ಲಿ ಅವರೆಲ್ಲರಿಂದ ಸಹಾಯವಾಯಿತು. ಹಿಂತಿರುಗಿ ಬರುವಾಗ ಶ್ರೀ. ರೆಠರೆಕರಕಾಕಾ ಇವರಿಂದ ಎಲ್ಲ ತೀರ್ಥಗಳು, ಕಲ್ಲು, ಮಣ್ಣು ಮತ್ತು ಸಾಮಗ್ರಿಗಳನ್ನು ಕಟ್ಟಲು ವಿಶೇಷ ಸಹಾಯ ದೊರಕಿತು. ಪ್ರವಾಸ ಮಾಡುವಾಗ ನಡುನಡುವೆ ಒಬ್ಬೊಬ್ಬ ಸಾಧಕರಿಗೆ ಅನಾರೋಗ್ಯವಾದಾಗ ಸಹಸಾಧಕರಿಂದ ಸಹಾಯ ಮತ್ತು ಆಧಾರ ದೊರಕಿತು. ಕೈಲಾಸಯಾತ್ರೆಯಲ್ಲಿ ಹೆಜ್ಜೆಹೆಜ್ಜೆಗೂ ಪರಾತ್ಪರ ಗುರು ಡಾ. ಆಠವಲೆಯವರು ಅನೇಕ ಬಾರಿ ಹೇಳಿದ ‘ಸಂಘೆ ಶಕ್ತಿ ಕಲೌಯುಗೆ | (ಎಂದರೆ ಕಲಿಯುಗದಲ್ಲಿ ಸಂಘಟಿತತನದಲ್ಲಿಯೇ ಸಾಮಥ್ರ್ಯವಿರುತ್ತದೆ.)’ ಎಂಬ ವಚನದ ನೆನಪಾಯಿತು. ಸದ್ಗುರು (ಸೌ.) ಗಾಡಗೀಳಕಾಕೂರೊಂದಿಗಿದ್ದ ನಾವು ೮ ಸಾಧಕರಿಗೆ ಪರಸ್ಪರರ ಸಹಾಯವಾಯಿತು. ಇದಕ್ಕಾಗಿ ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಪರಾತ್ಪರ ಗುರು ಡಾ. ಆಠವಲೆ ಇವರ ಚರಣಗಳಲ್ಲಿ ಕೃತಜ್ಞತೆಗಳು.

೩ ಆ. ಕೈಲಾಸ ಯಾತ್ರೆಯ ಸಮಯದಲ್ಲಿ ಪ.ಪೂ. ಭಕ್ತರಾಜ ಮಹಾರಾಜರೊಂದಿಗೆ ಸಂಬಂಧಪಟ್ಟ ಗ್ರಾಮಗಳಲ್ಲಿನ ಕೆಲವು ಶಿವಭಕ್ತರು ಜೊತೆಗಿರುವುದು, ಇದರಿಂದ ಪ.ಪೂ. ಭಕ್ತರಾಜ ಮಹಾರಾಜರ ಆಶೀರ್ವಾದವಿರುವುದೆಂದು ಅರಿವಾಗುವುದು : ಕೈಲಾಸ ಯಾತ್ರೆಗೆ ಹೋಗುವಾಗ ಕನಿಷ್ಠ ೭ ರಿಂದ ಹೆಚ್ಚೆಂದರೆ ೫೦ ಜನರ ಗುಂಪಿನಲ್ಲಿ ಹೋಗಬೇಕಾಗುತ್ತದೆ. ಕೈಲಾಸ ಪರ್ವತ ಮತ್ತು ಮಾನಸ ಸರೋವರ ಈ ಎರಡೂ ಚೀನಾದಲ್ಲಿವೆ. ಚೀನಾ ರಾಷ್ಟ್ರವು ಭಾರತೀಯರಿಗೆ ವೈಯಕ್ತಿಕ ‘ವೀಸಾ’ ಕೊಡುವುದಿಲ್ಲ. ನಮ್ಮ ಗುಂಪಿನಲ್ಲಿ ಒಟ್ಟು ೩೨ ಜನರಿದ್ದರು. ಅದರಲ್ಲಿ ೬ ಜನರು ಮಧ್ಯಪ್ರದೇಶದ ಇಂದೂರ ಮತ್ತು ೧೦ ಜನರು ಓಂಕಾರೇಶ್ವರದ ಹತ್ತಿರದ ಪ್ರದೇಶದಿಂದ ಬಂದಿದ್ದರು. ಒಟ್ಟು ೧೬ ಜನರು ಮಧ್ಯಪ್ರದೇಶದಿಂದ ಬಂದಿದ್ದರು. ಇಂದೂರ ಮತ್ತು ಓಂಕಾರೇಶ್ವರ ಇವೆರಡೂ ಊರುಗಳೆಂದರೆ ಸನಾತನ ಸಂಸ್ಥೆಯ ಪ್ರೇರಣಾಸ್ಥಾನವಾಗಿರುವ ಪ.ಪೂ. ಭಕ್ತರಾಜ ಮಹಾರಾಜ ಇವರೊಂದಿಗೆ ಸಂಬಂಧಪಟ್ಟ ಗ್ರಾಮಗಳು. ಸಂಪೂರ್ಣ ಪ್ರವಾಸದಲ್ಲಿ ಈ ೧೬ ಶಿವಭಕ್ತರಿಗೆ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಸತ್ಸಂಗವು ಲಭಿಸಿತು ಮತ್ತು ನಮ್ಮೆಲ್ಲ ಸಾಧಕರಿಗೆ ‘ಈ ಶಿವಭಕ್ತರ ಮಾಧ್ಯಮದಿಂದ ಪ.ಪೂ. ಭಕ್ತರಾಜ ಮಹಾರಾಜರೇ ಜೊತೆಗೆ ಬಂದಿದ್ದು ಅವರು ಒಂದು ರೀತಿಯಲ್ಲಿ ‘ನಾನು ನಿಮ್ಮೊಂದಿಗಿರುವೆನು’, ಎಂದು ಹೇಳುತ್ತಿದ್ದಾರೆ’, ಎಂದು ಅರಿವಾಯಿತು. ‘ಪ.ಪೂ. ಭಕ್ತರಾಜ ಮಹಾರಾಜ (ಪ.ಪೂ. ಬಾಬಾ) ಇವರ ನಮಗೆ ಆಶೀರ್ವಾವಿದೆ’, ಎಂದು ಅನಿಸಿತು ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಎಲ್ಲ ಸಾಧಕರಿಂದ ಪ.ಪೂ. ಬಾಬಾರವರ ಚರಣಗಳಲ್ಲಿ ಕೃತಜ್ಞತೆ ವ್ಯಕ್ತವಾಯಿತು.

