ಹರಿದ್ವಾರ(ಉತ್ತರಾಖಂಡ)ದಲ್ಲಿ ನಡೆಯುವ ಮಹಾಕುಂಭಮೇಳದ ಅವಧಿಯಲ್ಲಿ ಎಲ್ಲೆಡೆಯ ಸಾಧಕರಿಗೆ ಸೇವೆಯ ಅಮೂಲ್ಯ ಅವಕಾಶ !
‘೧೧ ಮಾರ್ಚ್ ೨೦೨೧ ರಿಂದ ೨೭ ಏಪ್ರಿಲ್ ೨೦೨೧ ಈ ಅವಧಿಯಲ್ಲಿ ಹರಿದ್ವಾರ (ಉತ್ತರಾಖಂಡ) ದಲ್ಲಿ ಮಹಾಕುಂಭಪರ್ವ ಇರುತ್ತದೆ. ಈ ಅವಧಿಯಲ್ಲಿ ಇಡೀ ಭಾರತದಾದ್ಯಂತ ೭ ಕೋಟಿ ಭಕ್ತರು ಹರಿದ್ವಾರದಲ್ಲಿ ಗಂಗಾಸ್ನಾನ, ಸಂತದರ್ಶನ ಮತ್ತು ತೀರ್ಥಯಾತ್ರೆಯ ಉದ್ದೇಶದಿಂದ ಬರುತ್ತಾರೆ. ಈ ಪರ್ವದ ಕ್ಷೇತ್ರದಲ್ಲಿ ಮತ್ತು ಆ ಸಮಯದಲ್ಲಿ ಮಾಡಿದ ಸಾಧನೆಯಿಂದ ಇತರ ಸ್ಥಳ-ಕಾಲದ ತುಲನೆಯಲ್ಲಿ ೧ ಸಾವಿರಪಟ್ಟು ಹೆಚ್ಚು ಫಲ ದೊರಕುತ್ತದೆ. ಇದಕ್ಕಾಗಿ ಎಲ್ಲ ಸಂತರು ಆಧ್ಯಾತ್ಮಿಕ ಸಂಸ್ಥೆಗಳ ಸಾಧಕರು, ಸಾಂಪ್ರದಾಯಿಕ, ಭಕ್ತರು ಈ ಕ್ಷೇತ್ರದಲ್ಲಿ ನೆಲೆಸಿ ಸಾಧನೆಯಲ್ಲಿ ತೊಡಗಿಕೊಳ್ಳಲು ಪ್ರಯತ್ನಿಸುತ್ತಾರೆ.
ಈ ಕುಂಭಪರ್ವದ ಅವಧಿಯಲ್ಲಿ ಹರಿದ್ವಾರದ ಕುಂಭಕ್ಷೇತ್ರದಲ್ಲಿ ಧರ್ಮಪ್ರಸಾರ ಮತ್ತು ಹಿಂದೂರಾಷ್ಟ್ರ ಜಾಗೃತಿ ಅಭಿಯಾನವನ್ನು ವ್ಯಾಪಕ ಪ್ರಮಾಣದಲ್ಲಿ ನಡೆಸಲಾಗುವುದು. ಈ ಅಂತರ್ಗತ ೪ ದೊಡ್ಡ ಹಿಂದೂ ರಾಷ್ಟ್ರ ಜಾಗೃತಿಯನ್ನು ಮೂಡಿಸುವ ಫಲಕ ಪ್ರದರ್ಶನ ಮತ್ತು ಅಧ್ಯಾತ್ಮ ವಿಷಯದ ಗ್ರಂಥ ಪ್ರದರ್ಶನ ಇವುಗಳನ್ನು ಆಯೋಜಿಸಲಾಗುತ್ತಿದೆ. ಹಾಗೆಯೇ ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಮಂಟಪಗಳಲ್ಲಿ ಹಿಂದೂ ರಾಷ್ಟ್ರದ ಕುರಿತು ವ್ಯಾಖ್ಯಾನಗಳನ್ನು ನೀಡುವುದು, ಸಮವಿಚಾರಿ ಸಂತರನ್ನು ಸಂಪರ್ಕಿಸುವುದು, ಹಿಂದೂ ರಾಷ್ಟ್ರ ಅಧಿವೇಶನ ಆಯೋಜಿಸುವುದು ಮುಂತಾದ ಉಪಕ್ರಮಗಳನ್ನು ಕೈಗೊಳ್ಳಲಾಗುವುದು.
