ಶ್ರೀರಾಮ ಮಂದಿರದ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಹಣ ಸಂಗ್ರಹಿಸುವ ಸಂಸ್ಥೆಗಳ ತನಿಖೆಗೆ ಆಗ್ರಹ

ಹರಿದ್ವಾರ (ಉತ್ತರಾಖಂಡ) – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಭಗವಾನ್ ಶ್ರೀರಾಮನ ಪ್ರತಿಯೊಂದು ಪೈಸೆಗೆ ಹೊಣೆಗಾರರಾಗಿದ್ದಾರೆ ಮತ್ತು ಯಾರು ತಪ್ಪಿತಸ್ಥರೆಂದು ಕಂಡುಬರುತ್ತಾರೋ ಅವರಿಗೆ ಶಿಕ್ಷೆಯಾಗಬೇಕು, ಎಂಬ ನಿಲುವನ್ನು ವಿಶ್ವ ಹಿಂದೂ ಪರಿಷತ್ತು ವ್ಯಕ್ತಪಡಿಸಿದೆ. ಇಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರ ಮಾರ್ಗದರ್ಶಕ ಮಂಡಳಿಯ 2 ದಿನಗಳ ಸಭೆಯು ಮುಕ್ತಾಯಗೊಂಡಿತು. ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಎಚ್‌ಪಿ, ರಾಮಾಲಯ ಟ್ರಸ್ಟ್ ಮತ್ತು ಶ್ರೀರಾಮ ಜನ್ಮ ಮಂದಿರ ಪುನರ್ನಿರ್ಮಾಣ ಟ್ರಸ್ಟ್ ಸೇರಿದಂತೆ ಶ್ರೀರಾಮ ಮಂದಿರದ ಹೆಸರಿನಲ್ಲಿ ಹಣ ಅಥವಾ ಚಿನ್ನ ಸಂಗ್ರಹಿಸುವ ಇತರ ಸಂಸ್ಥೆಗಳ ಖಾತೆಗಳ ತನಿಖೆಯೂ ಆಗಬೇಕು ಎಂದು ಹೇಳಿದೆ.
ತನಿಖೆಯ ಮೊದಲು ಯಾವುದೇ ತೀರ್ಮಾನಕ್ಕೆ ಬರುವುದು ತಪ್ಪು!
ಶ್ರೀರಾಮ ಮಂದಿರದ ದಾನದ ಹಣ ಕಳ್ಳತನದ ತನಿಖೆ ಪೂರ್ಣಗೊಳ್ಳುವ ಮುನ್ನ ಯಾವುದೇ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ವಿಎಚ್‌ಪಿ ಹೇಳಿದೆ. ಯಾರ ಪಾತ್ರವು ಉದ್ದೇಶಪೂರ್ವಕವಾಗಿ ಮಾಡಿದ ಅವ್ಯವಹಾರವಾಗಿದೆ ಮತ್ತು ಯಾರದು ಕೇವಲ ನಿರ್ಲಕ್ಷ್ಯವಾಗಿದೆ ಎಂಬುದನ್ನು ನೋಡಬೇಕು. ಶ್ರೀರಾಮ ಜನ್ಮಭೂಮಿ ಮಂದಿರದ ವ್ಯವಸ್ಥೆಯು ಸಂಪೂರ್ಣವಾಗಿ ದೋಷಮುಕ್ತ ಮತ್ತು ಪಾರದರ್ಶಕವಾಗಿರಬೇಕು. ಕೆಲವು ರಾಜಕೀಯ ಪಕ್ಷಗಳು ಅಯೋಧ್ಯೆ ಮತ್ತು ಶ್ರೀರಾಮ ಮಂದಿರದ ವಿಷಯವನ್ನು 2027 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯೊಂದಿಗೆ ಜೋಡಿಸಲು ಪ್ರಯತ್ನಿಸುತ್ತಿವೆ.
ವಿಎಚ್‌ಪಿ ಸರ್ವಪಕ್ಷ ಸಮಿತಿಯಿಂದ ತನಿಖೆಯ ಬೇಡಿಕೆಯನ್ನು ತಿರಸ್ಕರಿಸಿದೆ ಮತ್ತು ಅಪರಾಧ ಪ್ರಕರಣಗಳ ತನಿಖೆಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ವಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