೩ ಇ. ಚಳಿಯನ್ನು ತಡೆದುಕೊಳ್ಳುವ ಕ್ಷಮತೆ ಇಲ್ಲದಿದ್ದರೂ ಕೈಲಾಸ-ಮಾನಸ ಸರೋವರದ ಯಾತ್ರೆಯ ಸಮಯದಲ್ಲಿ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಗೆ ಯಾವುದೇ ಶಾರೀರಿಕ ತೊಂದರೆಯು ಆಗದಿರುವುದು : ಸಾಮಾನ್ಯವಾಗಿ ಸದ್ಗುರು ಗಾಡಗೀಳ ಕಾಕೂ ಇವರಿಗೆ ಚಳಿಯನ್ನು ಸಹಿಸಲು ಆಗುವುದಿಲ್ಲ. ಇದಕ್ಕೂ ಮೊದಲು ಅವರು ಅನೇಕ ಬಾರಿ ಹಿಮಾಲಯದ ಯಾತ್ರೆಯನ್ನು ಮಾಡಿದ್ದರೂ, ಅವರಿಗೆ ಶೀತ ಪ್ರದೇಶಗಳಲ್ಲಿ ೩-೪ ದಿನಗಳಿಗಿಂತ ಹೆಚ್ಚು ಇರಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ೧೫ ದಿನಗಳ ಕೈಲಾಸ ಪರ್ವತ ಮತ್ತು ಮಾನಸ ಸರೋವರದ ಯಾತ್ರೆ ಮಾಡುವುದೆಂದರೆ’, ಇದೊಂದು ದೊಡ್ಡ ಅಗ್ನಿಪರೀಕ್ಷೆಯಂತಿತ್ತು. ಸದ್ಗುರು ಗಾಡಗೀಳಕಾಕೂರವರೊಂದಿಗೆ ನಾವು ಒಟ್ಟು ೯ ಸಾಧಕರಿದ್ದೆವು. ವೈಶಿಷ್ಟ್ಯವೆಂದರೆ ನಮ್ಮ ೯ ಜನರಲ್ಲಿ ಕೇವಲ ಸದ್ಗುರು ಕಾಕೂ ಮಾತ್ರ ಶಾರೀರಿಕ ದೃಷ್ಟಿಯಿಂದ ಚೆನ್ನಾಗಿದ್ದರು. ಈ ೧೫ ದಿನಗಳಲ್ಲಿ ಅವರಿಗೆ ಎಲ್ಲಿಯೂ ಯಾವುದೇ ತೊಂದರೆಯಾಗಲಿಲ್ಲ.

೩ ಈ. ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ರಕ್ತದಲ್ಲಿ ಪ್ರಾಣವಾಯುವಿನ ಪ್ರಮಾಣವು ಕಡಿಮೆಯಾಗದಿರುವುದು : ಕೈಲಾಸದ ಮೇಲೆ ಹೋಗುವಾಗಿನ ೪ ದಿನಗಳು ಮತ್ತು ಕೈಲಾಸದಲ್ಲಿ ವಾಸ್ತವ್ಯದಲ್ಲಿರುವ ೩ ದಿನಗಳ ಕಾಲ ತುಂಬ ಚಳಿ ಇರುತ್ತದೆ. ಈ ಸಮಯದಲ್ಲಿ ಗಾಳಿಯಲ್ಲಿನ ಪ್ರಾಣವಾಯು ಬಹಳ ಕಡಿಮೆಯಿರುತ್ತದೆ. ಪ್ರಾಣವಾಯುವು ಕಡಿಮೆಯಿರುವುದರಿಂದ ಯಾತ್ರೆಯ ಸಮಯದಲ್ಲಿ ದಿನನಿತ್ಯ ಪ್ರತಿಯೊಬ್ಬ ಯಾತ್ರಿಕರ ರಕ್ತದಲ್ಲಿನ ಪ್ರಾಣವಾಯುವಿನ ಪ್ರಮಾಣವನ್ನು ನಮ್ಮೊಂದಿಗಿರುವ ಯಂತ್ರದ ಸಹಾಯದಿಂದ ಅಳೆಯುತ್ತಿದ್ದೆವು. ಪ್ರಾಣವಾಯುವಿನ ಪ್ರಮಾಣವು ೬೫ ಕ್ಕಿಂತ ಕೆಳಗೆ ಹೋದರೆ ಆ ಯಾತ್ರಿಕನನ್ನು ಹಿಂದಿರುಗಿ ಕಳುಹಿಸುತ್ತಾರೆ. ಒಟ್ಟು ೩೨ ಯಾತ್ರಿಕರಲ್ಲಿ ೬ ಯಾತ್ರಿಕರಿಗೆ ಮಾರ್ಗದಲ್ಲಿ ತುಂಬಾ ತೊಂದರೆಯಾಯಿತು ಮತ್ತು ಅವರಿಗೆ ಹಿಂದಿರುಗಿ ಹೋಗಬೇಕಾಯಿತು. ವೈಶಿಷ್ಟ್ಯವೆಂದರೆ ೩೨ ಯಾತ್ರಿಕರಲ್ಲಿ ಸದ್ಗುರು ಗಾಡಗೀಳ ಕಾಕೂರವರ ರಕ್ತದಲ್ಲಿ ಪ್ರಾಣವಾಯುವಿನ ಪ್ರಮಾಣವು ಶೇ. ೮೯-೯೦ ರಷ್ಟು ಇರುತ್ತಿತ್ತು. ಇತರ ಎಲ್ಲ ಯಾತ್ರಿಕರ ರಕ್ತದಲ್ಲಿ ಪ್ರಾಣವಾಯುವಿನ ಪ್ರಮಾಣವು ಕಡಿಮೆ ಇತ್ತು. (‘ಇದರಿಂದ ಪರಾತ್ಪರ ಗುರುದೇವರು ಕಲಿಸಿದ ಸಾಧನೆಯ ಮಹತ್ವವು ಗಮನಕ್ಕೆ ಬರುತ್ತದೆ. ಗುರುಕೃಪಾಯೋಗಾನುಸಾರ ಸಾಧನೆ ಮಾಡಿದ್ದರಿಂದ ಸಾಧನೆಯಲ್ಲಿ ಪ್ರಗತಿಯಾಯಿತು ಮತ್ತು ಅದರಿಂದ ಚೈತನ್ಯವು ಹೆಚ್ಚಾಯಿತು. ಚೈತನ್ಯವು ಹೆಚ್ಚಾದುದದರಿಂದ ಪ್ರಾಣವಾಯುವಿನ ಪ್ರಮಾಣವು ಕಡಿಮೆಯಾಗಲಿಲ್ಲ. ಅದಕ್ಕಾಗಿ ಗುರುಗಳ ಚರಣಗಳಲ್ಲಿ ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರೂ ಅದು ಕಡಿಮೆಯೇ ಆಗಿದೆ.’)

