ಗೋಹತ್ಯೆ ಪ್ರಕರಣ; ಮಾಜಿ ಕೇಂದ್ರ ಸಚಿವರ ಸಹೋದರ ಅನ್ವರ್ ಹುಸೇನ್ ಬಂಧನ

700 ಕಿಲೋ ಗೋಮಾಂಸ ಸಹಿತ ವಾಹನ ಮುಟ್ಟುಗೋಲು!

ಅಲಿಗಢ (ಉತ್ತರಪ್ರದೇಶ) – ಮಾಜಿ ಕೇಂದ್ರ ಸಚಿವ ಸರ್ವರ್ ಹುಸೇನ್ ಅವರ ಸಹೋದರ ಅನ್ವರ್ ಹುಸೇನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜನವರಿ ತಿಂಗಳಿನಲ್ಲಿ ವಶಪಡಿಸಿಕೊಳ್ಳಲಾಗಿದ್ದ 700 ಕೆಜಿಗಿಂತಲೂ ಅಧಿಕ ನಿಷೇಧಿತ ಗೋಮಾಂಸ ಕಳ್ಳಸಾಗಣೆಯ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ನಿಷೇಧಿತ ಮಾಂಸವು ಗೋಮಾಂಸ ಎಂದು ಸ್ಪಷ್ಟವಾದ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

1. ಈ ಸಂಪೂರ್ಣ ಪ್ರಕರಣವು ಜನವರಿ 15, 2026 ರ ರಾತ್ರಿಯದ್ದಾಗಿದೆ. ಗೋರಕ್ಷಾ ದಳದ ಸದಸ್ಯರಿಗೆ ವಾಹನವೊಂದರಲ್ಲಿ ನಿಷೇಧಿತ ಮಾಂಸ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಕಾರ್ಯಕರ್ತರು ಗಭಾನಾ ಟೋಲ್ ಪ್ಲಾಜಾ ಸಮೀಪ ವಾಹನವೊಂದನ್ನು ಸುತ್ತುವರಿದು ತಡೆದರು. ಈ ವಾಹನದ ಐಸ್ (ಮಂಜುಗಡ್ಡೆ) ಬಾಕ್ಸ್ ಗಳಲ್ಲಿ ಮಾಂಸಗಳನ್ನು ತುಂಬಿಡಲಾಗಿತ್ತು. ತಪಾಸಣೆ ನಡೆಸಿದಾಗ ಈ ಮಾಂಸದ ಒಟ್ಟು ತೂಕ 700 ಕೆಜಿಗಿಂತಲೂ ಅಧಿಕ ಎಂಬುದು ತಿಳಿದುಬಂದಿದೆ. ಮಾಂಸದ ಮಾದರಿಯನ್ನು ತಪಾಸಣೆಗಾಗಿ ಮಥುರಾದ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದರು. ಏಪ್ರಿಲ್‌ ತಿಂಗಳಲ್ಲಿ ಈ ಪ್ರಯೋಗಾಲಯದ ವರದಿ ಬಂದಿದ್ದು, ಈ ಮಾಂಸವು ಗೋಮಾಂಸ ಎಂದು ಸ್ಪಷ್ಟವಾಗಿದೆ.

2. ಈ ನಿಷೇಧಿತ ಮಾಂಸವನ್ನು ಖುರ್ಜಾದಲ್ಲಿರುವ ‘ಅಲ್ ಹಮ್ದ್ ಮೀಟ್ ಫ್ಯಾಕ್ಟರಿ’ಯಿಂದ ಸರಬರಾಜು ಮಾಡಲಾಗಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಾಜಿ ಕೇಂದ್ರ ಸಚಿವರ ಸಹೋದರ ಅನ್ವರ್ ಹುಸೇನ್ ಈ ಕಾರ್ಖಾನೆಯ ಮಾಲೀಕನಾಗಿದ್ದಾನೆ. ಚಂಡೌಸ್ ಠಾಣೆಯ ಪೊಲೀಸರು ಮೊದಲು ಜೂನ್ 18 ರ ಸಂಜೆ ಅನ್ವರ್‌ ನ ನೌಕರ ಇಸ್ಲಾಮ್ ಖಾನ್‌ ನನ್ನು ಬಂಧಿಸಿದರು. ಇದರ ಬೆನ್ನಲ್ಲೇ ಅನ್ವರ್‌ ನನ್ನು ಬಂಧಿಸಲಾಗಿದೆ.

3. ಅನ್ವರ್ ಹುಸೇನ್ ಅವರ ಸಹೋದರ ಸರ್ವರ್ ಹುಸೇನ್ 1989 ರಲ್ಲಿ ಬುಲಂದ ಶಹರ್‌ ನಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಚಂದ್ರಶೇಖರ ಸರಕಾರದಲ್ಲಿ ಅವರು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವರೂ ಆಗಿದ್ದರು.

ಸಂಪಾದಕೀಯ ನಿಲುವು

ಇದುವರೆಗೆ ಅನ್ವರ್ ಎಷ್ಟು ಗೋಹತ್ಯೆಗಳನ್ನು ಮಾಡಿ ಮಾಂಸವನ್ನು ದೇಶ ಮತ್ತು ವಿದೇಶಗಳಿಗೆ ಕಳುಹಿಸಿರಬಹುದು, ಎಂಬುದರ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲ! ಗೋಹತ್ಯೆ ಮಾಡುವವರಿಗೆ ಈಗ ಮರಣದಂಡನೆ ಶಿಕ್ಷೆಯನ್ನೇ ನೀಡುವ ಕಾನೂನು ಜಾರಿಗೆ ತರುವುದು ಅತ್ಯಂತ ಆವಶ್ಯಕವಾಗಿದೆ!