ಕುಂಭಮೇಳದಲ್ಲಿ ಲಭ್ಯವಿರುವ ವಿವಿಧ ರೀತಿಯ ಸೇವೆಗಳು ಮತ್ತು ಅದಕ್ಕಾಗಿ ಬೇಕಾಗುವ ಸಾಧಕರು
ಕುಂಭಮೇಳದ ಸೇವೆಗಾಗಿ ಜಿಲ್ಲಾಸೇವಕರ ಮೂಲಕ ಹೆಸರುಗಳನ್ನು ನೋಂದಾಯಿಸಿ !
೧೬ ವರ್ಷದಿಂದ ೬೫ ವರ್ಷದ ವರೆಗಿನ ಸಾಧಕರು ಈ ಸೇವೆಯಲ್ಲಿ ಸಹಭಾಗಿಯಾಗಬಹುದು. ಈ ಸೇವೆಗಾಗಿ ಮಧುಮೇಹ, ರಕ್ತದೊತ್ತಡ, ಹೃದಯರೋಗ ಮತ್ತು ಅಸ್ಥಮಾಗಳಂತಹ ದೀರ್ಘಕಾಲಿನ ರೋಗಗಳು ಇರುವ ಸಾಧಕರು ಸಹಭಾಗಿಯಾಗಬಾರದು.
ಕುಂಭಪರ್ವದ ಧರ್ಮಪ್ರಸಾರದ ಅಂತರ್ಗತ ಸೇವೆಯ ಮುಂಗಡ ಸಿದ್ಧತೆಯು ೨೫.೨.೨೦೨೧ ರಿಂದ ಹರಿದ್ವಾರದಲ್ಲಿ ಪ್ರಾರಂಭವಾಗಲಿದೆ. ಪ್ರತ್ಯಕ್ಷ ಧರ್ಮಪ್ರಸಾರದ ಸೇವೆಗಾಗಿ ೧.೩.೨೦೨೧ ರಿಂದ ೩೦.೪.೨೦೨೧ ಈ ಅವಧಿಯಲ್ಲಿ ಹೆಚ್ಚು ಮನುಷ್ಯಬಲದ ಆವಶ್ಯಕತೆ ಇದೆ. ಈ ಧರ್ಮಪ್ರಸಾರದ ಸೇವೆಯಲ್ಲಿ ಸಹಭಾಗಿಯಾಗಲು ಇಚ್ಛಿಸುವವರು ಜಿಲ್ಲಾಸೇವಕರನ್ನು ಸಂಪರ್ಕಿಸಬೇಕು. ನೌಕರಿ ಮಾಡುವವರು ಸಾಧ್ಯವಿದ್ದರೆ ಕಾರ್ಯಾಲಯದಿಂದ (ಆಫೀಸಿನಿಂದ) ರಜೆ ಪಡೆದು ಈ ಸೇವೆಯ ಹೆಚ್ಚೆಚ್ಚು ಲಾಭ ಪಡೆದುಕೊಳ್ಳಬೇಕು. ಕುಂಭಮೇಳದಲ್ಲಿ ಕನಿಷ್ಟ ಪಕ್ಷ ೧೫ ದಿನಗಳವರೆಗೆ ಸೇವೆಯಲ್ಲಿ ಸಹಭಾಗಿಯಾಗುವ ಅವಶ್ಯಕತೆ ಇದೆ. ಹಾಗೆಯೇ ಹರಿದ್ವಾರಕ್ಕೆ ದಕ್ಷಿಣ ಭಾರತದ ರಾಜ್ಯಗಳಿಂದ ಬಂದು ತಲುಪಲು ೨-೩ ದಿನಗಳು ಬೇಕಾಗುತ್ತವೆ. ಆ ದೃಷ್ಟಿಯಿಂದ ಸಾಧಕರು ಮತ್ತು ಧರ್ಮಪ್ರೇಮಿಗಳು ಮುಂದಿನಂತೆ ಸಹಭಾಗಿಯಾಗಬಹುದು.