೩ ಉ. ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಕೈಲಾಸ ಪರ್ವತದ ಕಡೆಗೆ ಹೋದಾಗ ಕೈಲಾಸ ಪರ್ವತದ ಸುಂದರ ದರ್ಶನವಾಗುವುದು : ‘ಕೈಲಾಸ ಪರ್ವತಕ್ಕೆ ಹೋಗುವ ಎಲ್ಲರಿಗೂ ಕೈಲಾಸದ ದರ್ಶನವು ಆಗೇ ಆಗುತ್ತದೆ’, ಎಂದೆನಿಲ್ಲ. ಕೈಲಾಸದಲ್ಲಿ ಪ್ರತಿ ೧೦ ನಿಮಿಷಗಳಿಗೊಮ್ಮೆ ವಾತಾವರಣವು ಪೂರ್ಣವಾಗಿ ಬದಲಾಗುತ್ತದೆ. ಕೆಲವೊಮ್ಮೆ ಬಿಸಿಲು, ಕೆಲವೊಮ್ಮೆ ಮೋಡ, ಕೆಲವೊಮ್ಮೆ ಹಿಮವೃಷ್ಟಿ ಮತ್ತು ಕೆಲವೊಮ್ಮೆ ಮಳೆ ಇರುತ್ತದೆ. ಯಾವ ದಿನ ನಾವು ಸದ್ಗುರು ಗಾಡಗೀಳ ಕಾಕೂರವರೊಂದಿಗೆ ಕೈಲಾಸ ಪರ್ವತದ ಕಡೆಗೆ ಹೋದೆವೋ, ಆ ದಿನ ನಮಗೆ ಕೈಲಾಸ ಪರ್ವತದ ಸುಂದರ ದರ್ಶನವಾಯಿತು. ಒಂದು ಬಾರಿಯೂ ಮೋಡವು ಬರಲಿಲ್ಲ ಮತ್ತು ವೈಶಿಷ್ಟ್ಯವೆಂದರೆ ಇಂತಹ ವಾತಾವರಣವು ಇಡೀ ದಿನವಿತ್ತು.

೩ ಊ. ಕೈಲಾಸ ಪರ್ವತಕ್ಕೆ ಸನಾತನದ ಅತ್ತರನ್ನು ಅರ್ಪಿಸುವ ಹಾಗೂ ಮಾರ್ಗದರ್ಶಕರಾದ ಶ್ರೀ. ವಾರಿದ ಸೋನಿ ‘ಇವರೊಂದಿಗೆ ಕೈಲಾಸ ಪರ್ವತದ ಯಾತ್ರೆಯನ್ನು ಮಾಡುವುದು’, ಎಂದು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ನಿರ್ಧರಿಸುವುದು : ಕೈಲಾಸ ಪರ್ವತಕ್ಕೆ ಹೋಗಲು ನಾವು ಕಳೆದ ೩ ವರ್ಷಗಳಿಂದ ಅನೇಕ ಜನರ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದೆವು. ಅನೇಕ ಜನರು ಸದ್ಗುರು ಮತ್ತು ಸಾಧಕರನ್ನು ಕೈಲಾಸ ಯಾತ್ರೆಗೆ ಕರೆದುಕೊಂಡು ಹೋಗಲು ಮುಂದೆಯೂ ಬಂದರು. ಯಾವಾಗ ಜಯಪೂರದಲ್ಲಿನ ಶಿವಭಕ್ತರು ಮತ್ತು ಹಿತಚಿಂತಕರಾದ ಶ್ರೀ. ವಾರಿದ ಸೋನಿ ಇವರ ಭೇಟಿ ಯಾಯಿತೋ, ಆಗ ಸದ್ಗುರು ಕಾಕೂರವರು, “ಒಂದು ವೇಳೆ ಕೈಲಾಸ ಯಾತ್ರೆಯನ್ನು ಮಾಡುವುದಾದರೆ, ಇದೇ ವ್ಯಕ್ತಿಯೊಂದಿಗೆ ಮಾಡುವುದು,’ ಎಂದು ನಿರ್ಧರಿಸಿದರು. ನಮಗೆ ಜಯಪುರದ ಸಾಧಕಿ ಸೌ. ಅರ್ಚನಾ ಖೆಮಕಾ ಇವರು, “ಕಳೆದ ೬ ವರ್ಷಗಳಿಂದ ಶ್ರೀ.ವಾರಿದ ಸೋನಿಜಿಯವರು ಕೈಲಾಸ ಯಾತ್ರೆಯನ್ನು ಮಾಡುತ್ತಿದ್ದಾರೆ ಮತ್ತು ಯಾತ್ರೆಗೆ ಹೋಗುವಾಗ ಸನಾತನದ ಅತ್ತರಿನ ೫೦ ಬಾಟಲಿಗಳನ್ನು ತೆಗೆದುಕೊಂಡು ಹೋಗುತ್ತಾರೆ,” ಎಂದು ಹೇಳಿದರು. ಪ್ರತ್ಯಕ್ಷ ಭೇಟಿಯಾದಾಗ ಶ್ರೀ. ವಾರಿದ ಸೋನಿಜಿಯವರು ಸದ್ಗುರು (ಸೌ.) ಗಾಡಗೀಳ ಕಾಕೂರವರಿಗೆ, “ಇಂದಿನವರೆಗೆ ನಾನು ಶಿವಪೂಜೆಯಲ್ಲಿ ಅನೇಕ ಅತ್ತರಗಳನ್ನು ಉಪಯೋಗಿಸಿದ್ದೇನೆ; ಆದರೆ ಸನಾತನದ ಅತ್ತರಿನಂತಹ ಪರಿಮಳವು ಯಾವುದರಲ್ಲಿಯೂ ಇಲ್ಲ. ಅಂದಿನಿಂದ ನಾನು, ‘ಕೈಲಾಸ ಪರ್ವತದ ಅಡಿಭೂಮಿಗೆ, ಯಾವುದಕ್ಕೆ ‘ಚರಣಸ್ಪರ್ಶ’ ಎನ್ನುವರೋ, ಆ ಸ್ಥಳದಲ್ಲಿ ಕೇವಲ ಸನಾತನದ ಅತ್ತರನ್ನೇ ಅರ್ಪಿಸುವುದು,” ಎಂದು ನಿರ್ಧರಿಸಿದೆನು, ಎಂದು ಹೇಳಿದರು. ಇದಕ್ಕೆ ಸದ್ಗುರು ಕಾಕೂರವರು, “ನೀವು ಚರಣಸ್ಪರ್ಶ”ದಲ್ಲಿ ಅತ್ತರನ್ನು ಅರ್ಪಿಸುತ್ತೀರಿ, ಅಂದರೆ ಸಾಕ್ಷಾತ್ ಶಿವನ ಚರಣಗಳ ಮೇಲೆಯೇ ಅತ್ತರನ್ನು ಅರ್ಪಿಸುತ್ತೀರಿ. ನಾವೆಲ್ಲ ಸಾಧಕರು ಕೈಲಾಸ ಪರ್ವತದ ಚರಣಸ್ಪರ್ಶದವರೆಗೆ ಹೋಗುವ ಮೊದಲೇ ಗುರುದೇವರು ಸಿದ್ಧಪಡಿಸಿದ ಸನಾತನ ಅತ್ತರವು ತಲುಪಿದೆ. ಸ್ವಲ್ಪದರಲ್ಲಿ ನೀವೇ ನಮಗೆ ಈಗ ಕೈಲಾಸದ ದಾರಿಯನ್ನು ತೋರಿಸಿರಿ ಮತ್ತು ನಮ್ಮನ್ನು ಕೈಲಾಸ ಪರ್ವತದವರೆಗೆ ಕರೆದುಕೊಂಡು ಹೋಗಿ”, ಎಂದು ಹೇಳಿದರು. ಇದನ್ನು ಕೇಳಿದಾಗ ಶ್ರೀ.ವಾರಿದ ಸೋನಿಯವರ ಭಾವಜಾಗೃತವಾಯಿತು. ಶ್ರೀ. ವಾರಿದ ಸೋನಿಯವರು ೩ ತಿಂಗಳಲ್ಲಿ ಯಾತ್ರೆಯ ಸಿದ್ಧತೆಯನ್ನು ಮಾಡಿದರು ಮತ್ತು ನಮ್ಮಿಂದ ಮಾಡಿಸಿಕೊಂಡರು.

