ಸಂತರು ಮಾಡಿದ ಮತ್ತು ಹೇಳಿದ ವಿವಿಧ ಪ್ರಾರ್ಥನೆಗಳು
೧. ಶಂಕರಾಚಾರ್ಯರು ಪರಮೇಶ್ವರನಿಗೆ ಮಾಡಿದ ಪ್ರಾರ್ಥನೆ (ಜ್ಞಾನಯೋಗಕ್ಕನುಸಾರ)
‘ಹೇ ಪರಮೇಶ್ವರಾ, ನನ್ನಲ್ಲಿನ ಅಹಂಕಾರವನ್ನು ದೂರುಗೊಳಿಸು. ನನ್ನ ಮನಸ್ಸನ್ನು ನಿಯಂತ್ರಣದಲ್ಲಿಡು. ನನ್ನ ವಿಷಯಾಸಕ್ತಿಯನ್ನು ಶಾಂತಗೊಳಿಸು. ನನ್ನಲ್ಲಿ ಭೂತದಯೆಯ ವಿಸ್ತಾರವನ್ನು ಮಾಡು ಮತ್ತು ನನ್ನನ್ನು ಸಂಸಾರಸಾಗರದ ಆಚೆಯ ತೀರಕ್ಕೆ ಒಯ್ಯು.
೨. ಪೂ. ಶಾರದಾದೇವಿ (ಶ್ರೀರಾಮಕೃಷ್ಣ ಪರಮಹಂಸರ ಪತ್ನಿ) ಚಂದ್ರನಿಗೆ ಮುಂದಿನ ಪ್ರಾರ್ಥನೆಯನ್ನು ಮಾಡುತ್ತಿದ್ದರು
‘ಹೇ ಚಂದ್ರನೇ, ನಿನ್ನ ಅಂತಃಕರಣವು ಹೇಗೆ ಶೀತಲವಾಗಿದೆಯೋ, ಹಾಗೆ ನನ್ನ ಅಂತಃ ಕರಣವನ್ನು ಶೀತಲವಾಗಿಡು. ಹೇಗೆ ನೀನು ಪವಿತ್ರ ಮತ್ತು ನಿರ್ಮಲವಾಗಿರುವೆಯೋ, ಹಾಗೆ ನನ್ನನ್ನು ಪವಿತ್ರ ಮತ್ತು ನಿರ್ಮಲವನ್ನಾಗಿಡು.
೩. ಸನಾತನದ ಸಂತರಾದ ಪೂ. ಸತ್ಯವಾನ ಕದಮ ಇವರು ಹೇಳಿದ ಪ್ರಾರ್ಥನೆ
‘ಹೇ ಶ್ರೀಕೃಷ್ಣಾ, ನಿನ್ನ ಭಕ್ತಿಯು ನನ್ನ ಚಿತ್ತದಲ್ಲಿ ದೃಢವಾಗಲಿ. ನಿನ್ನ ನಾಮವು ನನ್ನ ಚಿತ್ತದಲ್ಲಿ ಮೂಡಲಿ. ನನ್ನ ಸಾಧನೆಯಲ್ಲಿನ ಅಡಚಣೆಗಳು ದೂರವಾಗಲಿ. ನಿನ್ನ ಪ್ರಾಪ್ತಿಯ ತೀವ್ರ ತಳಮಳವನ್ನು ನೀನೇ ನನ್ನಲ್ಲಿ ನಿರ್ಮಾಣ ಮಾಡು.
ಸಾಧಕರು ಮಾಡಬೇಕಾದ ಪ್ರಾರ್ಥನೆಗಳು
೧. ಸ್ವಯಂಸೂಚನೆಯನ್ನು ತೆಗೆದುಕೊಳ್ಳುವ ಮೊದಲು ಮಾಡಬೇಕಾದ ಪ್ರಾರ್ಥನೆ
‘ಹೇ ಶ್ರೀಕೃಷ್ಣಾ, ಈ ಸೂಚನೆಯ ಪ್ರತಿಯೊಂದು ಶಬ್ದವು ನಿನ್ನ ಚೈತನ್ಯದಿಂದ ತುಂಬಲಿ. ಈ ಚೈತನ್ಯಮಯ ಶಕ್ತಿಯು ನನ್ನ ಅಂತಃಕರಣದವರೆಗೆ ತಲುಪಿ ನನ್ನಲ್ಲಿನ ಆಲಸ್ಯ ಮತ್ತು ಸ್ವಂತ ಮನಸ್ಸಿನಂತೆ ಮಾಡುವುದು (ಇಲ್ಲಿ ತಮ್ಮ ದೋಷಗಳನ್ನು ಹೇಳಬೇಕು) ಈ ದೋಷಗಳು ದೂರವಾಗಲಿ ಮತ್ತು ತತ್ಪರತೆ ಮತ್ತು ಕೇಳಿಕೊಂಡು ಮಾಡುವುದು (ತಮಗೆ ಅಪೇಕ್ಷಿತವಿರುವ ಗುಣಗಳನ್ನು ಇಲ್ಲಿ ಹೇಳಬೇಕು.) ಈ ಗುಣಗಳು ಹೆಚ್ಚಾಗಲಿ.
೨. ಸೇವೆಯನ್ನು ಮಾಡುತ್ತಿರುವಾಗ ಮಾಡಬೇಕಾದ ಪ್ರಾರ್ಥನೆ
‘ಹೇ ಶ್ರೀಕೃಷ್ಣಾ, ನಾನು ಮಾಡುತ್ತಿರುವ ಸೇವೆಯಲ್ಲಿ ಸ್ಥೂಲ ಮತ್ತು ಸೂಕ್ಷ್ಮದಲ್ಲಿನ ಅಡಚಣೆಗಳು ದೂರವಾಗಲಿ.
೩. ರಾತ್ರಿ ಮಲಗುವಾಗ ಮಾಡಬೇಕಾದ ಪ್ರಾರ್ಥನೆ
‘ಹೇ ಶ್ರೀಕೃಷ್ಣಾ, ಮಲಗುವಾಗ ನಿನ್ನ ನಾಮವು ನನ್ನ ನಾಲಗೆಯಲ್ಲಿರಲಿ. ನಿದ್ರೆಯಲ್ಲಿಯೂ ನನ್ನಿಂದ ನಾಮಜಪ ನಿರಂತರವಾಗಿ ನಡೆಯಲಿ. ಹಾಗೆಯೇ ನಿದ್ದೆಯಿಂದ ಎದ್ದ ನಂತರವೂ ದಿನದ ಆರಂಭವು ನಿನ್ನ ಸ್ಮರಣೆಯಿಂದಲೇ ಆಗಲಿ. ಹೇ ಭಗವಂತಾ, ಈ ರೀತಿ ನೀನು ನನ್ನನ್ನು ಸತತವಾಗಿ ನಿನ್ನ ಅನುಸಂಧಾನದಲ್ಲಿಡು.
– ಸೌ. ಸಾವಿತ್ರಿ ಇಚಲಕರಂಜಿಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೩.೨೦೧೬)