ಅ. ೨೫.೨.೨೦೨೧ ರಿಂದ ೫.೫.೨೦೨೧ ಹೀಗೆ ಎರಡು ತಿಂಗಳು ಒಂದು ವಾರ (೭೦ ದಿನಗಳು) ಪೂರ್ಣ ಸಮಯ ಸಹಭಾಗಿಯಾಗುವುದು (ಈ ಸಾಧಕರಿಗೆ ಪೂರ್ವಸಿದ್ಧತೆ ಮತ್ತು ಸೇವೆಯ ಸಮಾಪ್ತಿಯ ಸೇವೆಗಳನ್ನು ಪೂರ್ಣಗೊಳಿಸುವ ಸೇವೆಯಲ್ಲಿ ಸಹಭಾಗಿಯಾಗಬಹುದು.)
ಆ. ಕುಂಭಮೇಳದಲ್ಲಿ ಎಲ್ಲಕ್ಕಿಂತ ಹೆಚ್ಚು ಜನ ಸಂದಣಿ ೧೧ ಮಾರ್ಚ್ ರಿಂದ ೧೫ ಏಪ್ರಿಲ್ ಈ ಕಾಲಾವಧಿಯಲ್ಲಿ ಇರಲಿದೆ. ಆ ದೃಷ್ಟಿಯಿಂದ ೭.೩.೨೦೨೧ ರಿಂದ ೧೫.೪.೨೦೨೧ ಹೀಗೆ ಒಂದು ತಿಂಗಳು ಒಂದು ವಾರ ಈ ಕಾಲಾವಧಿಯಲ್ಲಿ (೩೯ ದಿನಗಳು) ಪೂರ್ಣ ಸಮಯ ಸಹಭಾಗಿಯಾಗುವುದು
ಇ. ೨೫.೨.೨೦೨೧ ರಿಂದ ೧೫.೩.೨೦೨೧ ಈ ೧೯ ದಿನಗಳ ಅವಧಿಗಾಗಿ ಸಹಭಾಗಿಯಾಗುವುದು
ಈ. ೧೪.೩.೨೦೨೧ ರಿಂದ ೩೧.೩.೨೦೨೧ ಈ ೧೮ ದಿನಗಳ ಅವಧಿಗಾಗಿ ಸಹಭಾಗಿಯಾಗುವುದು
ಉ. ೩೦.೩.೨೦೨೧ ರಿಂದ ೧೫.೪.೨೦೨೧ ಈ ೧೭ ದಿನಗಳ ಅವಧಿಗಾಗಿ ಸಹಭಾಗಿಯಾಗುವುದು
ಊ. ೮.೪.೨೦೨೧ ರಿಂದ ೨೮.೪.೨೦೨೧ ಈ ೨೦ ದಿಗಳ ಅವಧಿಗಾಗಿ ಸಹಭಾಗಿಯಾಗುವುದು
ಈ ಸಂದರ್ಭದಲ್ಲಿ ಜಿಲ್ಲಾಸೇವಕರಿಂದ ನಿರ್ಣಯ ಸಿಕ್ಕಿದ ನಂತರ ಆದಷ್ಟು ಬೇಗನೆ ರೇಲ್ವೆ ಟಿಕೇಟನ್ನು ಕಾಯ್ದಿರಿಸುವುದು ಅಪೇಕ್ಷಿತವಿದೆ. ಈ ಅವಧಿಯಲ್ಲಿ ಹೆಚ್ಚು ಜನಸಂದಣಿ ಇರುವುದರಿಂದ ಕೂಡಲೇ ರೈಲು ಟಿಕೇಟು ದೊರಕುವುದಿಲ್ಲ, ಎಂಬುದನ್ನು ಗಮನದಲ್ಲಿಡಬೇಕು. ಹೆಸರುಗಳು ಖಚಿತವಾದ ಸಾಧಕರಿಗೆ ಜಿಲ್ಲಾಸೇವಕರಿಂದ ಕುಂಭಸೇವೆಗಾಗಿ ರಜಿಸ್ಟ್ರೇಶನ್ ಫಾರ್ಮ್‌ಅನ್ನು ಕಳುಹಿಸಲಾಗುವುದು. ರೇಲ್ವೆ ಟಿಕೇಟನ್ನು ಕಾಯ್ದಿರಿಸಿದ ನಂತರ ಸಾಧಕರು ಈ ‘ಗೂಗಲ್ ಫಾರ್ಮ್’ಅನ್ನು ತುಂಬಿಸಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಕುಂಭಮೇಳದ ಕ್ಷೇತ್ರದಲ್ಲಿ ಸಾಧಕರ ನಿವಾಸ, ಸೇವೆಗಳ-ಆಯೋಜನೆ ಮತ್ತು ಭೋಜನದ ಪಥ್ಯ ಮುಂತಾದ ಕಾರಣಗಳಿಂದಾಗಿ ನೋಂದಣಿ ಪ್ರಕ್ರಿಯೆ ಅಗತ್ಯವಿದೆ.