೩ ಎ. ಎಲ್ಲ ಕೈಲಾಸ ಯಾತ್ರಿಕರಿಗೆ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಆಧಾರವೆನಿಸುವುದು : ಕೈಲಾಸ ಯಾತ್ರೆಗೆ ಹೋಗುವಾಗ ನಮ್ಮ ಗುಂಪಿನಲ್ಲಿ ಒಟ್ಟು ೩೨ ಜನರಿದ್ದರು. ಅದರಲ್ಲಿ ಸದ್ಗರು (ಸೌ.) ಗಾಡಗೀಳಕಾಕೂರವರ ಸಹಿತ ೭ ಮಹಿಳೆಯರಿದ್ದರು. ಕೊನೆಗೆ ಏನಾಯಿತೆಂದರೆ, ಕೆಲವು ಕಾರಣಗಳಿಂದ ಉಳಿದ ೬ ಮಹಿಳೆಯರು ಯಾತ್ರೆ ಪೂರ್ಣವಾಗುವ ಮೊದಲೇ ಹಿಂತಿರುಗಿದರು. ಕೊನೆಗೆ ನಾವು ಕೇವಲ ೨೨ ಜನರೇ ಉಳಿದೆವು ಮತ್ತು ಅವರಲ್ಲಿ ಕೇವಲ ಸದ್ಗುರು ಗಾಡಗೀಳಕಾಕೂರೊಬ್ಬರೇ ಮಹಿಳೆಯಾಗಿದ್ದರು. ವೈಶಿಷ್ಟ್ಯವೆಂದರೆ ಗುಂಪಿನಲ್ಲಿ ಎಲ್ಲರಿಗೂ ಸದ್ಗುರು ಗಾಡಗೀಳಕಾಕೂರವರ ಆಧಾರವೆನಿಸುತ್ತಿತ್ತು. ನಮ್ಮ ೩೨ ಜನರೊಂದಿಗೆ ೨ ಚಾಲಕರು, ೮ ಶೇರಪಾ ಮತ್ತು ೧ ಟಿಬೆಟಿಯನ್ ಗೈಡ್ ಇದ್ದರು. ಕೆಲವೊಮ್ಮೆ ಯಾವುದೇ ಅಡಚಣೆ ಬಂದರೆ ಅಥವಾ ಒಬ್ಬ ಯಾತ್ರಿಕನೊಂದಿಗೆ ಇನ್ನೊಬ್ಬ ಯಾತ್ರಿಕನ ಹೊಂದಾಣಿಕೆಯಾಗದಿದ್ದರೂ, ಶೇರಪಾ ಜನರು ಸಹ ಸದ್ಗುರು ಕಾಕೂರವರ ಬಳಿಗೆ ಸಹಾಯ ಪಡೆಯಲು ಬರುತ್ತಿದ್ದರು. ಎಲ್ಲ ಜನರೂ ಸದ್ಗುರು ಕಾಕೂರವರನ್ನು ‘ಮಾತಾಜಿ’ ಎಂದು ಕರೆಯುತ್ತಿದ್ದರು.

ಬ್ರಹ್ಮದೇವರ ಮನಸ್ಸಿನಲ್ಲಿ ವಿಚಾರ ಬಂದು ಉತ್ಪತ್ತಿಯಾಗಿರುವ ಮಾನಸ ಸರೋವರಕ್ಕೆ ಭಾವಪೂರ್ಣ ಪ್ರಾರ್ಥನೆಯನ್ನು ಮಾಡುತ್ತಿರುವ ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ. ಸರೋವರದ ಪಾರದರ್ಶಕ ಮತ್ತು ಶುದ್ಧ ನೀರಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿರುವ ಕಲ್ಲುಗಳು

೪. ಮಾನಸ ಸರೋವರದ ಮಹತ್ವ

ಬ್ರಹ್ಮದೇವರ ಮನಸ್ಸಿನಲ್ಲಿ ಈ ಸರೋವರದ ಉತ್ಪತ್ತಿಯಾಯಿತು ನಂತರ ಈ ಸರೋವರವು ಪ್ರತ್ಯಕ್ಷ ಪೃಥ್ವಿಯ ಮೇಲೆ ಪ್ರಕಟವಾಯಿತು. ಆದುದರಿಂದ ಇದಕ್ಕೆ ‘ಮಾನಸ ಸರೋವರ’ ಎಂದು ಕರೆಯುತ್ತಾರೆ. ಇದು ಬ್ರಹ್ಮಪುತ್ರ, ಸತಲಜ, ಸಿಂಧೂ, ಘಾಗರಾ (ಗಂಗಾ ನದಿಯ ಉಪನದಿ) ಮತ್ತು ಶರಯೂ ಈ ನದಿಗಳ ಉಗಮಸ್ಥಾನವಾಗಿದೆ. ಆಕಾಶವು ಶುಭ್ರವಿರುವಾಗ ಈ ಸರೋವರದ ತಟದಲ್ಲಿ ನಿಂತರೆ ಕೈಲಾಸ ಪರ್ವತದ ದರ್ಶನವಾಗುತ್ತದೆ. ಮಾನಸ ಸರೋವರವು ಜಗತ್ತಿನಲ್ಲಿನ ಅತ್ಯಧಿಕ ಎತ್ತರದ ಮೇಲಿರುವ ಸರೋವರವಾಗಿದೆ. (ಅಂದರೆ ಮುಂಬೈಯಿಂದ ೪.೫ ಕಿ.ಮೀ. ಆಕಾಶದಲ್ಲಿ ಮೇಲೆ ಹೋದಾಗ ಎಷ್ಟು ಎತ್ತರಕ್ಕೆ ನಾವು ತಲುಪುತ್ತೇವೆಯೋ, ಅಷ್ಟು ಎತ್ತರದ ಮೇಲೆ ಈ ಸರೋವರ ಇದೆ.) ಮಾನಸ ಸರೋವರದ ಪರಿಧಿಯು ೮೮ ಕಿ.ಮೀ. ಇದೆ ಮತ್ತು ವಿಸ್ತಾರವು ೪೧೦ ಕಿ.ಮೀ. ಇದೆ. ಸಂಕ್ಷಿಪ್ತದಲ್ಲಿ ಮಾನಸ ಸರೋವರವು ಮಹಾರಾಷ್ಟ್ರದಲ್ಲಿನ ಪುಣೆ ನಗರದಷ್ಟಿದೆ.

೪ ಅ. ಮಾನಸ ಸರೋವರದ ಹತ್ತಿರದ ‘ರಾಕ್ಷಸ ಕೆರೆ’ : ಮಾನಸ ಸರೋವರದಲ್ಲಿನ ಹೆಚ್ಚಿನ ನೀರು ಪಕ್ಕದಲ್ಲಿರುವ ಒಂದು ದೊಡ್ಡ ಕೆರೆಗೆ ಹೋಗುತ್ತದೆ. ಇದೇ ದೊಡ್ಡ ಕೆರೆಯ ದಡದಲ್ಲಿ ಕುಳಿತು ಶಿವನನ್ನು ಪ್ರಸನ್ನಗೊಳಿಸಲು ರಾವಣನು ತಪಸ್ಸು ಮಾಡಿದ್ದನು. ಅಂದಿನಿಂದ ಈ ಕೆರೆಗೆ ‘ರಾಕ್ಷಸ ಕೆರೆ’ ಎಂದು ಹೆಸರು ಬಂದಿದೆ. ವೈಶಿಷ್ಟ್ಯವೆಂದರೆ ಮಾನಸ ಸರೋವರದಲ್ಲಿನ ನೀರು ಸಿಹಿ ಇದ್ದರೆ, ರಾಕ್ಷಸ ಕೆರೆಯ ನೀರು ಉಪ್ಪು ಮತ್ತು ವಿಷಯುಕ್ತವಾಗಿದೆ. ಮನುಷ್ಯ, ಪಕ್ಷಿ ಮತ್ತು ಪ್ರಾಣಿಗಳು ಈ ರಾಕ್ಷಸ ಕೆರೆಯ ನೀರು ಕುಡಿಯುವುದಿಲ್ಲ.

ಮಾನಸ ಸರೋವರದ ದಡದಲ್ಲಿ ಮಾಡಿದ ಶಿವಯಾಗ. ಯಾಗದಲ್ಲಿ ಆಹುತಿಯನ್ನು ನೀಡುತ್ತಿರುವ ೧. ಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ೨. ಮಾರ್ಗದರ್ಶಕರಾದ ಶ್ರೀ. ವಾರಿದ ಸೋನಿ ಮತ್ತು ಜೊತೆಗೆ ಇತರ ಸಾಧಕರು

೪ ಆ. ಮಾನಸ ಸರೋವರದ ತೀರದಲ್ಲಿ ಶಿವಯಾಗವನ್ನು ಮಾಡುವುದು : ಮಾನಸ ಸರೋವರದ ತೀರದಲ್ಲಿ ನಮಗೆ ಒಂದು ರಾತ್ರಿ ವಾಸ್ತವ್ಯ ಮಾಡುವ ಭಾಗ್ಯ ಲಭಿಸಿತು. ಬೆಳಗಿನ ಸಮಯದಲ್ಲಿ ನಮ್ಮ ಮಾರ್ಗದರ್ಶಕರಾದ ಶ್ರೀ. ವಾರಿದ ಸೋನಿಯವರು ಮಾನಸ ಸರೋವರದ ತೀರದಲ್ಲಿ ‘ಶಿವಯಾಗ’ ಮಾಡಬೇಕೆಂದು ನಿಶ್ಚಯಿಸಿದರು. ಅದರಂತೆ ಅವರು ಎಲ್ಲ ಸಾಮಗ್ರಿಗಳನ್ನು ಸಹ ತಂದಿದ್ದರು. ಅವರು ಶಿವಯಾಗದ ಎಲ್ಲ ಸಿದ್ಧತೆಯನ್ನು ಮಾಡಿದರು ಮತ್ತು ತಾವೇ ಮಂತ್ರವನ್ನು ಹೇಳುತ್ತ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಂದ ಶಿವಯಾಗವನ್ನು ಮಾಡಿಸಿಕೊಂಡರು. ವೈಶಿಷ್ಟ್ಯವೆಂದರೆ ಸಾಮಾನ್ಯವಾಗಿ ಮಾನಸ ಸರೋವರದ ತೀರದಲ್ಲಿ ಗಾಳಿಯು ಜೋರಾಗಿ ಬೀಸುತ್ತದೆ; ಆದರೆ ಯಾಗವು ಆರಂಭವಾದಾಗ ಗಾಳಿಯು ಶಾಂತವಾಯಿತು ಮತ್ತು ಯಾಗವು ನಿರ್ವಿಘ್ನವಾಗಿ ನೆರವೇರಿತು. ತದನಂತರ ಶ್ರೀ.ವಾರಿದ ಸೋನಿಯವರು ತಯಾರಿಸಿ ತಂದಿದ್ದ ಬೆಳ್ಳಿಯ ಬಿಲ್ವಪತ್ರವನ್ನು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಹಸ್ತದಿಂದ ಮಾನಸ ಸರೋವದಲ್ಲಿ ಅರ್ಪಣೆ ಮಾಡಿದರು.