ಹರಿದ್ವಾರದಲ್ಲಿ ನಡೆಯಲಿರುವ ಕುಂಭಮೇಳಕ್ಕಾಗಿ ಅಲ್ಲಿನ ತಮ್ಮ ವಾಸ್ತು, ಪರಿಚಯದ ಸಂತರ ಆಶ್ರಮವನ್ನು ವಾಸ್ತವ್ಯಕ್ಕಾಗಿ ಲಭ್ಯ ಮಾಡಿಕೊಟ್ಟು ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಿರಿ !
‘೧೧ ಮಾರ್ಚ್ ೨೦೨೧ ರಿಂದ ೨೭ ಎಪ್ರಿಲ್ ೨೦೨೧ ಈ ಕಾಲಾವಧಿಯಲ್ಲಿ ಹರಿದ್ವಾರ (ಉತ್ತರಾಖಂಡ) ದಲ್ಲಿ ಮಹಾಕುಂಭಮೇಳವಿದೆ. ಈ ಅವಧಿಯಲ್ಲಿ ಧರ್ಮಪ್ರಸಾರದ ಸೇವೆಯನ್ನು ಮಾಡಲು ಭಾರತದಾದ್ಯಂತದ ೧೦೦ ಕ್ಕಿಂತ ಹೆಚ್ಚು ಸಾಧಕರು ಕುಂಭಕ್ಷೇತ್ರದಲ್ಲಿ ವಾಸ್ತವ್ಯಕ್ಕಾಗಿ ಇರಲಿದ್ದಾರೆ. ಅವರ ನಿವಾಸಕ್ಕಾಗಿ, ಹಾಗೆಯೇ ವಿವಿಧ ಸೇವೆಗಳಿಗಾಗಿ ಹರಿದ್ವಾರದಲ್ಲಿ ವಾಸ್ತುವಿನ (ಮನೆ, ಫ್ಲ್ಯಾಟ್, ಸಭಾಗೃಹ (ಹಾಲ್), ಉಪಯೋಗಿಸದಿರುವ; ಆದರೆ ಸುಸ್ಥಿತಿಯಲ್ಲಿರುವ ಆಶ್ರಮದ ವಾಸ್ತು ಇವುಗಳ) ಆವಶ್ಯಕತೆ ಇದೆ. ಯಾವ ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಧರ್ಮಪ್ರಸಾರದ ಸೇವೆಗಳಿಗಾಗಿ ಹರಿದ್ವಾರದಲ್ಲಿನ ತಮ್ಮ ವಾಸ್ತು, ಹಾಗೆಯೇ ಪರಿಚಯದ ಸಂತರ ಆಶ್ರಮವನ್ನು ಉಚಿತವಾಗಿ ಉಪಯೋಗಿಸಲು ಅಥವಾ ಕಡಿಮೆ ಬಾಡಿಗೆಯ ಆಧಾರದಲ್ಲಿ ನೀಡಲು ಸಾಧ್ಯವೋ, ಅವರು ದಯಮಾಡಿ ತಿಳಿಸಬೇಕು. ಹರಿದ್ವಾರದಲ್ಲಿನ ಚಂಡಿಘಾಟ್, ಸನ್ಯಾಸ ರೋಡ್, ಜ್ಯಾಲಾಪೂರ, ಕನಖಲ್, ಸಪ್ತರ್ಷಿ ಮಾರ್ಗ, ಹರಕಿ ಪೌಡಿ ಈ ಭಾಗಗಳಲ್ಲಿ ಈ ವಾಸ್ತುಗಳಿದ್ದರೆ ಅನುಕೂಲ ವಾಗುವುದು; ಆದರೆ ಇವುಗಳ ಹೊರತಾಗಿ ನಗರದ ಇತರ ಭಾಗ ಗಳಲ್ಲಿನ ವಾಸ್ತುಗಳಿದ್ದರೂ ಅಡಚಣೆಯಿಲ್ಲ.