೪ ಇ. ಢಿರಾಫೂಕ್ ಮತ್ತು ಚರಣಸ್ಪರ್ಶ : ಕೈಲಾಸ ಪ್ರದಕ್ಷಿಣೆ ಮಾಡುವಾಗ ನಾವು ಕೈಲಾಸ ಪರ್ವತದ ತುಂಬಾ ಹತ್ತಿರ ಬರುತ್ತೇವೆ, ಆ ಸ್ಥಾನವೆಂದರೆ ‘ಢಿರಾಫೂಕ್’. ಇಲ್ಲಿಂದ ಕೈಲಾಸ ಪರ್ವತದ ಸುಂದರ ದರ್ಶನವಾಗುತ್ತದೆ. ನಸುಕಿನ ಸೂರ್ಯೋದಯದ ಸಮಯದಲ್ಲಿ ಸೂರ್ಯಕಿರಣಗಳು ಕೈಲಾಸದ ಮೇಲೆ ಬೀಳುತ್ತವೆ. ಆಗ ಕೈಲಾಸವು ಸುವರ್ಣ ಪರ್ವತದಂತೆ ಕಾಣಿಸುತ್ತದೆ; ಆದುದರಿಂದ ಈ ಸಮಯದಲ್ಲಿ ಅದಕ್ಕೆ ‘ಸುವರ್ಣ ಕೈಲಾಸ’ ಎಂದೂ ಕರೆಯುತ್ತಾರೆ. ಢಿರಾಫೂಕ್‍ನಿಂದ ೩ ಕಿ.ಮೀ. ಕಾಲುನಡಿಗೆಯಿಂದ ಹೋದರೆ ನಾವು ಕೈಲಾಸದ ಅಡಿಭೂಮಿಗೆ ತಲುಪುತ್ತೇವೆ. ಈ ಸ್ಥಾನಕ್ಕೆ ‘ಚರಣಸ್ಪರ್ಶ’ ಎಂದು ಕರೆಯುತ್ತಾರೆ; ಏಕೆಂದರೆ ನಾವು ಪ್ರತ್ಯಕ್ಷ ಕೈಲಾಸ ಪರ್ವತ, ಎಲ್ಲಿ ಸಾಕ್ಷಾತ್ ಶಿವನಿರುವನೋ, ಅವನ ಚರಣಗಳಿಗೆ ಅಂದರೆ ಪರ್ವತವನ್ನು ಸ್ಪರ್ಶ ಮಾಡಬಹುದು. ‘ಚರಣಸ್ಪರ್ಶದಲ್ಲಿನ ಪ್ರತಿಯೊಂದು ಕಲ್ಲು ಶಿವನ ಆತ್ಮಲಿಂಗವೇ ಆಗಿದೆ’, ಎಂದು ಹೇಳಲಾಗುತ್ತದೆ.

೪ ಈ. ಸದ್ಗುರುಗಳ ಕೃಪೆಯಿಂದ ಕೆಲವು ಸಾಧಕರಿಗೆ ‘ಚರಣಸ್ಪರ್ಶ’ದವರೆಗೆ ಹೋಗಲು ಸಾಧ್ಯವಾಗುವುದು : ಢಿರಾಫೂಕ್ ನಿಂದ ‘ಚರಣಸ್ಪರ್ಶ’ ಕ್ಕೆ ಹೋಗಲು ಪ್ರಚಂಡ ಮನೋಬಲ ಮತ್ತು ಶಾರೀರಿಕ ಸ್ವಾಸ್ಥ್ಯ ಬೇಕಾಗುತ್ತದೆ; ಏಕೆಂದರೆ ಪ್ರತಿ ಹತ್ತನೇ ಹೆಜ್ಜೆಗೆ ಮನುಷ್ಯನಿಗೆ ದಮ್ಮು ಹತ್ತುತ್ತದೆ ಮತ್ತು ಅನೇಕ ಜನರು ದೂರದಿಂದಲೇ ದರ್ಶನ ಪಡೆದು ಮರಳಿ ಬರುತ್ತಾರೆ. ಕೈಲಾಸ ಯಾತ್ರೆಗೆ ಹೋಗುವವರಲ್ಲಿ ಕೇವಲ ಶೇ. ೫ ರಷ್ಟು ಜನರು ‘ಚರಣಸ್ಪರ್ಶ’ ಕ್ಕೆ ಹೋಗುವ ಧೈರ್ಯವನ್ನು ಮಾಡುತ್ತಾರೆ. ಅವರಲ್ಲಿನ ಅರ್ಧ ಯಾತ್ರಿಕರು ಅರ್ಧದಾರಿಗೆ ಮರಳಿ ಬರುತ್ತಾರೆ. ಇಂತಹ ಆ ಪಾವನ ಸ್ಥಳದಲ್ಲಿ ನಮ್ಮ ಮಾರ್ಗದರ್ಶಕರಾದ ಶ್ರೀ. ವಾರಿದ ಸೋನಿ ಇವರೊಂದಿಗೆ ಪುಣೆಯ ಸಾಧಕರು ಶ್ರೀ. ಉಮೇಶ ನಿಕಮ, ಶ್ರೀ. ಶಶಾಂಕ ಸಾನೆ ಮತ್ತು ಶ್ರೀ. ದತ್ತಾತ್ತೇಯ ರೆಠರೆಕರ ಇವರೆಲ್ಲರೂ ಹೋಗಿ ಬಂದರು. ಕೇವಲ ಸದ್ಗುರುಗಳ ಕೃಪೆಯಿಂದಲೇ ಅವರು ಹೋಗಿಬಂದರು ! ಶ್ರೀಗುರುಕೃಪೆಯಿಂದಾಗಿ ಈ ಸಾಧಕರು ‘ಚರಣಸ್ಪರ್ಶ’ದವರೆಗೆ ಹೋಗಿ ಅಲ್ಲಿನ ಆತ್ಮಲಿಂಗಸ್ವರೂಪವಾಗಿರುವ ಕಲ್ಲು ಮತ್ತು ಗಂಗಾಸ್ವರೂಪವಾಗಿರುವ ಪವಿತ್ರ ಕೈಲಾಸದ ತೀರ್ಥವನ್ನು ತಂದರು.

ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಎರಡೂವರೆ ಗಂಟೆಗಳ ಕಾಲ ಲಭಿಸಿದ ದಿವ್ಯಜ್ಯೋತಿಗಳ (ಸಾಕ್ಷಾತ್ ದೇವತೆಗಳ) ಅದ್ವಿತೀಯ ದರ್ಶನದ ಭಾಗ್ಯ

ಮಾನಸ ಸರೋವರದಲ್ಲಿ ಬ್ರಾಹ್ಮೀಮುಹೂರ್ತದಲ್ಲಿ ದಿವ್ಯ ಜ್ಯೋತಿಗಳ ರೂಪದಲ್ಲಿ ಸ್ನಾನಕ್ಕಾಗಿ ಬಂದಿರುವ ಋಷಿಗಳು ಮತ್ತು ದೇವತೆಗಳು‘ ದಿನನಿತ್ಯವು ಬ್ರಾಹ್ಮೀಮುಹೂರ್ತದಲ್ಲಿ ಸಪ್ತರ್ಷಿಗಳು ಮತ್ತು ದೇವತೆಗಳು ಜ್ಯೋತಿಯ ರೂಪದಲ್ಲಿಯೇ ಮಾನಸ ಸರೋವರಕ್ಕೆ ಸ್ನಾನ ಮಾಡಲು ಬರುತ್ತಾರೆ ಹಾಗೂ ಸೂರ್ಯೋದಯಕ್ಕೆ ಮುಂಚೆ ಈ ಜ್ಯೋತಿಗಳು ಕೈಲಾಸ ಪರ್ವತದ ಕಡೆಗೆ ಶಿವನ ದರ್ಶನಕ್ಕೆ ಹೋಗುತ್ತಾರೆ. ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ನಮ್ಮೆಲ್ಲರಿಗೂ ರಾತ್ರಿ ೨.೩೦ ರಿಂದ ನಸುಕಿನ ೫ ಗಂಟೆಯವರೆಗೆ ಈ ದಿವ್ಯ ಜ್ಯೋತಿಗಳ ದರ್ಶನವಾಯಿತು. ಇದೆಲ್ಲವೂ ಗುರುಗಳ ಕೃಪೆಯಾಗಿದೆ.

ಈ ಕುರಿತು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು, “ಈ ದಿವ್ಯಜ್ಯೋತಿಗಳ ಪೈಕಿ ಕೆಲವರು ಸಿದ್ಧಯೋಗಿಗಳು ಮತ್ತು ಕೆಲವರು ಸಪ್ತರ್ಷಿಗಳಿದ್ದರು. ಕೆಲವು ಜ್ಯೋತಿಗಳು ದೇವತೆಗಳ ರೂಪದಲ್ಲಿಯೂ ಇದ್ದವು, ಎಂದು ಅರಿವಾಯಿತು. ಈ ಜ್ಯೋತಿಗಳು ವಿವಿಧ ಪ್ರಕಾಶದಲ್ಲಿರುವುದು ಗಮನಕ್ಕೆ ಬಂದಿತು. ಕೆಲವು ತಿಳಿಗೆಂಪು, ಕೆಲವು ತಿಳಿನೀಲಿ ಮತ್ತು ಕೆಲವು ದೈದೀಪ್ಯಮಾನ ಪ್ರಕಾಶದಂತೆ ಗೋಚರಿಸುತ್ತಿದ್ದವು. ಈ ಜ್ಯೋತಿಗಳು ಮಾನಸ ಸರೋವರದಲ್ಲಿ ಸ್ನಾನ ಮಾಡಿ, ಎತ್ತರವಾಗಿ ಏಳುತ್ತಿದ್ದವು. ಕೆಲವು ಜ್ಯೋತಿಗಳು ಒಂದರಿಂದ ಎರಡು, ಎರಡರಿಂದ ನಾಲ್ಕು ಈ ರೀತಿ ಆಗುತ್ತಿರುವುದೂ ಗಮನಕ್ಕೆ ಬಂದಿತು. ಈ ಜ್ಯೋತಿಗಳು ನೃತ್ಯ ಮಾಡುತ್ತಿವೆಯೆಂದೂ ಅರಿವಾಯಿತು. ಪೂರ್ವಸುಕೃತವಿದ್ದರೆ, ಜನರಿಗೆ ಈ ಜ್ಯೋತಿಗಳು ೨೦ ಸೆಕೆಂಡುಗಳ ಕಾಲ ಕಾಣಿಸುತ್ತವೆ; ಆದರೆ ಸಾಧಕರಾದ ನಮಗೆಲ್ಲರಿಗೂ ಎರಡೂವರೆ ಗಂಟೆಗಳ ಕಾಲ ಸ್ಥೂಲದಲ್ಲಿ ದರ್ಶನವಾಯಿತು’, ಎಂದು ಹೇಳಿದರು. ಆ ಸಮಯದಲ್ಲಿ ನಾವು ಅವರಿಗೆ, ‘ರಾಮರಾಜ್ಯದ ಸ್ಥಾಪನೆಯಾಗಬೇಕು, ಇದಕ್ಕಾಗಿ ನೀವೇ ನಮಗೆ ಸಹಾಯ ಮಾಡಿ. ತಮ್ಮ ಕೃಪೆಯ ಹೊರತು ಈ ಕಾರ್ಯವಾಗಲು ಸಾಧ್ಯವಿಲ್ಲ,’ ಎಂದು ಪ್ರಾರ್ಥನೆಯನ್ನು ಮಾಡಿದೆವು. ‘ಭಗವಂತನಿಗೆ ಪರಾತ್ಪರ ಗುರು ಡಾಕ್ಟರರ ಸಾಧಕರನ್ನು ಭೇಟಿಯಾಗಬೇಕೆಂದು ಅನಿಸುತ್ತಿದೆ’, ಎಂದು ನಮಗೆ ಈ ಮಂಗಲಪ್ರಸಂಗದಲ್ಲಿ ಅರಿವಾಯಿತು. ಪರಾತ್ಪರ ಗುರು ಡಾಕ್ಟರರ ಕೃಪಾಛತ್ರದಿಂದಾಗಿಯೇ ಇದು ಸಾಧ್ಯವಾಯಿತು.’