ಹೆಸರು ಮತ್ತು ಸಂಪರ್ಕ ಕ್ರಮಾಂಕ : ಶ್ರೀ. ಶ್ರೀರಾಮ ಲುಕತುಕೆ – 7012085184
ಕುಂಭಮೇಳದ ಅವಧಿಯಲ್ಲಿ ಧನ ಅಥವಾ ವಸ್ತುಗಳ ಸ್ವರೂಪದಲ್ಲಿ ಅರ್ಪಣೆ ನೀಡುವ ಅಮೂಲ್ಯ ಅವಕಾಶ ! ಈ ಕುಂಭಮೇಳದ ಅವಧಿಯಲ್ಲಿ ‘ಸತ್ಪಾತ್ರೆ ಧನಮ್’ ನಂತೆ ದಾನ ಧರ್ಮವನ್ನು ಮಾಡಿದರೆ ಸಾಧನೆಗಾಗಿ ೧ ಸಾವಿರ ಪಟ್ಟು ಲಾಭವಾಗುತ್ತದೆ. ಈ ಧರ್ಮಪ್ರಸಾರ ಸೇವೆಯಲ್ಲಿ ಭಾರತದಾದ್ಯಂತದ ೧೦೦ ಕ್ಕಿಂತ ಹೆಚ್ಚು ಸಾಧಕರು ಪಾಲ್ಗೊಳ್ಳಲಿದ್ದಾರೆ. ಇವರೆಲ್ಲರ ವಾಸ್ತವ್ಯ, ಭೋಜನ ಮುಂತಾದವುಗಳೊಂದಿಗೆ ಇತರ ಅನೇಕ ವಿಷಯಗಳ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ಧನ ಮತ್ತು ವಸ್ತುಗಳ ಆವಶ್ಯಕತೆ ಇದೆ. ಇದಕ್ಕಾಗಿ ಸನಾತನ ಪ್ರಭಾತದ ಅವಾಚಕರು, ಹಿತಚಿಂತಕರು, ಧರ್ಮಪ್ರೇಮಿಗಳು, ಹಿಂದುತ್ವ ನಿಷ್ಠರು ಮತ್ತು ಅರ್ಪಣೆದಾರರು ಈ ಧರ್ಮ ಪ್ರಸಾರದ ಕಾರ್ಯದಲ್ಲಿ ಯಥಾಶಕ್ತಿ ದಾನ (ಅರ್ಪಣೆ) ಮಾಡಬೇಕೆಂದು ಕರೆಯನ್ನು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ. ಇದಕ್ಕಾಗಿ ತಾವು ಸನಾತನ ಸಂಸ್ಥೆಯ ಸಾಧಕರು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರು, ಹಾಗೆಯೇ ವಾಚಕರು ಸನಾತನ ಪ್ರಭಾತದ ವಿತರಕರೊಂದಿಗೆ ಸಂಪರ್ಕಿಸಬೇಕು. ಕುಂಭಮೇಳದಲ್ಲಿ ಯಾವ ವಸ್ತುಗಳ ಆವಶ್ಯಕತೆ ಇದೆ, ಎಂಬ ಪಟ್ಟಿಯು ಸಂಬಂಧಿತ ಸಾಧಕರಿಂದ ತಮಗೆ ದೊರಕಬಹುದು. |
ಸೈಕಲ್, ದ್ವಿಚಕ್ರವಾಹನ ಮತ್ತು ಚತುಷ್ಚಕ್ರ ವಾಹನಗಳ ಆವಶ್ಯಕತೆ !