ಮೇಲಿನ ದರ್ಶನ ಪಡೆದ ನಂತರ ಸದ್ಗುರು ಕಾಕೂರವರು ವಿಶ್ರಾಂತಿಯನ್ನು ತೆಗೆದುಕೊಂಡರು. ಆಗ ಅವರಿಗೆ ಕನಸಿನಲ್ಲಿ ಓರ್ವ ಸಿದ್ಧಪುರುಷರ ಧ್ವನಿಯು ಕೇಳಿಸಿತು. ಆ ಸಿದ್ಧರು, ‘ನಾವು ರುದ್ರಶಕ್ತಿಗಳಾಗಿದ್ದೇವೆ’, ಎಂದು ಹೇಳಿದರು. ಕನಸಿನ ಬಗ್ಗೆ ಮಾತನಾಡಿದ ಸದ್ಗುರು ಕಾಕೂರವರು, “ನಾಲ್ಕು ಮುಖದ ರುದ್ರಾಕ್ಷಿಯಿಂದಲೇ ರುದ್ರಶಕ್ತಿಗಳ ನಿರ್ಮಾಣವಾಗುತ್ತದೆ. ರುದ್ರಾಕ್ಷಿಯು ಬ್ರಹ್ಮದೇವ-ಸರಸ್ವತಿ ಇವರಿಗೆ ಸಂಬಂಧ ಪಟ್ಟಿದೆ. ರುದ್ರ ಎಂದರೆ ಶಿವ, ಆದುದರಿಂದ ಮಾನಸ ಸರೋವರವು ಬ್ರಹ್ಮದೇವನಿಂದ ಉತ್ಪತ್ತಿಯಾಗಿದೆ,” ಎಂದು ಹೇಳಿದರು.

ಕೈಲಾಸದ ಬಗ್ಗೆ ಸದ್ಗುರು ಕಾಕೂರವರು ಹೇಳುತ್ತಾ, “ಕೈಲಾಸ ಪರ್ವತವು ಪ್ರಚಂಡ ರಹಸ್ಯಮಯವಾಗಿದೆ. ಅದು ಶಬ್ದಾತೀತವಾಗಿದೆ, ಅಂದರೆ ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನದಾಗಿದೆ”, ಎಂದು ಹೇಳಿದರು. ಕೈಲಾಸ ಮಾನಸ ಸರೋವರ ಯಾತ್ರೆಯ ಬಗ್ಗೆ ಹೇಳಿದ ಅವರು, “ಪ.ಪೂ. ಡಾಕ್ಟರರ ಕೃಪೆಯಿಂದತಿ ನಮಗೆ ‘ಗುರುಕೃಪಾಯೋಗ’ರೂಪಿ ಪ್ರಾಣವಾಯುವಿನ ‘ಮಾಸ್ಕ್’ವೇ ದೊರಕಿತ್ತು. ಅದೇ ನಮಗಾಗಿ ‘ಆಕ್ಸಿಜನ್ ಸಿಲಿಂಡರ್ನ ಕೆಲಸವನ್ನು ಮಾಡುತ್ತಿತ್ತು. ಅದರಿಂದಾಗಿಯೇ ನಮಗೆ ಈ ಯಾತ್ರೆಗೆ ಹೋಗಲು ಸಾಧ್ಯವಾಯಿತು. ನಮಗೆ ಕೇವಲ ಸೇವೆಯ ಅಭ್ಯಾಸವಿತ್ತು. ಶಾರೀರಿಕ ದೃಷ್ಟಿಯಿಂದ ನೋಡಿದರೆ ನಾವು ಸಕ್ಷಮರಿಲ್ಲ. ಕೇವಲ ಗುರುಗಳು ನೀಡಿದ ಚೈತನ್ಯದಿಂದಾಗಿಯೇ ನಾವು ಈ ಯಾತ್ರೆಯನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಯಿತು”, ಎಂದರು.

ಸದ್ಗುರು (ಸೌ.) ಗಾಡಗೀಳಕಾಕೂ ಮತ್ತು ಪರಾತ್ಪರ ಗುರು ಡಾ. ಆಠವಲೆ ಇವರ ಚರಣಗಳಲ್ಲಿ ವ್ಯಕ್ತ ಮಾಡಿದ ಕೃತಜ್ಞತೆಗಳು !

‘ಪೃಥ್ವಿಯ ಮೇಲಿನ ಎಲ್ಲ ತೀರ್ಥಕ್ಷೇತ್ರಗಳ ಮೇರುಮಣಿಯೆಂದರೆ ‘ಕೈಲಾಸ ಪರ್ವತ’. ಪೃಥ್ವಿಯ ಮೇಲಿನ ತೀರ ಕಡಿಮೆ ಜನರಿಗೆ ಅವರ ಒಂದು ಜನ್ಮದಲ್ಲಿ ಕೈಲಾಸ ಪರ್ವತದ ದರ್ಶನವು ಘಟಿಸುತ್ತದೆ. ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಈ ಕೈಲಾಸ ಯಾತ್ರೆಯು ಕೇವಲ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ದೈವೀ ಉಪಸ್ಥಿತಿಯಿಂದ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಆಶೀರ್ವಾದದಿಂದಾಗಿ ಪೂರ್ಣವಾಯಿತು. ‘ಹಿಂದೂ ರಾಷ್ಟ್ರ-ಸ್ಥಾಪನೆಯಲ್ಲಿನ ಎಲ್ಲ ಅಡತಡೆಗಳು ದೂರವಾಗಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಮತ್ತು ಮುಂಬರುವ ಭೀಕರ ಕಾಲದಲ್ಲಿ ಭಗವಾನ ಶಿವನು ಸನಾತನ ಸಂಸ್ಥೆಯ ಎಲ್ಲ ಸಾಧಕರ ರಕ್ಷಣೆಯನ್ನು ಮಾಡಬೇಕು’, ಎಂದು ಪ್ರಾರ್ಥನೆ ಮಾಡುವುದಕ್ಕಾಗಿಯೇ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ಕೈಲಾಸ ಯಾತ್ರೆಯನ್ನು ಮಾಡಿದರು. ಇದಕ್ಕಾಗಿ ನಾವು ಸನಾತನದ ಎಲ್ಲ ಸಾಧಕರು ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಪರಾತ್ಪರ ಗುರು ಡಾ. ಆಠವಲೆ ಇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತ ಮಾಡುತ್ತೇವೆ.’

– ಶ್ರೀ. ವಿನಾಯಕ ಶಾನಭಾಗ, ಚೆನ್ನೈ (೧೩.೨. ೨೦೨೦)