‘೧೧ ಮಾರ್ಚ್ ೨೦೨೧ ರಿಂದ ೨೭ ಎಪ್ರಿಲ್ ೨೦೨೧ರ ಕಾಲಾವಧಿಯಲ್ಲಿ ಹರಿದ್ವಾರ (ಉತ್ತರಾಖಂಡ) ದಲ್ಲಿ ಮಹಾ ಕುಂಭಮೇಳವಿದೆ. ಕುಂಭಮೇಳದಲ್ಲಿ ಧರ್ಮಪ್ರಸಾರದ ಸೇವೆಯನ್ನು ಮಾಡಲು ಭಾರತದಾದ್ಯಂತದ ೧೦೦ ಕ್ಕಿಂತ ಹೆಚ್ಚು ಸಾಧಕರು ಹರಿದ್ವಾರದಲ್ಲಿ ವಾಸ್ತವ್ಯಕ್ಕೆ ಇರಲಿದ್ದಾರೆ. ಈ ಅವಧಿಯಲ್ಲಿ ಕುಂಭಕ್ಷೇತ್ರದಲ್ಲಿ ವಿವಿಧ ಸೇವೆಗಳಿಗಾಗಿ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳ ಆವಶ್ಯಕತೆ ಇದೆ. ‘ಡಿಝೆಲ್ಲಿ ಚಲಿಸುವ ಮತ್ತು ೪ – ೫, ಹಾಗೆಯೇ ೮ – ೧೦ ವ್ಯಕ್ತಿಗಳು ಕುಳಿತುಕೊಳ್ಳಲು ಸಾಧ್ಯವಾಗುವಂತಹ, ಆಸನಕ್ಷಮತೆಯ ಚತುಷ್ಚಕ್ರ ವಾಹನಗಳು ಮತ್ತು ಸಾಧ್ಯವಿದ್ದಷ್ಟು ‘ಸೆಲ್ಫ್ ಸ್ಟಾರ್ಟ್; ಇರುವ ದ್ವಿಚಕ್ರ ವಾಹನಗಳ ಆವಶ್ಯಕತೆ ಇದೆ. ಹಾಗೆಯೇ ೧೦ ಸುಸ್ಥಿತಿಯಲ್ಲಿರುವ ಸೈಕಲ್‌ಗಳ ಆವಶ್ಯಕತೆ ಇದೆ.
ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳ ಕಡೆಗೆ ಎಲ್ಲ ಕಾಗದಪತ್ರಗಳ (ಆರ್.ಸಿ ಬುಕ್, ಪಿಯುಸಿ, ವಿಮಾ (ಇನ್ಶುರನ್ಸ್) ಇತ್ಯಾದಿ) ಪೂರ್ಣವಿರುವ ಮೇಲಿನ ಪ್ರಕಾರಗಳ ವಾಹನಗಳು, ಹಾಗೆಯೇ ಸೈಕಲ್‌ಗಳಿದ್ದರೆ ಅವುಗಳನ್ನು ಸ್ವಲ್ಪ ಸಮಯಕ್ಕಾಗಿ ಉಪಯೋಗಿಸಲು ಕೊಡಬಹುದು. ಇಚ್ಛೆಯುಳ್ಳವರು ಕೆಳಗಿನ ಕ್ರಮಾಂಕಕ್ಕೆ ಸಂಪರ್ಕಿಸಬೇಕು.
ಸಾಧಕರ ಸಂಬಂಧಿಕರು ಅಥವಾ ಪರಿಚಿತರು ಹರಿದ್ವಾರ, ದೆಹರಾದೂನನಲ್ಲಿ ವಾಸಿಸುತ್ತಿದ್ದಲ್ಲಿ ಮತ್ತು ಅವರು ತಮ್ಮ ವಾಹನ ಅಥವಾ ಕುಂಭಸೇವೆಗಾಗಿ ಉಪಯೋಗಿಸಲು ಕೊಡಬಹುದಾದರೆ ಆ ಬಗ್ಗೆಯೂ ತಿಳಿಸಬೇಕು. ಪ್ರತ್ಯಕ್ಷ ವಾಹನ ಅಥವಾ ಸೈಕಲ್‌ಗಳನ್ನು ನೀಡಲು ಸಾಧ್ಯವಿಲ್ಲದ ಹಿತಚಿಂತಕರು, ಕೆಲವು ವಾಹನಗಳಿಗಾಗಿ ಅಥವಾ ಸೈಕಲ್‌ಗಳಿಗಾಗಿ ಬೇಕಾಗುವ ಖರ್ಚನ್ನು ಧನ ರೂಪದಲ್ಲಿ ಅರ್ಪಣೆ ನೀಡಬಹುದು.
ಹೆಸರು ಮತ್ತು ಸಂಪರ್ಕ ಕ್ರಮಾಂಕ : ಶ್ರೀ. ಶ್ರೀರಾಮ ಲುಕತುಕೆ, 7012085184